»   » ವಿಮರ್ಶೆ: ಭಾವನೆಯಲ್ಲಿ ಮುಳುಗಿಸುವ ಪ್ರೇಮ'ರಾಗ'

ವಿಮರ್ಶೆ: ಭಾವನೆಯಲ್ಲಿ ಮುಳುಗಿಸುವ ಪ್ರೇಮ'ರಾಗ'

Posted By:
Subscribe to Filmibeat Kannada

''ಪ್ರೀತಿಗೆ ಕಣ್ಣಿಲ್ಲ''......ಈ ಮಾತು ಪ್ರೀತಿ ಮಾಡುವ ಪ್ರೇಮಿಗಳ ಮಾತೃಭಾಷೆ ಅಂದ್ರೆ ತಪ್ಪಾಗಲಾರದು. ಪ್ರೀತಿಗೆ ಕಣ್ಣಿದಿಯಾ ಇಲ್ವೋ ಗೊತ್ತಿಲ್ಲ. ಆದ್ರೆ, ಕಣ್ಣೇ ಇಲ್ಲದವರು ಪ್ರೀತಿ ಮಾಡಿದರೇ ಹೇಗಿರುತ್ತೆ ಎಂಬುದೇ 'ರಾಗ'. ಹೌದು, ಇಬ್ಬರು ಅಂಧರ ಕಲ್ಮಶವಿಲ್ಲದ ಪ್ರೀತಿಯ ಮೂಲಕ ನೋಡುಗರ ಹೃದಯದಲ್ಲಿ ಒಂದು ಪ್ರೇಮರಾಗ ಮೂಡಿಸುವಲ್ಲಿ ಗೆದ್ದಿದ್ದಾರೆ. 'ರಾಗ' ಚಿತ್ರದ ಪೂರ್ತಿ ವಿಮರ್ಶೆ ಮುಂದೆ ಓದಿ

Rating:
3.5/5

ಚಿತ್ರ: ರಾಗ
ನಿರ್ಮಾಣ: ಮಿತ್ರ ಎಂಟರ್ ಟೈನರ್ಸ್ ಸಿನಿ ಕಂಬೈನ್ಸ್
ಚಿತ್ರಕಥೆ-ನಿರ್ದೇಶನ: ಪಿ.ಸಿ ಶೇಖರ್
ಸಂಗೀತ ನಿರ್ದೇಶನ: ಅರ್ಜುನ್ ಜನ್ಯ
ಛಾಯಾಗ್ರಹಣ: ವೈದಿ.ಎಸ್
ಸಂಕಲನ: ಕೆ.ಎಂ.ಪ್ರಕಾಶ್
ತಾರಾಗಣ: ಮಿತ್ರ, ಭಾಮಾ, ಅವಿನಾಶ್, ರಮೇಶ್ ಭಟ್, ಜೈಜಗದೀಶ್, ಕಡ್ಡಿಪುಡಿ ಚಂದ್ರು ಮತ್ತು ಇತರರು.
ಬಿಡುಗಡೆ: ಏಪ್ರಿಲ್ 21, 2017

ಪ್ರೇಮವೇ 'ರಾಗ'ದ ಶಕ್ತಿ

'ರಾಗ' ಕಂಪ್ಲೀಟ್ ಪ್ರೇಮಕಥೆ. ಮೊದಲ ದೃಶ್ಯದಿಂದ ಕೊನೆಯ ದೃಶ್ಯದವರೆಗೂ ಪ್ರೇಕ್ಷಕರನ್ನ ಪ್ರೇಮರಾಗದಲ್ಲಿ ಮುಳುಗಿಸುವ ಕ್ಲಾಸ್ ಸಿನಿಮಾ. ಹುಡುಗಿ ಮತ್ತು ಹುಡುಗನ ಪ್ರೀತಿಯ ಜೊತೆ, ತಂದೆ-ಮಗಳ ಪ್ರೀತಿ, ಗಂಡ-ಹೆಂಡತಿ ಪ್ರೀತಿ ಮತ್ತು ಸ್ನೇಹಿತರ ನಡುವಿನ ಪ್ರೀತಿಯನ್ನ ಕೂಡ ರಾಗದಲ್ಲಿ ಬಿಂಬಿಸಿದೆ.[ಕನ್ನಡ ಚಿತ್ರರಂಗದ ಮತ್ತೊಂದು 'ಅದ್ಭುತ' ಮಿತ್ರನ 'ರಾಗ'! ]

ಇಬ್ಬರು ಅಂಧರ ಮುಗ್ದ ಪ್ರೀತಿ

ತಂದೆ-ತಾಯಿ, ಆಸ್ತಿ, ಪಾಸ್ತಿ, ಆಸೆ, ಆಮಿಷವಿಲ್ಲದೆ ಆಸ್ಪತ್ರೆ ಎದುರು ಟೆಲಿಫೋನ್ ಬೂತ್ ಇಟ್ಟುಕೊಂಡಿರುವ ಕುರುಡ ವ್ಯಕ್ತಿ ಮಿತ್ರ. ಸುಂದರವಾದ ಸಮಾಜದಲ್ಲಿ ತನ್ನದೇ ಒಂದು ಸಾಮ್ರಾಜ್ಯವನ್ನ ಕಟ್ಟಿಕೊಂಡು ಜೀವನ ನಡೆಸುವ ಹೃಯದವಂತ. ಮತ್ತೊಂದೆಡೆ ಚಿಕ್ಕವಯಸ್ಸಿನಲ್ಲಿ ಆನಾರೋಗ್ಯದಿಂದ ಕಣ್ಣು ಕಳೆದುಕೊಂಡಿರುವ ಅನು (ಭಾಮಾ). ಆಗರ್ಭ ಶ್ರೀಮಂತನ ಮುದ್ದಿನ ಮಗಳು. ಆಕಸ್ಮಾತ್ ಆಗಿ ಹೃಯದ ಶ್ರೀಮಂತ ಮಿತ್ರನಿಗೆ ಸಿರಿವಂತನ ಮಗಳು ಅನು ಪರಿಚಯವಾಗಿ ಸ್ನೇಹ ಚಿಗುರೊಡೆಯಿತ್ತೆ. ಆ ಸ್ನೇಹ ಪ್ರೀತಿಯಾಗುತ್ತೆ.

ಕುತೂಹಲ ಉಳಿಸಿಕೊಳ್ಳುವ ಕ್ಲೈಮ್ಯಾಕ್ಸ್

ಇಬ್ಬರು ಅಂಧರು ಒಬ್ಬರಿಗೊಬ್ಬರು ಆಸೆರೆಯಾಗಿ, ತಮ್ಮದೇ ಆದ ಪ್ರಪಂಚದಲ್ಲಿ ಪ್ರೀತಿಯ ಸಿಂಚನದಲ್ಲಿ ಸಿಲುಕಿಕೊಳ್ಳುತ್ತಾರೆ. ಈ ಮಧ್ಯೆ ಅನುಗೆ ಕಣ್ಣು ಕೊಡಿಸಬೇಕು ಎಂದು ಅವರ ತಂದೆ ಶಸ್ತ್ರಚಿಕಿತ್ಸೆ ಮಾಡಿಸಲು ಎಲ್ಲ ತಯಾರಿ ಮಾಡುತ್ತಿರುತ್ತಾರೆ. ಹಾಗಾದ್ರೆ, ಅನುಗೆ ಕಣ್ಣು ಬರುತ್ತಾ? ಕಣ್ಣು ಬಂದ ಮೇಲೂ ಸುರದ್ರೂಪಿ ಮಿತ್ರನನ್ನ ಸ್ವೀಕರಿಸುತ್ತಾಳ? ಅದಕ್ಕೆ ಅವರ ತಂದೆ ಒಪ್ಪುತ್ತಾರ? ಕಣ್ಣು ಇಲ್ಲದೆ ಇದ್ದಾಗ ಹುಟ್ಟುವ ಪ್ರೀತಿ, ಕಣ್ಣು ಬಂದ ಮೇಲೆ ಉಳಿಯುತ್ತಾ ಎಂಬುದನ್ನ ನೀವು ಚಿತ್ರದಲ್ಲಿ ನೋಡಬೇಕು.

ಮಿತ್ರ ಅಭಿನಯ ಹೇಗಿದೆ?

ಅಂಧನ ಪಾತ್ರದಲ್ಲಿ ನಟ ಮಿತ್ರ ಅದ್ಭುತವಾಗಿ ನಟಿಸಿದ್ದಾರೆ. ಪಾತ್ರಕ್ಕೆ ತಕ್ಕ ಮ್ಯಾನರಿಸಂ, ಸ್ಟೈಲ್, ವೇಷಭೂಷಣ ಹೀಗೆ ಎಲ್ಲದರಲ್ಲೂ ಮೇಕ್ ಓವರ್ ಮಾಡಿಕೊಂಡು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಒಬ್ಬ ಹಾಸ್ಯನಟರಾಗಿದ್ದ ಮಿತ್ರ, ನಾಯಕನಾಗಿಯೂ ಪ್ರಶಂಸೆಗಳಿಸುವಲ್ಲಿ ಗೆದ್ದಿದ್ದಾರೆ.

ಭಾಮಾಗೆ ಫುಲ್ ಮಾರ್ಕ್ಸ್

ನಟಿ ಭಾಮಾ ಕೂಡ ಕುರುಡಿ ಪಾತ್ರದಲ್ಲಿ ಅಮೋಘವಾಗಿ ಅಭಿನಯಿಸಿದ್ದಾರೆ. ಮಿತ್ರ ಅವರಿಗೆ ಉತ್ತಮವಾಗಿ ಸಾಥ್ ಕೊಟ್ಟಿದ್ದು, ಎಲ್ಲೂ ಕೊರತೆಯಾಗದ ಹಾಗೆ ಚಿತ್ರಕ್ಕೆ ಸಪೋರ್ಟ್ ಮಾಡಿದ್ದಾರೆ. ಹೀಗಾಗಿ, ಭಾಮಾ ಅವರ ನಟನೆಗೆ ಫುಲ್ ಮಾರ್ಕ್ಸ್ ಕೊಡಲೇಬೇಕು.

ಉಳಿದವರು ಪಾತ್ರ ಹೇಗೆ.....

ಭಾಮಾ ಅವರ ತಂದೆ ಪಾತ್ರದಲ್ಲಿ ಅವಿನಾಶ್ ಕಾಣಿಸಿಕೊಂಡಿದ್ದು, ಇಷ್ಟವಾಗುತ್ತಾರೆ. ರಮೇಶ್ ಭಟ್, ಜೈಜಗದೀಶ್, ಕಡ್ಡಿಪುಡಿ ಚಂದ್ರು ಕೂಡ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಇನ್ನು ವಿಶೇಷ ಪಾತ್ರದಲ್ಲಿ ನಟಿ ರೂಪಿಕಾ ಮತ್ತು ಟಿವಿ ನಿರೂಪಕ ಚಂದನ್ ಶರ್ಮಾ ಕೂಡ ಹೀಗೆ ಬಂದು ಹಾಗೆ ಹೋಗುತ್ತಾರೆ.

ನಿರ್ದೇಶನದ ಬಗ್ಗೆ

ಪಿ.ಸಿ ಶೇಖರ್ ಅವರು ಈ ಹಿಂದಿನ ಸಿನಿಮಾಗಳಿಗಿಂತ 'ರಾಗ' ವಿಭಿನ್ನ ಸಿನಿಮಾ. ಕಮರ್ಷಿಯಲ್ ಎಲಿಮೆಂಟ್ಸ್ ಗಳಿಂದ ಹೊರಬಂದು ಒಂದು ಹೊಸ ಪ್ರಯತ್ನ ಮಾಡಿದ್ದಾರೆ. ತಾಂತ್ರಿಕವಾಗಿಯೂ ಚಿತ್ರವನ್ನ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.

ಅರ್ಜುನ್ ಜನ್ಯ ಸಂಗೀತ

ರಾಗ ಚಿತ್ರದಲ್ಲಿ ಹೆಚ್ಚು ಗಮನ ಸೆಳೆಯುವುದು ಹಿನ್ನಲೆ ಸಂಗೀತ ಮತ್ತು ಕ್ಯಾಮೆರಾ ವರ್ಕ್. ಅರ್ಜುನ್ ಜನ್ಯ ಅವರ ಇಂಪಾದ ಸಂಗೀತ ದೃಶ್ಯಗಳಿಗೆ ಮೆರಗು ನೀಡಿದೆ. ವೈದಿ.ಎಸ್ ಅವರ ಸಿನಿಮಾಟೋಗ್ರಫಿ ಕೂಡ ಅಷ್ಟೇ ಅಚ್ಚುಕಟ್ಟಾಗಿದ್ದು, ಪ್ರತಿಯೊಂದು ದೃಶ್ಯಗಳನ್ನ ಅದ್ದೂರಿಯಾಗಿಸಿದೆ.

ಮನರಂಜನೆ ಕಮ್ಮಿ!

'ರಾಗ' ಚಿತ್ರದಲ್ಲಿ ಮನರಂಜನೆ ಕಮ್ಮಿ. ಭಾವನೆ ಹೆಚ್ಚು. ಇಡೀ ಚಿತ್ರವನ್ನ ಭಾವನೆಯ ಮೂಲಕವೇ ತೆಗೆದುಕೊಂಡು ಹೋಗಿರುವುದು ಪ್ರೇಕ್ಷಕರಿಗೂ ಸ್ವಲ್ಪ ಕಷ್ಟವಾಗುತ್ತೆ. ಇನ್ನು ಇಡೀ ಚಿತ್ರ ಕೇವಲ ನಾಲ್ಕೈದು ಪಾತ್ರಗಳ ಮಧ್ಯೆಯೇ ನಡೆಯುವುದು ಕೂಡ ಸ್ವಲ್ಪ ಬೇಸರ ತರಿಸುವುದು. ಅತಿಯಾದ ಭಾವನೆಯಿಟ್ಟು ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆ ಎನಿಸುತ್ತೆ.

ಕ್ಲಾಸಿಕ್ ಸಿನಿಮಾ

ಯಾವುದೇ ಅಬ್ಬರ, ಆಡಂಬರ, ಅಸಹ್ಯ, ಡಬಲ್ ಮೀನಿಂಗ್ ಡೈಲಾಗ್ ಗಳಿಲ್ಲಿದೆ ಮೂಡಿರುವ ಕ್ಲಾಸ್ ಸಿನಿಮಾ. ಸ್ಟಾರ್ಸ್ ಸಿನಿಮಾಗಳಲ್ಲಿ ನಿರೀಕ್ಷೆ ಮಾಡುವಂತಹ ಮಾಸ್ ಡೈಲಾಗ್ ಗಳು, ಮಾಸ್ ಸಾಂಗ್ಸ್, ವಿಲನ್ ಗಳು ಇಲ್ಲಿ ಇಲ್ಲ. ಕೊನೆಯದಾಗಿ ಹೇಳುವುದಾದರೇ ಮನರಂಜನೆ ಕಮ್ಮಿಯಿದ್ದರೂ, ಭಾವನೆಗಳಿಂದ ಹಿಡಿದಿಡುತ್ತೆ.

English summary
Kannada Actor Mithra and Kannada Actress Bhama Starrer Kannada Movie 'Raaga' has hit the screens today (April 21st). Here is the Complete Review of Raaga.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada