For Quick Alerts
  ALLOW NOTIFICATIONS  
  For Daily Alerts

  ದರ್ಶನ್ 'ಬೃಂದಾವನ' ಮೊದಲ ದಿನವೇ ಹಬ್ಬ

  By Mahesh
  |

  ತೆಲುಗಿನ ಯಶಸ್ವಿ ಬೃಂದಾವನಂ ಚಿತ್ರದ ರಿಮೇಕಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬೃಂದಾವನ ಚಿತ್ರ ಗುರುವಾರ (ಸೆ.26) ತೆರೆಕಂಡಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ.

  ಶ್ರೀ ಸೀತಾಭೈರವೇಶ್ವರ ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ ಡಿ.ಸುರೇಶಗೌಡ, ಪಿ.ಎಸ್. ಶ್ರೀನಿವಾಸಮೂರ್ತಿ ನಿರ್ಮಿಸುತ್ತಿರುವ ಅದ್ದೂರಿ ವೆಚ್ಚದ ದೊಡ್ಡ ತಾರಾಗಣವಿರುವ 'ಬೃಂದಾವನ' ಚಿತ್ರವನ್ನು ರಾಜ್ಯಾದ್ಯಂತ ಸುಮಾರು 200 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿದೆ.

  ತೆಲುಗು ಚಿತ್ರದ ರಿಮೇಕಾದರೂ ಕನ್ನಡ ನೆಟಿವಿಟಿಗೆ ತಕ್ಕಂತೆ ಚಿತ್ರ ನಿರ್ಮಿಸಲಾಗಿದೆ ಎಂದು ನಿರ್ದೇಶಕರು ಕೆ ಮಾದೇಶ್ ಹೇಳಿದ್ದಾರೆ.

  ಚಿತ್ರದಲ್ಲಿನ ಭರ್ಜರಿ ಸಾಹಸ ಸನ್ನಿವೇಶಗಳು, ಕೌಟುಂಬಿಕ ಚೌಕಟ್ಟಿನಲ್ಲಿ ಸಾಗುವ ಕಥೆ, ರಮಣೀಯ ಪ್ರದೇಶಗಳಲ್ಲಿ ಚಿತ್ರೀಕರಿಸಿರುವ ಹಾಡುಗಳು. ಹೀಗೆ ಚಿತ್ರವು ಎಲ್ಲಾ ವರ್ಗದ ಜನರನ್ನು ರಂಜಿಸಲಿದೆ ಎಂದು ಚಿತ್ರದ ನಿರ್ಮಾಪಕ ಪಿ.ಎಸ್. ಶ್ರೀನಿವಾಸಮೂರ್ತಿ ಹೇಳಿದ್ದು ಸುಳ್ಳಾಗಿಲ್ಲ.

  ಬೃಂದಾವನ ಚಿತ್ರದ ಮೊದಲ ದಿನದ ಮೊದಲ ಪ್ರದರ್ಶನದ ವರದಿಯನ್ನು ಕನ್ನಡ ಸಿನಿ ರಸಿಕರು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಹರಿದಾಡುವಂತೆ ಮಾಡಿದ್ದಾರೆ. ದರ್ಶನ್ ಅಭಿಮಾನಿಗಳು ಎಲ್ಲೆಡೆ ಟಿಕೆಟ್ ಸೋಲ್ಡ್ ಔಟ್ ಬೋರ್ಡ್ ನೋಡಿ ಸಂತಸದಿಂದ ಹಿಗ್ಗಿದ್ದಾರೆ.. ಚಿತ್ರದ ದೃಶ್ಯಗಳು, ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿದೆ ಮುಂದೆ ಓದಿ....

  ಟಿಕೆಟ್ ಸೋಲ್ಡ್ ಔಟ್

  ನರ್ತಕಿ, ಪ್ರಸನ್ನ ಹಾಗೂ ಸಿದ್ದೇಶ್ವರ ಚಿತ್ರಮಂದಿರಗಳಲ್ಲಿ ನಾಲ್ಕು ಆಟಗಳ ಟಿಕೆಟ್ ಮಾರಾಟವಾಗಿದೆ.

  ಪ್ರಸನ್ನ ಬಳಿ ಜನ

  ಬೆಂಗಳೂರಿನ ಪ್ರಸನ್ನ ಚಿತ್ರಮಂದಿರ ಬಳಿ ಅಭಿಮಾನಿಗಳ ಸಮೂಹ

  ದರ್ಶನ್ ಇಸ್ ಕಿಂಗ್

  ದರ್ಶನ್ ಇಸ್ ಕಿಂಗ್

  ದರ್ಶನ್ ತೂಗುದೀಪ ಅವರು ಮತ್ತೊಮ್ಮೆ ಬಾಕ್ಸಾಫೀಸ್ ಕಿಂಗ್ ಆಗಿ ಮೆರೆಯುವ ಲಕ್ಷಣಗಳು ಮೊದಲ ದಿನವೇ ಗೋಚರಿಸುತ್ತಿದೆ. ಸಾರಥಿ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಹಾಗೂ ಬುಲ್ ಬುಲ್ ಯಶಸ್ಸಿನ ನಂತರ ಬೃಂದಾವನ ಭಾರಿ ನಿರೀಕ್ಷೆ ಹುಟ್ಟಿಸಿದೆ.

  ಲಾಠಿಚಾರ್ಚ್

  ನರ್ತಕಿ ಚಿತ್ರಮಂದಿರ ಬಳಿ ಟಿಕೆಟ್ ಸಿಗದೆ ಪರದಾಡುತ್ತಿರುವ ಅಭಿಮಾನಿಗಳಿಗೆ ಲಾಠಿ ರುಚಿ

  ಚಿತ್ರದ ನಾಯಕಿ ಟ್ವೀಟ್

  ಆ ಕಾಲದಲ್ಲಿ ಕನ್ನಡದಲ್ಲಿ ನಟಿಸಿದ್ದ ರಾಧಾ ಅವರ ಮಗಳು ಕಾರ್ತಿಕಾ ನಾಯರ್ ಈ ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿದ್ದಾರೆ. ತಮ್ಮ ಮೊದಲ ಕನ್ನಡ ಚಿತ್ರದ ಬಗ್ಗೆ ಕಾತುರರಾಗಿದ್ದಾರೆ

  ದಾವಣಗೆರೆಯಲ್ಲಿ ಕ್ರೇಜ್

  ದಾವಣಗೆರೆಯಲ್ಲಿ ಗೀತಾಂಜಲಿ ಚಿತ್ರಮಂದಿರದ ಚಿತ್ರ

  ಆರಂಭ ಹೇಗಿದೆ

  ಆರಂಭ ಹೇಗಿದೆ

  ಹಾರ್ಟ್ ಅಲ್ಲಿರೋ ಹಾಡು, ಐಸ್ ಲ್ಯಾಂಡ್ ನಲ್ಲಿ ದರ್ಶನ್ ಗೆಟ್ ಅಪ್ ನೋಡಿ ಪ್ರೇಕ್ಷಕರು ಫುಲ್ ಫಿದಾ.

  ಬಸ್ ನಲ್ಲಿ ಫೈಟಿಂಗ್ ಗೆ ಫುಲ್ ವಿಶಲ್, ತೆಲುಗಿನ ರಿಚ್ ನೆಸ್ ಕನ್ನಡದಲ್ಲೂ ತರಲು ಸಾಧ್ಯ ಎಂಬುದನ್ನು ದರ್ಶನ್ ಚಿತ್ರ ಮತ್ತೆ ನಿರೂಪಿಸಿದೆ. ಅಫ್ ಕೋರ್ಸ್ ಫೈಟ್ ಸಮಯದಲ್ಲಿ ಟಾಟಾ ಸುಮೋ ಗಗನಕ್ಕೆ ಹಾರುತ್ತದೆ.

  ತುಮಕೂರಿನಿಂದ

  ತುಮಕೂರಿನ ಮಾರುತಿ ಚಿತ್ರಮಂದಿರದಿಂದ ಬಂದ ದೃಶ್ತ್ಯ

  ಮಲ್ಟಿಪ್ಲೆಕ್ಸ್ ನಲ್ಲೂ ಕ್ರೇಜ್

  ಬೆಂಗಳೂರಿನ ಐನೋಕ್ಸ್ ನಲ್ಲಿ 6 ಪರದೆಗಳಿಗೂ ಬೃಂದಾವನವೇ ಬೇಕಂತೆ

  ಮೈಸೂರಿನಲ್ಲಿ

  ಮೈಸೂರಿನ ಸಂಗಮ್ ಚಿತ್ರಮಂದಿರದ ಬಳಿ

  ಅಭಿಮಾನಿಗಳಿಗೆ ದರ್ಶನ್ ಹೇಳಿದ್ದು

  ಚಿತ್ರ ಬಿಡುಗಡೆಗೂ ಮುನ್ನ ಕಳೆದ ರಾತ್ರಿ ಅಭಿಮಾನಿಗಳಿಗೆ ಚಿತ್ರ ನೋಡಿ ಎಂದ ದರ್ಶನ್

  ಚಿರಂಜೀವಿ ಸರ್ಜಾ ಟ್ವೀಟ್

  ದರ್ಶನ್ ಅಣ್ಣ ನಿಮ್ಮ ಚಿತ್ರ ಯಶಸ್ವಿಯಾಗಲಿ ಎಂದು ನಟ ಚಿರಂಜೀವಿ ಸರ್ಜಾ ಶುಭ ಹಾರೈಕೆ

  ದಾವಣಗೆರೆಯಲ್ಲಿ ಕ್ರೇಜ್

  ದಾವಣಗೆರೆಯಲ್ಲಿ ಗೀತಾಂಜಲಿ ಚಿತ್ರಮಂದಿರದ ಚಿತ್ರ

  ಮಧ್ಯಂತರದ ತನಕ

  ಹಾಡು ನೃತ್ಯ ಹಾಸ್ಯ, ಒಟ್ಟಾರೆ ಕುಟುಂಬಕ್ಕೆ ಭರಪೂರ ಮನರಂಜನೆ ನೀಡುವಲ್ಲಿ ಮೊದಲ ಭಾಗ ಯಶಸ್ವಿಯಾಗಿದೆ. ಕುರಿ ಪ್ರತಾಪ್, ದರ್ಶನ್- ಸಾಧ್ ಕೋಕಿಲ ಕಾಂಬಿನೇಷನ್ ಗೆ ಪ್ರೇಕ್ಷಕರು ಬಹುಪರಾಕ್ ಹೇಳಿದ್ದಾರೆ.

  ಉಪ್ಪಿ ಅವರ ಹೊಯ್ ಕಳ್ಳ ಸಾಂಗ್ ಗೆ ಭರ್ಜರಿ ವಿಶಲ್ ಗಳು ಬಿದ್ದಿದೆ. ಸಾಹಸ ದೃಶ್ಯಗಳಲ್ಲಿ ದರ್ಶನ್ ಮತ್ತೊಮ್ಮೆ ಮಿಂಚಿದ್ದಾರೆ. ನಾಯಕಿಯರು ಹಾಗೂ ಹೀಗೂ ಕಣ್ಮನ ಸೆಳೆಯುತ್ತಾರೆ.

  ಓದುಗರ ಪ್ರತಿಕ್ರಿಯೆ

  ಬೃಂದಾವನ ಚಿತ್ರ ಹಾಗೂ ದರ್ಶನ್ ಬಗ್ಗೆ ಅಭಿಮಾನಿಗಳು ಹೇಳಿದ್ದೇನು

  ಓದುಗರ ವಿಮರ್ಶೆ

  ಬೃಂದಾವನದಲ್ಲಿ ಮೊದಲ ದಿನ ಮೊದಲ ಪ್ರದರ್ಶನ ಕಂಡು ಪುಳಕಿತರಾದ ವೀಕ್ಷಕ ಪ್ರಕಾಶ್ ಕೊಟ್ಟ ರೇಟಿಂಗ್

  ಶ್ಯಾಮ್ ಪ್ರಸಾದ್ ವಿಮರ್ಶೆ

  ಬೆಂಗಳೂರು ಮಿರರ್ ಸಂಸ್ಥೆಯ ಶ್ಯಾಮ್ ಪ್ರಸಾದ್ ಅವರು ಕೊಟ್ಟ ತೀರ್ಪು

  English summary
  Kannada movie Brindavana is a family and action entertainer. The movie has Darshan, Karthika Nair and Milana Nagraj in the lead roles. Here is first day first show report and twitter review by Gandhadagudi and other forums

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X