»   » ಧೂಮ್ 3 : ವಿಮರ್ಶಕರ ವಿಮರ್ಶೆ ಹಿಂಗೈತೆ

ಧೂಮ್ 3 : ವಿಮರ್ಶಕರ ವಿಮರ್ಶೆ ಹಿಂಗೈತೆ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ನಲ್ಲಿ ವರ್ಷದ ಬಹುನಿರೀಕ್ಷಿತ ಚಿತ್ರ ಎನಿಸಿದ್ದ 'ಧೂಮ್ 3' ಚಿತ್ರ ತೆರೆಕಂಡು ತುಂಬಿದ ಗೃಹ ಪ್ರದರ್ಶನ ಕಂಡಿದೆ. ಅಮೀರ್ ಖಾನ್ ದೆಸೆಯಿಂದ ಧೂಮ್ 3 ಚಿತ್ರ ಭರ್ಜರಿ ಯಶಸ್ಸು ಕಾಣುವ ಮುನ್ಸೂಚನೆ ಸಿಕ್ಕಿದೆ ಎಂದು ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ.

ಬಾಲಿವುಡ್ ನಟ ಅಮೀರ್ ಖಾನ್ ಮತ್ತೊಮ್ಮೆ ಖಳನಟನಾಗಿ ಬೆಳ್ಳಿತೆರೆ ಮೇಲೆ ರಾರಾಜಿಸಲಿದ್ದಾರೆ.'ಘಜನಿ' ಮತ್ತು 'ಫನಾ' ಚಿತ್ರಗಳಲ್ಲಿ ನೆಗಟಿವ್ ಛಾಯೆ ಇರುವ ಪಾತ್ರಗಳಲ್ಲಿ ನಟಿಸಿ ಪರಿಪೂರ್ಣ ನಟ ಎನಿಸಿದ್ದ ಅಮೀರ್ ಈಗ ಧೂಮ್ 3 ಚಿತ್ರದಲ್ಲಿ ಅಭಿಮಾನಿಗಳಿಗೆ ಹುಚ್ಚು ಹಿಡಿಸಿದ್ದಾರೆ. ಧೂಮ್ 3 ಒನ್ ಮ್ಯಾನ್ ಶೋ ಆಗಿದೆ.

'ಧೂಮ್' ಚಿತ್ರ ಯಶಸ್ವಿಯಾದ ಬಳಿಕ 'ಧೂಮ್ 2' ಚಿತ್ರ ಬಂದಿತ್ತು. ಇದೇ ಸರಣಿಯಲ್ಲಿ ಈಗ 'ಧೂಮ್ 3' ಚಿತ್ರ ಕ್ರಿಸ್ ಮಸ್ ಗೂ ಮುನ್ನ ತೆರೆಕಂಡಿದೆ. ಈ ಚಿತ್ರದ 2ಡಿ ಹಾಗೂ ಐ- ಮ್ಯಾಕ್ಸ್ ಆವೃತ್ತಿ ಡಿಸೆಂಬರ್ 25ರಂದು ಬಿಡುಗಡೆಯಾಗಲಿದೆ. ಭಾರತದಾದ್ಯಂತ ಸುಮಾರು 4,000 ಥಿಯೇಟರ್ಗಳಲ್ಲಿ ಚಿತ್ರ ತೆರೆ ಕಂಡಿರುವ ಧೂಮ್ 3 ಚಿತ್ರ ದಿನದಲ್ಲಿ 250 ಕೋಟಿ ಬಾಚುವ ಗುರಿಯನ್ನು ಚಿತ್ರ ತಂಡ ಇಟ್ಟುಕೊಂಡಿದೆ.

ಅಮೀರ್ ಖಾನ್ ಜತೆಗೆ ಅಮೀರ್ ರೈಡ್ ಮಾಡಿರುವ ಬಿಎಂಡಬ್ಲ್ಯು ಕೆ 1300 ಆರ್ ಕೂಡಾ ಪ್ರೇಕ್ಷಕರ ಗಮನ ಸೆಳೆದಿದೆ. ಸರ್ಕಸ್ ನಲ್ಲಿ ಅಮೀರ್ ನೆಗೆತ, ಬೈಕ್ ಹತ್ತಿ ಅಮೀರ್ ಖಾನ್ ಮಾಡುವ ಸ್ಟಂಟ್ ಗಳು, ಕತ್ರೀನಾ ಡ್ಯಾನ್ಸ್, ಅಮೀರ್ ಡೈಲಾಗ್ ಪಂಚ್ ಗಳು ಹಾಗೂ ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ಎಲ್ಲವೂ ಮೊದಲ ನೋಟಕ್ಕೆ ಗಮನ ಸೆಳೆಯುವಂತೆ ಮಾಡುವಲ್ಲಿ ನಿರ್ದೇಶಕ ವಿಜಯ್ ಕೃಷ್ಣ ಆಚಾರ್ಯ ಯಶಸ್ವಿಯಾಗಿದ್ದಾರೆ. ಆದರೆ, ಚಿತ್ರದಲ್ಲಿ ಅಮೀರ್ ಹೊರತುಪಡೆಸಿದರೆ ಮತ್ತೇನಿಲ್ಲ ಎನ್ನುತ್ತಿರುವ ವಿಮರ್ಶಕರ ವಿಮರ್ಶೆ ಮುಂದಿದೆ..

ಇಂಡಿಯಾ ಟುಡೇ (2 ಸ್ಟಾರ್ /5)

ಧೂಮ್ 3 ಉತ್ತಮ ದೃಶ್ಯ ವೈಭವ ಅಷ್ಟೇ. ಚಿತ್ರದಲ್ಲಿ ಯಾವುದೇ ಲಾಜಿಕ್ ಇಲ್ಲ. ಅತಿ ಹೆಚ್ಚು ಸಾಹಸ ಭರಿತ ದೃಶ್ತ್ಯಗಳು ಚಿತ್ರ ಕೈ ಹಿಡಿಯುವಲ್ಲಿ ವಿಫಲವಾಗಿದೆ. ಪ್ರೀತಂ ಸಂಗೀತ ಕೈ ಕೊಟ್ಟಿದೆ. ಆಮೀರ್ ಅಭಿನಯ ಓಕೆ ಎಂದರೂ ಸಾಹಸ ದೃಶ್ಯ ಸರಿಯಾಗಿ ಮೂಡಿಲ್ಲ. ಕತ್ರೀನಾ ಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ.

ಫಸ್ಟ್ ಪೋಸ್ಟ್ : ದುಡ್ಡು ದಂಡ

900 ರು ತೆತ್ತು 3 ಡಿ ಐಮ್ಯಾಕ್ಸ್ ನಲ್ಲಿ ನೋಡಿ ಎನ್ನುತ್ತಾರೆ ಆದರೆ, ಚಿತ್ರದಲ್ಲಿ ಕಾಣ ಸಿಗುವುದು ತುಂಡು ಬಟ್ಟೆಯ ಕತ್ರೀನಾ, ಕುಂಗ್ ಫು ಪಂಡಾ ಚಿತ್ರ ಮಾದರಿ ಸಾಹಸ. ಲಾಜಿಕ್ ಇಲ್ಲದ ಸಾಹಸ ದೃಶ್ಯಗಳು, ಪೇಲವ ಡೈಲಾಗ್ಸ್ ಗಳು ಮಾತ್ರ. ಅಪ್ಪಿ ತಪ್ಪಿ ಚಿಕಾಗೋ ಪೊಲೀಸರಿಗೆ ಈ ಚಿತ್ರ ತೋರಿಸಬೇಡಿ

ಎನ್ ಡಿಟಿವಿ (3/5)

ಧೂಮ್ ಸರಣಿಯ ಕಥೆಗಾರ ವಿಜಯ್ ಕೃಷ್ಣ ಆಚಾರ್ಯ ಮೂರನೇ ಸರಣಿಯಲ್ಲಿ ಪ್ರೇಕ್ಷಕರ ಕುತೂಹಲ ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಮೊದಲ 50 ನಿಮಿಷ ಎಂಟ್ರಿ ಸೀನ್ ಗಳಲ್ಲೇ ನಷ್ಟವಾಗಿದೆ. ಧೂಮ್ ಸರಣಿ ಚಿತ್ರಗಳನ್ನು ನೋಡಿದ ಮೇಲೆ ಸಿಗುತ್ತಿದ್ದ ಮಜಾ ಮಿಸ್ ಆಗಿದೆ. ಒಮ್ಮೆ ನೋಡಬಹುದು ಅಷ್ಟೇ

Koi Moi ಮೋಹರ್ ಬಸು: (4/5)

ಬೈಕ್ ರೇಸ್, ಡ್ಯಾನ್ಸ್, ಡೈಲಾಗ್ಸ್ ಇದು ಧೂಮ್ ಚಿತ್ರಗಳ ಹೆಗ್ಗುರುತಾಗಿದ್ದು, ಇಲ್ಲೂ ಇದು ಕ್ಲಿಕ್ ಆಗಿದೆ. ಮೂರು ಗಂಟೆಗಳ ಕಾಲ ಹಿಡಿದಿಡುವಷ್ಟು ಕಥೆ ಇಲ್ಲದಿರುವುದು ಬೋರ್ ಎನಿಸುತ್ತದೆ. ಆಮೀರ್ ಹಾಗೂ ಕತ್ರೀನಾ ಲವ್ ಸೀನ್ ಟ್ರಾಕ್ ಅನಗತ್ಯ.

ಇಂಡಿಯನ್ಸ್ ಎಕ್ಸ್ ಪ್ರೆಸ್ (2/5)

ಒಳ್ಳೆ ಸೆಟ್, ಸ್ಟಂಟ್, ವಿದೇಶದ ಲೊಕೇಷನ್, ಅಮೀರ್ ನಟನೆ, ಛಾಯಾಗ್ರಾಹಕ ಚಿತ್ರ ಪ್ಲಸ್ ಪಾಯಿಂಟ್, ಆದರೆ, ಚಿತ್ರ ಊಹೆಗೆ ನಿಲುಕದ ದೃಶ್ಯಗಳು, ಪೇಲವ ಸ್ಕ್ರಿಪ್ಟ್ ಚಿತ್ರವನ್ನು ಅದ್ಬುತ ಎನ್ನುವ ರೇಂಜ್ ನಿಂದ ಸರಕ್ಕನೆ ಕೆಳಗಿಳಿಸಿದೆ.

ಬಾಲಿವುಡ್ ಹಂಗಾಮ (4.5/5)

ಸರ್ಕಸ್, ಮ್ಯಾಜಿಕ್, ಬೈಕ್ ರೇಸ್, ಕಳ್ಳ ಪೊಲೀಸ್ ಆಟ, ನಿರೀಕ್ಷೆಗೂ ಮೀರಿದ ಸಾಹಸ ದೃಶ್ಯಗಳು ಪ್ರೇಕ್ಷಕರ ಮೈನವಿರೇಳಿಸುತ್ತದೆ. ಮಾಮೂಲಿ ದ್ವೇಷದ ಕಥೆಯನ್ನು ಹೀಗೂ ಹೇಳಬಹುದು ಎಂಬುದನ್ನು ಆಚಾರ್ಯ ತೋರಿಸಿಕೊಟ್ಟಿದ್ದಾರೆ. ಮಲಾಂಗ್, ಕಮ್ಲಿ ಜತೆಗೆ ಧೂಮ್ ಹಾಡು ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಬಾಲ ಪ್ರತಿಭೆ ಸಿದ್ದಾರ್ಥ್ ನಿಗಮ್ ಉತ್ತಮ ನಟನೆ ನೀಡಿದ್ದಾನೆ. ಮನರಂಜನೆಯ ಮಹಾಪೂರ ಇಲ್ಲಿ ಸಿಗುತ್ತದೆ-ತರಣ್ ಆದರ್ಶ್

ರೀಡಿಫ್ : (3/5)

ದಿ ಡಾರ್ಟ್ ನೈಟ್, ನೌ ಯೂ ಸೀ ಮೀ ಹಾಗೂ ದಿ ಪ್ರೇಸ್ಟಿಜ್ ಚಿತ್ರಗಳನ್ನು ನೋಡಿದಾಗ ಆಗುವ ಅನುಭವ ಇಲ್ಲೂ ಸಿಗುತ್ತದೆ. ಸರ್ಕಸ್ ಶೋ ಮ್ಯಾನ್ ಆಗಿ ಆಮೀರ್ ಮಿಂಚಿದ್ದಾರೆ. ಆಚಾರ್ಯ ಸ್ಕ್ರಿಪ್ಟ್ ಸಕತ್ತಾಗಿದೆ ಆದರೆ, ಚಿತ್ರದ ಅವಧಿ ಮಜಾ ಸ್ವಲ್ಪ ಹಾಳುಗೆಡವಿದೆ. -ಸುಕನ್ಯಾ ವರ್ಮ

ಲೈವ್ ಮಿಂಟ್; ಎನರ್ಜಟಿಕ್

ಸ್ಟಂಟ್ ಸ್ಟಾರ್ ಗಳು ಚಿತ್ರದ ನಿಜವಾದ ಹೀರೋ, ಡ್ಯಾನ್ಸಿಂಗ್, ಹಾಡು, ಪ್ರಮುಖ ನಟನೆ, ವಿದೇಶದ ಲೊಕೇಷನ್ ಎನರ್ಜಟಿಕ್ ಆಗಿದೆ. ಚಿತ್ರ ಒಮ್ಮೆ ನೋಡಲು ಅಡ್ಡಿಯಿಲ್ಲ -ನಂದಿನಿ ರಾಮನಾಥ್

ಹಿಂದೂಸ್ತಾನ್ ಟೈಮ್ಸ್ (3.5/5)

ಧೂಮ್ ಸರಣಿಯ ಉತ್ತಮ ಚಿತ್ರ ಶ್ರೀಮಂತವಾದ ಸೆಟ್, ಸಾಹಸದ ಜತೆಗೆ ಭಾವನಾತ್ಮಕ ದೃಶ್ಯಗಳೂ ಇವೆ. ಆದರೆ, ಕಥೆ ಅಷ್ಟಾಗಿ ಹಿಡಿತ ಕಂಡಿಲ್ಲ. ವಿಲನ್ ಆಗಿ ಅಮೀರ್ ಉತ್ತಮವಾಗಿ ನಟಿಸಿದ್ದಾರೆ. ಕೈಫ್ ಗೆ ಹೆಚ್ಚಿನ ಸೀನ್ ಗಳಿಲ್ಲ. ಅಭಿಷೇಕ್, ಉದಯ್ ಧೂಮ್ ಸರಣಿಯ ಅವಿಭಾಜ್ಯ ಅಂಗವಾಗಿಬಿಟ್ಟಿದ್ದಾರೆ. ಚಿತ್ರದ ಅವಧಿ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತದೆ.

ಬಾಲಿವುಡ್ ಲೈಫ್ 3.5/5

ಧೂಮ್ ಸರಣಿ ನೋಡಿದವರಿಗೆ ಧೂಮ್ 3 ಅದ್ಭುತ ಎನಿಸಲಿದೆ. ಮಿಸ್ ಮಾಡದೆ ಚಿತ್ರ ನೋಡಿ, ನೆಗಟಿವ್ ಪಾತ್ರದಲ್ಲೂ ಅಮೀರ್ ಮಿಂಚಿದ್ದಾರೆ. ಉದಯ್ ಛೋಪ್ರಾ ಕಾಮಿಡಿ , ಅಭಿಷೇಕ್ ಬಚ್ಚನ್ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಕತ್ರೀನಾ ಕೈಫ್ ಗೆ ಐಶ್ವರ್ಯಾಗೆ ಇದ್ದಂತೆ ಉತ್ತಮ ರೋಲ್ ಹೆಚ್ಚಿನ ಅವಕಾಶ ಸಿಕ್ಕಿಲ್ಲ

English summary
Dhoom 3 movie Critics review. The film will definitely find a place for itself in the crowd and will be enjoyed by a great number of audience. However, it is not for those who rely on logic!
Please Wait while comments are loading...