twitter
    For Quick Alerts
    ALLOW NOTIFICATIONS  
    For Daily Alerts

    C U Soon Movie Review: ಮಿತಿಯನ್ನೇ ಶಕ್ತಿಯನ್ನಾಗಿಸಿಕೊಂಡ ಸುಂದರ ಸಿನಿಮಾ

    |

    ಕೆಲವು ದಿನಗಳ ಹಿಂದಷ್ಟೆ ಅಮೆಜಾನ್ ಪ್ರೈಂ ನಲ್ಲಿ 'ಸಿ ಯು ಸೂನ್' ಮಲಯಾಳಂ ಸಿನಿಮಾ, ಲಾಕ್‌ಡೌನ್‌ನ ಮಿತಿಯನ್ನೇ ಶಕ್ತಿಯನ್ನಾಗಿಸಿಕೊಂಡು ಕಟ್ಟಿರುವ ಸುಂದರ, ಶಕ್ತ ಸಿನಿಮಾ.

    Rating:
    4.0/5

    ಸಿನಿಮಾದ 'ಪ್ರೆಸೆಂಟೇಶನ್‌'ನಲ್ಲಿಯೇ ಪೂರ್ಣ ಹೊಸತನವಿದೆ. ಇಡೀಯ ಸಿನಿಮಾ, ಮೊಬೈಲ್, ಕಂಪ್ಯೂಟರ್‌ನ ಸ್ಕ್ರೀನ್‌ನಲ್ಲಿಯೇ ನಡೆಯುತ್ತದೆ. ಸಿನಿಮಾದ ಕತೆ ಹೇಳುವ ಜೊತೆ-ಜೊತೆಗೆ, ಜಗತ್ತು ಮೊಬೈಲ್‌, ಕಂಪ್ಯೂಟರ್‌ ಸ್ಕ್ರೀನ್‌ನಲ್ಲಿ ಬಂದಿಯಾಗಿರುವುದನ್ನೂ ದಾಟಿಸುತ್ತಾರೆ ನಿರ್ದೇಶಕ ಮಹೇಶ್ ನಾರಾಯಣ್.

    ಬಿಡುಗಡೆ ಆಗದಿದ್ದರೂ ಕೋಟಿಗಟ್ಟಲೆ ಬಾಚಿದ ಸೂರ್ಯಾ ಸಿನಿಮಾಬಿಡುಗಡೆ ಆಗದಿದ್ದರೂ ಕೋಟಿಗಟ್ಟಲೆ ಬಾಚಿದ ಸೂರ್ಯಾ ಸಿನಿಮಾ

    ಸಿನಿಮಾ ಪ್ರಾರಂಭವಾಗುವುದು ಡೇಟಿಂಗ್ ಸೈಟ್‌ ಒಂದರ ಮೂಲಕ ಜಿಮ್ಮಿ (ಮ್ಯಾಥಿವ್) ಮತ್ತು ಅನು ಮೋಲ್ (ದರ್ಶನ್ ರಾಜೇಂದ್ರನ್) ಜೊತೆ ಪ್ರೇಮದಲ್ಲಿ ಬೀಳುವ ಮೂಲಕ. ಪ್ರೀತಿ-ಪ್ರೇಮದ ಮಾತು ಹಠಾತ್ತನೆ ಮದುವೆಗೆ ಹೊರಳುತ್ತದೆ. 1:38 ನಿಮಿಷದ ಸಿನಿಮಾದಲ್ಲಿ ಕತೆ ವೇಗವಾಗಿ ಓಡುತ್ತದೆ. ಆದರೆ ಎಲ್ಲೂ ಹಳಿ ತಪ್ಪದೆ, ಉದ್ದೇಶಿತ ಸಂದೇಶವನ್ನು, ಪ್ರಭಾವವನ್ನು ನೋಡುಗನಿಗೆ ದಾಟಿಸುತ್ತದೆ.

    ಡಿಜಿಟಲ್ ಹೆಜ್ಜೆಗುರುತು ಹುಡುಕುವ ಜಿಮ್ಮಿ

    ಡಿಜಿಟಲ್ ಹೆಜ್ಜೆಗುರುತು ಹುಡುಕುವ ಜಿಮ್ಮಿ

    ಗಾಯಗೊಂಡ ಮುಖದೊಂದಿಗೆ ಅಳುತ್ತಾ ಜಿಮ್ಮಿ ಗೆ ವಿಡಿಯೋ ಕರೆ ಮಾಡುವ ಅನುವನ್ನು ಜಿಮ್ಮಿ ತನ್ನ ಮನೆಗೆ ಕರೆತರುತ್ತಾನೆ. ಮದುವೆ ಮಾತುಕತೆ ಸರಾಗವಾಗಿ ಆಗುತ್ತಿರುತ್ತದೆ. ಆದರೆ ಹಠಾತ್ತನೆ ಅನು ಜಿಮ್ಮಿ ಮನೆಯಿಂದ ಕಾಣೆಯಾಗುತ್ತಾಳೆ. ಆಕೆಯನ್ನು ಹುಡುಕುವ ಜವಾಬ್ದಾರಿ ಜಿಮ್ಮಿಯ ಸಂಬಂಧಿ, ಹ್ಯಾಕರ್ ಕೆವಿನ್ (ಫಹಾದ್ ಫಾಸಿಲ್) ಹೆಗಲಿಗೆ ಬೀಳುತ್ತದೆ. ಅನುಳ ಡಿಜಿಟಲ್ ಹೆಜ್ಜೆ ಗುರುತು ಮೂಲಕ ಹುಡುಕಾಟ ನಡೆಸುವ ಕೆವಿನ್, ಅನುಳ ಜೀವನ ಕರಾಳ ಅಧ್ಯಾಯದೊಂದಿಗೆ ಮುಖಾ-ಮುಖಿ ಆಗುತ್ತಾನೆ.

    ಅನು ಯಾರು? ಆಕೆ ಹೋಗಿದ್ದು ಎಲ್ಲಿಗೆ?

    ಅನು ಯಾರು? ಆಕೆ ಹೋಗಿದ್ದು ಎಲ್ಲಿಗೆ?

    ಅನು ಯಾರು, ಆಕೆಯ ಮೇಲೆ ಹಲ್ಲೆ ಮಾಡಿದ್ದು ಯಾರು? ಆಕೆ ಜಿಮ್ಮಿ ಯನ್ನು ಬಿಟ್ಟು ಹೋಗಿದ್ದು ಏಕೆ? ಜಿಮ್ಮಿ, ಅನು ಮತ್ತೆ ಒಂದಾಗುತ್ತಾರಾ? ದುಬೈನಲ್ಲಿ ಕಾಣೆಯಾಗುವ ಅನುಳನ್ನು ಅಮೆರಿಕದಲ್ಲಿ ಕೂತುಕೊಂಡು ಕೆವಿನ್ ಹೇಗೆ ಹುಡುಕಾಡುತ್ತಾನೆ ಈ ಎಲ್ಲಾ ಪ್ರಶ್ನೆಗಳಿಗೆ ಸಿನಿಮಾವನ್ನೇ ನೋಡಬೇಕು.

    ಕ್ಷಮೆ ಕೇಳಿ ಸಿನಿಮಾ ಪೋಸ್ಟರ್‌ ಹಿಂಪಡೆದ ನೆಟ್‌ಫ್ಲಿಕ್ಸ್: ಅಂಥಹದ್ದೇನಿತ್ತು ಅದರಲ್ಲಿ?ಕ್ಷಮೆ ಕೇಳಿ ಸಿನಿಮಾ ಪೋಸ್ಟರ್‌ ಹಿಂಪಡೆದ ನೆಟ್‌ಫ್ಲಿಕ್ಸ್: ಅಂಥಹದ್ದೇನಿತ್ತು ಅದರಲ್ಲಿ?

    ಕಾಡುವ ಅನು ಕಣ್ಣು

    ಕಾಡುವ ಅನು ಕಣ್ಣು

    ಡೆಸ್ಕ್‌ಟಾಪ್ ಮೇಲಿನ ಅನುಳ ಕಣ್ಣಿನ ಚಿತ್ರ, ಜಿಮ್ಮಿಯನ್ನು ಕಾಡುವಂತೆ, ನೋಡುಗರನ್ನೂ ಕಾಡುತ್ತದೆ. ಅನುಳ ಬಗ್ಗೆ ಜಿಮ್ಮಿಯ ಅಭಿಪ್ರಾಯಗಳು ಬದಲಾದಂತೆ, ಡೆಸ್ಕ್‌ಟಾಪ್ ಮೇಲಿನ ಕಣ್ಣು ಸೂಸುವ ಅಭಿವ್ಯಕ್ತಿಯೂ ಬದಲಾದಂತೆ ಭಾಸವಾಗುತ್ತದೆ. ಇಂಥಹಾ ಕೆಲವು ರೂಪಕಗಳೂ ಸಹ ಸಿನಿಮಾದಲ್ಲಿವೆ. ಇವು ಸಿನಿಮಾವನ್ನು ಇನ್ನಷ್ಟು ಆಪ್ತವನ್ನಾಗಿಸುತ್ತದೆ.

    ಕೆಲವೇ ಪಾತ್ರಗಳ ಮೂಲಕ ಕಟ್ಟಿರುವ ಕತೆ

    ಕೆಲವೇ ಪಾತ್ರಗಳ ಮೂಲಕ ಕಟ್ಟಿರುವ ಕತೆ

    ಸಿನಿಮಾದಲ್ಲಿರುವುದು ಮೂರು ಮುಖ್ಯ ಪಾತ್ರವಷ್ಟೆ, ಅದನ್ನು ಹೊರತಾಗಿ ಇನ್ನು ನಾಲ್ಕು ಪಾತ್ರಗಳು ಕಾಣಿಸಿಕೊಳ್ಳುತ್ತವೆ. ಕೆಲವೇ ಪಾತ್ರಗಳ ಮೂಲಕ, ವಾಟ್ಸ್‌ಆಪ್, ವೀಚಾಟ್, ಫೇಸ್‌ಬುಕ್ ಚಾಟ್, ವಿಡಿಯೋ ಕಾಲ್ ಗಳಲ್ಲಿಯೇ ಸುಂದರವಾಗಿ ಕತೆ ಹೇಳಿದ್ದಾರೆ ನಿರ್ದೇಶಕ. ಫಹಾದ್‌ ಗೆ ನಟನೆ ನೀರು ಕುಡಿದಷ್ಟು ಸಲೀಸು. ದರ್ಶನಾ ರಾಜೇಂದ್ರನ್ ಹಾಗೂ ರೋಶನ್ ಮ್ಯಾಥೀವ್ ನಟನೆ ಸಹ ಅದ್ಭುತವಾಗಿದೆ.

    ನಮ್ಮ ಚಲನಚಿತ್ರಗಳು ರೂಢಿಗತ ವರ್ತನೆಗಳನ್ನು ಪ್ರಚೋದಿಸುತ್ತವೆಯೆ?ನಮ್ಮ ಚಲನಚಿತ್ರಗಳು ರೂಢಿಗತ ವರ್ತನೆಗಳನ್ನು ಪ್ರಚೋದಿಸುತ್ತವೆಯೆ?

    ಐಫೋನ್‌ನಲ್ಲಿ ಚಿತ್ರೀಕರಿಸಿರುವ ಸಿನಿಮಾ ಇದು

    ಐಫೋನ್‌ನಲ್ಲಿ ಚಿತ್ರೀಕರಿಸಿರುವ ಸಿನಿಮಾ ಇದು

    ಲಾಕ್‌ಡೌನ್ ಸಮಯದ ಸಾಮಾಜಿಕ ಮಿತಿ ಹೇರಿಕೆಯಾಗಿದ್ದ ಸಮಯದಲ್ಲಿ ನಿರ್ಮಿಸಿರುವ ಸಿನಿಮಾ ಇದು. ಯಾವುದೇ ದೊಡ್ಡ ಕ್ಯಾಮೆರಾ, ದೊಡ್ಡ ಚಿತ್ರತಂಡ ಇಲ್ಲದೆ, ಕೇವಲ ಐಫೋನ್‌ನಲ್ಲಿ, ನಾಯಕ, ನಿರ್ಮಾಪಕ ಫಹಾದ್ ಮನೆ ಹಾಗೂ ಇನ್ನು ಕೆಲವು ಕಡೆಗಳಲ್ಲಿ ಇಡೀಯ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಅಮೆಜಾನ್‌ ಪ್ರೈಂ ನಲ್ಲಿ ಇಂಗ್ಲೀಷ್‌ ಸಬ್‌ಟೈಟಲ್‌ಗಳ ಜೊತೆ ಸಿನಿಮಾ ನೋಡಬಹುದಾಗಿದೆ.

    English summary
    C U Soon Malayalam movie review in Kannada. Movie released on Amazon prime on September 01.
    Monday, September 7, 2020, 9:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X