»   » ಟ್ವಿಟರ್ ವಿಮರ್ಶೆ: ಪಡ್ಡೆ ಹೈಕಳಿಗೆ ಬಾಡೂಟ ತಿನಿಸುವ 'ಎರಡನೇ ಸಲ'

ಟ್ವಿಟರ್ ವಿಮರ್ಶೆ: ಪಡ್ಡೆ ಹೈಕಳಿಗೆ ಬಾಡೂಟ ತಿನಿಸುವ 'ಎರಡನೇ ಸಲ'

Posted By:
Subscribe to Filmibeat Kannada

'ಡೈರೆಕ್ಟರ್ ಸ್ಪೆಷಲ್', 'ಮಠ', 'ಎದ್ದೇಳು ಮಂಜುನಾಥ' ಚಿತ್ರಗಳನ್ನ ನಿರ್ದೇಶನ ಮಾಡಿರುವ ಗುರುಪ್ರಸಾದ್ ನಿರ್ದೇಶನದ 'ಎರಡನೇ ಸಲ' ಚಿತ್ರ ಇಂದು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಕಾಫಿಗೂ, ಟೀಗೂ ಹೊಸ ಅರ್ಥ ಕೊಟ್ಟು ಟ್ರೈಲರ್ ಮೂಲಕವೇ ಚಿತ್ರದ ಬಗ್ಗೆ ಹೆಚ್ಚು ನಿರೀಕ್ಷೆ ಹುಟ್ಟುಹಾಕಿದ್ದ ಸಿನಿಮಾ ವನ್ನು ಇಂದು ಸಿನಿ ರಸಿಕರು ಕಣ್ತುಂಬಿಕೊಂಡಿದ್ದಾರೆ.['ಎರಡನೇ ಸಲ' ಚಿತ್ರದ 2ನೇ ಟ್ರೈಲರ್ ನಲ್ಲೂ ಕಾಫಿದ್ದೇ ಕಾರುಬಾರು]

ಸ್ಪೆಷಲ್ ಸ್ಟಾರ್ ಧನಂಜಯ್ ಮತ್ತು ಸಂಗೀತಾ ಭಟ್ ನಾಯಕ-ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ ಪಡ್ಡೆ ಹುಡುಗರ ಕಾಮಿಡಿ ಫೇವರಿಟ್ ಸಿನಿಮಾ ಸಹ ಆಗಿತ್ತು. ಅನೂಪ್ ಸೀಳಿನ್ ಸಂಗೀತ ಇರುವ ಈ ಚಿತ್ರದ ನಿರೀಕ್ಷೆಗೆ ಇಂದು ಬ್ರೇಕ್ ಬಿದ್ದಿದ್ದು, ಚಿತ್ರವನ್ನು ಫಸ್ಟ್ ಶೋ ನೋಡಿದ ಪ್ರೇಕ್ಷಕರು ಏನಂದ್ರು ನೋಡೋಣ ಬನ್ನಿ.


ಸಂಗೀತವೇ ಪ್ರಧಾನ

''ಚಿತ್ರದಲ್ಲಿ ಅನೂಪ್ ಸೀಳಿನ್ ಸಂಗೀತವೇ ಹೈಲೈಟ್ ಆಗಿದ್ದು, ಲಕ್ಷ್ಮೀ ಅಮ್ಮನ ಪಾತ್ರ ಅತ್ಯುತ್ತಮವಾಗಿದೆ' - ಪಾಪ್ ಕಾರ್ನ್ ಕನ್ನಡ.ಕಾಂ


ಎಲ್ಲಾ ಅಂಶಗಳನ್ನು ಒಳಗೊಂಡಿದೆ

" 'ಎರಡನೇ ಸಲ' ಒಂದು ಸಂದೇಶದೊಂದಿಗೆ, ಭಾವನೆಗಳು, ಹಾಸ್ಯ, ಉತ್ತಮ ಸಾಹಿತ್ಯ ಎಲ್ಲವನ್ನು ಹೊಂದಿದೆ. ಧನಂಜಯ್ ಅಭಿನಯ ಗ್ರೇಟ್" - ರೋಹನ್ ಅಭಿಮನ್ಯು


ಎಲ್ಲಾ ಓಕೆ..

'ನಮ್ಮ ಕರುನಾಡ ಕಲಾರತ್ನ ಸ್ಪೆಷಲ್ ಸ್ಟಾರ್ ಧನಂಜಯ ಚಿತ್ರ ಸೂಪರ್ ಡೂಪರ್ ಹಿಟ್. ಸೂಪರ್ ರೆಸ್ಪಾನ್ಸ್" - ಧನಂಜಯ ಫ್ಯಾನ್ಸ್


ಕೆಚ್ಚೆದೆಯ ಸ್ವಮೇಕ್ ಚಿತ್ರ

" 'ಮಠ' ಗುರುಪ್ರಸಾದ್' ಇಸ್ ಬ್ಯಾಕ್. ಅಸಾಧಾರಣ ಮನರಂಜನೆಯೊಂದಿಗೆ ಒಳ್ಳೆಯ ಸಂದೇಶ ಹೊಂದಿದೆ" - ಸಿನಿಲೋಕ


ಸಂಪೂರ್ಣ ಮುಳುಗಿಸಿಕೊಂಡ ಚಿತ್ರ

"ಧನಂಜಯ್ ಅಭಿನಯ ಸಂಪೂರ್ಣ ಮಗ್ನವಾಗಿಸುವಂತಿದೆ. ಲವ್ ದಿ ಫಿಲ್ಮ್' - ಸ್ಪರ್ಶ ಆರ್. ಕೆ


ಫ್ಯಾಮಿಲಿ ಎಂಟರ್ ಟೈನರ್

" ಧನಂಜಯ್ ಅವರು ತಮ್ಮ ಅಭಿನಯದ ಮೂಲಕ ಚಿತ್ರವನ್ನು ಮನಸೂರೇಗೊಳಿಸುತ್ತಾರೆ. 'ಎರಡನೇ ಸಲ' ಒಂದು ಉತ್ತಮ ಫ್ಯಾಮಿಲಿ ಎಂಟರ್ ಟೈನರ್ ಸಿನಿಮಾ" - ಪ್ರಿಯಾಂಕ


ಸಿಹಿಯಾದ ಕಥೆ

" 'ಎರಡನೇ ಸಲ' ಧನಂಜಯ್, ಸಂಗೀತಾ ಭಟ್ ಮತ್ತು ಲಕ್ಷ್ಮೀ ಅಮ್ಮ ನವರ ನಡುವಿನ ಸಿಹಿಯಾದ ಚಿತ್ರಕಥೆ. ಗುರುಪ್ರಸಾದ್ ಅವರ ಹಾಸ್ಯ, ಅನೂಪ್ ಸೀಳಿನ್ ಅವರ ಸೊಗಸಾದ ಸಂಗೀತ ಚೆನ್ನಾಗಿದೆ" - ನಿಂಜ


English summary
Guruprasad Directorial 'Eradane Sala' Kannada Movie has hit the screens today (March 3). Here is the Twitter review of 'Eradane Sala'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada