Just In
Don't Miss!
- Sports
ಐಎಸ್ಎಲ್: ಅಂಕ ಹಂಚಿಕೊಂಡ ಹೈದರಾಬಾದ್ ಮತ್ತು ಮುಂಬೈ ಸಿಟಿ
- News
ಅಮಿತ್ ಶಾ ಆಗಮನ; ಬೆಳಗಾವಿಯಲ್ಲಿ ರೈತರ ಪ್ರತಿಭಟನೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Automobiles
2020ರ ಡಿಸೆಂಬರ್ ಅವಧಿಯಲ್ಲಿ ಕಾರು ಮಾರಾಟದಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡ ನ್ಯೂ ಜನರೇಷನ್ ಕ್ರೆಟಾ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಿಲ್ಲಿಂಗ್ ವೀರಪ್ಪನ್ Vs ಅಟ್ಟಹಾಸ: ಯಾವುದು ನಿಜವಾದ ಇತಿಹಾಸ?
ರಾಮ್ ಗೋಪಾಲ್ ವರ್ಮಾ ಚೊಚ್ಚಲ ಕನ್ನಡ ನಿರ್ದೇಶನದ 'ಕಿಲ್ಲಿಂಗ್ ವೀರಪ್ಪನ್' ಮತ್ತು ಕೋಮಲ್ ಅಭಿನಯದ 'ಪುಟ್ಟಣ್ಣ' ಚಿತ್ರ ಹೊಸವರ್ಷದ ಮೊದಲ ದಿನ ಬಿಡುಗಡೆಯಾಗಿ, ಉತ್ತಮ ಜನಮನ್ನಣೆಗಳಿಸುವ ಮೂಲಕ ಸ್ಯಾಂಡಲ್ ವುಡ್ 2016ರಲ್ಲಿ ಶುಭಾರಂಭ ಮಾಡಿದೆ.
ವೀರಪ್ಪನ್ ರಕ್ತಸಿಕ್ತ ಚರಿತ್ರೆಯ ಕುರಿತು ಚಿತ್ರ ನಿರ್ಮಾಣವಾಗಿರುವುದು ಇದು ಮೊದಲೇನಲ್ಲ. 1991ರಲ್ಲಿ ದೇವರಾಜ್ ಅಭಿನಯದ 'ವೀರಪ್ಪನ್' ಅದಾದ ನಂತರ ಎಎಂಆರ್ ರಮೇಶ್ ನಿರ್ದೇಶನದ 'ಅಟ್ಟಹಾಸ' ಮತ್ತು ಈಗ ವರ್ಮಾ ನಿರ್ದೇಶನದ 'ಕಿಲ್ಲಿಂಗ್ ವೀರಪ್ಪನ್'. (ಕಿಲ್ಲಿಂಗ್ ವೀರಪ್ಪನ್: ವಿಮರ್ಶೆ)
ದೇವರಾಜ್ ಅಭಿನಯದ ಚಿತ್ರದಲ್ಲಿ ವೀರಪ್ಪನ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದರೆ (ಆಗ ವೀರಪ್ಪನ್ ಹತ್ಯೆ ಇನ್ನೂ ಆಗಿರಲಿಲ್ಲ), ಇನ್ನೆರಡು ಚಿತ್ರಗಳಲ್ಲಿ ನರಹಂತಕ ಪೊಲೀಸ್ ಎನ್ಕೌಂಟರಿಗೆ ಬಲಿಯಾಗುತ್ತಾನೆ.
ಎಎಂಆರ್ ರಮೇಶ್ ಮತ್ತು ವರ್ಮಾ ಹೇಳಿರುವ ಕಥೆ ಮತ್ತು ನಿರೂಪಣೆಗೆ ವ್ಯತ್ಯಾಸವಿರುವುದರಿಂದ ವೀರಪ್ಪನ್ ಕುರಿತು ನಿಜವಾದ ಕಥೆಯೇನು ಎಂದು ಪ್ರೇಕ್ಷಕ ಒಂದಿಷ್ಟು ಗೊಂದಲಕ್ಕೀಡಾಗುವುದಂತೂ ನಿಜ. (ವರ್ಮಾ ಹೇಳಿದ ವೀರಪ್ಪನ್ ಸಾವಿನ ಕತೆ)
ರಮೇಶ್ ತನ್ನ ಚಿತ್ರದಲ್ಲಿ ವೀರಪ್ಪನ್ ಪಾತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದರೆ, ವರ್ಮಾ ತನ್ನ ಚಿತ್ರದಲ್ಲಿ ವೀರಪ್ಪನ್ ಕಾರ್ಯಾಚರಣೆಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಜೊತೆಗೆ, ವೀರಪ್ಪನ್ ಎನ್ಕೌಂಟರ್ ನಲ್ಲಿ ಎರಡು ರಾಜ್ಯಗಳ (ತಮಿಳುನಾಡು, ಕರ್ನಾಟಕ) ಎಸ್ಟಿಎಫ್ ಪಡೆಗಳ ಪಾತ್ರವನ್ನು ಇಬ್ಬರು ನಿರ್ದೇಶಕರು ತಮ್ಮ ಚಿತ್ರದಲ್ಲಿ ಬೇರೆಬೇರೆಯಾಗಿ ತೋರಿಸಿದ್ದಾರೆ. ಮುಂದೆ ಓದಿ..

ವೀರಪ್ಪನ್ ಕ್ರೂರತೆ
ವೀರಪ್ಪನ್ ಕ್ರೂರತೆ ಮತ್ತು ಆತನ ಕಾಲಘಟ್ಟದ ಪ್ರಮುಖ ವಿದ್ಯಮಾನವಾದ ರಾಜ್ ಬಿಡುಗಡೆಯ ವಿಚಾರದಲ್ಲಿ ಹಸ್ತಾಂತರವಾದ ಹಣಕಾಸು ವಹಿವಾಟಿನಲ್ಲಿ ಕರಾರುವಕ್ಕಾದ ಮಾಹಿತಿ ಎರಡು ರಾಜ್ಯಗಳ ಪೊಲೀಸರು, ಸರಕಾರೀ ಅಧಿಕಾರಿಗಳು, ಕೆಲ ರಾಜಕಾರಣಿಗಳು, ಇತರ ಪ್ರಮುಖರು ಮತ್ತು ರಾಜ್ ಕುಟುಂಬಕ್ಕೆ ಹೊರತಾಗಿ ಇನ್ಯಾರಿಗೂ ತಿಳಿದಿಲ್ಲ. ಹಾಗಾಗಿ, ಎರಡೂ ಚಿತ್ರದ ನಿರ್ದೇಶಕರು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.

ರಾಜ್ ಅಪಹರಣದ ಬಗ್ಗೆ
ಅಟ್ಟಹಾಸ ಚಿತ್ರದಲ್ಲಿ ರಾಜ್ ಅಪಹರಣದ (ಸುರೇಶ್ ಒಬೆರಾಯ್ ರಾಜ್ ಪಾತ್ರದಲ್ಲಿ ನಟಿಸಿದ್ದರು) ಮತ್ತು ಬಿಡುಗಡೆಯ ದೃಶ್ಯಗಳಿದ್ದರೆ, ಕಿಲ್ಲಿಂಗ್ ವೀರಪ್ಪನ್ ಚಿತ್ರದಲ್ಲಿ ರಾಜ್ ಅಪಹರಣದ ಬಗ್ಗೆ ಎರಡೋ ಮೂರೋ ಡೈಲಾಗುಗಳು ಮಾತ್ರ ಇವೆ. ಅದರಲ್ಲಿ ರಾಜ್ ಬಿಡುಗಡೆಗೆ ಬಂದ ದುಡ್ಡಿನಲ್ಲಿ ತಮಿಳು ಟೆರರಿಸ್ಟ್ ಗ್ರೂಪ್ ನವರು ಹೆಚ್ಚು ದುಡ್ಡು ತೆಗೆದುಕೊಂಡು ನನಗೆ ಮೋಸ ಮಾಡಿದರು ಎಂದು ವೀರಪ್ಪನ್ ಹೇಳುವ ಡೈಲಾಗ್ ಇದೆ.

ಎಸ್ಟಿಎಫ್ ಅಧಿಕಾರಿ
ಇನ್ನು ಅಟ್ಟಹಾಸ ಚಿತ್ರದಲ್ಲಿ ತಮಿಳುನಾಡಿನ ಎಸ್ಟಿಎಫ್ ಅಧಿಕಾರಿ ( ಅರ್ಜುನ್ ಸರ್ಜಾ) ನೇತೃತ್ವದ ಪಡೆಗಳು ವೀರಪ್ಪನ್ ನನ್ನು ಸದೆಬಡೆದಿದ್ದು ಎಂದು ತೋರಿಸಲಾಗಿತ್ತು. ಮತ್ತು ಈ ಬಗ್ಗೆ ತಮಿಳುನಾಡಿನ ಮುಖ್ಯಮಂತ್ರಿ ಕಚೇರಿಯ ಆದೇಶದ ಬಗ್ಗೆಯೂ ತೋರಿಸಲಾಗಿತ್ತು.

ಆಪರೇಷನ್ ಕುಕೂನ್
ಆದರೆ ಕಿಲ್ಲಿಂಗ್ ವೀರಪ್ಪನ್ ಚಿತ್ರದಲ್ಲಿ ಕಾರ್ಯಾಚರಣೆಯ ಎಸ್ಟಿಎಫ್ ಅಧಿಕಾರಿ ಎರಡು ರಾಜ್ಯಗಳ ಜಂಟಿ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರೋ ಅಥವಾ ಒಂದು ರಾಜ್ಯವನ್ನು ಪ್ರತಿನಿಧಿಸಿ ಕಾರ್ಯಾಚರಣೆಗೆ ಇಳಿದಿದ್ದರೋ ಎನ್ನುವ ಬಗ್ಗೆ ಪ್ರೇಕ್ಷಕರಿಗೆ ಕೊಂಚ ಗೊಂದಲ ಉಂಟಾಗುತ್ತದೆ. ಆದರೆ, ವೀರಪ್ಪನ್ ವಿರುದ್ದ ಕಾರ್ಯಾಚರಣೆಯ 'ಆಪರೇಷನ್ ಕುಕೂನ್' ಮಾಸ್ಟರ್ ಮೈಂಡ್ ಪಾತ್ರ ನಿರ್ವಹಿಸಿರುವುದು ಶಿವಣ್ಣ. ತಮಿಳುನಾಡು ಅಧಿಕಾರಿಗಳ ಸಾಧನೆ ಕರ್ನಾಟಕದಲ್ಲಿ ವಿಜೃಂಭಿಸಿ ವಿವಾದಕ್ಕೆ ಕಾರಣವಾಗಬಾರದು ಎನ್ನುವ ಕಾರಣಕ್ಕೆ ನಿರ್ದೇಶಕರು ಹಿರಿಯ ಇಬ್ಬರೂ ಅಧಿಕಾರಿಗಳ ಹೆಸರನ್ನೂ ಚಿತ್ರದಲ್ಲಿ ಉಲ್ಲೇಖಿಸದೇ ಇದ್ದಿರಬಹುದು. ಸೋ, ಶಿವಣ್ಣನ ಪಾತ್ರದ ಹೆಸರಾಗಲಿ, ಮತ್ತು ಆಪರೇಷನ್ ಕುಕೂನ್ ಕಾರ್ಯಾಚರಣೆಯಲ್ಲಿದ್ದ ಹಿರಿಯ ಅಧಿಕಾರಿಗಳ ಹೆಸರನ್ನ ಚಿತ್ರದಲ್ಲಿ ಎಲ್ಲೂ ಉಲ್ಲೇಖಿಸಿಲ್ಲ.

ಎಸ್ಟಿಎಫ್ ಅಧಿಕಾರಿ ಶಿವಣ್ಣ
ಕಿಲ್ಲಿಂಗ್ ವೀರಪ್ಪನ್ ಚಿತ್ರದಲ್ಲಿ ಸೂಪರ್ ಸ್ಟಾರ್ ರಾಜ್ ಕುಮಾರ್ ಕಿಡ್ನ್ಯಾಪ್ ಆದ ನಂತರ ಬೇಸತ್ತ ಎಸ್.ಟಿ.ಎಫ್ ಅಧಿಕಾರಿ ಶಿವರಾಜ್ ಕುಮಾರ್, ವೀರಪ್ಪನ್ ನನ್ನು ಕೊಲ್ಲಲು ನಿರ್ಧರಿಸುತ್ತಾರೆ. ಅಟ್ಟಹಾಸ ಚಿತ್ರದಲ್ಲಿ ವೀರಪ್ಪನ್ ಕ್ರೌರ್ಯತೆ ಬಗ್ಗೆ ಹೆಚ್ಚಿನ ದೃಶ್ಯಗಳಿವೆ. ಹಾಗಂತ ಕಿಲ್ಲಿಂಗ್ ವೀರಪ್ಪನ್ ಚಿತ್ರದಲ್ಲಿ ಆತನ ಕ್ರೌರ್ಯತೆ ಇಲ್ಲಾಂತ ಅಲ್ಲ, ಸಿನಿಮಾ ಶುರುವಾಗುವುದೇ ಪೊಲೀಸ್ ಅಧಿಕಾರಿಗಳನ್ನ ವೀರಪ್ಪನ್ ಸಾಯಿಸುವ ಮೂಲಕ. ಎರಡೂ ಚಿತ್ರಗಳಲ್ಲಿ ನೈಜಘಟನೆಯನ್ನಾಧಾರಿಸಿ, ಸ್ಟಡಿ ಮಾಡಿ, ಗೊತ್ತಿಲ್ಲದ ಹಲವು ವಿಚಾರಗಳನ್ನು ತೆರೆಮೇಲೆ ತರಲಾಗಿದೆ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ.

ವೀರಪ್ಪನ್ ಎನ್ಕೌಂಟರ್
ವೀರಪ್ಪನನ್ನು ಎನ್ಕೌಂಟರ್ ಮಾಡುವ ದೃಶ್ಯವೂ ಎರಡೂ ಚಿತ್ರದಲ್ಲಿ ವಿಭಿನ್ನವಾಗಿದೆ. ಕಿಲ್ಲಿಂಗ್ ವೀರಪ್ಪನ್ ಚಿತ್ರದಲ್ಲಿ ನರಹಂತಕ ಎಲ್ಟಿಟಿಇ ಪ್ರಮುಖ ವಿ ಪ್ರಭಾಕರನ್ ನನ್ನು ಭೇಟಿಯಾಗಲು ಅಂಬುಲೆನ್ಸ್ ಮೂಲಕ ಸಾಗುವಾಗ ಅಧಿಕಾರಿಗಳು ಹೊಡೆದುರುಳಿಸಿದರೆ, ಅಟ್ಟಹಾಸ ಚಿತ್ರದಲ್ಲಿ ವೀರಪ್ಪನ್ ತನ್ನ ಕಣ್ಣಿನ ಶಸ್ತ್ರಚಿಕಿತ್ಸೆಗೆ ಅಂಬುಲೆನ್ಸ್ ಮೂಲಕ ಬರುತ್ತಿರುವಾಗ ಎನ್ಕೌಂಟರ್ ಅಗಿದ್ದು ಎಂದು ತೋರಿಸಲಾಗಿದೆ. ಅಟ್ಟಹಾಸ ಚಿತ್ರದಲ್ಲೂ ಶಸ್ತ್ರಚಿಕಿತ್ಸೆಯ ನಂತರ ಶ್ರೀಲಂಕಾಕ್ಕೆ ಹೋಗುವ ಪ್ಲಾನ್ ವೀರಪ್ಪನ್ ಹಾಕಿಕೊಂಡಿರುತ್ತಾನೆ.