'ಚಮಕ್' ಚಿತ್ರವನ್ನ ನೋಡ್ಬೇಕಾ, ಬೇಡ್ವಾ? ವಿಮರ್ಶಕರು ಹೇಳಿದ್ದೇನು?

By Bharath Kumar

Recommended Video

Chamak Movie Review | ಚಮಕ್ ಸಿನಿಮಾ ವಿಮರ್ಶೆ | Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಚಮಕ್' ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ. ಚಿತ್ರವನ್ನ ನೋಡಿದ ಜನ ನಗುವಿನೊಂದಿಗೆ ಚಿತ್ರಮಂದಿರದಿಂದ ಹೊರಬರುತ್ತಿದ್ದಾರೆ.

ಕೇವಲ ಪ್ರೇಕ್ಷಕನ ದೃಷ್ಟಿಯಲ್ಲಿಷ್ಟೇ ಅಲ್ಲದೇ, ವಿಮರ್ಶಕನಾಗಿ ಸಿನಿಮಾ ನೋಡಿದ ವಿರ್ಮಶಕರಿಗೆ 'ಚಮಕ್' ಚಿತ್ರ ಇಷ್ಟವಾಯ್ತಾ? ಗಣೀ-ಸುನಿ ಜೋಡಿಯ ಈ ಚಿತ್ರದಲ್ಲಿ ಏನು ಇಷ್ಟವಾಯ್ತು, ಏನು ಇಷ್ಟವಾಗಿಲ್ಲ ಎಂಬುದನ್ನ ತಮ್ಮ ಬರೆವಣಿಗೆಯ ಮೂಲಕ ವ್ಯಕ್ತಪಡಿಸಿದ್ದಾರೆ.

ಹಾಗಿದ್ರೆ, 'ಚಮಕ್' ಚಿತ್ರವನ್ನ ನೋಡಿದ ವಿಮರ್ಶಕರು ಏನಂದ್ರು? ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ ಚಮಕ್ ಚಿತ್ರದ ವಿಮರ್ಶೆ ಇಲ್ಲಿದೆ ಓದಿ....

ಖುಷ್ ಖುಷಿಯಾಗಿ ರಂಜಿಸುವ ಚಮಕ್

ಖುಷ್ ಖುಷಿಯಾಗಿ ರಂಜಿಸುವ ಚಮಕ್

''ಇದುವರೆಗೂ ಹದಿಹರೆಯದ ಪ್ರೇಮಕಹಾನಿಗಳಿಗೆ ಮಹತ್ವ ನೀಡುತ್ತಿದ್ದ ನಿರ್ದೇಶಕ ಸುನಿ, ಈ ಬಾರಿ ಸಂಸಾರದ ಕಥೆಯನ್ನು ತೆರೆಮೇಲೆ ತಂದಿದ್ದಾರೆ. ಹಾಗಂತ, ಅವರ ತರಲೆ, ತುಂಟಾಟದ ಶೈಲಿಯನ್ನೇನೂ ಮರೆತಿಲ್ಲ. ಮೊದಲಾರ್ಧ ಹಾಸ್ಯ, ತಮಾಷೆಯಲ್ಲೇ ತೇಲಿಸಿಕೊಂಡು ಮನರಂಜನೆ ನೀಡುವ ನಿರ್ದೇಶಕರಿಗೆ, ದ್ವಿತೀಯಾರ್ಧವನ್ನು ಮತ್ತಷ್ಟು ಚೆಂದಗಾಣಿಸುವ ಅವಕಾಶವಿತ್ತು. ಗಂಭೀರ ಡಾಕ್ಟರ್ ಆಗಿ ಗಣೇಶ್ ಇಷ್ಟವಾಗುತ್ತಾರೆ. ಈ ಹಿಂದಿನ ಚಿತ್ರಗಳಿಗಿಂತ ರಶ್ಮಿಕಾಗೆ ಈ ಚಿತ್ರದಲ್ಲಿ ಅಭಿನಯಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಿದೆ'' - ವಿಜಯವಾಣಿ

ನಗು ಮತ್ತು ಕಣ್ಣೀರಿನ ಸಮ್ಮಿಲನದ ಚಮಕ್

ನಗು ಮತ್ತು ಕಣ್ಣೀರಿನ ಸಮ್ಮಿಲನದ ಚಮಕ್

''ಈವರೆಗೂ ಸದಾ ತುಂಟತನದ ಲವರ್‌ ಬಾಯ್‌ ಪಾತ್ರಗಳಲ್ಲಿಮಿಂಚುತ್ತಿದ್ದ ಗಣೇಶ್‌ ಈ ಬಾರಿ ಫ್ಯಾಮಿಲಿ ಪ್ರೇಕ್ಷಕರ ನೆಚ್ಚಿನ ನಟನಾಗಿ ಬದಲಾಗಿದ್ದಾರೆ. ಕೇವಲ ಪ್ರೇಮಿಗಳಿಗೆ ಮಾತ್ರವಲ್ಲ, ಭಾವುಕ ನಟನೆಯಿಂದಾಗಿ ಮನೆಮಂದಿಗೂ ಕಣ್ಣೀರು ತರಿಸುತ್ತಾರೆ. ರಶ್ಮಿಕಾ ಕೂಡ ಸಿಕ್ಕ ಅವಕಾಶವನ್ನು ಸಖತ್ತಾಗಿ ಉಪಯೋಗಿಸಿಕೊಂಡಿದ್ದಾರೆ. ತಮ್ಮದೇ ಸ್ಟೈಲ್ ನ ಸಿನಿಮಾ ಮಾಡುತ್ತಾ ಬಂದಿದ್ದ ನಿರ್ದೇಶಕ ಸುನಿ, ಆ ಮಾರ್ಗವನ್ನು ಇಲ್ಲಿಕೊಂಚ ಬದಲಿಸಿಕೊಂಡಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ಮತ್ತು ಸಂತೋಷ್‌ ರೈ ಪತಾಜೆಯ ಸಿನಿಮಾಟೋಗ್ರಫಿ ಸಿನಿಮಾದ ಮತ್ತೊಂದು ಪ್ಲಸ್‌ ಪಾಯಿಂಟ್‌'' - ವಿಜಯ ಕರ್ನಾಟಕ

ರಂಜನೆಯ ಔತಣ ಮತ್ತು ದಾಂಪತ್ಯ ಪ್ರಹಸನ

ರಂಜನೆಯ ಔತಣ ಮತ್ತು ದಾಂಪತ್ಯ ಪ್ರಹಸನ

''ಗಣೇಶ್‌ ಮತ್ತು ಸುನಿ ಕಾಂಬಿನೇಷನ್ ಕೂಡ ಇಲ್ಲಿ ಕೆಲಸ ಮಾಡಿದೆ. ಮೊದಲರ್ಧ ನಗಿಸಿ ನಗಿಸಿಯೇ ಕಣ್ಣಲ್ಲಿ ನೀರು ತರಿಸುವ ಸುನಿ, ದ್ವಿತೀಯಾರ್ಧದಲ್ಲಿ ಕೆಲವು ಕಡೆ ಭಾವುಕಗೊಳಿಸಿಯೂ ಕಣ್ಣಂಚು ಒದ್ದೆಯಾಗಿಸುತ್ತಾರೆ. ಮೊದಲರ್ಧ ರಂಜನೆಗೆ ಮೀಸಲು, ದ್ವಿತೀಯಾರ್ಧ ಕಥೆ ಹೇಳಿದರಾಯ್ತು ಎಂದು ನಿರ್ಧರಿಸಿಕೊಂಡಿರುವುದು ಮೇಲ್ನೋಟಕ್ಕೆ ತಿಳಿಯುತ್ತದೆ. ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳದೇ ಹೋಗಿ ಮನದಣಿಯೆ ನಕ್ಕು, ಮತ್ತೊಂಚೂರು ಭಾವುಕರಾಗಿ ಮತ್ತದೇ ನಗುವನ್ನು ಮುಖದ ಮೇಲಿಟ್ಟುಕೊಂಡು ಬರಬಹುದಾದ ಸಿನಿಮಾ ‘ಚಮಕ್'.'' - ಪ್ರಜಾವಾಣಿ

ಟೈಮ್‌ ಆಫ್ ಇಂಡಿಯಾ: ಚಮಕ್ ವಿಮರ್ಶೆ

ಟೈಮ್‌ ಆಫ್ ಇಂಡಿಯಾ: ಚಮಕ್ ವಿಮರ್ಶೆ

''The film mainly lies on the shoulders of the two protagonists and Ganesh and Rashmika Mandanna do a great job at ensuring the audience are with them throughout. Chamak is a sweet film that is feel good and it is a nice way to end the year. Go ahead and watch the film if you like Ganesh, Rashmika and Suni, or if you like films that are light-hearted and bring that smile on your face'' - Times of india

More from Filmibeat

English summary
Golden star ganesh and rashmika mandanna starrer chamak movie has been released yesterday (december 29th) and film get positive response from audience and critics. the movie directed by simple suni.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X