For Quick Alerts
ALLOW NOTIFICATIONS  
For Daily Alerts

ಚಲನಚಿತ್ರ ವಿಮರ್ಶೆ : ಜಗ್ಗೇಶ್ ನಿರ್ದೇಶನದ 'ಗುರು'

By *ವಿನಾಯಕರಾಮ್ ಕಲಗಾರು
|

Rating:
3.5/5
ಬಹುಶಃ ಈ ಸಿನಿಮಾ ಡೈರೆಕ್ಟ್ ಮಾಡಿದ್ದು ಬೇರೆ ಯಾರೋ ಪಳಗಿದ ನಿರ್ದೇಶಕನೇ ಇರಬಹುದು ಅನ್ನೋ ಅನುಮಾನ ನಿಮ್ಮ ಕಾಡಹತ್ತುವುದು ಜಗ್ಗೇಶ್ ನಿರ್ದೇಶನ ಮಾಡಿರುವ ಗುರು ಚಿತ್ರವನ್ನು ವೀಕ್ಷಿಸುತ್ತಾ ಹೋದಂತೆ. ಇದು ಜಗ್ಗೇಶ್ ಅವರೇ ನಿರ್ದೇಶನದ ಸಿನಿಮಾ ಹೌದಾ ಎಂದು ನಿಮಗೆ ಅನಿಸದೆ ಇರದು. Because, ಜಗ್ಗೇಶ್ ಇರುವುದೇ ಹಾಗೆ, ತರಲೆ-ತಮಾಷೆಗಳೇ ಅವರ ಆಸ್ತಿ. ಕಾಮಿಡಿ ಬಿಟ್ಟು ನಮ್ಮ ನವರಸನಾಯಕನಿಗೆ ಬೇರೆ ಜಗತ್ತು ಗೊತ್ತಿಲ್ಲ. ಜಗತ್ ಕಿಲಾಡಿ ಚಿತ್ರದಿಂದ ಹಿಡಿದು ಮೊನ್ನೆ ಮೊನ್ನೆಯ ಮಠ-ಮಾನ್ಯಗಳಲ್ಲಿ ಸುತ್ತಾಡಿಕೊಂಡಿದ್ದ ಜಗ್ಗೇಶ್ ಆಶ್ಚರ್ಯಕರ ರೀತಿಯಲ್ಲಿ ನಿರ್ದೇಶಕರಾಗಿ ಬದಲಾಗಿದ್ದಾರೆ.

ಗುರು ಒಂದು ಸಸ್ಪೆನ್ಸ್ ಜೊತೆಗೆ ಆಕ್ಷನ್ ಥ್ರಿಲ್ಲರ್ ಸಿನಿಮಾ. ಜಗ್ಗೇಶ್ ಅವರ ಮಗ ಗುರುರಾಜ್ ಇಡೀ ಚಿತ್ರ ಆವರಿಸಿದ್ದಾರೆ. ಅವರ ಮೇಲೆ ಸಾಗುವ ಕಥೆಗೆ ಅಲ್ಲಲ್ಲಿ ಹತ್ತಾರು ತಿರುವುಗಳು. ಮಾಡದೇ ಇರುವ ಮರ್ಡರ್ ಮಿಸ್ಟರಿಗಳು. ಪೊಲೀಸ್ ಇಲಾಖೆ ತಮ್ಮ ಲಾಭಕ್ಕಾಗಿ ಹೇಗೆ ಪೋಲಿ ಹುಡುಗರನ್ನು ಬಳಸಿಕೊಂಡು ಪ್ರೇಕ್ಷಕರನ್ನೇ ಇಕ್ಕಟ್ಟಿಗೆ ಸಿಕ್ಕಿಸುತ್ತದೆ ಎನ್ನುವ ಝಲಕ್ಕುಗಳು ಇಡೀ ಚಿತ್ರವನ್ನು ಅದ್ದೂರಿಯಾಗಿ ಕಾಣುವಂತೆ ಮಾಡುತ್ತದೆ.

Kannada film Guru movie review

ಅಮಾಯಕ ಹುಡುಗನ್ನು ಕೊನೆಗೆ ಮೆಂಟಲ್ ಎಂದು ತೋರಿಸುವ ಹಂತದಲ್ಲಿ ಜಗ್ಗೇಶ್ ಗೆಲ್ಲುತ್ತಾರೆ. ಮಗ ಗುರುರಾಜ್ ಕುರ್ಚಿಯಲ್ಲಿ ಕುಂತವರನ್ನು ಗೆಲ್ಲುತ್ತಾರೆ. ಮುಂದಿನ ದಿನಗಳಲ್ಲಿ ಜಗ್ಗೇಶ್ ಇಲ್ಲಿ ಪೂರ್ಣಪ್ರಮಾಣದ ನಿರ್ದೇಶಕರಾಗಿ ಬಿಜಿಯಾದರೆ, ಒಂದಷ್ಟು ಕಮರ್ಷಿಯಲ್ ಚಿತ್ರಗಳಿಗೆ ಆಫರ್ ಬಂದರೆ ಅಚ್ಚರಿ ಪಡಬೇಕಾಗಿಲ್ಲ.

ಜಗ್ಗೇಶ್ ಅವರ ಎರಡನೇ ಮಗ ಯತಿರಾಜ್ ಇಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಕ್ಕಳಿಬ್ಬರನ್ನೂ ಅಳತೆಗೂ ಮೀರಿ ದುಡಿಸಿಕೊಂಡಿದ್ದಾರೆ ನಿರ್ದೇಶಕ ಕಮ್ ಅಪ್ಪ ಜಗ್ಗೇಶ್. ಜಗ್ಗೇಶ್ ಪುತ್ರ ಗುರುವಿಗೆ ನಟನೆ ಎನ್ನುವುದು ರಕ್ತಗತವಾಗಿಯೇ ಬಂದಿರುವುದರಿಂದ ಅವರ ಮುಂದಿನ ಭವಿಷ್ಯ ಉಜ್ವಲವಾಗಿದೆ. ಅವರನ್ನು ಸರಿಯಾಗಿ ದುಡಿಸಿಕೊಳ್ಳುವ ತಾಕತ್ತು ಮತ್ತು ಟ್ಯಾಲೆಂಟು ನಮ್ಮವರಿಗೆ ಇರಬೇಕಷ್ಟೇ.

ನಾಯಕಿ ರಶ್ಮಿ ಗೌತಂಗೆ ಹಲ್ಲುಗಿಂಜುವುದನ್ನು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಕಡಿಮೆ ಬಟ್ಟೆಗೆ ಕನ್ನಡದಲ್ಲಿ ಬೆಲೆ ಇಲ್ಲ ಎನ್ನುವ ಸತ್ಯ ಆ ಮಹಾತಾಯಿಗೆ ಗೊತ್ತಾದರೆ ಮುಂದಿನ ದಿನಗಳಲ್ಲಿ ಒಂದಷ್ಟು ಚಿತ್ರಗಳಲ್ಲಿ ಅವಕಾಶ ಸಿಕ್ಕೀತು. ಇಲ್ಲವಾದರೆ ಬಂದಹಾದಿಗೆ ಸುಂಕವೂ ಇಲ್ಲ..ಸುಖವೂ ಇಲ್ಲ ಎಂಬಂತಾದೀತು.

ಸುಧಾರಾಣಿ ಪೊಲೀಸ್ ಪಾತ್ರದಲ್ಲಿ ಸೂಪರ್ರೋ ಸೂಪರ್. ಬಹಳ ದಿನಗಳ ನಂತರ ದೊಡ್ಡ ಹಾಗೂ ವಿಶೇಷ ಪಾತ್ರದಲ್ಲಿ ಅವರು ತೆರೆದುಕೊಂಡಿದ್ದಾರೆ. ಅಂತೆಯೇ ಶೋಭರಾಜ್, ಅಭಿಜಿತ್ ಮೊದಲಾದ ದೊಡ್ಡ ಮಟ್ಟದ ತಾರಾಗಣವೇ ಇರುವುದರಿಂದ, ಇಡೀ ಚಿತ್ರದ ಚಿತ್ರಕಥೆ ವೇಗವಾಗಿರುವುದರಿಂದ ಎಲ್ಲಿಯೂ ಬೋರೇಗೌಡರು ಬೋರ್ ಹೊಡೆಸುವುದಿಲ್ಲ.

ಜಗ್ಗೇಶ್ ಚಿತ್ರಗಳೆಂದರೆ ಮಿನಿಮಮ್ ಗ್ಯಾರಂಟಿ ಎನ್ನುವ ಹಾಗೇ ಅವರ ಮಗನ ಚಿತ್ರವೂ ಮಿನಿಮಮ್ ವಾರಂಟಿ ಜೊತೆ ಗ್ಯಾರಂಟಿ ಕೂಡಾ ಕೊಡಬಹುದು. ಗೋರಂಟಿ ಜೊತೆ ಗೋಗ್ರಾಸ ಸಿಕ್ಕರೆ ನಿಮ್ಮ ಅದೃಷ್ಟ. ವಿನಯ್ ಚಂದ್ರ ಸಂಗೀತದಲ್ಲಿ ಎರಡು ಹಾಡುಗಳು ಚೆನ್ನಾಗಿದೆ.

ನಿರ್ದೇಶನ ಜವಾಬ್ದಾರಿಯನ್ನು ಜಗ್ಗೇಶ್ ಹೊತ್ತಿರುವುದು, ಅವರ ದೊಡ್ಡ ಮಗ ಹೀರೋ, ಇನ್ನೊಬ್ಬ ವಿಲನ್, ಅಂತೆಯೇ ಧರ್ಮಪತ್ನಿ ಪರಿಮಳಾ ಜಗ್ಗೇಶ್ ಅವರು ನಿರ್ಮಾಪಕರಾಗಿರುವುದರಿಂದ ಈ ಗುರು ಚಿತ್ರವನ್ನು ಪ್ಯಾಮಿಲಿ ಪ್ಯಾಕೇಜ್ ಚಿತ್ರ ಎನ್ನಬಹುದಾ?

ಐತಲಕಡಿ ಪಕಡಿ ಜುಮ್ಮಾ.. ಗುರು ಸಿನ್ಮಾ ಒಂದ್ ಸಾರಿ ನೋಡ್ಬಹುದಮ್ಮಾ.. ಆದ್ರೆ ಕಾಮಿಡಿ ಬೇಕೇ ಬೇಕು ಎನ್ನುವವರಿಗೆ ನಮ್ಮ ಬಳಿ ಉತ್ತರವಿಲ್ಲಾ.. ಯಾಕಂದ್ರೆ ಥ್ರಿಲ್ಲರ್ ಮಂಜು ಆಣೆಗೂ ಇದು ಪಕ್ಕಾ ಆಕ್ಷನ್ ಥ್ರಿಲ್ಲರ್..

ಗುರು ಚಿತ್ರದ ಫೋಟೋ ಗ್ಯಾಲರಿ ನೋಡಿದ್ರಾ, ಇಲ್ಲಾಂದ್ರೆ ಇಲ್ಲಿ ಕ್ಲಿಕ್ ಮಾಡಿ.

English summary
Kannada film Guru movie review. Jaggesh has directed this movie for hiw owner banner. His first son Gururaj is a hero and second son Yathiraj is played villian role in this movie.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more