Don't Miss!
- News
ರೈಲಿನಲ್ಲಿ ಹೋಗಿ ನಂದಿ ಬೆಟ್ಟ, ಆದಿಯೋಗಿ ಪ್ರತಿಮೆ, ಕೆಂಪೇಗೌಡ ಪ್ರತಿಮೆ ನೋಡಿ; ರೈಲ್ವೆಯಿಂದ ಪ್ರವಾಸ ಪ್ಯಾಕೇಜ್
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತದತ್ತ ಪ್ರಯಾಣ ಆರಂಭಿಸಿದ ಆಸಿಸ್ ಆಟಗಾರರು
- Automobiles
ಟೊಯೊಟಾ ಇನೋವಾ ಹೈಕ್ರಾಸ್ ವಿತರಣೆ ಪ್ರಾರಂಭ: ಹೈಬ್ರಿಡ್ ರೂಪಾಂತರಕ್ಕೆ 1 ವರ್ಷ ಕಾಯಬೇಕು
- Lifestyle
February 2023 Horoscope : ಫೆಬ್ರವರಿ ತಿಂಗಳ ಭವಿಷ್ಯ: ಮೇಷ-ಮೀನದವರೆಗಿನ ರಾಶಿಗಳ ರಾಶಿಫಲ ಹೇಗಿದೆ?
- Technology
ಪೊಕೊ X5 ಪ್ರೊ ಲಾಂಚ್ಗೆ ಡೇಸ್ ಫಿಕ್ಸ್; ಭಾರೀ ಕುತೂಹಲ ಮೂಡಿಸಿದ ಫೀಚರ್ಸ್!
- Finance
Budget 2023: ರಾಷ್ಟ್ರಪತಿ ಭಾಷಣದೊಂದಿಗೆ ಜ.31ರಿಂದ ಬಜೆಟ್ ಅಧಿವೇಶನ ಆರಂಭ, ಈ ಮಾಹಿತಿ ತಿಳಿದಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Bharaate Review: ಮಾಸ್ ಪ್ರೇಕ್ಷಕರಿಗೆ ಕಿಕ್ ಹೆಚ್ಚಿಸುವ ಭರಾಟೆ
ಕೆಲದಿನಗಳ ಹಿಂದೆ 'ಭರಾಟೆ' ಸಿನಿಮಾದ ಆಕ್ಷನ್ ಟೀಸರ್ ವೊಂದು ಬಿಡುಗಡೆ ಆಗಿತ್ತು. ಆ ಟೀಸರ್ ತುಂಬ ಫೈಟ್ಸ್ ಗಳು ಇತ್ತು. ಅದೇ ರೀತಿ ಸಿನಿಮಾದ ತುಂಬ ಆಕ್ಷನ್ ತುಂಬಿಕೊಂಡಿದೆ.ಮಾಸ್ ಪ್ರೇಕ್ಷಕರಿಗೆ ಫುಲ್ ಕಿಕ್ ಕೊಡುವಂತೆ ಭರಾಟೆ ಮೂಡಿಬಂದಿದೆ.

ರಾಜಸ್ತಾನ್ ಗೈಡ್ ಕರ್ನಾಟಕಕ್ಕೆ ಬಂದ
ಸಿನಿಮಾದಲ್ಲೊಬ್ಬ ರಾಜಸ್ತಾನ್ ಗೈಡ್, ಆತನೇ ನಾಯಕ. ಅವನ ಹೆಸರು ಜಗನ್ ಲೋಹನ್ ರತ್ನಾಕರ (ಶ್ರೀ ಮುರಳಿ). ಆತನಿಗೆ ಹೊಡೆದು ಗಾಯ ಮಾಡುವುದು ಗೊತ್ತು, ಅದಕ್ಕೆ ಆಯುರ್ವೇದ ಚಿಕಿತ್ಸೆ ನೀಡುವುದು ಗೊತ್ತು. ಪ್ರವಾಸಿಗರಿಗೆ ರಾಜಸ್ತಾನ ಸುತ್ತಿಸುವ ಈತನಿಗೆ ಪ್ರವಾಸಕ್ಕೆ ಬಂದ ಹುಡುಗಿ ರಾಧ (ಶ್ರೀ ಲೀಲಾ) ಮೇಲೆ ಲವ್ ಆಗುತ್ತದೆ. ಇದೇ ವೇಳೆಗೆ ರಾಜಸ್ತಾನದ ಹುಡುಗ ಉತ್ತರ ಕರ್ನಾಟಕಕ್ಕೆ ಹೋಗಬೇಕಾದ ಸಂದರ್ಭ ಬರುತ್ತದೆ. ಇಲ್ಲಿಂದ ಸಿನಿಮಾದ ನಿಜವಾದ ಕಥೆ ತೆರೆದುಕೊಳ್ಳುತ್ತದೆ.
ಶ್ರೀಮುರಳಿ ಜೊತೆ ಬುಲ್ ಬುಲ್ ರಚಿತಾ 'ಭರಾಟೆ' ಡಾನ್ಸ್

ಬಲ್ಲಾಳ.. ಪಲ್ಲವ.. ನಾಯಕರ.. ಆಳ್ವಿಕೆ
ಬಲ್ಲಾಳ.. ಪಲ್ಲವ.. ನಾಯಕ.. ಈ ಮೂರು ಕುಟುಂಬಗಳ ಆಳ್ವಿಕೆ ಜೋರಾಗಿ ಇರುತ್ತದೆ. ಉತ್ತರ ಕರ್ನಾಟಕಕ್ಕೆ ಬರುವ ನಾಯಕ ಈ ಮೂರು ಮನೆತನಗಳ ವಿರುದ್ಧ 'ಯುದ್ಧ' ಮಾಡಬೇಕಾಗುತ್ತದೆ. ಅದು ಯಾಕೆ...?, ಹಾಗಾದರೆ ನಾಯಕನ ಹಿನ್ನಲೆ ಏನು..?, ಈ ಯುದ್ಧದಲ್ಲಿ ಗೆಲ್ಲುವವರು ಯಾರು..? ಎನ್ನುವುದು ಸಿನಿಮಾದ ಕುತೂಹಲಕಾರಿ ಅಂಶಗಳು.
ಅಗಸ್ತ್ಯ ಶ್ರೀಮುರಳಿ ಜೊತೆಗೆ 'ಉಗ್ರಂ' ಡೈರೆಕ್ಟರ್

ಸಮರ ಸಾರುವ ಶ್ರೀಮುರಳಿ.. ಸೌಂದರ್ಯವತಿ ಶ್ರೀಲೀಲಾ
ನಟ ಶ್ರೀಮುರಳಿ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಎರಡು ಪಾತ್ರಗಳನ್ನು ಅವರು ಚೆನ್ನಾಗಿ ನಿರ್ವಹಿಸಿದ್ದಾರೆ. ನಟನೆ, ಸಾಹಸ, ನೃತ್ಯ ಎಲ್ಲ ಕಡೆ ಶ್ರೀಮುರಳಿಯನ್ನು ತಡೆಯೊರು ಯಾರು ಇಲ್ಲ. ನಾಯಕಿ ಶ್ರೀಲೀಲಾ ತೆರೆ ಮೇಲೆ ತುಂಬ ಚೆನ್ನಾಗಿ ಕಾಣುತ್ತಾರೆ. ಅವರು ಕ್ಯೂಟ್ ನಟನೆ ಇಲ್ಲಿಯೂ ಮುಂದುವರೆದಿದೆ.

ತುಂಬ ದೊಡ್ಡ ಕಲಾವಿದ ಬಳಗ
ಸಿನಿಮಾದಲ್ಲಿ ಹಾಸ್ಯ ನಟ ಕುರಿ ಪ್ರತಾಪ್ ರಿಂದ ಹಿಡಿದು, ಹಿರಿಯ ನಟಿ ತಾರ ವರೆಗೆ ಎಷ್ಟೊಂದು ಕಲಾವಿದರು ನಟಿಸಿದ್ದಾರೆ. ಅಷ್ಟೊಂದು ಕಲಾವಿದರಿಗೆ ಅವಕಾಶ ನೀಡಿದ್ದು ಮೆಚ್ಚುವ ವಿಷಯ. ಅದರಲ್ಲಿಯೂ ಬಲ್ಲಾಳ ಸಾಯಿ ಕುಮಾರ್, ಪಲ್ಲವ ರವಿಶಂಕರ್, ತಾರ, ಸುಮನ್, ರಂಗಾಯಣ ರಘು ನಟನೆ ಸಿನಿಮಾಗೆ ಪ್ಲಾಸ್ ಆಗಿದೆ.

ಸಿನಿಮಾಗೆ 'ಜೀವ' ನೀಡಿದ ಆಯುರ್ವೇದ
ಸಾಹಸ ದೃಶ್ಯಗಳಿಂದ ಪೆಟ್ಟು ತಿನ್ನುತ್ತಿದ್ದ ಸಿನಿಮಾವನ್ನು ಕಾಪಾಡಿದ್ದು ಆಯುರ್ವೇದ. ಸಿನಿಮಾದ ಕಥೆಯಲ್ಲಿ ಆಯುರ್ವೇದ ಎಂಬ ವಿಷಯ ಇರುವ ಕಾರಣ ಅದು ನಿಜಕ್ಕೂ ಚಿತ್ರಕ್ಕೆ ಜೀವ ನೀಡಿದೆ. ಅದರಲ್ಲಿಯೂ ಕೊನೆಯಲ್ಲಿ ಇರುವ ರತ್ನಾಕರ ಪಾತ್ರ ಸಿನಿಮಾಗೆ ಘನತೆ ನೀಡಿದೆ. ಆಯುರ್ವೇದ ಹಿನ್ನಲೆ, ಆ ಪಾತ್ರ, ಪಾತ್ರದ ಹಾಡು ಇರದಿದ್ದರೆ ಸಿನಿಮಾ ನೋಡುವುದು ಬಹಳ ಕಷ್ಟವಾಗುತ್ತಿತ್ತು.

ಹಾಡು, ಉಳಿದವರ ಪಾಡು
ಸಿನಿಮಾದ ಹಾಡುಗಳು ಇಷ್ಟ ಆಗುತ್ತದೆ. ಒಂದು ಹಾಡಿನಲ್ಲಿ ರಚಿತಾ ರಾಮ್ ಬಂದು ಹೊಗುತ್ತಾರೆ. ಹಾಡು ಮತ್ತು ಹೊಡೆದಾಟದ ನಡುವೆ ಪೈಪೋಟಿ ನಡೆದಿದೆ. ಹಾಸ್ಯ ದೃಶ್ಯಗಳು ನಗಿಸುತ್ತವೆ. ಕ್ಯಾಮರಾ ವರ್ಕ್ ಇಷ್ಟ ಆಗುತ್ತದೆ. ಮೇಕಿಂಗ್ ಅದ್ದೂರಿಯಾಗಿದೆ.

ಶ್ರಮ ಕಾಣಿಸುತ್ತದೆ
'ಭರಾಟೆ' ದೊಡ್ಡ ಸಿನಿಮಾ. ಆ ಸಿನಿಮಾದಲ್ಲಿ ನಿರ್ದೇಶಕರ ಶ್ರಮ ಕಾಣಿಸುತ್ತದೆ. ಒಂದು ಒಳ್ಳೆಯ ವಿಷಯ ಹೇಳಿರುವುದು ತಿಳಿಯುತ್ತದೆ. ಲವ್, ಕಾಮಿಡಿ, ಸೆಂಟಿಮೆಂಟ್, ಅತಿ ಹೆಚ್ಚು ಆಕ್ಷನ್ ಇರುವ ಈ ಸಿನಿಮಾ ಮಾಸ್ ಅಭಿಮಾನಿಗಳಿಗೆ ರಂಜಿಸಬಹುದು.