»   » ಕ್ವೀನ್ ಆಫ್ ಹಾರರ್ ಬಿಪ್ಸ್ ಗಾಗಿ ನೋಡಬಲ್: ವಿಮರ್ಶೆ

ಕ್ವೀನ್ ಆಫ್ ಹಾರರ್ ಬಿಪ್ಸ್ ಗಾಗಿ ನೋಡಬಲ್: ವಿಮರ್ಶೆ

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ನಲ್ಲಿ ಹಾರರ್ ಚಿತ್ರಗಳಿಗೇನು ಕಡಿಮೆಯಿಲ್ಲ. ಅದರಲ್ಲೂ ಸೆಕ್ಸ್ ಹಾಗೂ ಭಯಾನಕ ಸನ್ನಿವೇಶಗಳನ್ನು ಹದವಾಗಿ ಬೆರೆಸಿ ಕಾಕ್ ಟೈಲ್ ಸಿನಿಮಾ ನೀಡುವುದರಲ್ಲಿ ಮುಂಬೈವಾಲಗಳು ಎತ್ತಿದ ಕೈ. ಇನ್ನು ಕ್ವೀನ್ ಆಫ್ ಹಾರರ್ ಸಿನಿಮಾ ಎನಿಸಿಕೊಂಡಿರುವ ಬಿಪಾಶಾ ಇದ್ದರಂತೂ ಪ್ರೇಕ್ಷಕರಿಗೆ ಸ್ವರ್ಗ ನರಕ ಎರಡೂ ಒಮ್ಮೆಗೆ ದರ್ಶನವಾಗುತ್ತದೆ.

ಇಷ್ಟೆಲ್ಲ ಪೀಠಿಕೆ ಇದ್ದರೂ ಬಿಪಾಶ ಬಸು ಅಭಿನಯದ ಅಲೋನ್ ಚಿತ್ರಕ್ಕೆ ವಿಮರ್ಶಕರು ಮಾತ್ರ ಹೊಗಳಿಲ್ಲ. ಬಿಪಾಶಾ ಅಭಿಮಾನಿಯಾಗಿದ್ದರೆ ಒಮ್ಮೆ ನೋಡಿಲಡ್ಡಿಯಿಲ್ಲ ಎಂದಿದ್ದಾರೆ. ಸಯಾಮಿ ಅವಳಿಗಳು ಬೇರ್ಪಟ್ಟು ಪಡುವ ವೇದನೆಗೆ ಸತಿ ಪತಿ ದಾಂಪತ್ಯ, ಕಲಹ, ಕದನ, ರಸಾಯನ ಮಾಡಿ ಭೂಷಣ್ ಪಟೇಲ್ ನೀಡಿದ್ದಾರೆ. ['ಟಚ್ ಮೈ ಬಾಡಿ' ಎಂದ ಬಿಪಾಶಾ ಬಸು]

ರಾಗಿಣಿ ಎಂಎಂಎಸ್ ಖ್ಯಾತಿಯ ನಿರ್ದೇಶಕ ಅವರ ಪ್ರಯತ್ನಕ್ಕೆ ವಿಮರ್ಶಕರು ಜೈ ಎಂದಿದ್ದಾರೆ. ಆದರೆ, ಅನಗತ್ಯ ಸೆಕ್ಸ್ ಸನ್ನಿವೇಶಗಳು, ಹಾರರ್ ಚಿತ್ರವೆಂದ ಮೇಲೆ ಇರಬೇಕಿರುವ ತಲ್ಲಣ ದೃಶ್ಯಗಳು ತಣ್ಣಗೆನಿಸುವುದರಿಂದ ಚಿತ್ರ ಸಪ್ಪೆಯಾಗಿದೆ ಎಂದು ವಿಮರ್ಶಕರು ಘೋಷಿಸಿದ್ದಾರೆ. ಆನ್ ಲೈನ್ ನಲ್ಲಿ ಪ್ರಕಟವಾಗಿರುವ ಅಲೋನ್ ಚಿತ್ರದ ವಿವಿಧ ವಿಮರ್ಶಕರ ಅಭಿಪ್ರಾಯ ಸಾರ ಸಂಗ್ರಹ ಇಲ್ಲಿದೆ ಓದಿ...

ಸಸ್ಪೆನ್ಸ್ ಎಲಿಮೆಂಟ್ ಚೆನ್ನಾಗಿದೆ: ಕೊಯಿಮೊಯಿ

ಚಿತ್ರದಲ್ಲಿ ಭೂಷಣ್ ಪಟೇಲ್ ಸಸ್ಪನ್ಸ್ ಎಲಿಮೆಂಟ್ ಚೆನ್ನಾಗಿ ತಂದಿದ್ದಾರೆ. ಬಿಪಾಶಾ ನಟನೆ ಮೇಲುಗೈ ಸಾಧಿಸಿ ಹೊಸ ಪ್ರತಿಭೆ ಕರಣ್ ನೂನ್ಯತೆಯನ್ನು ಅಳಿಸುತ್ತದೆ. ಇಬ್ಬರ ನಡುವಿನ ಕೆಮಿಸ್ಟ್ರಿ ವರ್ಕ್ ಔಟ್ ಆಗಿದೆ. ನಿದ್ದೆಗೆಡಿಸುವಂಥ ಹಾರರ್ ಚಿತ್ರವಲ್ಲದಿದ್ದರೂ ಒಮ್ಮೆ ವೀಕೆಂಡ್ ನಲ್ಲಿ ಟಿಕೆಟ್ ಸಿಕ್ಕರೆ ನೋಡಿ.. ಮೂಲ ಚಿತ್ರ ನೋಡಿದವರು ಸುಮ್ಮನಿದ್ದರೂ ಅಡ್ಡಿಯಿಲ್ಲ. 2.5/5, ಸುರಭಿ ಆರ್

ಚಿತ್ರ ನಿಜಕ್ಕೂ ಪ್ರೇಕ್ಷಕರಿಗೆ ಟಾರ್ಚರ್: ಇಂಡಿಯನ್ ಎಕ್ಸ್ ಪ್ರೆಸ್

ಹಾರರ್ ಚಿತ್ರ ನಿಜಕ್ಕೂ ಪ್ರೇಕ್ಷಕರಿಗೆ ಟಾರ್ಚರ್ ಕೊಡುತ್ತದೆ. ಹಾರರ್ ಚಿತ್ರದಲ್ಲಿ ಅನಗತ್ಯ ಹಾಟ್ ಸೀನ್, ಹಾಡುಗಳನ್ನು ತುರುಕುವುದನ್ನು ನಿಲ್ಲಿಸಬೇಕು. ಬಿಪಾಶಾ ಅವರ ಸಹಜ ಅಭಿನಯ ಕೂಡಾ ಚಿತ್ರವನ್ನು ಗೆಲ್ಲಿಸುವ ಸಾಧ್ಯತೆ ಕಡಿಮೆ. ರಾಗಿಣಿ ಎಂಎಂಎಸ್ ನಿರ್ದೇಶಕ ಈ ಚಿತ್ರ ಇಷ್ಟು ಹಾರಿಬಲ್ ಮಾಡಿದ್ದೇಕೆ ಎಂಬ ಪ್ರಶ್ನೆಯೊಂದಿಗೆ ನಿದ್ದೆ ಮಾಡಬಹುದು. 1.5/5, ಶುಭ್ರ ಗುಪ್ತ

ಅಲೋನ್ ಬೆಸ್ಟ್ ಕಾಮಿಡಿ ಚಿತ್ರವಾಗಬಹುದು

ಅಲೋನ್ ಬೆಸ್ಟ್ ಕಾಮಿಡಿ ಚಿತ್ರವಾಗಬಹುದು. ಬಿಪಾಶಾ ಬಿಟ್ಟರೆ ಚಿತ್ರದಲ್ಲಿ ಭಯ ಹಾಗೂ ಭೂತ ಎರಡೂ ಮಾಯವಾಗಿದೆ. ಹೀಗಾಗಿ ಚಿತ್ರಮಂದಿರದಿಂದ ಪ್ರೇಕ್ಷಕರೂ ಬೇಗ ಮಾಯವಾಗುತ್ತಾರೆ. ಹಾರರ್ ಕಮ್ ಸೆಕ್ಸ್ ಚಿತ್ರ ನೋಡದೆ ಇರುವವರು ಕೆಲ ಹೊತ್ತು ಕುಳಿತು ಆನಂದಿಸಬಹುದು. ಈ ಮುಂಚೆ ಬಿಪ್ಸ್ ಚಿತ್ರ ಪರಿಚಯವಿದ್ದವರು ಟ್ರೇಲರ್ ನೋಡಿ ಆನಂದಿಸಿ, ಚಿತ್ರಮಂದಿರಕ್ಕೆ ಹೋಗಿದಿದ್ದರೂ ಸಾಕು. ಪಿಯಾಶ್ರೀ ದಾಸ್ ಗುಪ್ತ, ಫಸ್ಟ್ ಪೋಸ್ಟ್

ಕ್ವೀನ್ ಆಫ್ ಹಾರರ್ ಗಾಗಿ ಮಾತ್ರ : ಒನ್ ಇಂಡಿಯಾ

ಥಾಯ್ ಚಿತ್ರದ ರಿಮೇಕ್ ಆಗಿರುವ ಅಲೋನ್ ನಲ್ಲಿ ಇಬ್ಬಿಬ್ಬರು ಬಿಪಾಶಾ ಇದ್ದರೂ ಏನೋ ಕೊರತೆ ಕಾಣುತ್ತದೆ. ಸಯಾಮಿ ಅವಳಿಗಳು ಕರಣ್ ಮೇಲೆ ಮೋಹಗೊಳ್ಳುವುದು ಇಬ್ಬರು ಸರ್ಜರಿಗೊಳಗಾಗುವುದು, ಅಂಜನಾ ಸಾಯುವುದು ಸಂಜನಾ ಕರಣ್ ವರಿಸುವುದು, ಸೋದರಿ ಮೇಲೆ ಅಂಜನಾ ಸೇಡು ತೀರಿಸಿಕೊಳ್ಳುವುದೇ ಕಥೆ. ಏಕತಾನತೆಯುಳ್ಳ ಸ್ಕ್ರಿಪ್ಟ್ , ಬೇಡವಾಗಿದ್ದ ಹಾಡುಗಳು, ಬಿಪಾಶಾ ಪಾತ್ರ ಉಳಿದ ಪಾತ್ರಗಳನ್ನು ಸೈಡ್ ಲೈನ್ ಗೆ ತಳ್ಳುವುದು ಎಲ್ಲವೂ ಚಿತ್ರಕ್ಕೆ ಮಾರಕವಾಗಿವೆ.

ಅಲೋನ್ ಸೆಕ್ಸ್ ಹಾಗೂ ಹಾರರ್ ಪ್ರಿಯರಿಗೆ ಮಾತ್ರ

ಅಲೋನ್ ಸೆಕ್ಸ್ ಹಾಗೂ ಹಾರರ್ ಪ್ರಿಯರಿಗೆ ಮಾತ್ರ. ಭೂಷಣ್ ಅವರ ತಪ್ಪುಗಳನ್ನು ಸರಿಪಡಿಸಲು ಸಿನಿಮಾಟೋಗ್ರಾಫರ್ ಪ್ರಕಾಶ್ ಕುಟ್ಟಿ ಹಾಗೂ ಸಂಕಲನಕಾರ ದೇವೇಂದ್ರ ಮುರುಡೇಶ್ವರ್ ಕಷ್ಟಪಟ್ಟಿರುವುದು ಎದ್ದು ಕಾಣುತ್ತದೆ. ಹಾರರ್ ಚಿತ್ರ ಕಾಮಿಡಿಯಾಗಿ ಕಾಣುವಂತಾಗುತ್ತದೆ. ಸೈಬಲ್ ಚಟರ್ಜಿ, ಎನ್ ಡಿಟಿವಿ

Read in English: Alone Movie Review
English summary
If you are a horror movie freak, Alone may be dull for you! Else, it can make up for a decent weekend watch that'll probably make you laugh more and scare less. Watch it only if you are Bipasha Basu fan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada