For Quick Alerts
  ALLOW NOTIFICATIONS  
  For Daily Alerts

  ಚಿತ್ರ ವಿಮರ್ಶೆ: ಶೀರ್ಷಿಕೆಯಲ್ಲಿ ದಿಲ್ ಕಥೆಯಲ್ಲಿ ಡಲ್

  By ಉದಯರವಿ
  |

  ಈ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದದ್ದು ರಾಧಿಕಾ ಪಂಡಿತ್ ಜೊತೆಗೆ ಚಿತ್ರದ ಟೈಟಲ್. ಆದರೆ ಚಿತ್ರ ನೋಡಿದ ಮೇಲೆ ಇದು ನಿಜಕ್ಕೂ ರಾಧಿಕಾ ಪಂಡಿತ್ ಅಭಿನಯದ ಚಿತ್ರವೇ ಎಂಬ ಅನುಮಾನ ಬರುತ್ತದೆ. ಈ ರೀತಿಯ ಸತ್ವವೇ ಇಲ್ಲದ ಪಾತ್ರವನ್ನು ಮಾಡಲು ರಾಧಿಕಾ ಪಂಡಿತ್ ಅವರೇ ಬೇಕಾಗಿತ್ತಾ?

  ಕಾಲೇಜು ಯುವಕರನ್ನು ಉದ್ದೇಶವಾಗಿಟ್ಟುಕೊಂಡು ಹೆಣೆದಂತಹ ಕಥೆ ಇದು. ಚಿತ್ರದ ಶೀರ್ಷಿಕೆಯಲ್ಲಿರುವ 'ದಿಲ್' ಕಥೆಯಲ್ಲಿಲ್ಲ. ಕಾಲೇಜು ಯುವಕ ಯುವತಿಯೊಬ್ಬಳ ನಡುವಿನ ಲವ್ ಸ್ಟೋರಿ ಇದು. ಪ್ರೇಮ್ (ಸುಮಂತ್) ಮತ್ತು ಪ್ರೀತಿ (ರಾಧಿಕಾ ಪಂಡಿತ್) ಇಲ್ಲಿನ ಪ್ರೇಮಿಗಳು.

  ಇವರಿಬ್ಬರ ಲವ್ ಸ್ಟೋರಿಯಲ್ಲಿ ನಾನಾ ಅಡ್ಡಿ ಆತಂಕಗಳು, ತಿರುವುಗಳು, ಯೂ ಟರ್ನ್ ಗಳು ಎದುರಾಗುತ್ತವೆ. ಕಡೆಗೆ ಇಬ್ಬರೂ ಒಂದಾಗುತ್ತಾರಾ? ಎಂಬುದೇ ಚಿತ್ರದ ಕಥಾಹಂದರ. ಕಾಲೇಜು ಪೋರನಾಗಿ ಸುಮಂತ್ ಸ್ಟೈಲಿಶ್ ಆಗಿ ಕಾಣುತ್ತಾರೆ. ಫೈಟ್ ಗಳಲ್ಲೂ ಅಷ್ಟೇ ಮಿಂಚಿದ್ದಾರೆ. ಆದರೆ ಅಭಿನಯದಲ್ಲಿ ಇನ್ನೂ ಪಳಗಬೇಕಾಗಿದೆ.

  ಚಿತ್ರ: ದಿಲ್ ವಾಲ

  ನಿರ್ಮಾಪಕರು: ಶೈಲೇಂದ್ರಬಾಬು

  ರಚನೆ, ನಿರ್ದೇಶನ: ಅನಿಲ್ ಕುಮಾರ್

  ಸಂಗೀತ: ಅರ್ಜುನ್ ಜನ್ಯ

  ಛಾಯಾಗ್ರಹಣ: ಸುಧಾಕರ್.ಎಸ್.ರಾಜ್

  ಸಂಕಲನ: ಲಕ್ಷ್ಮಣ್ ರೆಡ್ಡಿ

  ಸಾಹಿತ್ಯ: ಯೋಗರಾಜ್ ಭಟ್, ಆನಂದಪ್ರಿಯ

  ನೃತ್ಯ ನಿರ್ದೇಶನ: ಮುರಳಿ, ನಾಗೇಶ್

  ಸಾಹಸ: ಪಳನಿರಾಜ್, ಕೆ.ಡಿ.ವೆಂಕಟೇಶ್

  ತಾರಾಬಳಗ: ಸುಮಂತ್ ಶೈಲೇಂದ್ರ, ರಾಧಿಕಾ ಪಂಡಿತ್, ಜೈ ಜಗದೀಶ್, ವೀಣಾ ಸುಂದರ್, ರಮೇಶ್ ಭಟ್, ಶರತ್ ಲೋಹಿತಾಶ್ವ, ರವಿಶಂಕರ್, ಸಾಧು ಕೋಕಿಲ ಮುಂತಾದವರು.

  ಕಥೆಯಲ್ಲಿ ವೇಗವಿಲ್ಲ ನಿರೂಪಣೆಯಲ್ಲಿ ಬಿಗಿ ಇಲ್ಲ

  ಕಥೆಯಲ್ಲಿ ವೇಗವಿಲ್ಲ ನಿರೂಪಣೆಯಲ್ಲಿ ಬಿಗಿ ಇಲ್ಲ

  ಚಿತ್ರದ ಮೊದಲರ್ಧದ ಕಥೆ ಕಾಲೇಜು ಸುತ್ತ ಸುತ್ತುವುದಕ್ಕಷ್ಟೇ ಸೀಮಿತವಾಗಿದೆ. ಕಥೆಯಲ್ಲಿ ವೇಗವಿಲ್ಲದೆ ಇರುವುದು ಇನ್ನೊಂದು ಮೈನಸ್ ಪಾಯಿಂಟ್. ಬಿಗಿಯಾದ ನಿರೂಪಣೆ ಇಲ್ಲದೆ ಕಥೆ ಅಲ್ಲಲ್ಲಿ ಹಳಿ ತಪ್ಪಿದೆ. ನಿರ್ದೇಶಕ ಅನಿಲ್ ಕುಮಾರ್ ಅವರ ಒಟ್ಟಾರೆ ಆಶಯ ಚೆನ್ನಾಗಿದೆ. ಆದರೆ ಅದನ್ನು ತೆರೆಯ ಮೇಲೆ ಸಮರ್ಥವಾಗಿ ತರುವಲ್ಲಿ ಸೋತಿದ್ದಾರೆ.

  ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ರಾಧಿಕಾ

  ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ರಾಧಿಕಾ

  ರಾಧಿಕಾ ಪಂಡಿತ್ ಅವರ ಪಾತ್ರ ಅಭಿನಯಕ್ಕೆ ಒತ್ತು ನೀಡುವ ಪಾತ್ರವಲ್ಲದ ಕಾರಣ ಅವರು ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಎಂದಷ್ಟೇ ಹೇಳಬಹುದು. ತಮ್ಮ ಅಭಿನಯದ ಸಾಮರ್ಥ್ಯವನ್ನು ಬೇಕಂತಲೆ ಅವರು ಕೆಳಹಂತಕ್ಕ್ಕೆ ಇಳಿಸಿಕೊಂಡರೆ ಎಂಬ ಅನುಮಾನವೂ ಬರುತ್ತದೆ.

  ರಾಧಿಕಾ ಅವರದು ಸೀದಾ ಸಾದಾ ಪಾತ್ರ

  ರಾಧಿಕಾ ಅವರದು ಸೀದಾ ಸಾದಾ ಪಾತ್ರ

  ಬಹುತೇಕ ಚಿತ್ರಗಳಲ್ಲಿ ಕಾಡುವಂತೆ ರಾಧಿಕಾ ಪಂಡಿತ್ ಪಾತ್ರ ಇಲ್ಲಿ ಕಾಡುವುದೂ ಇಲ್ಲ, ಕೆಣಕುವುದೂ ಇಲ್ಲ. ಒಂದು ಸೀದಾಸಾದಾ ಪಾತ್ರ ಎಂಬುದು ನಿಜಕ್ಕೂ ಬೇಸರದ ಸಂಗತಿ. ಶೀರ್ಷಿಕೆಯಲ್ಲಿ ದಿಲ್ ಆದರೆ ಕಥೆಯಲ್ಲಿ ಡಲ್.

  ಚಿತ್ರದ ಪ್ಲಸ್ ಪಾಯಿಂಟ್ ಗಳು ಹೀಗಿವೆ

  ಚಿತ್ರದ ಪ್ಲಸ್ ಪಾಯಿಂಟ್ ಗಳು ಹೀಗಿವೆ

  ಈ ಚಿತ್ರದಲ್ಲಿ ಮೆಚ್ಚಲೇಬೇಕಾದ ಅಂಶಗಳೆಂದರೆ ಒಂದು ಸುಮಂತ್ ಅವರನ್ನು ಯಂಗ್ ಅಂಡ್ ಎನರ್ಜಿಟಿಕ್ ಆಗಿ ತೋರಿಸಿರುವ ರೀತಿ. ಸುಧಾಕರ್ ಎಸ್.ರಾಜ್ ಅವರ ಛಾಯಾಗ್ರಹಣ ಕಲರ್ ಫುಲ್ ಆಗಿದೆ. ಚಿತ್ರದಲ್ಲಿ ಬಳಸಿಕೊಂಡಿರುವ ಕಾಸ್ಟ್ಯೂಮ್ಸ್ ಸಹ ರಿಚ್ ಆಗಿವೆ. ಇನ್ನು ಫೈಟ್ಸ್ ಗಾಗಿಯೂ ಸಾಕಷ್ಟು ವೆಚ್ಚ ಮಾಡಿದ್ದಾರೆ.

  ತಮ್ಮದೇ ಆದ ಮ್ಯಾನರಿಸಂನಲ್ಲಿ ರವಿಶಂಕರ್

  ತಮ್ಮದೇ ಆದ ಮ್ಯಾನರಿಸಂನಲ್ಲಿ ರವಿಶಂಕರ್

  ಪೋಷಕ ಪಾತ್ರಗಳಲ್ಲಿ ರವಿಶಂಕರ್ ಹಾಗೂ ಶರತ್ ಲೋಹಿತಾಶ್ವ ತಮ್ಮದೇ ಆದಂತಹ ಮ್ಯಾನರಿಸಂ ಮೂಲಕ ಗಮನಸೆಳೆಯುತ್ತಾರೆ. ದೇವರಾಜ್ ಹಾಗೂ ಜಯಸಿಂಹನಾಗಿ ರೌಡಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಇಬ್ಬರೂ ಕಡೆಗೆ ತಮ್ಮ ಹಳೆ ದ್ವೇಷ ಮರೆತು ಒಂದಾಗುತ್ತಾರೆ.

  ಪೋಷಕ ಪಾತ್ರಗಳಲ್ಲಿ ಯಾರ್ಯಾರು

  ಪೋಷಕ ಪಾತ್ರಗಳಲ್ಲಿ ಯಾರ್ಯಾರು

  ಇನ್ನು ಪ್ರೀತಿ (ರಾಧಿಕಾ) ತಂದೆತಾಯಿ ಪಾತ್ರಗಳಲ್ಲಿ ಜೈಜಗದೀಶ್ ಹಾಗೂ ವೀಣಾ ಸುಂದರ್ ಅಭಿನಯಿಸಿದ್ದಾರೆ. ಅಲ್ಲಲ್ಲಿ ರವಿಶಂಕರ್ ಅವರ ಕಾಮಿಡಿ, ಜೊತೆಗೆ ಸಾಧು ಕೋಕಿಲ ಅವರ ಹಾಸ್ಯ ಪ್ರೇಕ್ಷಕರನ್ನು ಕೊಂಚ ರಿಲ್ಯಾಕ್ಸ್ ಮಾಡುತ್ತದೆ.

  ಇದನ್ನು ತೀರಾ ತಳ್ಳಿಹಾಕುವ ಸಿನಿಮಾ ಅಲ್ಲ

  ಇದನ್ನು ತೀರಾ ತಳ್ಳಿಹಾಕುವ ಸಿನಿಮಾ ಅಲ್ಲ

  ಕೊನೆ ಕೊನೆಗೆ ಕಥೆಯನ್ನು ಸಂಪೂರ್ಣವಾಗಿ ಹೇಳಲಿಕ್ಕಾಗದೆ ನಿರ್ದೇಶಕರು ತಾರಾತುರಿಯಲ್ಲಿ ಮುಗಿಸಿದ್ದಾರೆ. ಹಾಗಂತ ಇದನ್ನು ತೀರಾ ತಳ್ಳಿಹಾಕುವ ಸಿನಿಮಾ ಅಲ್ಲ. ಕಾಲೇಜು ಯುವಕರಿಗೆ ಬೇಕಾದ ಒಂದಷ್ಟು ಮಸಾಲೆ ಅಂಶಗಳು ಚಿತ್ರದಲ್ಲಿವೆ. ಸಾಧ್ಯವಾದರೆ ಒಮ್ಮೆ ನೋಡಿ.

  English summary
  Kannada film Dilwala review. Actress Radhika Pandit and Sumanth Shailendra lead. Anil KUmar has directed the film along with penning the story-screenplay and dialogues.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X