For Quick Alerts
  ALLOW NOTIFICATIONS  
  For Daily Alerts

  ಅಂಗ್ರೇಜಿ ಮೀಡಿಯಂ: ಇರ್ಫಾನ್ ಅಭಿನಯ, ಮನಮುಟ್ಟುವ ''ಸ್ಪೀಚ್''

  By ಜೇಮ್ಸ್ ಮಾರ್ಟಿನ್
  |

  2017ರಲ್ಲಿ ತೆರೆ ಕಂಡ ''ಹಿಂದಿ ಮೀಡಿಯಂ'' ಚಿತ್ರದಲ್ಲಿ ಮಧ್ಯಮ ವರ್ಗದ ಕುಟುಂಬದವರು ತಮ್ಮ ಮಗುವನ್ನು ಹೈಫೈ ಇಂಗ್ಲೀಷ್ ಮಾಧ್ಯಮ ಶಾಲೆಗೆ ಸೇರಿಸಲು ಪಡುವ ಕಷ್ಟದ ಕಥೆ ಹೊಂದಿತ್ತು. ಭಾರತದ ಎಷ್ಟೋ ಮಂದಿ ದೈನಂದಿನ ಬದುಕಿಗೆ ಹತ್ತಿರವಾಗಿದ್ದ ಈ ಚಿತ್ರದ ಕಥೆ, ಇರ್ಫಾನ್ ಅಭಿನಯಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು. ಚಿತ್ರ ಕೂಡಾ ಬಾಕ್ಸಾಫೀಸ್ ಭಾರಿ ಸದ್ದು ಮಾಡಿತ್ತು. ಇದಾದ ಬಳಿಕ ಈ ಚಿತ್ರದ ಮುಂದುವರೆದ ಭಾಗವನ್ನು ಸಾಕೇತ್ ಚೌಧುರಿ ಬದಲಿಗೆ ಹೋಮಿ ಅದಜಾನಿಯಾ ನಿರ್ದೇಶಿಸಿದ್ದಾರೆ. ಅಂಗ್ರೇಜಿ ಮೀಡಿಯಂ ತೆರೆ ಕಂಡಿದ್ದು, ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

  ವಿದೇಶದಲ್ಲಿ ವ್ಯಾಸಂಗ ಮಾಡುವ ಕನಸು ಹೊತ್ತ ಯುವ ಜನಾಂಗ, ಮಕ್ಕಳ ಕನಸಿಗೆ ಸಾಥ್ ನೀಡಲು ಹೆಣಗಾಡುವ ಅಪ್ಪ-ಅಮ್ಮ, ಇಡೀ ಶಿಕ್ಷಣ ವ್ಯವಸ್ಥೆಯ ಬಗ್ಗೆ ಕುತೂಹಲಕಾರಿ ಕಥೆ ಸಾಗಿದರೂ, ದ್ವಿತೀಯಾರ್ಧದಲ್ಲಿ ನಿರ್ದೇಶಕನ ಹತೋಟಿ ತಪ್ಪಿರುವುದು ಎದ್ದು ಕಾಣುತ್ತದೆ. ಒಟ್ಟಾರೆ, ಅಪ್ಪನಾಗಿ ಇರ್ಫಾನ್, ಮಗಳಾಗಿ ರಾಧಿಕಾ ಮದನ್ ಗಮನ ಸೆಳೆಯುತ್ತಾರೆ. ಕೆಲವೊಮ್ಮೆ ಚಿತ್ರದ ಮೂಲ ಆಶಯ ಬಿಟ್ಟು, ತಂದೆ ಮಗಳ ಬಾಂಧವ್ಯ ಬಿಂಬಿಸುವ ಉತ್ತಮ ಚಿತ್ರವೆನಿಸತೊಡಗುತ್ತದೆ.

  ಏನು ಚೆನ್ನಾಗಿದೆ: ಇರ್ಫಾನ್, ರಾಧಿಕಾ, ದೀಪಕ್ ದೊಬ್ರಿಯಾಲ್ ಅಭಿನಯ

  ಏನು ಚೆನ್ನಾಗಿಲ್ಲ: ನಿರೂಪಣೆ ದ್ವಿತೀಯಾರ್ಧದಲ್ಲಿ ಹಾದಿ ತಪ್ಪಿದೆ, ಅನಗತ್ಯ ಉಪಕಥೆಗಳು ಕಥೆಯ ಓಟಕ್ಕೆ ಬ್ರೇಕ್ ಹಾಕಿದೆ.

  ಮಿಸ್ ಮಾಡಬೇಡ: ತನ್ನ ಮೃತ ಪತ್ನಿಗೆ ನ್ಯಾಯ ಒದಗಿಸಲು ಆಗದೆ ನೊಂದ ಪತಿ ಇರ್ಫಾನ್ ಖಾನ್ ದುಃಖ ತಪ್ತನಾಗಿ ರೋದಿಸುವ ದೃಶ್ಯ

  ಚಿತ್ರದ ಕಥಾ ಹಂದರ

  ಚಿತ್ರದ ಕಥಾ ಹಂದರ

  ಚಿಕ್ಕಂದಿನಿಂದ ತಾರಿಕಾ(ರಾಧಿಕಾ ಮದನ್) ಳಿಗೆ ವಿದೇಶದಲ್ಲಿ ವ್ಯಾಸಂಗ ಮಾಡುವ ಕನಸಿರುತ್ತದೆ. ಆರಂಭದಲ್ಲಿ ಆಕೆಯ ತಂದೆ ಚಂಪಕ್ ಬನ್ಸಾಲ್ (ಇರ್ಫಾನ್ ಖಾನ್) ಕನಸಿನ ಸಸಿಗೆ ನೀರೆರುತ್ತಾನೆ. ಆದರೆ, ಘಸಿಟಾರಾಮ್ ಎಂಬ ಸಿಹಿ ತಿನಿಸಿನ ಅಂಗಡಿ ಹೊಂದಿರುವ ಚಂಪಕ್ ಬನ್ಸಾಲ್, ತಾರಿಕಾಳಿಗೆ ಉತ್ತಮ ಅಂಕ ಗಳಿಸುವ ಸವಾಲು ಹಾಕುತ್ತಾನೆ. ಉತ್ತಮ ಫಲಿತಾಂಶ ನೀಡಿ ಲಂಡನ್ನಿನ ಟ್ರುಫರ್ಡ್ ವಿವಿಯಲ್ಲಿ ಸ್ಕಾಲರ್ ಶಿಪ್ ಗಳಿಸಿದ ತಾರಿಕಾಳಿಗೆ ಇನ್ನೇನು ತನ್ನ ಬಾಲ್ಯದ ಕನಸು ನನಸಾಗುತ್ತಿದೆ ಎನ್ನುವಷ್ಟರಲ್ಲಿ ಆಘಾತ ಎದುರಾಗುತ್ತದೆ. ಮಗಳ ಕನಸು ನನಸಾಗಿಸುವಲ್ಲಿ ಇರ್ಫಾನ್ ಸಫಲನಾಗುತ್ತಾನಾ? ಎಂಬುದನ್ನು ತೆರೆಯ ಮೇಲೆ ನೋಡಿ..

  ಅಭಿನಯ

  ಅಭಿನಯ

  ಅಂಗ್ರೇಜಿ ಮೀಡಿಯಂನಲ್ಲಿ ಈ ಮೊದಲೇ ಹೇಳಿದಂತೆ ಇರ್ಫಾನ್ ಖಾನ್ ನಟನೆಯಲ್ಲಿ ಫುಲ್ ಮಾರ್ಕ್ಸ್ ಗಳಿಸುತ್ತಾರೆ. ಚಿತ್ರಕಥೆಯಲ್ಲಿನ ಲೋಪಗಳನ್ನು ಮುಚ್ಚಿ ಹಾಕುವಂತೆ ಇರ್ಫಾನ್ ನಟನೆ ಎದ್ದು ಕಾಣುತ್ತದೆ. ನಿಜ ಜೀವನದಲ್ಲಿ ಕ್ಯಾನ್ಸರ್ ಜೊತೆ ಗುದ್ದಾಡಿ ಗೆದ್ದು ಬಂದಿರುವ ಇರ್ಫಾನ್ ತಮ್ಮ ಚಾರ್ಮ್ ಉಳಿಸಿಕೊಂಡಿದ್ದಾರೆ. ಪುತ್ರಿಯಾಗಿ ರಾಧಿಕಾ ಮದನ್ ಗೆ ಹೆಚ್ಚು ಕಾಲ ತೆರೆಯ ಮೇಲೆ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದ್ದು, ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡಿದ್ದಾರೆ. ಕರೀನಾ ಕಪೂರ್, ಡಿಂಪಲ್ ಕಪಾಡಿಯಾ ಪಾತ್ರಪೋಷಣೆಯಲ್ಲೇ ಕೊರತೆ ಎದ್ದುಕಾಣುತ್ತದೆ.

  ದೀಪಕ್ ದೋಬ್ರಿಯಾಲ್ ಹಾಗೂ ಇರ್ಫಾನ್ ಜೋಡಿ ಪ್ರೇಕ್ಷಕರಿಗೆ ಮುದ ನೀಡುತ್ತದೆ. ಪಂಕಜ್ ತ್ರಿಪಾಠಿ, ರಣವೀರ್ ಶೋರೆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

  ತಾಂತ್ರಿಕ ವರ್ಗ, ಸಂಗೀತ

  ತಾಂತ್ರಿಕ ವರ್ಗ, ಸಂಗೀತ

  ಅನಿಲ್ ಮೆಹ್ತಾರ ಕ್ಯಾಮೆರಾದಲ್ಲಿ ಉದಯ್ ಪುರ್, ಲಂಡನ್ ಎರಡು ಸೊಗಸಾಗಿ ಕಾಣಿಸುತ್ತಿದೆ. ಶ್ರೀಕರ್ ಪ್ರಸಾದ್ ಸಂಕಲನದಿಂದ ಚಿತ್ರ ನೋಡಲು ಸಹ್ಯ ಎನಿಸಿದೆ ಎನ್ನಬಹುದು. ಸಚಿನ್ ಜಿಗಾರ್ ಸಂಗೀತದಲ್ಲಿ ಎಕ್ ಜಿಂದಗಿ, ಲಡ್ಕಿ ಹಾಡು ಕಾಡುತ್ತದೆ.

  ಇಷ್ಟವಾಗುವ ದೃಶ್ಯ, ಕೊನೆಯ ಮಾತು

  ಇಷ್ಟವಾಗುವ ದೃಶ್ಯ, ಕೊನೆಯ ಮಾತು

  ಮಗಳ ಸನ್ಮಾನ ಸಮಾರಂಭದಲ್ಲಿ ಇರ್ಫಾನ್ ಬ್ರೋಕನ್ ಇಂಗ್ಲೀಷ್ ನಲ್ಲಿ Inside I am very emotional and outside I am very happy for my bitiya''ಎಂದು ಭಾಷಣ ಮಾಡುವುದು ಇಷ್ಟವಾಗುತ್ತದೆ.

  ಇನ್ನೊಂದು ದೃಶ್ಯದಲ್ಲಿ ತಾರಿಕಾ ತನ್ನ ಗೆಳೆಯನ ಜೊತೆ ಏಕಾಂತದಲ್ಲಿದ್ದಾಗ ಅಕಸ್ಮಾತ್ ಅಲ್ಲಿಗೆ ಬರುವ ತಂದೆ ಇರ್ಫಾನ್

  ಗೆ ತಾರಿಕಾ ನೀಡುವ ಉತ್ತರ, ತಾನು ಅಲ್ಲಿಗೆ ಬಂದ ಉದ್ದೇಶ ಹೇಳಿ, ಕ್ಷಮೆಯಾಚಿಸುವ ಪಾತ್ರ ಹಾಗೂ ಸನ್ನಿವೇಶ ತಂದೆ -ಮಗಳ ಸಂಬಂಧ ಹಾಗೂ ಚಿತ್ರದ ಒಟ್ಟಾರೆ ಆಶಯವನ್ನು ಬಿಂಬಿಸುತ್ತದೆ.

  ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

  English summary
  Angrezi Medium Movie Review: Irrfan Khan Hits The Right Chord With His Moving Performance!. We give 3 stars out of 5 for Irrfan Khan-Radhika Madan-Kareena Kapoor Khan's Angrezi Medium.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X