For Quick Alerts
  ALLOW NOTIFICATIONS  
  For Daily Alerts

  ಟ್ವೀಟ್ಸ್: ಟೋನಿ, ಥ್ರಿಲ್ ಜತೆ ಟೈಮ್ ಕಿಲ್ಲರ್

  By Mahesh
  |

  ಇದೊಂದು ಸೂಪರ್ ಡೂಪರ್ ಕಾನ್ಸೆಪ್ಟ್ ಉಳ್ಳ ಚಿತ್ರ. ಪ್ರೇಕ್ಷಕರ ಎದೆ ಝಲ್ ಎನ್ನಿಸದೆ ಇರದು. ಸಿನಿಮಾ ಪ್ರೇಮಿಗಳು ತಪ್ಪದೇ ನೋಡಬೇಕಾದ ಚಿತ್ರವಿದು. ಅವರ ಹಣ ಮತ್ತು ಸಮಯಕ್ಕೆ ಮೋಸವಾಗಲ್ಲ. ಖಂಡಿತ ಈ ಚಿತ್ರ ನಿಮಗೆ ಖುಷಿಕೊಡುತ್ತದೆ ಎಂಬ ಭರವಸೆಯನ್ನು ನಾನು ಕೊಡುತ್ತೇನೆ ಎಂದು ಶ್ರೀನಗರ ಕಿಟ್ಟಿ ಅವರು ಒನ್ ಇಂಡಿಯಾಗೆ ನೀಡಿದ ಸಂದರ್ಶನ ವೇಳೆ ಹೇಳಿದ್ದು ಅಕ್ಷರಶಃ ಸತ್ಯವಾಗಿದೆ.

  ಒಲವೇ ಮಂದಾರದಂಥ ಚಿತ್ರ ನೀಡಿದ ಜಯತೀರ್ಥ ಅವರು 'ಟೋನಿ' ಎಂಬ ಚಿತ್ರ ಮಾಡಿದ್ದಾರಾ ಎಂದು ಪ್ರೇಕ್ಷಕರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ. ರಂಜಾನ್ ದಿನದಂದು ಬಿಡುಗಡೆಯಾಗಿರುವ ಟೋನಿ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಇದು ಈವರೆಗೆ ಶ್ರೀನಗರ ಕಿಟ್ಟಿ ಅವರ ಚಿತ್ರಕ್ಕೆ ಸಿಕ್ಕಿರುವ ಅದ್ಭುತ ಪ್ರತಿಕ್ರಿಯೆ ಎನ್ನಬಹುದು.

  ನನ್ನ ಎರಡನೇ ಚಿತ್ರ "ಟೋನಿ" ಏಕ್ ದಿನ್ ಕಾ ಸುಲ್ತಾನ್ ಬಿಡುಗಡೆ ಆಗುತ್ತಿದೆ. ನಾನು ಸದಾ ನಂಬಿರುವ ಜೀವನ ಪ್ರೀತಿ ಮತ್ತು ಮುಗ್ದತೆಯ ಬಗ್ಗೆ ನನ್ನ ಅನುಭವಕ್ಕೆ ದಕ್ಕಿದನ್ನು ಗ್ರಹಿಸಿ ಚಿತ್ರಿಸಿದ್ದೇನೆ. ಈ ಚಿತ್ರವನ್ನು ನೋಡುಗರ ಬದುಕಿನ ಒಂದು ಅನುಭವವಾಗಿಸುವ ಪ್ರಯತ್ನ ನನ್ನದು.

  ಈ ಯತ್ನದಲ್ಲಿ ನಾನು ಸಫಲನಾಗಿದ್ದೇನೆಯೇ ಇಲ್ಲವೇ ಎಂಬುದನ್ನು ನೀವು ನೋಡಿ ತಿಳಿಸಬೇಕಾಗಿ ನನ್ನ ವಿನಂತಿ. ಈ ನನ್ನ ಕನಸಿಗೆ ಬೆಂಬಲಿಸಿ ನಾಯಕನಟನಾಗಿ ಅಭಿನಯಿಸಿದ ಶ್ರೀನಗರ ಕಿಟ್ಟಿ ಅವರಿಗೆ, ಬಂಡವಾಳ ಹೂಡಿದ ಇಂದ್ರಕುಮಾರ್ ಅವರಿಗೆ , ನನ್ನ ಎಲ್ಲಾ ತಂತ್ರಜ್ಞರಿಗೆ , ಕಲಾವಿದರಿಗೆ , ಮಾಧ್ಯಮ ಮಿತ್ರರಿಗೆ ತುಂಬು ಹೃದಯದ ಕೃತಜ್ಞತೆಗಳು. ನಮ್ಮೆಲ್ಲರ ಈ ಪ್ರಾಮಾಣಿಕ ಪ್ರಯತ್ನಕ್ಕೆ ನಿಮ್ಮ ಬೆಂಬಲದ ಅಗತ್ಯವಿದೆ ಎಂದು ನಿರ್ದೇಶಕ ಜಯತೀರ್ಥ ಹೇಳಿದ್ದಾರೆ, ಬನ್ನಿ ಟೋನಿ ಚಿತ್ರಕ್ಕೆ ಮೊದಲ ದಿನದ ಪ್ರತಿಕ್ರಿಯೆ ಹೇಗಿದೆ ನೋಡೋಣ...

  ಹೌಸ್ ಫುಲ್ ಹೌಸ್ ಫುಲ್

  ಹೌಸ್ ಫುಲ್ ಹೌಸ್ ಫುಲ್

  ವೀರೇಶ್ ಹಾಗೂ ತ್ರಿವೇಣಿ ಚಿತ್ರಮಂದಿರದಲ್ಲಿ ಶ್ರೀನಗರ ಕಿಟ್ಟಿ ಅವರೇ ಅಚ್ಚರಿ ಪಡುವಷ್ಟು ಜನ ಸಂದಣಿ ಕಂಡು ಬಂದಿದೆ. ಎಲ್ಲೆಡೆ ಕಿಟ್ಟಿ ಅವರ ಕಟೌಟ್ ರಾರಾಜಿಸುತ್ತಿದೆ. ಚಿತ್ರದ ಪ್ರಚಾರ ಫಲನೀಡಿದೆ. ರಂಜಾನ್ ಹಾಗೂ ರಜೆ ಸಾಲು ಚಿತ್ರಕ್ಕೆ ಅನುಕೂಲಕರವಾಗಿದೆ. ಮಲ್ಟಿಫ್ಲೆಕ್ಸ್ ಗಳಲ್ಲೂ ಟೋನಿ ಚಿತ್ರಮಂದಿರ ಭರ್ತಿ ಮಾಡುತ್ತಿದ್ದಾನೆ ಎಂಬ ವರದಿ ಬಂದಿದೆ.

  ಓಪನಿಂಗ್ ಹೇಗಿದೆ

  ಓಪನಿಂಗ್ ಹೇಗಿದೆ

  ರಿಯಲ್ ಸ್ಟಾರ್ ಉಪೇಂದ್ರ ಟೋನಿ ಚಿತ್ರದ ಹಾಡಿನಲ್ಲಿ ಕಾಣಿಸಿಕೊಂಡಿದ್ದು ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಪುನೀತ್ ಹಾಡಿರುವ 'ಪಕ್ಕಾ ಪಾಪಿ..' ಹಾಡಿಗೆ ಭರ್ಜರಿ ಶಿಳ್ಳೆ, ಚಪ್ಪಾಳೆ ಬಿದ್ದಿದೆ.

  ಆರಂಭದಲ್ಲಿ ಕಥೆ ಒಳ್ಳೆ ಓಟ ಸಿಕ್ಕಿದೆ. ಅನಾಮಿಕ ವ್ಯಕ್ತಿ ಕರೆ ಸ್ವೀಕರಿಸಿ ಕಿಟ್ಟಿ ಮಾತನಾಡುವ ದೃಶ್ಯ ಕುತೂಹಲಕಾರಿಯಾಗಿದೆ. ಕಿಟ್ಟಿ ಚಿತ್ರದಲ್ಲಿ ಅಂಟೋನಿ ರಾಬಿನ್ಸ್ ಅಭಿಮಾನಿಯಂತೆ. ಯಾರಿದು 'ಟೋನಿ' ರಾಬಿನ್ಸ್ ?

  ಗ್ಲಾಮರ್ ಇಲ್ಲದೆ ಐಂದ್ರಿತಾ

  ಗ್ಲಾಮರ್ ಇಲ್ಲದೆ ಐಂದ್ರಿತಾ

  ಸರಳ ಸುಂದರಿಯಾಗಿ ಐಂದ್ರಿತಾ ರೇ ಗಮನ ಸೆಳೆಯುತ್ತಾರೆ. ಗ್ಲಾಮರ್ ಇಲ್ಲದೆ ಅಭಿನಯಕ್ಕೆ ಹೆಚ್ಚು ನೀಡಬಲ್ಲ ಪಾತ್ರದಲ್ಲಿ ಐಂದ್ರಿತಾ ನೈಜವಾಗಿ ನಟಿಸಿದ್ದಾರೆ.

  ಐಂದ್ರಿತಾರನ್ನು ಕಿಟ್ಟಿ ಸಿಗರೇಟ್ ಕೇಳುವ ಮೂಲಕ ಇಬ್ಬರ ನಡುವೆ ಗೆಳೆತನ ಬೆಳೆಯುತ್ತದೆ. ಅಂದಾಜು ಸಿಗುತ್ತಿಲ್ಲ ಹಾಡಿನಲ್ಲಿ ಕಿಟ್ಟಿ-ಐಂದ್ರಿತಾ ಜೋಡಿ ಗಮನ ಸೆಳೆಯುತ್ತದೆ.

  ಚಿತ್ರದಲ್ಲಿ ಇನ್ಯಾರಿದ್ದಾರೆ

  ಚಿತ್ರದಲ್ಲಿ ಇನ್ಯಾರಿದ್ದಾರೆ

  ಉಪೇಂದ್ರ ಜತೆ ಓಂಕಾರ ಚಿತ್ರದಲ್ಲಿ ನಟಿಸಿದ್ದ ಪ್ರೀತಿ ಝಂಗಾನಿಯಾ ದೊಡ್ಡ ಕಂಪನಿ ಒಡತಿಯಾಗಿ ಕಾಣಿಸಿಕೊಂಡಿದ್ದಾರೆ. ಶರತ್ ಲೋಹಿತಾಶ್ವ ಅವರು ಗ್ರಾಮವೊಂದರಲ್ಲಿ ತತ್ವ ಬೋಧಿಸುವ ಜಮೀನ್ದಾರ ಪಾತ್ರದಲ್ಲಿದ್ದಾರೆ. ಸುಚೇಂದ್ರ ಪ್ರಸಾದ್ ಅವರು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಚಿತ್ರದಲ್ಲಿ ಅನೇಕ ಟ್ವಿಸ್ಟ್ ಗಳಿದ್ದು, ವಿವಿಧ ಆಯಾಯಗಳಲ್ಲಿ ಕಥೆ ಅನಾವರಣಗೊಳ್ಳುತ್ತಾ ಹೋಗುತ್ತದೆ. ವಿಲನ್ ಗಳ ಕಪಿಮುಷ್ಟಿಯಲ್ಲಿ ಸಿಕ್ಕಿದ ನಾಯಕ ಟೋನಿ ವಿವಿಧ ಟಾಸ್ಕ್ ಗಳನ್ನು ಮಾಡುವುದು ಚೆನ್ನಾಗಿ ಮೂಡಿ ಬಂದಿದೆ.

  ಮತ್ತೇನಿದೆ ಚಿತ್ರದಲ್ಲಿ

  ಮತ್ತೇನಿದೆ ಚಿತ್ರದಲ್ಲಿ

  ಕಿಟ್ಟಿ ಫೈಟಿಂಗ್ ದೃಶ್ಯಗಳಲ್ಲಿ ಗೆದ್ದಿದ್ದಾರೆ. ಜಯತೀರ್ಥ ಸ್ಕ್ರಿಪ್ಟ್ ಕಿಕ್ ನೀಡುತ್ತದೆ. ಆದರೆ, ಅನಗತ್ಯ ಹಾಡುಗಳು ಪ್ರೇಕ್ಷಕರ ಸಮಯ ತಿನ್ನುತ್ತದೆ. ಹಾಡುಗಳಿಗೆ ಕತ್ತರಿ ಹಾಕಿದ್ದರೆ ಚಿತ್ರದ ಓಟಕ್ಕೆ ಇನ್ನಷ್ಟು ವೇಗ ಸಿಗುತ್ತಿತ್ತು.

  'ಬೇಕು ಅನ್ನೊದು ಬದುಕಿನ ಚೈತನ್ಯ, ಸಾಕು ಅನ್ನೋದು ಬದುಕಿನ ತೃಪ್ತಿ, ಇವೆರಡರ ಮಧ್ಯೆ ಒಂದು ಸಣ್ಣ ಗೆರೆ ಇದೆ ಅದೇ ಬದುಕಿನ ಪರಿಪೂರ್ಣತೆ" -ಇದು ಟೋನಿ ಚಿತ್ರದ ಸಂದೇಶ

  ರಘು ದೀಕ್ಷಿತ್ ಟ್ವೀಟ್ಸ್

  ಖ್ಯಾತ ಸಂಗೀತಗಾರ ರಘು ದೀಕ್ಷಿತ್ ಮೊದಲ ದಿನವೇ ಟೋನಿ ಚಿತ್ರ ನೋಡಿ ನೀಡಿರುವ ಪ್ರತಿಕ್ರಿಯೆ ಇಲ್ಲಿದೆ

  ಬೆಳಗೆರೆ ಕೇ ದಾಮಾದ್ !

  ಬೆಂಗಳೂರಿನ ಪರಭಾಷಿಗರನ್ನು ಚಿತ್ರ ಸೆಳೆದಿದ್ದು, ಚಿತ್ರಮಂದಿರದ ಬಳಿ ಕಂಡ ಮಾತುಕತೆಗಳನ್ನು ಪತ್ರಕರ್ತ ಶ್ಯಾಮ್ ಸುಂದರ್ ದಾಖಲಿಸಿದ್ದಾರೆ.

  ಚಿತ್ರ ಹೇಗಿದೆ

  ಮೊದಲ ದಿನದ ಮೊದಲ ಪ್ರದರ್ಶನದ ನಂತರ ಬಂದ ತೀರ್ಪು ಹೀಗಿದೆ. 5 ಅಂಕಕ್ಕೆ 3 ಅಂಕ ನೀಡಿದ್ದಾರೆ.

  ಗಂಧದ ಗುಡಿ ಟ್ವೀಟ್ಸ್

  ತ್ರಿವೇಣಿ ಚಿತ್ರಮಂದಿರದ ಬಳಿ ಕಂಡ ದೃಶ್ಯ

  ಸಿನಿಲೋಕ ಟ್ವೀಟ್ಸ್

  ಇದು ಸಾಮಾನ್ಯ ಪ್ರೇಮಕಥೆ, ಸಾಹಸ ಭರಿತ ಚಿತ್ರವಲ್ಲ

  English summary
  Diamond Star Srinagara Kitty and Aindrita ray starrer Tony Kannada Movie Tweet report and one line review by enthusiastic Kannada movie lovers from Gandhadagudi forum

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X