For Quick Alerts
  ALLOW NOTIFICATIONS  
  For Daily Alerts

  ಗನ್ನಲ್ಲೇ ಗುನ್ನ.. ಹರೀಶ್ ರಾಜ್ ಹಂಗಾಮಾ...

  By * ಚಿತ್ರಗುಪ್ತ
  |

  Actor, director Harish Raj
  ಹರೀಶ್‌ರಾಜ್ ಮತ್ತೆ ಗುಡುಗಿದ್ದಾರೆ. ಅಡುಗೆಯನ್ನು ಸ್ವತಃ ಅವರೇ ಮಾಡಿ, ಅದನ್ನು ಅವರೇ ಬಡಿಸಿಕೊಂಡು ಬಫೆ ಮೂಲಕ ಉಂಡಿದ್ದಾರೆ. ಗನ್ ಎಂದರೆ ಒಂದು ಸಿಂಬಲ್. ಅಂದರೆ ಒಂದೇ ಒಂದು ಗನ್‌ನ ಒಂದೇ ಒಂದು ಬುಲೆಟ್‌ಗೆ ನಾಯಕನ ಪ್ರೀತಿಯ ನಾಯಕಿ ಬಲಿಯಾಗಿರುತ್ತಾನೆ. ಆತ ಸಾಫ್ಟ್‌ವೇರ್‌ನಲ್ಲಿರುವ ಸಾಫ್ಟ್ ವ್ಯಕ್ತಿಯಾಗಿರುತ್ತಾನೆ. ಆದರೆ ಅವನ ಪ್ರಿಯತಮೆ ಸಾವಿಗೆ ಇನ್ನೊಬ್ಬ ವಿಲನ್ ಕಾರಣವಾಗಿರುತ್ತಾನೆ.

  ಅವಳ ಸಾವಿನ ನಂತರ ಈತ ಕುಡುಕನಾಗಿ, ಮೂಲೆ ಸೇರಿರುತ್ತಾನೆ. ಇಷ್ಟಾದರೆ ಗನ್ ಇಂದ ಬುಲೆಟ್ ಹೊರಬರುವುದಿಲ್ಲ. ಅಲ್ಲಿಂದ ಕತೆಯ ತಿರುವು ಮಂತ್ರ ಶುರುವಾಗುತ್ತದೆ. ಇನ್ನೊಬ್ಬಾಕೆಯ ಎಂಟ್ರಿ. ಅವಳು ಪತ್ರಕರ್ತೆ. ಅವಳಿಗೆ ನಾಯಕನ ಬಗ್ಗೆ ಪ್ರೀತಿ, ಪ್ರೇಮ ಮೊದಲಾದ ಮಾಮೂಲಿ ಬದನೇಕಾಯಿ. ಕೊನೆಗೆ ಅವಳ ಭುಜವೂ ಗನ್ನಿನ ಬುಲೆಟ್‌ಗೆ ಬಲಿಯಾಗುತ್ತದೆ. ಅಲ್ಲಿಂದ ನಾಯಕ ತಿರುಗಿಬೀಳುತ್ತಾನೆ. ಆ ಗನ್ ಹಿಡಿದವನ ಬೆನ್ನು ಮುರಿಯುತ್ತಾನೆ. ಇಲ್ಲಿಗೆ ನಿಮಗೆ ಇಡೀ ಕತೆಯ ವಿಶೇಷತೆ ಗೊತ್ತಾಗಿದೆ ಎನ್ನುತ್ತಾ..

  ಹರೀಶ್‌ರಾಜ್ ಒದ್ದಾಟ ಪ್ರತೀ ಫ್ರೇಮ್‌ನಲ್ಲೂ ಗೊತ್ತಾಗುತ್ತದೆ. ಅವರು ಕತೆ, ಚಿತ್ರಕತೆ ಇತ್ಯಾದಿಗಳನ್ನೂ ಮಾಡಿ, ನಟನೆಯನ್ನೂ ಮಾಡುವ ಬದಲು ಒಂದಷ್ಟು ಜವಾಬ್ದಾರಿಗಳನ್ನು ಬೇರೆಯವರಿಗೆ ವಹಿಸಿದ್ದರೆ ಕ್ವಾಲಿಟಿ ಇನ್ನೂ ಸೂಪರ್ ಆಗಿರುತ್ತಿತ್ತು.

  ನಿಖಿತಾ ಎಂದಿನಂತೇ ಮಾಮೂಲಿ ನಟನೆ. ಮಲ್ಲಿಕಾ ಕಪೂರ್ ಪತ್ರಕರ್ತೆ ಎಂದು ಹಣೆಗೆ ಬೋರ್ಡ್ ಅಂಟಿಸಿಕೊಂಡಿದ್ದರೆ ಅದು ರಿಜಿಸ್ಟರ್ ಆಗುತ್ತಿತ್ತು. ರಂಗಾಯಣ ರಘು, ಪಿಎನ್ ಸತ್ಯ, ಮೋಹನ್ ಜುನೇಜಾ ಮೊದಲಾದವರನ್ನು ಅಚ್ಚುಕಟ್ಟಾಗಿ ಬಳಸಿಕೊಂಡಿದ್ದಾರೆ ಹರೀಶ್‌ರಾಜ್.

  ಎಚ್‌ಎಮ್ ರಾಮಚಂದ್ರ/ವಿಷ್ಣುವರ್ಧನ್ ಇಬ್ಬರೂ ಸೇರಿ ಕ್ಯಾಮೆರಾ ಕೆಲಸ ಮಾಡಿರುವುದರಿಂದ ಅದರ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಸಂಗೀತದಲ್ಲಿ ಐಟಂ ಸಾಂಗ್ ಓಕೆ. ಉಳಿದದ್ದು ಅಷ್ಟಕ್ಕಷ್ಟೇ. ಒಟ್ಟಾರೆ ಗನ್ ಒಂದು ಪರಿಪೂರ್ಣ ಕಮರ್ಷಿಯಲ್ ಚಿತ್ರ. ಹರೀಶ್ ರಾಜ್ ಕೊಂಚ ಉದ್ದವಾಗಿ, ಅಗಲವಾಗಿ, ದಷ್ಟವಾಗಿ, ಪುಷ್ಟವಾಗಿ, ಇಷ್ಟವಾಗುವ ಹಾಗೆ ಇದ್ದಿದ್ದರೆ ಗನ್ ಪವರ್ರು ಎಕೆ 47ಗಿಂದ ಒಂದಂಕಿ ಜಾಸ್ತಿ ಇರುತ್ತಿತ್ತು!

  English summary
  Kannada movie Gun review. Leading actor in the movie Harish Raj has written story and also directed. Actress Nikhita, Mallika Kapoor are the leading ladies. Rachana Maurya has an item number.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X