twitter
    For Quick Alerts
    ALLOW NOTIFICATIONS  
    For Daily Alerts

    'ಆಚಾರ್ಯ' ಚಿತ್ರ ವಿಮರ್ಶೆ: ಹಳಿ ತಪ್ಪಿದ ಮೆಗಾ ಬೋರಿಂಗ್ ಮೂವಿ!

    |

    ಪ್ರೇಕ್ಷಕರ ಅಭಿರುಚಿಯನ್ನು ಅನೇಕ ಸಲ ನಿರ್ದೇಶಕರು ಮರೆತುಬಿಡುತ್ತಾರೆ. ಸೂಪರ್ ಸ್ಟಾರ್‌ಗಳ ಕಾಲ್ ಶೀಟ್ ಸಿಕ್ಕಿದ್ದೇ ತಡ ಕಥೆಯೊಂದನ್ನು ಮಾಡಬೇಕು ಎಂಬುದನ್ನು ಮರೆತು ಬಿಟ್ಟು ಹಳೆಯ ಫಾರ್ಮುಲಾ ಗಳಿಗೆ ಜೋತುಬಿದ್ದು ಬಿಡುತ್ತಾರೆ. ಹಾಗೆ ಹಳೆಯ ಫಾರ್ಮುಲಾ ಗಳಿಗೆ ಜೋತುಬಿದ್ದು ಬಂದ ಹೊಸಚಿತ್ರವೇ 'ಆಚಾರ್ಯ'.

    ದೇವಾಲಯದ ಪಟ್ಟಣವಾದ ಧರ್ಮಸ್ಥಲಿಯು ಬಸವನ (ಸೋನು ಸೂದ್) ದಬ್ಬಾಳಿಕೆಯ ಆಳ್ವಿಕೆಯಲ್ಲಿದೆ. ಆಚಾರ್ಯ (ಚಿರಂಜೀವಿ) ಹಳ್ಳಿಯಲ್ಲಿ ನಿಗರ್ವಿಯಾಗಿ ಬರುತ್ತಾನೆ. ಅವನಿಗೆ ವಿರೋಧವಿಲ್ಲ. 'ಆಚಾರ್ಯ'ರು ಬಸವನಲ್ಲಿ ಹೇಗೆ ಭಯ ಹುಟ್ಟಿಸುತ್ತಾರೆ? ಸಿದ್ಧ (ರಾಮ್ ಚರಣ್) ನೊಂದಿಗೆ ಅವನ ಸಂಪರ್ಕ ಏನು? ಎಂಬುದು ಚಿತ್ರದ ಮೂಲ ಕಥೆ. ಇದರ ಸುತ್ತಲೂ 154 ನಿಮಿಷಗಳ ಸುದೀರ್ಘವಾದ ತಾಳ್ಮೆಯನ್ನು ಪರೀಕ್ಷಿಸುತ್ತ 'ಆಚಾರ್ಯ' ಎದುರಾಗುತ್ತಾನೆ.

    Rating:
    2.0/5

    Recommended Video

    ಸೌತ್ ಸಿನಿಮಾಗಳು ಗೆಲ್ಲುತ್ತಿರುವ ಬಗ್ಗೆ ಅಭಿಷೇಕ್ ಬಚ್ಚನ್ ಪ್ರತಿಕ್ರಿಯೆ ಏನು? | Abhishek Bachchan | KGF 2

    ಮೆಗಾಸ್ಟಾರ್ ಚಿರಂಜೀವಿ ಅವರು ಯಾವುದೇ ಪಾತ್ರಕ್ಕಾದರೂ ಸರಿಯೇ ತೆರೆಯ ಮೇಲೆ ತಮ್ಮ ಅಪ್ರತಿಮ ಶೈಲಿ ಮತ್ತು ಶಕ್ತಿಗೆ ಹೆಸರುವಾಸಿಯಾಗಿದ್ದಾರೆ. ಅದೇ ರೀತಿ, ಕೊರಟಾಲ ಶಿವ ತಮ್ಮ ಎಲ್ಲಾ ಚಲನಚಿತ್ರಗಳಲ್ಲಿ ಕಂಡುಬರುವಂತೆ ತಮ್ಮ ವಿಶಿಷ್ಟ ನಾಯಕನ ಪಾತ್ರ ಮತ್ತು ಅದರ ಮ್ಯಾನರಿಸಂಗಳ ಕಮರ್ಷಿಯಲ್ ಪ್ರೆಸೆಂಟೇಷನ್‌ಗೆ ಹೆಸರುವಾಸಿಯಾಗಿದ್ದಾರೆ. 'ಆಚಾರ್ಯ'ದಲ್ಲಿ, ಚಿರಂಜೀವಿ ಯನ್ನು ಕೊರಟಾಲ ಶಿವ ನಾಯಕನಾಗಲು ರೂಪಿಸಿರುವ ಎಲ್ಲಾ ಪ್ರಯತ್ನ ಸಂಪೂರ್ಣವಾಗಿ ವಿಫಲವಾಗಿದೆ. ಇದರ ಫಲಿತಾಂಶವೆಂದರೆ ಚಿತ್ರದಲ್ಲಿ ಮೆಗಾಸ್ಟಾರ್ ಅಸಮಾನ್ಯ ಶಕ್ತಿಯಾಗಿ ಹೊರಹೊಮ್ಮದೆ ಇರುವುದನ್ನು ನೋಡಬಹುದು.

    'ಆಚಾರ್ಯ' ಚಿತ್ರದಲ್ಲಿ ಚಿರಂಜೀವಿ ಪಾತ್ರ ನಿಷ್ಕ್ರಿಯ

    'ಆಚಾರ್ಯ' ಚಿತ್ರದಲ್ಲಿ ಚಿರಂಜೀವಿ ಪಾತ್ರ ನಿಷ್ಕ್ರಿಯ

    'ಆಚಾರ್ಯ' ಚಿತ್ರದ ಮೂಲ ಬಿಂದು ಚಿರಂಜೀವಿ. ಮೂಲ ಕಥಾ ನಾಯಕ ಕೂಡ ಚಿರಂಜೀವಿ. ವ್ಯವಸ್ಥೆಯ ಮತ್ತು ದಬ್ಬಾಳಿಕೆಯ ವಿರುದ್ಧ ಆಕ್ರಮಣಕಾರಿ 'ಆಚಾರ್ಯ'ರಾಗಿ ಕಾಣಿಸಿಕೊಳ್ಳುವ ಚಿರಂಜೀವಿ ಪಾತ್ರದಲ್ಲಿ ಆಕ್ರಮಣಕಾರಿ ಮತ್ತು ಕಿಚ್ಚು ಇಲ್ಲ. ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ಆಚಾರ್ಯ ಪಾತ್ರವನ್ನು ತೋರಿಸುವಲ್ಲಿ ನಿರ್ದೇಶಕರು ವಿಫಲರಾಗಿದ್ದಾರೆ. ಆದರೆ ಹೋರಾಟಗಳಲ್ಲಿ ಶಕ್ತಿಯುತವಾಗಿ ಕಾಣುವ ನಾಯಕನ ಪಾತ್ರ ಇಡೀ ಸಿನಿಮಾದಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿಲ್ಲ. ಚಿರಂಜೀವಿ ಒಂದು ಆಕ್ಷನ್ ಬ್ಲಾಕ್‌ನಿಂದ ಇನ್ನೊಂದಕ್ಕೆ ಚಲಿಸುತ್ತಿರುವಂತೆ ಭಾಸವಾಗುತ್ತದೆ. ಅದರ ನಡುವೆ ಯಾವುದೇ ರೋಮಾಂಚನಕಾರಿ ಸನ್ನಿವೇಶಗಳು ಪ್ರೇಕ್ಷಕರಿಗೆ ಕಾಣಿಸುವುದಿಲ್ಲ.

    ರಾಮ್ ಚರಣ್ ಪಾತ್ರದಲ್ಲಿ ಧಮ್ ಇಲ್ಲ

    ರಾಮ್ ಚರಣ್ ಪಾತ್ರದಲ್ಲಿ ಧಮ್ ಇಲ್ಲ

    ತಂದೆ ಮಗ ಒಟ್ಟಿಗೆ ಅಭಿನಯಿಸಿದ್ದಾರೆ ಎಂಬುವುದನ್ನು ಬಿಟ್ಟು ನೋಡಿದರೆ ಚಿತ್ರದಲ್ಲಿ ಅಂತಹ ಹೇಳಿಕೊಳ್ಳುವ ಯಾವುದೇ ಪರಿಣಾಮಕಾರಿಯಾಗಿ ಸನ್ನಿವೇಶಗಳಿಲ್ಲ. ತಮಗೆ ಕೊಟ್ಟಿರುವ ಪಾತ್ರಕ್ಕೆ ನ್ಯಾಯ ಒದಗಿಸುವ ಕೆಲಸವನ್ನು ರಾಮ್ ಚರಣ್ ಮಾಡಿದ್ದಾರೆ. ಆದರೆ ಅವರ ಇತ್ತೀಚಿನ ಎರಡು ಬ್ಲಾಕ್ ಬಾಸ್ಟರ್‌ಗಳಿಗೂ ಆಚಾರ್ಯರಿಗೂ ಇರುವ ವ್ಯತ್ಯಾಸವನ್ನು ನೋಡಬಹುದು ಮತ್ತು ಅನುಭವಿಸಬಹುದು. ವಿಶೇಷವಾಗಿ 'ರಂಗಸ್ಥಳಂ' ಮತ್ತು 'RRR'ನ ಬಳಿಕ ಬಂದಿರುವ 'ಆಚಾರ್ಯ' ಚಿತ್ರದಲ್ಲಿನ ರಾಮಚರಣ್ 'ಸಿದ್ದ'ನ ಪಾತ್ರ ನೆನಪಿಟ್ಟುಕೊಳ್ಳುವಂತಹದಲ್ಲ

    ಕೊರಟಾಲ ಶಿವ ಸಿನಿಮಾ ಮಾಡಿದ ಸಿನಿಮಾನಾ?

    ಕೊರಟಾಲ ಶಿವ ಸಿನಿಮಾ ಮಾಡಿದ ಸಿನಿಮಾನಾ?

    ನಾಲ್ಕು ಹಳೆಯ ಚಿತ್ರಗಳನ್ನು ಒಂದು ಕಡೆ ಸೇರಿಸಿದರೆ ಅದು ಕೊರಟಾಲ ನಿರ್ದೇಶನದ 'ಆಚಾರ್ಯ' ಚಿತ್ರವಾಗುತ್ತದೆ. ಕೊರಟಾಲ ಶಿವ, ಕಡಿಮೆ ಸಮಯದಲ್ಲಿ ವಿಶಿಷ್ಟವಾದ ಸಿನಿಮಾ ಸೃಷ್ಟಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಆ ಗೂಡಿಗೆ ಸರಿಯಾದ ಬಣ್ಣಗಳನ್ನು ಬಳಸಿ ಒಂದು ಸುಂದರವಾದ ಕಲಾಕೃತಿ ಮಾಡುವುದರಲ್ಲಿ ವಿಫಲರಾಗಿದ್ದಾರೆ. ಎರಡು ಹಳ್ಳಿಗಳ ನಡುವೆ ಎಂದಿಗೂ ಮುಗಿಯದ ಘರ್ಷಣೆಯೊಂದಿಗೆ ವ್ಯವಹರಿಸುವ ಸಾವಿನ ಸಂಚು ಎಂದು ನೆನಪಿಸುತ್ತದೆ. ನಾಯಕ ತುಂಬಾ ಟ್ರೆಂಡಿಯಾಗಿ ಕಾಣಿಸಿಕೊಂಡಿದ್ದ ಮತ್ತು ಮಾಸ್ ಅಂಶಗಳು ಅಸಾಧಾರಣವಾಗಿ ಕಂಡಿವೆ. ಹೀಗಾಗಿ ಕೊರಟಾಲ ಶಿವ ನಿರ್ದೇಶನದ ಮೊದಲ ಚಿತ್ರ ಭರ್ಜರಿ ಯಶಸ್ಸನ್ನು ಕಂಡಿತ್ತು. ಕೊರಟಾಲ ಶಿವ 'ಆಚಾರ್ಯ' ಚಿತ್ರದಲ್ಲೂ ಅದೇ ರೀತಿ ಪ್ರಯತ್ನಿಸಿದ್ದಾರೆ ಆದರೆ ಸ್ಕ್ರಿಪ್ಟ್‌ನಲ್ಲಿ ಎಡವಿದ್ದಾರೆ.

    ಆರಂಭದಲ್ಲಿಯೇ ಕಥೆ ಪ್ರತ್ಯಕ್ಷ

    ಆರಂಭದಲ್ಲಿಯೇ ಕಥೆ ಪ್ರತ್ಯಕ್ಷ

    'ಆಚಾರ್ಯ' ಕಥೆಯನ್ನು ಸಿನಿಮಾದ ಆರಂಭದಲ್ಲೇ ಊಹಿಸಬಹುದು. ಧರ್ಮಸ್ಥಳಿ ಮತ್ತು ಬಸವನ ಪರಿಚಯದಿಂದ ಅದು ಎಲ್ಲಿಗೆ ಹೋಗುತ್ತಿದೆ ಎಂದು ನಮಗೆ ತಿಳಿದು ಹೋಗುತ್ತೆ. ದೀನರನ್ನು ಉಳಿಸಲು 'ಹೀರೋ' ಆ ಜಾಗಕ್ಕೆ ಬರುತ್ತಾನೆ. ಚಿರಂಜೀವಿಯನ್ನು ನಯವಾದ ಅವತಾರದಲ್ಲಿ ತೋರಿಸಲಾಗಿದೆ. ಆದರೆ, ಬರವಣಿಗೆಯ ವಿಚಾರಕ್ಕೆ ಬಂದರೆ ಕೊರಟಾಲ ಶಿವ ಸೋತಿದ್ದಾರೆ. ಅದರೊಂದಿಗೆ ತಾಜಾತನದ ಅಂಶವೂ ಮಾಯವಾಗುತ್ತದೆ.

     ಪರಿಣಾಮಕಾರಿಯಾದ ದೃಶ್ಯವಿಲ್ಲ

    ಪರಿಣಾಮಕಾರಿಯಾದ ದೃಶ್ಯವಿಲ್ಲ

    ಸಿನಿಮಾದ ಫಸ್ಟ್ ಹಾಫ್ ಹಾಗೂ ಸೆಕೆಂಡ್ ಹಾಫ್‌ನಲ್ಲಿ ರಾಮ್‌ ಚರಣ್ ಇರುವುದು ಸಮಾಧಾನ ತಂದಿದರೂ, ದ್ವಿತೀಯಾರ್ಧದಲ್ಲಿ ಸಿನಿಮಾ ತಾಳ್ಮೆಯನ್ನು ಪರೀಕ್ಷಿಸುತ್ತದೆ. ನೆನಪಿನಲ್ಲಿ ಇಟ್ಟುಕೊಳ್ಳಬೇಕು ಅನ್ನುವಂತಹದ್ದು ಏನೂ ಇಲ್ಲ. ಚಿರಂಜೀವಿ ಮತ್ತು ಚರಣ್ ನಡುವಿನ ಕಾಂಬೊ ದೃಶ್ಯಗಳು ಈ ಬರುತ್ತೆ ಎಂದು ಕಾದು ಕೂತವರಿಗೆ ತಾಳ್ಮೆ ಪರೀಕ್ಷಿಸುವಂತೆ ಮಾಡುತ್ತದೆ. ದುರದೃಷ್ಟವಶಾತ್, ಕೊರಟಾಲ ಶಿವ ಅವುಗಳನ್ನು ಬಳಸಿಕೊಳ್ಳಲು ವಿಫಲರಾಗಿದ್ದಾರೆ. 'ಭಂಜಾರ' ಹಾಡಿನಲ್ಲಿರುವ ಸಂಕ್ಷಿಪ್ತ ಬಿಟ್ ಹೊರತುಪಡಿಸಿ, ತಂದೆ ಮತ್ತು ಮಗನ ಜೋಡಿಯನ್ನು ಒಳಗೊಂಡಿರುವ ಯಾವುದೇ ಆತ್ಮೀಯ ಮತ್ತು ಭಾವನಾತ್ಮಕತೆಯನ್ನು ಕಟ್ಟುವ ಕ್ಷಣಗಳು ಈ ಸಿನಿಮಾದಲ್ಲಿಲ್ಲ.

    ಅತೀ ದೊಡ್ಡ ಕ್ಲೈಮ್ಯಾಕ್

    ಅತೀ ದೊಡ್ಡ ಕ್ಲೈಮ್ಯಾಕ್

    ಕ್ಲೈಮ್ಯಾಕ್ಸ್ ದೀರ್ಘವಾಗಿದ್ದು, ಭಾವನೆಗಳು ಎಂದಿಗೂ ಮುಗಿಯದ ಸಾಹಸಗಾಥೆಯಂತೆ ಕಾಣುತ್ತದೆ. ಆದ್ದರಿಂದ, ಸಿನಿಮಾ ಮುಗಿಯುವವರೆಗೆ ಕಾಯದೆ ಪ್ರೇಕ್ಷಕರು ಚಿತ್ರಮಂದಿರಗಳಿಂದ ಎದ್ದು ಹೋಗಲು ನಿರ್ಧರಿಸಿದರೂ ಆಶ್ಚರ್ಯವೇನಿಲ್ಲ. ಇದು ಆಯಾಸ ಮತ್ತು ತಾಳ್ಮೆಯ ಪರೀಕ್ಷೆಯಾಗಿದೆ. ಒಟ್ಟಾರೆಯಾಗಿ, ಆಚಾರ್ಯ ನಿಸ್ಸಂದೇಹವಾಗಿ ಕೊರಟಾಲ ಶಿವ ಅತೀ ಕಳಪೆ ಸ್ಕ್ರಿಪ್ಟ್. ಚಿರಂಜೀವಿ ಮತ್ತು ರಾಮ್ ಚರಣ್ ಬಿಟ್ಟರೆ ಮಾತನಾಡಲು ಯೋಗ್ಯವಾದ ಯಾವುದೇ ಪಾತ್ರವಿಲ್ಲ. ಎಲ್ಲವೂ ಅರ್ಧ ಬೆಂದಿದೆ. ಕಾಜಲ್ ಅವರ ಭಾಗವು ಸಂಪೂರ್ಣವಾಗಿ ಕತ್ತರಿಸಲ್ಪಟ್ಟಿದೆ. ಪೂಜಾ ಹೆಗ್ಡೆ ಕೂಡ ರಾಮ್ ಚರಣ್‌ ಪ್ರೇಮಕತೆಯಾಗಿ ಕಾಣಿಸಿಕೊಳ್ಳುವುದನ್ನು ಬಿಟ್ಟರೆ, ಹೆಚ್ಚಿನ ಕೆಲಸವೇನು ನಿರ್ದೇಶಕರು ಕೊಡುವುದಕ್ಕೆ ಹೋಗಿಲ್ಲ. ಆಚಾರ್ಯ ನಿಜಕ್ಕೂ ಕೂಡ ತಾಳ್ಮೆಯನ್ನು ಪರೀಕ್ಷಿಸುವ ಚಿತ್ರವಾಗಿ ಹೊರಹೊಮ್ಮಿದೆ.

    English summary
    Acharaya movie review: mega boring movie.Movies is old wine in new bottle, which will test audinces Patience.
    Saturday, April 30, 2022, 19:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X