For Quick Alerts
  ALLOW NOTIFICATIONS  
  For Daily Alerts

  ವಿಮರ್ಶೆ: ಗಿಣಿ ಹೇಳಿದ್ದು ಪ್ರೇಮ ಕಥೆ

  |

  'ಗಿಣಿ ಹೇಳಿದ ಕಥೆ' ಸಿನಿಮಾ ಈ ವಾರ ರಾಜ್ಯಾದ್ಯಂತೆ ಬಿಡುಗಡೆಯಾಗಿದ್ದು ಪ್ರೇಕ್ಷಕರ ಮನಗೆಲ್ಲುವಲ್ಲಿ ಸ್ವಲ್ಪ ಕಷ್ಟಪಟ್ಟು ಯಶಸ್ವಿಯಾಗಿದೆ. ಮಾಮೂಲಿ ಕಮರ್ಷಿಯಲ್ ಸಿನಿಮಾಗಳಂತೆ ಗಿಣಿ ಹೇಳಿದ್ದು ಪ್ರೇಮಕಥೆ ಎನ್ನುವುದೇ ಚಿತ್ರದ ಹೈಲೈಟ್.

  ನಾಯಕ ಗಣೇಶ್ (ದೇವ್ ರಂಗಭೂಮಿ) ತನ್ನನ್ನು ಪ್ರೀತಿಸುವವರ ಪಾಲಿಗೆ ಗಿಣಿ. ಈತನೊಬ್ಬ ಕ್ಯಾಬ್ ಡ್ರೈವರ್. ತನ್ನ ಕೆಲಸ ಮತ್ತು ಗೆಳೆಯರೊಂದಿಗೆ ಸೇರಿ ಆರಾಮಾಗಿ ಜೀವನ ಹೋಗ್ತಿರುತ್ತೆ. ಈ ಮಧ್ಯೆ ಕೊಡುಗಿಗೆ ಪ್ಯಾಸೆಂಜರ್ ಒಬ್ಬರನ್ನ ಕರೆದುಕೊಂಡು ಹೋಗುವಾಗ ತನ್ನದೇ ಲವ್ ಸ್ಟೋರಿ ಹೇಳೋಕೆ ಶುರು ಮಾಡ್ತಾನೆ. ಅಲ್ಲಿಂದ ನಿಜವಾದ ಕಥೆ ಆರಂಭವಾಗುತ್ತೆ.

  'ಗಿಣಿ ಹೇಳಿದ ಕಥೆ'ಯನ್ನ ನೀವು ಈ ವಾರ ನೋಡಬಹುದು

  ಅಷ್ಟಕ್ಕೂ, ಗಿಣಿ (ನಾಯಕ) ಪ್ರೀತಿಸಿದ ಹುಡುಗಿ ಯಾರು?. ಗಿಣಿಯ ಪ್ರೇಮ ಕಹಾನಿ ಏನು?. ಗಿಣಿ ಲವ್ ಸೆಕ್ಸಸ್ ಆಗುತ್ತಾ ಅಥವಾ ಫೇಲ್ ಆಗುತ್ತಾ? ಇದೆಲ್ಲವೂ ಚಿತ್ರದಲ್ಲಿ ನೋಡಬೇಕಿದೆ.

  Gini helida kathe review

  'ಗಿಣಿ ಹೇಳಿದ ಕಥೆ' ರೆಗ್ಯೂಲರ್ ಸಿನಿಮಾ. ಹುಡುಗ-ಹುಡುಗಿಯ ಲವ್ ಸ್ಟೋರಿ. ಸಿನಿಮಾ ಗಟ್ಟಿಯಾಗಿರುವುದೇ ಕೊನೆಯ ಅರ್ಧ ಗಂಟೆಯಲ್ಲಿ. ಯಾಕಂದ್ರೆ, ಅಲ್ಲಿ ಸಿನಿಮಾಗೆ ಬೇಕಾದ ಟ್ವಿಸ್ಟ್ ನೀಡುವಲ್ಲಿ ನಿರ್ದೇಶಕರು ಜಾಣ್ಮೆ ತೋರಿದ್ದಾರೆ. ಆದ್ರೆ, ಅದನ್ನ ಮರೆಸಿಬಿಡುತ್ತೆ ಉದ್ದುದ್ದ ಡೈಲಾಗ್ ಗಳು. ಎರಡು ಅಥವಾ ಎರಡೂವರೆ ಗಂಟೆ ಸಿನಿಮಾವಾಗಬೇಕಾದ ಗಟ್ಟಿತನ ಸ್ಕ್ರಿಪ್ಟ್ ನಲ್ಲಿ ಬೇಕಿತ್ತು ಅನಿಸುತ್ತೆ.

  ಇನ್ನುಳಿದಂತೆ ನಾಯಕನಾಗಿ ದೇವ್ ರಂಗಭೂಮಿ, ನಾಯಕಿಯಾಗಿ ಗೀತಾಂಜಲಿ ಅಭಿನಯಿಸಿದ್ದಾರೆ. ಜೊತೆಗೆ ಮಾಲತೇಶ್, ನೀತುರಾಯ್, ಹಾವೇರಿ ಶ್ರೀಧರ್, ಮಹಂತೇಶ್, ಮುಂತಾದವರಿದ್ದಾರೆ. ನಾಗರಾಜ್ ಉಪ್ಪುಂದ ನಿರ್ದೇಶನ ಮತ್ತು ಛಾಯಾಗ್ರಹಣವಿದೆ

  English summary
  Kannada movie gini helida kathe has released yesterday all over karnataka.the movie get mixed response from audience.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X