For Quick Alerts
  ALLOW NOTIFICATIONS  
  For Daily Alerts

  ರೋಚಕತೆ ಇರುವ ವೆನಿಲ್ಲಾ ಚಿತ್ರವನ್ನ ಮೆಚ್ಚಿಕೊಂಡ್ರಾ ವಿಮರ್ಶಕಾ?

  By Pavithra
  |

  ವೆನಿಲ್ಲಾ ಟೈಟಲ್ ಮತ್ತು ಚಿತ್ರದ ಪೋಸ್ಟರ್ ನಿಂದಲೇ ಸಿನಿಮಾ ಬಗ್ಗೆ ಕುತೂಹಲ ಮೂಡಿಸಿದ ಸಿನಿಮಾ. ನಿರ್ದೆಶಕ ಜಯತೀರ್ಥ ಚಿತ್ರಗಳಲ್ಲಿ ಏನಾದರೂ ವಿಶೇಷತೆ ಇದ್ದೇ ಇರುತ್ತದೆ ಎನ್ನುವುದು ಸಿನಿಮಾ ಅಭಿಮಾನಿಗಳ ಅಭಿಪ್ರಾಯ.

  ಟ್ರೇಲರ್ ಮತ್ತು ಹಾಡುಗಳಿಂದಲೂ ಸಿನಿಮಾ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿದ್ದವು. ಹೊಸ ಪ್ರತಿಭೆಗಳಾದ ಅವಿನಾಶ್ ಹಾಗೂ ಸ್ವಾತಿ ಕೊಂಡಿ ಅವರನ್ನು ಒಟ್ಟಾಗಿಸಿಕೊಂಡು ನಿರ್ದೇಶಕರು ಪ್ರೇಕ್ಷಕರಿಗೆ ಒಂದೊಳ್ಳೆ ಸಿನಿಮಾ ನೀಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.

  ವಿಮರ್ಶೆ: ಒಮ್ಮೆ ಕುತೂಹಲ, ಇನ್ನೊಮ್ಮೆ ತಳಮಳ ಇದುವೇ 'ವೆನಿಲ್ಲಾ'ವಿಮರ್ಶೆ: ಒಮ್ಮೆ ಕುತೂಹಲ, ಇನ್ನೊಮ್ಮೆ ತಳಮಳ ಇದುವೇ 'ವೆನಿಲ್ಲಾ'

  ಹಾಗಾದರೆ ವೆನಿಲ್ಲಾ ಸಿನಿಮಾ ನೋಡಿದ ಪ್ರೇಕ್ಷಕರು ಚಿತ್ರಕ್ಕೆ ನೀಡಿದ ಅಂಕವೆಷ್ಟು? ಚಿತ್ರದಲ್ಲಿರುವ ಪ್ಲಸ್ ಹಾಗೂ ಮೈನೆಸ್ ಪಾಯಿಂಟ್ ಗಳೇನು? ಕನ್ನಡದ ಆಯ್ದ ದಿನಪತ್ರಿಕೆಗಳ ವೆನಿಲ್ಲಾ ಚಿತ್ರದ ವಿಮರ್ಶೆ ಇಲ್ಲಿದೆ ಮುಂದೆ ಓದಿ

  ಕೊಲೆಗಳ ಸಿಕ್ಕು ಬಿಡಿಸುವ ಚಿತ್ರ: ವಿಜಯಕರ್ನಾಟಕ

  ಕೊಲೆಗಳ ಸಿಕ್ಕು ಬಿಡಿಸುವ ಚಿತ್ರ: ವಿಜಯಕರ್ನಾಟಕ

  ಮೆಕಾನಿಕಲ್ ಎಂಜಿನಿಯರಿಂಗ್ ಮುಗಿಸಿರುವ ನಾಯಕ ಅವಿ (ಅವಿನಾಶ್‌) ಮತ್ತು ಅನಘಾ (ಸ್ವಾತಿ ಕೊಂಡೆ) ಬಾಲ್ಯ ಸ್ನೇಹಿತರು. ಬಹಳ ವರ್ಷಗಳ ನಂತರ ಭೇಟಿಯಾಗುತ್ತಾರೆ. ಹೀಗೆ ಭೇಟಿಯಾದ ದಿನವೇ ನಾಯಕಿ ಸ್ವಾತಿ ಕೊಲೆಯಂತಹ ಗಂಭೀರ ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತಾಳೆ. ಅವಳನ್ನು ನಾಯಕ ಅವಿ ರಕ್ಷಿಸುತ್ತಾನೆ. ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಾನೆ. ವಿಚಿತ್ರವೆಂದರೆ, ನಾಯಕನಿಗೆ ಹೇಳದೇ ಕೇಳದೆ ಅನಘಾ ವಿದೇಶಕ್ಕೆ ಹಾರುತ್ತಾಳೆ. ಇತ್ತ ಕೊಲೆಯ ಕೇಸ್‌ ನಾಯಕ ಅವಿಯನ್ನು ಸುತ್ತಿಕೊಳ್ಳಲು ಆರಂಭಿಸಿದಾಗ, ಅವನು ನಾಯಕಿಯನ್ನು ಹುಡುಕಿಕೊಂಡು ವಿದೇಶಕ್ಕೆ ಹೋಗುತ್ತಾನೆ. ಆಗ ಅವನಿಗೆ ಅಲ್ಲಿ ಏನು ನಡೆದಿತ್ತು ಎಂಬುದರ ಸಂಪೂರ್ಣ ಚಿತ್ರಣ ಸಿಗುತ್ತದೆ. ಈ ನಡುವೆ ನಾಯಕಿಗೆ ಸಂಬಂಧಪಟ್ಟಂತೆ ಮತ್ತೆರೆಡು ಕೊಲೆಗಳು ನಡೆದಿರುತ್ತವೆ. ಇದನ್ನು ಬೆನ್ನತ್ತಿದಾಗ ಕೊಲೆಗಳ ಸುರುಳಿ ಒಂದೊಂದಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಯಾರು? ಯಾಕೆ? ಈ ಕೊಲೆಗಳನ್ನು ಮಾಡಿದರು ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು. ಮರ್ಡರ್ ಮಿಸ್ಟರಿಯಾಗಿರುವ ಕಾರಣ ಪ್ರೇಕ್ಷಕರನ್ನು ಕೆಲವೊಮ್ಮೆ ಸೀಟಿನ ತುದಿಗೆ ತರುವಲ್ಲಿ ನಿರ್ದೇಶಕ ಜಯತೀರ್ಥ ಯಶಸ್ವಿಯಾಗಿದ್ದಾರೆ.

  ವೆನಿಲ್ಲಾ! ಇದು ಐಸ್‌ಕ್ರೀಂ ಅಲ್ಲ : ಪ್ರಜಾವಾಣಿ

  ವೆನಿಲ್ಲಾ! ಇದು ಐಸ್‌ಕ್ರೀಂ ಅಲ್ಲ : ಪ್ರಜಾವಾಣಿ

  ಈ ಕಥೆಯಲ್ಲಿ ಹೊಸತನವೇನೂ ಇಲ್ಲ. ಆದರೆ ಸಸ್ಪೆನ್ಸ್ ಥ್ರಿಲ್ಲರ್ ಪ್ರಕಾರಗಳಲ್ಲಿ ಸಾಧಾರಣ ಕಥೆಯನ್ನಾದರೂ ಬಿಗಿಯಾದ ನಿರೂಪಣೆಯಿಂದ, ಸಮರ್ಥವಾದ ಹಿನ್ನೆಲೆ ಸಂಗೀತದಿಂದ ಗೆಲ್ಲುವಂತೆ ಮಾಡುವ ಸಾಧ್ಯತೆ ಇದೆ. ಇಂಥ ಸಿನಿಮಾಗಳು ಜನರಿಗೆ ಇಷ್ಟವಾಗುವುದೂ ಮನಸ್ಸು ಅತ್ತಿತ್ತ ಅಲ್ಲಾಡದ ಹಾಗೆ ನೋಡಿಸಿಕೊಂಡು ಹೋಗುವ ಗುಣವಿದ್ದಾಗಲೇ. ‘ವೆನಿಲ್ಲಾ' ಚಿತ್ರ ಸಪ್ಪೆಯೆನಿಸುವುದೂ ಇಲ್ಲಿಯೇ. ಇಲ್ಲಿ ಕಥೆಗೆ ಒಂದು ಕೇಂದ್ರವಿಲ್ಲ. ನಿರೂಪಣೆಯ ಹರಿವಿಗೆ ಒಂದು ಗಟ್ಟಿಯಾದ ಪಾತ್ರವಿಲ್ಲ.ನಾಯಕ ಅವಿನಾಶ್‌ ಮತ್ತು ನಾಯಕಿ ಸ್ವಾತಿ ಕೊಂಡೆ ಇಬ್ಬರೂ ನಟನೆಯಲ್ಲಿ ಭರವಸೆ ಹುಟ್ಟಿಸುತ್ತಾರೆ. ರೆಹಮಾನ್ ಫ್ಲಾಶ್‌ಬ್ಯಾಕ್‌ನಲ್ಲಿಯೇ ಬಂದು ಹೋಗುತ್ತಾರೆ.

  ವೆನಿಲ್ಲಾದಲ್ಲಿ ರೋಚಕತೆಯ ಘಮ: ವಿಜಯವಾಣಿ

  ವೆನಿಲ್ಲಾದಲ್ಲಿ ರೋಚಕತೆಯ ಘಮ: ವಿಜಯವಾಣಿ

  ಥ್ರಿಲ್ಲರ್ ಸಿನಿಮಾಗಳ ಪ್ರತಿ ದೃಶ್ಯಗಳೂ ರೋಚಕತೆಯನ್ನು ಬೇಡುತ್ತವೆ. ಹಲವು ತಿರುವುಗಳ ಮೂಲಕ ಕಥೆ ಹೇಳುವ ಜಯತೀರ್ಥ ಅವರ ಪ್ರಯತ್ನ ಕೊಂಚ ಹಳಿ ತಪ್ಪಿರುವುದು ಸ್ವಷ್ಟ. ಚಿತ್ರದಲ್ಲಿ ಹಲವಾರು ಟ್ವಿಸ್ಟ್​ಗಳಿದ್ದರೂ, ನಿರೂಪಣೆ ಸಡಿಲ ಎನಿಸುವುದರಿಂದ ಅಷ್ಟೇನೂ ಕುತೂಹಲ ಮೂಡಿಸುವುದಿಲ್ಲ. ಇಂತಹ ಸಣ್ಣಪುಟ್ಟ ಕೊರತೆಗಳ ಮಧ್ಯೆಯೂ ಕಮರ್ಷಿಯಲ್ ಆಗಿ ಪ್ರೇಕ್ಷಕರಿಗೆ ಸಾಮಾಜಿಕ ಸಂದೇಶ ನೀಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಜಯತೀರ್ಥ. ಡ್ರಗ್ಸ್ ಮಾಫಿಯಾದ ಮತ್ತೊಂದು ಮಜಲನ್ನು ಪ್ರೇಕ್ಷಕರಿಗೆ ದರ್ಶನ ಮಾಡಿಸುತ್ತಾರೆ. ನಿರ್ದೇಶಕರ ಗಟ್ಟಿ ಕಥೆಗೆ ಸರಿಯಾದ ತಾಂತ್ರಿಕ ಗುಣಮಟ್ಟತೆಯ ಅಗತ್ಯವಿತ್ತು. ಸಂಭಾಷಣೆ ಇನ್ನಷ್ಟು ಮೊನಚು ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಭರತ್ ಬಿ.ಜೆ. ಸಂಗೀತ ನಿರ್ದೇಶನದ ‘ಆವರಿಸುವ ಬಾ ಮೆಲ್ಲನೆ..' ಹಾಡು ಚಿತ್ರಮಂದಿರದಾಚೆಗೂ ಗುನುಗುವಂತೆ ಕಾಡುತ್ತದೆ. ಆದರೆ, ಹಿನ್ನೆಲೆ ಸಂಗೀತದಲ್ಲಿ ಕೊಂಚ ಸಪ್ಪೆ ಎನಿಸುತ್ತಾರೆ. ಕಿರಣ್ ಹಂಪಾಪುರ ಛಾಯಾಗ್ರಹಣಕ್ಕೆ ಪೂರ್ಣಾಂಕ. ಮೊದಲ ಪ್ರಯತ್ನದಲ್ಲೇ ಅವಿನಾಶ್ ಮತ್ತು ಸ್ವಾತಿ ಗಮನಸೆಳೆಯುತ್ತಾರೆ.

  VANILLA MOVIE REVIEW

  VANILLA MOVIE REVIEW

  The highlight of the film is 'Vanilla' - it is what keeps you on the edge right through. What is Vanilla? Why are so many people mentioning it? Why do they want it? And who is behind this mystery makes up the rest of the gripping story. Add to this the situational humour that flows smoothly into the screenplay and provides the required relief from the questions that fill your mind at every twist and turn, both related or otherwise. If you are in the mood to play Sherlock, make a trip to the theatre to solve the Vanilla mystery.

  English summary
  Kannada Actor Avinash and Swathi Konde starrer kannada movie Vanilla has received good response from the critics. Here is the collection of 'Vanilla' reviews by Top News Papers of Karnataka.
  Saturday, June 2, 2018, 10:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X