For Quick Alerts
  ALLOW NOTIFICATIONS  
  For Daily Alerts

  ವಿಷ್ಣುವರ್ಧನ್ 13ನೇ ವರ್ಷದ ಪುಣ್ಯ ಸ್ಮರಣೆ; ದರ್ಶನ್, ಸುದೀಪ್ ಸೇರಿ ಹಲವರ ಟ್ವೀಟ್

  |

  ಕನ್ನಡ ಚಲನಚಿತ್ರರಂಗದ ಸಾರ್ವಕಾಲಿಕ ಸ್ಟಾರ್ ನಟ ಸಾಹಸಸಿಂಹ, ಅಭಿನಯ ಭಾರ್ಗವ ವಿಷ್ಣುವರ್ಧನ್ ಅವರ 13ನೇ ವರ್ಷದ ಪುಣ್ಯ ಸ್ಮರಣೆ ಇಂದು. 51 ವರ್ಷಗಳ ಹಿಂದೆ ವಂಶವೃಕ್ಷ ಎಂಬ ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ವಿಷ್ಣುವರ್ಧನ್ ನಂತರ ತಮ್ಮ ಎರಡನೇ ಚಿತ್ರ ನಾಗರಹಾವು ಮೂಲಕವೇ ಪೂರ್ಣ ಪ್ರಮಾಣದ ನಾಯಕನಾದರು ಹಾಗೂ ಈ ಚಿತ್ರದ ಮೂಲಕವೇ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡರು.

  ಇನ್ನೂರು ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡ ಸಿನಿ ರಸಿಕರ ಮನ ಗೆದ್ದ ವಿಷ್ಣುವರ್ಧನ್ ಇಂದು ದೈಹಿಕವಾಗಿ ಇಲ್ಲದಿದ್ದರೂ ಸಹ ಅಭಿಮಾನಿಗಳ ಮನದಲ್ಲಿ ಅಜರಾಮರರಾಗಿ ಉಳಿದುಕೊಂಡಿದ್ದಾರೆ. ಇನ್ನು ವಿಷ್ಣುವರ್ಧನ್ ಅವರನ್ನು ಪುಣ್ಯ ಸ್ಮರಣೆಯ ದಿನದಂದು ಚಿತ್ರರಂಗದ ಹಾಗೂ ರಾಜಕೀಯ ಕ್ಷೇತ್ರದ ಹಲವಾರು ಗಣ್ಯರು ಸ್ಮರಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ದಾದಾ ಕುರಿತಾಗಿ ಪೋಸ್ಟ್ ಮಾಡಿದ್ದಾರೆ.

  ದರ್ಶನ್ ಟ್ವೀಟ್

  ದರ್ಶನ್ ಟ್ವೀಟ್

  ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಷ್ಣುವರ್ಧನ್ ಅವರ ಪುಣ್ಯ ಸ್ಮರಣೆಯ ದಿನದಂದು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ "ಇಂದಿಗೆ ದೈಹಿಕವಾಗಿ ಕನ್ನಡಾಭಿಮಾನಿಗಳನ್ನು ಅಗಲಿ 13 ವರ್ಷ ಕಳೆದರೂ, ತಮ್ಮ ಕಲಾಸೇವೆ ಹಾಗೂ ಸರಳ ವ್ಯಕ್ತಿತ್ವದ ಮೂಲಕ ಕೋಟ್ಯಾಂತರ ಕನ್ನಡಿಗರ ಮನದಲ್ಲಿ ಸದಾ ಚಿರಸ್ಥಾಯಿಯಾಗಿ ನೆಲೆಸಿದ್ದಾರೆ ನಮ್ಮ ಸಾಹಸ ಸಿಂಹ ಡಾ|| ವಿಷ್ಣು ಸರ್" ಎಂದು ಬರೆದುಕೊಂಡು ಸ್ಮರಿಸಿದ್ದಾರೆ.

  ಕಿಚ್ಚ ಸುದೀಪ್ ವಿಶೇಷ ಟ್ವೀಟ್

  ಕಿಚ್ಚ ಸುದೀಪ್ ವಿಶೇಷ ಟ್ವೀಟ್

  ಇನ್ನು ವಿಷ್ಣುವರ್ಧನ್ ಅವರ ಕಟ್ಟಾ ಅಭಿಮಾನಿ ಹಾಗೂ ಅನುಯಾಯಿಯಾಗಿರುವ ನಟ ಕಿಚ್ಚ ಸುದೀಪ್ "ಅಂದು, ಇಂದು, ಎಂದೆಂದೂ ನನ್ನ ಹೀರೋ ಡಾ. ವಿಷ್ಣುವರ್ಧನ ಅಪ್ಪಾಜಿ ಅವರ ಪುಣ್ಯ ಸ್ಮರಣೆಯಂದು ಅವರನ್ನು ಪೂಜ್ಯಭಾವಹಿಂದ ಸ್ಮರಿಸುತ್ತೇನೆ: ಕಿಚ್ಚ ಸುದೀಪ" ಎಂದು ವಿಶೇಷ ಪೋಸ್ಟರ್ ಹಂಚಿಕೊಳ್ಳುವ ಮೂಲಕ ತಮ್ಮ ನೆಚ್ಚಿನ ನಟನ ಸ್ಮರಣೆ ಮಾಡಿದ್ದಾರೆ.

  ನಿರ್ದೇಶಕ ಸಂತೋಷ್ ಆನಂದ್‌ರಾಮ್

  ನಿರ್ದೇಶಕ ಸಂತೋಷ್ ಆನಂದ್‌ರಾಮ್

  ತಮ್ಮ ಚೊಚ್ಚಲ ನಿರ್ದೇಶನದ ಚಿತ್ರ ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ ಚಿತ್ರದಲ್ಲಿ ನಾಗರಹಾವು ಚಿತ್ರದ ಹಾಗೂ ವಿಷ್ಣುವರ್ಧನ್ ಬಗ್ಗೆ ಸಾಕಷ್ಟು ಅಂಶಗಳನ್ನು ತೋರಿಸಿದ್ದ ನಿರ್ದೇಶಕ ಸಂತೋಷ್ ಆನಂದ್ ರಾಮ್ ವಿಷ್ಣುವರ್ಧನ್ ಅವರ ಫೋಟೊವೊಂದನ್ನು ಹಂಚಿಕೊಂಡು ದಾದಾ ಅಮರ ಎಂದು ಬರೆದುಕೊಂಡಿದ್ದಾರೆ.

  ಮರೆಯಲಾಗದ ಮಾಣಿಕ್ಯ ಎಂದ ಜಗ್ಗೇಶ್

  ಮರೆಯಲಾಗದ ಮಾಣಿಕ್ಯ ಎಂದ ಜಗ್ಗೇಶ್

  ನವರಸ ನಾಯಕ ಜಗ್ಗೇಶ್ ತಮ್ಮ ಅಭಿಮಾನಿ ಬಳಗ ಹಂಚಿಕೊಂಡಿರುವ ತಮ್ಮ ಹಾಗೂ ವಿಷ್ಣುವರ್ಧನ್ ಅವರ ಫೋಟೊವೊಂದನ್ನು ರಿಟ್ವೀಟ್ ಮಾಡಿ 'ಮರೆಯಲಾಗದ ಮಾಣಿಕ್ಯ' ಎಂದು ಬರೆದುಕೊಂಡು ರಾಮಾಚಾರಿಯ ಸ್ಮರಣೆ ಮಾಡಿದ್ದಾರೆ.

  English summary
  Celebrities remembered Vishnuvardhan on his 13th death anniversary. Take a look
  Friday, December 30, 2022, 16:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X