For Quick Alerts
  ALLOW NOTIFICATIONS  
  For Daily Alerts

  ಟೆನ್ಷನ್ ಬಿಟ್ಟು ಕಾಸ್ ಕೊಟ್ಟು ಸ್ಮೈಲ್ ಮಾಡಿ...

  By Suneel
  |

  ನಟ ಗುರುನಂದನ್ ಮತ್ತು ಕಾವ್ಯಾ ಶೆಟ್ಟಿ ಅಭಿನಯದ 'ಸ್ಮೈಲ್ ಪ್ಲೀಸ್' ಚಿತ್ರ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. Rank ಸ್ಟಾರ್ ಹಾಸ್ಯ ಭರಿತ ಡೈಲಾಗ್ ಗಳು ಪ್ರೇಕ್ಷಕರಿಗೆ ಇಷ್ಟವಾಗಿದ್ದು, ಸಖತ್ ಮನರಂಜನೆ ಪಡೆದಿದ್ದಾರೆ.

  ಆದ್ರೆ, ವಿಮರ್ಶಕರು Rank ಸ್ಟಾರ್ ಅಭಿನಯಕ್ಕೆ ಏನಂದ್ರು? ಕಂಪ್ಲೀಟ್ ಫ್ಯಾಮಿಲಿ ಎಂಟರ್ ಟೈನರ್ ಸಿನಿಮಾ ಗೆ ಅವರು ನೀಡಿದ ಕಾಮೆಂಟ್ ಗಳೇನು?[ವಿಮರ್ಶೆ: ತೊಂದರೆ ಇರಲಿ, ಸಾವು ಎದುರಿಗೆ ಬರಲಿ ಸ್ಮೈಲ್ ಪ್ಲೀಸ್.. ಮುಖದಲ್ಲಿರಲಿ]

  ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ಸ್ಮೈಲ್ ಪ್ಲೀಸ್' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿ...

  ಟೆನ್ಷನ್ ಬಿಡಿ, ಸ್ಮೈಲ್ ಮಾಡಿ: ವಿಜಯ ಕರ್ನಾಟಕ

  ಟೆನ್ಷನ್ ಬಿಡಿ, ಸ್ಮೈಲ್ ಮಾಡಿ: ವಿಜಯ ಕರ್ನಾಟಕ

  'ಸ್ಮೈಲ್ ಪ್ಲೀಸ್' ನಂತಹ ಕತೆಗಳುಳ್ಳ ಸಿನಿಮಾಗಳೂ ಸಾಕಷ್ಟು ಬಂದಿದ್ದರೂ, ಚಿತ್ರ ತನ್ನ ಲವಲವಿಕೆಯ ಚಿತ್ರಕಥೆ, ನೈಜ ಸಂಭಾಷಣೆಯಿಂದ ಗಮನ ಸೆಳೆಯುತ್ತದೆ. ಸಂ‍ಭಾಷಣೆ ಮತ್ತು ಚಿತ್ರಕಥೆಯನ್ನು ರಚಿಸಿ ಸಿನಿಮಾವನ್ನು ಚೆಂದಗಾಣಿಸುವಲ್ಲಿ ನಿರ್ದೇಶಕ ರಘು ಸಮರ್ಥ್ ಮೊದಲ ಪ್ರಯತ್ನದಲ್ಲೇ ಸಮರ್ಥವಾಗಿ ಗೆದ್ದಿದ್ದಾರೆ. ಕನ್ನಡಕ್ಕೆ ಮೊತ್ತೊಬ್ಬ ಪ್ರತಿಭಾವಂತ ನಿರ್ದೇಶಕ ಮತ್ತು ಸಂಭಾಷಣೆ ಕಾರ ಈ ಸಿನಿಮಾ ಮೂಲಕ ಸಿಕ್ಕಿದ್ದಾರೆ ಎನ್ನಬಹುದು. ಗುರುನಂದನ್ ನೈಜವಾಗಿ ನಟಿಸುವ ಮೂಲಕ ನೋಡುಗನಿಗೆ ಬಹಳ ಹತ್ತಿರವಾಗುತ್ತಾರೆ. ನಾಯಕಿ ಕಾವ್ಯಾ ಶೆಟ್ಟಿ ಕಣ್ಣಲ್ಲೇ ಸೆಳೆಯುತ್ತಾರೆ. ಮೊತ್ತೊಬ್ಬ ನಾಯಕಿ ನೇಹಾ ಪಾಟೀಲ್ ಅಭಿನಯ ಕೂಡ ಗಮನ ಸೆಳೆಯುತ್ತದೆ. ಇತರರೆಲ್ಲಾ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅನೂಪ್ ಸೀಳಿನ್ ಸಂಗೀತದಲ್ಲಿ ಒಂದು ಹಾಡು ಗುನುಗುವಂತಿದೆ. ಜೆ.ಎಸ್.ವಾಲಿಯವರ ಕ್ಯಾಮೆರಾ ಕಣ್ಣು ಮಲೆನಾಡನ್ನು ಅಂದವಾಗಿ ಸೆರೆಹಿಡಿದಿದೆ. ಒಟ್ಟಿನಲ್ಲಿ ಈ ವಾರಾಂತ್ಯಕ್ಕೆ ಇಡೀ ಕುಟುಂಬದ ಜತೆ 'ಸ್ಮೈಲ್ ಪ್ಲೀಸ್' ಸಿನಿಮಾ ನೋಡಬಹುದು. ಅಷ್ಟೇ ಅಲ್ಲದೇ ತಮ್ಮ ಮಕ್ಕಳಿಗೆ ಒಳ್ಳೆಯ ಬದುಕು ಕಟ್ಟಿಕೊಡುತ್ತೇವೆ ಎನ್ನುವ ಭರದಲ್ಲಿ ಮಕ್ಕಳ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳದ ಅವರ ಜೀವನದ ಬಗ್ಗೆ ತಾವೇ ನಿರ್ಧಾರ ತೆಗೆದುಕೊಳ್ಳುವ ಅಪ್ಪಂದಿರು ಈ ಸಿನಿಮಾವನ್ನು ನೋಡಲೇಬೇಕು.

  ನಗದು ಕೊಟ್ಟು ನಗೋದು ಅಂದ್ರೆ..: ಕನ್ನಡಪ್ರಭ

  ನಗದು ಕೊಟ್ಟು ನಗೋದು ಅಂದ್ರೆ..: ಕನ್ನಡಪ್ರಭ

  ಒಮ್ಮೊಮ್ಮೆ ಸಿನಿಮಾ, ಮಗದೊಮ್ಮೆ ಧಾರಾವಾಹಿಯ ನೆನಪುಗಳನ್ನು ಗುದ್ದಾಟಕ್ಕೆ ಬಿಡುತ್ತಲೇ, ನಗುವಿಗೂ ತಾಳ್ಮೆ ಪರೀಕ್ಷೆ ಮಾಡಿಸುತ್ತಾ ಹೋಗುತ್ತದೆ ಚಿತ್ರ. ಇಷ್ಟಾಗಿಯೂ ಇಂಥದೊಂದು ಕತೆ ಹೊಸದೆನ್ನುವ ಹಾಗಿಲ್ಲ. ನಗು ತರಿಸುವವ ಮಾತುಗಳು, ಲಿಪ್ ಲಾಕ್ ನ ಗ್ಲಾಮರ್ ಎಲಿಮೆಂಟ್ ಗಳು, ಬಿಗ್ ಬಾಸ್ ನ ಟಾಸ್ಕ್‌ ಗಳ ಮೂಲಕ ಹೊಸ ಬಗೆಯಲ್ಲಿ ನಿರೂಪಿಸಿರುವುದು ಮಾತ್ರ ವಿಶೇಷ ಎನಿಸುತ್ತದೆ. 'ಫಸ್ಟ್‌ Rank ರಾಜು' ಚಿತ್ರದ ನಂತರ ಗುರುನಂದನ್, ಚಿತ್ರದ ಶೀರ್ಷಿಕೆಯ ಹಾಗೆ ಮತ್ತೊಮ್ಮೆ ಕಾಮಿಡಿ ಕಿಕ್ ಕೊಡಲಿದ್ದಾರೆನ್ನುವ ನಿರೀಕ್ಷೆ ಮಾತ್ರ ಇಲ್ಲಿ ಹುಸಿಯಾಗಿದೆ. ಅವರ ಮ್ಯಾನರಿಸಂಗೆ ತಕ್ಕಂತೆ ಇಲ್ಲಿ ತುಸು ಹೆಚ್ಚಾಗುವಷ್ಟೇ ಮಾತನಾಡುವ ಅವಕಾಶ ಸಿಕ್ಕಿದೆ. ಕಥಾ ನಾಯಕ ಮನು ತುಂಬಾನೆ ಮಾತನಾಡುವ ಹುಡುಗ ನಿಜ. ಆದರೆ ಮಾತುಗಳೇ ಚಿತ್ರವಲ್ಲ ಎನ್ನುವ ಸೂಕ್ಷ್ಮ ತೆಯ ಕೊರತೆ ನಿರ್ದೇಶಕರಲ್ಲಿ ಕಾಣುತ್ತದೆ. ಮಾತಿನ ಭರದಲ್ಲಿ ಮುಜುಗರದ ಮಾತುಗಳು ಪರದೆ ಆಚೆಗೆ ತೂರಿಕೊಂಡು ಬರುತ್ತವೆ. ದ್ವಂದ್ವರ್ಥದ ಮಾತುಗಳೇ ತಮಾಷೆ ಎನ್ನುವ ತಿಳಿವಳಿಕೆ ನಿರ್ದೇಶಕರಿಗೆ ಇದ್ದಂತಿದೆ. ಪಟ ಪಟ ಎನ್ನುವ ಮಾತಿನ ಆಚೆಗೂ ಗುರುನಂದನ್ ನಟನೆಯಲ್ಲಿ ಇಷ್ಟವಾಗುತ್ತಾರೆ. ಅನೂಪ್ ಸೀಳಿನ್ ಅವರ ಎರಡು ಹಾಡುಗಳು ಇಂಪಾಗಿವೆ. ಹಾಗೆ ನೋಡಿದರೆ ಜಗದೀಶ್ ವಾಲಿ ಕ್ಯಾಮೆರಾ, ಹಾಡಿನ ಸನ್ನಿವೇಶಗಳಲ್ಲಿ ಹಸಿರಿನ ಸಿರಿ ತುಂಬಿಕೊಂಡು ಕಣ್ಣಿಗೆ ತಂಪು ನೀಡುತ್ತದೆ. ಬಿಗ್ ಬಾಸ್ ನ ಟಾಸ್ಕ್‌ ಗಳನ್ನು ನೆನಪಿಸುವ ಕೆಲವು ಸನ್ನಿವೇಶಗಳಿಗೆ ಕತ್ತರಿ ಪ್ರಯೋಗ ಸರಿಯಾಗಿಯೇ ನಡೆದಿದ್ದರೆ, ತಾಳ್ಮೆಯ ನಡುವೆಯೂ ಚಿತ್ರ ಇನ್ನಷ್ಟು ನಗುತರಿಸುತ್ತಿತ್ತು. ಒಟ್ಟಾರೆ ಶೀರ್ಷಿಕೆಯಲ್ಲಿಯೇ ದಯವಿಟ್ಟು ನಕ್ಕು ಬಿಡಿ ಎಂದು ಹೇಳಿದಂತೆಯೇ ಚಿತ್ರ ಮಂದಿರದಲ್ಲೂ ಪ್ರೇಕ್ಷಕ ತಾಳ್ಮೆಯಿಂದ ಕುಳಿತು ನಗಬೇಕಿದೆ.

  Laugh off this lamenting kiss: Deccan Chronicle

  Laugh off this lamenting kiss: Deccan Chronicle

  After all that talks that this one is a laugh riot with a wholesome 127 minutes of entertainment meant for only adults, it eventually turns out to be another ‘disaster' as it hardly evokes any smiles, and become another ‘laughing' stock in the end. With an old and tested formula, the director tries to cash in on the previous grand success of Gurunandan as the innocent Raju in ‘First Rank Raju' but Manu does not even manage to score the minimum passing marks in this the smiling test. During the entire two plus hours, there are hardly couple of instances when the audience are forced to laugh at the situational humour; one is definitely when the definition of love is derived by one of the supporting character in the film. Well, love as derived in the film is the result of hormones and affection. Isn't it something to die with laughter!
  Mostly shot indoors apart from a couple of songs and scenes, ‘Smile Please' should have had a tagline saying ‘with a kiss'. Wondering about the kiss, then do patiently wait till the climax to witness the rare ‘lip-lock' scene. It does bring some smile in the end. Apart from the beautiful presence of Kavya Shetty and the kissing scene, Gurunandan has tried his best but with the predictable plot and weak screenplay, it is nothing but a challenge to smile after watching this one.

  Smile Please Movie Review: The Times Of India

  Smile Please Movie Review: The Times Of India

  Smile Please by Raghu Samarth aims to be a breezy romcom, which hopes to bank on dialogues and innuendo like most films targetted to the youth are. While it is visually delightful and has a good looking cast, the plot seems rather predictable and too brittle. One can pretty much understand the varied twists. Though, it does manage to entertain in parts through the course of the film. The plot is similar to many Bollywood and Indian romcoms that have youngsters as their target. The exuberant hero who wants to infuse life into the heroine's rather dull household is something that has been touched upon. Gurunandan breathes life into this rather predictable script and does a good job in a role that is unlike his one in First Rank Raju. Kavya Shetty is impressive. The ensemble cast including comedy regulars like Rangayana Raghu, Giri and Sudha Belawadi, deliver despite being given caricatures rather than nicely etched out roles.
  The film can be watched once, but the film does have some moments that are far stretched from reality. Watch Smile Please if you like dialogue-heavy romcoms.

  English summary
  Gurunandan and Kavya Shetty Starrer Kannada Movie 'Smile Please' has recieved positive response from the Critics. Here is the review of 'Smile Please' movie
  Saturday, February 11, 2017, 11:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X