Don't Miss!
- Sports
ವೇಗದ ಬೌಲರ್ ಉಮ್ರಾನ್, ಅರ್ಷ್ದೀಪ್ಗೆ ಒಲಿದು ಬಂದ ಅದೃಷ್ಟ: ಟೀಮ್ ಇಂಡಿಯಾದಲ್ಲಿ ಅವಕಾಶ
- Lifestyle
Shukra Gochar May 2022:ಮೇ 23ಕ್ಕೆ ಮೇಷ ರಾಶಿಗೆ ಶುಕ್ರ ಸಂಚಾರ: 6 ರಾಶಿಗಳಿಗೆ ಅನುಕೂಲಕರ, 6 ರಾಶಿಯವರು ಹುಷಾರಾಗಿರಬೇಕು
- News
Breaking News; ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಇಳಿಸಿದ ಮಹಾರಾಷ್ಟ್ರ ಸರಕಾರ
- Technology
ಎಸ್ಬಿಐ ಬ್ಯಾಂಕ್ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶ ನೀಡಿದ ಸರ್ಕಾರ!
- Finance
Gold Rate Today: ಸತತವಾಗಿ ಚಿನ್ನದ ದರ ಹೆಚ್ಚಳ, ಮೇ 22ರ ಬೆಲೆ ಪರಿಶೀಲಿಸಿ
- Education
ICSI CS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Automobiles
ಕೆಟಿಎಂ ಡ್ಯೂಕ್ 390 ಪ್ರತಿಸ್ಪರ್ಧಿ 2022ರ ಕಿಮ್ಕೊ ಕೆ ರೈಡರ್ 400 ಬೈಕ್ ಅನಾವರಣ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
Beast First Review: ನಟ ವಿಜಯ್ ಒನ್ ಮ್ಯಾನ್ ಶೋ ತಮಿಳಿನ 'ಬೀಸ್ಟ್'!
ಈಗ ಬೀಸ್ಟ್ ಮತ್ತು ಕೆಜಿಫ್ 2 ಚಿತ್ರದ ಬಗ್ಗೆ ಹೆಚ್ಚಿನ ಸುದ್ದಿಗಳು ಹರಿದಾಡುತ್ತಾ ಇವೆ. ಒಂದು ದಿನದ ಅಂತರದಲ್ಲಿ 'ಕೆಜಿಎಫ್ 2' ಮತ್ತು 'ಬೀಸ್ಟ್' ಚಿತ್ರಗಳು ತೆರೆಗೆ ಬರುತ್ತಿವೆ. ಹಾಗಾಗಿ ಈ ಚಿತ್ರಗಳ ನಡುವೆ ಬಾಕ್ಸಾಫೀಸ್‌ನಲ್ಲಿ ಪೈಪೋಟಿ ನಡೆಯಲಿದೆ ಎನ್ನಲಾಗುತ್ತಿದೆ.
ಎರಡೂ ಚಿತ್ರತಂಡಗಳು ಪೈಪೋಟಿಗೆ ಇಳಿದಿಲ್ಲ. ಬದಲಿಗೆ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ ಎಂದು ಹೇಳಿಕೊಂಡರೂ, ಇಬ್ಬರು ಸ್ಟಾರ್ ನಟರ ಚಿತ್ರಗಳಾಗಿರುವ ಕಾರಣಕ್ಕೆ ಚಿತ್ರದ ಕಲೆಕ್ಷನ್ ಮೇಲೆ ಕಣ್ಣಿದೆ. ಈಗ ಈ ಚಿತ್ರಗಳ ಮೊದಲ ವಿಮರ್ಶೆ ಹೊರೆ ಬಿದ್ದಿದೆ. 'ಕೆಜಿಎಫ್ 2' ಚಿತ್ರದ ಮೊದಲ ವಿಮರ್ಶೆಯನ್ನು ವಿದೇಶದ ಸೆನ್ಸಾರ್ ಬೋರ್ಡ್ ಸದಸ್ಯ ಉಮೈರ್ ಸಂದು ಹರಿ ಬಿಟ್ಟಿದ್ದರು.
KGF 2 First Review: 'ಕೆಜಿಎಫ್ 2' ಕನ್ನಡ ಚಿತ್ರರಂಗದ ಕಿರೀಟ, ಮೊದಲ ವಿಮರ್ಶೆ ಇಲ್ಲಿದೆ!
ಬೀಸ್ಟ್ ಚಿತ್ರವನ್ನು ನೋಡಿದ ಅವರು, ಈ ಚಿತ್ರದ ವಿಮರ್ಶೆಯನ್ನು ಹಂಚಿಕೊಂಡಿದ್ದಾರೆ. ಚಿತ್ರ ಹೇಗಿದೆ, ವಿಜಯ್ ಅಭಿನಯ ಮತ್ತು ಚಿತ್ರದ ಪ್ಲಸ್ ಹಾಗು ಮೈನಸ್ ಗಳನ್ನು ಹಂಚಿಕೊಂಡಿದ್ದಾರೆ. ಒಬ್ಬರೇ ಎರಡೂ ಚಿತ್ರಗಳ ವಿರ್ಮಶೆ ಮಾಡಿವುದರಿಂದ ಯಾವ ಚಿತ್ರಕ್ಕೆ ಎಷ್ಟು ಅಂಕ ಎನ್ನುವುದು ಭಾರಿ ಚರ್ಚೆ ಆಗತ್ತಾ ಇದೆ.

ಬೀಸ್ಟ್ ಬಗ್ಗೆ ಉಮೈರ್ ಸಂಧು ವಿಮರ್ಶೆ!
ಉಮೈರ್ ಸಂಧು ತಮಿಳಿನ ಬೀಸ್ಟ್ ಚಿತ್ರದ ವಿಮರ್ಶೆಯನ್ನು ಬರೆದುಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರದ ವಿಮರ್ಶೆ ಹರಿ ಬಿಟ್ಟಿದ್ದಾರೆ. "ಬೀಸ್ಟ್ ಎಲ್ಲಾ ಆಯಾಮಗಳಿಂದಲೂ ಉತ್ತಮ ಥ್ರಿಲ್ಲರ್ ಅಂಶಗಳು ಚಿತ್ರದಲ್ಲಿ ಇದೆ. ಸಂಪೂರ್ಣ ಪವರ್ ಪ್ಯಾಕ್ಡ್ ಚಿತ್ರಣ ಇದು. ವಿಜಯ್ ಉತ್ತಮ ಅಭಿನಯ ಎಲ್ಲೂ ಬೋರ್ ಆಗಲು ಬಿಡುವುದಿಲ್ಲ. ಇದೊಂದು ಉತ್ತಮ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ" ಎಂದು ಬರೆದು ಕೊಂಡಿದ್ದಾರೆ.
KGF 2 v/s Beast: ತಮಿಳುನಾಡಿನಲ್ಲಿ 'ಕೆಜಿಎಫ್ 2' ಹವಾ, 'ಬೀಸ್ಟ್' ಊಸ್ಟ್ ಗ್ಯಾರೆಂಟಿ!

ವಿಜಯ್ ಒನ್ ಮ್ಯಾನ್ ಶೋ 'ಬೀಸ್ಟ್'!
ಚಿತ್ರದಲ್ಲಿ ಹೆಚ್ಚಾಗಿ ಯಾವ ಪಾತ್ರಗಳ ಬಗ್ಗೆಯೂ ಬರೆದಿಲ್ಲ. ಯಾಕೆಂದರೆ ಈ ಚಿತ್ರದ ವಿಜಯ್‌ರ ಒನ್ ಮ್ಯಾನ್ ಶೋ ಅಂತೆ. "ಬೀಸ್ಟ್ ವಿಜಯ್‌ರ ಒನ್ ಮ್ಯಾನ್ ಶೋ ಎನ್ನುವ ಬಗ್ಗೆ ಪ್ರಶ್ನೆಯೇ ಇಲ್ಲ. ಇದು ನಟ ವಿಜಯ್‌ರ ಸಿನಿ ಬದುಕಿನಲ್ಲಿ ನೀಡಿದ ಉತ್ತಮ ಅಭಿನಯ. ಇಡಿ ಚಿತ್ರ ನೋಡುಗರನ್ನು ಪುಳಕಿತಗೊಳಿಸುತ್ತದೆ. ಮತ್ತು ಹಿಡಿದಿಟ್ಟು ಕೊಳ್ಳುತ್ತದೆ. ಸ್ಕ್ರೀನ್ ಪ್ಲೇ ತುಂಬಾನೇ ಶಾರ್ಪ್ ಆಗಿದೆ. ಚಿತ್ರವನ್ನು ನೋಡಿ" ಎಂದು ಬರೆಯುವ ಮೂಲಕ ಬೀಸ್ಟ್ ಚಿತ್ರದ ರಿವ್ಯೂ ಕೊಟ್ಟಿದ್ದಾರೆ ಉಮೈರ್ ಸಂಧು.

ಕೆಜಿಎಫ್ 2ಗೆ 5 ಸ್ಟಾರ್, ಬೀಸ್ಟ್‌ಗೆ 4 ಸ್ಟಾರ್!
ಇನ್ನು ಕೆಜಿಎಫ್ 2 ಮತ್ತು ಬೀಸ್ಟ್ ಎರಡೂ ಚಿತ್ರದ ವಿಮರ್ಶೆ ಮಾಡಿದ್ದಾರೆ ಉಮೈರ್ ಸಂಧು. ಇವರ ವಿಮರ್ಶೆಯನ್ನು ನೋಡಿದರೆ ಸಿನಿಮಾ ಬಗ್ಗೆ ಒಂದು ಕಲ್ಪನೆ ಬರುತ್ತದೆ. ಇನ್ನು ಈ ಚಿತ್ರಗಳು ಅವರು ಸ್ಟಾರ್ ಕೊಡುವುದರ ಮೂಲಕ ರೇಟಿಂಗ್ ಕೊಟ್ಟಿದ್ದಾರೆ. ಕೆಜಿಎಫ್ 2 ಚಿತ್ರಕ್ಕೆ 5ಕ್ಕೆ 5 ಸ್ಟಾರ್‌ಗಳನ್ನು ಕೊಟ್ಟು 100% ಉತ್ತಮ ಚಿತ್ರ ಎಂದು ಹೇಳಿದ ಉಮೈರ್, ಬೀಸ್ಟ್ ಚಿತ್ರಕ್ಕೆ 5ಕ್ಕೆ 4 ಸ್ಟಾರ್‌ಗಳನ್ನು ಕೊಟ್ಟಿದ್ದಾರೆ. ಹಾಗಾಗಿ ಯಾವ ಚಿತ್ರಕ್ಕೆ ಹೆಚ್ಚು ಓಟು ಎನ್ನುವುದನ್ನು ಸ್ಪಷ್ಟವಾಗಿ ಹೇಳುವಂತೆ ಇದೆ.
Dr.Veerendra Heggade: ಯಶ್ ಬಳಿ ಮಕ್ಕಳಿಗೆ ವಯಸ್ಸೆಷ್ಟು ಎಂದು ಕೇಳಿದ ಡಾ. ಡಿ.ವೀರೇಂದ್ರ ಹೆಗ್ಗಡೆ

ಕೆಜಿಎಫ್ 2 ಇಂದ ಬೀಸ್ಟ್ ಕಲೆಕ್ಷನ್ ಪರಿಣಾಮ!
ಕೆಜಿಎಫ್ 2 ಮತ್ತು ಬಿಸ್ಟ್ ಒಂದು ದಿನದ ಅಂತರದಲ್ಲಿ ತೆರೆಗೆ ಬರುತ್ತಾ ಇವೆ. ಚಿತ್ರತಂಡಗಳಿಗೆ ತಮ್ಮ ಚಿತ್ರಗಳ ಬಗ್ಗೆ ನಂಬಿಕೆ ಇದೆ. ಆದರೂ ಕೂಡ ಕೆಜಿಎಫ್ 2 ಚಿತ್ರದ ಕ್ರೇಜ್ ಮುಂದೆ ಬೀಸ್ಟ್ ಮಂಕಾಗಿದೆ. ಚಿತ್ರ ರಿಲೀಸ್ ಆದ ಮೊದಲ ದಿನ ಮಾತ್ರವೇ ಬೀಸ್ಟ್ ಹವಾ ಇರಲಿದೆ. ಎರಡನೆ ದಿನಕ್ಕೆ ಕೆಜಿಎಫ್ ಎಂಟ್ರಿ ಕೊಟ್ಟರೆ. ಬೀಸ್ಟ್ ಬಾಕ್ಸಾಫೀಸ್ ಮೇಲು ಪರಿಣಾಮ ಬೀರಲಿದೆ.