twitter
    For Quick Alerts
    ALLOW NOTIFICATIONS  
    For Daily Alerts

    ಅಭಿಮನ್ಯು ವಿಮರ್ಶೆ: ಕುಟುಂಬ ಸಮೇತ ಹೋಗಿ ನೋಡಿ

    By Harshitha
    |

    ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಬರೋಬ್ಬರಿ ಒಂದು ವರ್ಷದ ಬಳಿಕ ಸ್ಯಾಂಡಲ್ ವುಡ್ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಚಿತ್ರ ಅಭಿಮನ್ಯು ಅದ್ರಲ್ಲೂ, ನಟನೆಯ ಜೊತೆಗೆ ಕಥೆ, ಚಿತ್ರಕಥೆ ರಚಿಸಿ, ಖುದ್ದು ಅರ್ಜುನ್ ಸರ್ಜಾ ನಿರ್ಮಿಸಿ, ನಿರ್ದೇಶಿಸಿರೋ ಚಿತ್ರ ಅಭಿಮನ್ಯು. ಅಂದ್ಮೇಲೆ ಅಭಿಮನ್ಯು ಬಗ್ಗೆ ಎಕ್ಸ್ ಪೆಕ್ಟೇಷನ್ಸ್ ಸ್ವಲ್ಪ ಜಾಸ್ತಿನೇ. ಆ ಎಲ್ಲಾ ಎಕ್ಸ್ ಪೆಕ್ಟೇನ್ಸ್ ನ ರೀಚ್ ಆಗುವುದರಲ್ಲಿ ಅರ್ಜುನ್ ಸರ್ಜಾ ಯಶಸ್ವಿಯಾಗಿದ್ದಾರೆ ಅಂದ್ರೆ, ಅದು ಅತಿಶಯೋಕ್ತಿ ಅಲ್ಲ.

    ಚಿತ್ರದ ನಾಯಕ (ಅಭಿಮನ್ಯು) ಕರಾಟೆ ಮಾಸ್ಟರ್. ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ರೂ, ಲಂಚ ಕೊಡದೆ ಸರ್ಕಾರಿ ಕೆಲಸಕ್ಕೆ ಗುಡ್ ಬೈ ಹೇಳಿರೋ ಸ್ವಾಭಿಮಾನಿ. ಅಪಾರ ದೇಶಭಕ್ತ. ಅಪ್ಪ-ಅಮ್ಮನನ್ನ ಕಳೆದುಕೊಂಡು ಒಂಟಿಯಾಗಿರೋ ಅಭಿಮನ್ಯುಗೆ ಜೀವನದಲ್ಲಿ ದೊಡ್ಡ ಸಾಧನೆ ಮಾಡಬೇಕನ್ನೋ ಹಠ.

    ಹೀಗಿರ್ಬೇಕಾದ್ರೆ, ತಮ್ಮ ಮಗುವಿಗೆ ಉತ್ತಮ ಶಾಲೆಯಲ್ಲಿನ ಶಿಕ್ಷಣ ವೆಚ್ಚವನ್ನ ಭರಿಸಲಾಗದೆ ಬಡಕುಟುಂಬವೊಂದು ಆತ್ಮಹತ್ಯೆಗೆ ಶರಣಾಗುತ್ತೆ. ಖಾಸಗಿ ಶಿಕ್ಷಣ ಸಂಸ್ಥೆಗಳ 'ದುಬಾರಿ ಶಿಕ್ಷಣ ಸಂಸ್ಕೃತಿ' ವಿರುದ್ಧ ಸಿಡಿದೇಳೋ ಅಭಿಮನ್ಯು ಖಾಸಗಿ ಶಿಕ್ಷಣ ಸಂಸ್ಥೆಗಳನ್ನ ರಾಷ್ಟ್ರೀಕರಣಗೊಳಿಸುವ ಹೊಸ ಆಲೋಚನೆ ಮಾಡುತ್ತಾನೆ. ಇದರ ಮಧ್ಯೆ ಅನೇಕ ಟ್ವಿಸ್ಟು, ಟರ್ನ್, ಸ್ವಲ್ಪ ಲವ್ವು, ಸ್ವಲ್ಪ ಕಾಮಿಡಿ.

    ಮಕ್ಕಳ ಶಿಕ್ಷಣ ಹಕ್ಕುಗಳ ಪರ ಏಕಾಂಗಿಯಾಗಿ ಹೋರಾಡೋ ಅಭಿಮನ್ಯು ಶಿಕ್ಷಣ ವ್ಯವಸ್ಥೆಯನ್ನ ಬದಲಿಸೋಕೆ ಭೇಧಿಸುವ ಚಕ್ರವ್ಯೂಹವೇ ಅಭಿಮನ್ಯು ಚಿತ್ರದ ಕಥಾಹಂದರ.

    Rating:
    4.0/5

    ಚಿತ್ರ : ಅಭಿಮನ್ಯು
    ನಿರ್ಮಾಪಕ : ಅರ್ಜುನ್ ಸರ್ಜಾ
    ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ : ಅರ್ಜುನ್ ಸರ್ಜಾ
    ಸಂಗೀತ : ಅರ್ಜುನ್ ಜನ್ಯ
    ಛಾಯಾಗ್ರಹಣ : ಎಚ್.ಸಿ.ವೇಣುಗೋಪಾಲ್
    ಸಂಕಲನ : ಕೆ.ಕೆ.
    ತಾರಾಗಣ : ಅರ್ಜುನ್ ಸರ್ಜಾ, ಸುರ್ವಿನ್ ಚಾವ್ಲಾ, ರಾಹುಲ್ ದೇವ್, ಶಾರ್ಲೆಟ್ ಕ್ಲೇರ್, ಜಹಾಂಗೀರ್ ಮತ್ತು ಇತರರು.

    ಅಭಿಮನ್ಯು ಹೋರಾಟ ಮೆಚ್ಚಬೇಕಾದ್ದೇ..!

    ಅಭಿಮನ್ಯು ಹೋರಾಟ ಮೆಚ್ಚಬೇಕಾದ್ದೇ..!

    ಇಲ್ಲಿವರೆಗೂ ದೇಶದ ಅವ್ಯವಸ್ಥೆ, ಭ್ರಷ್ಟಾಚಾರದ ವಿರುದ್ಧ ಅನೇಕ ಸಿನಿಮಾಗಳು ಬಂದುಹೋಗಿವೆ. ಆದ್ರೆ ಶಿಕ್ಷಣ ವ್ಯವಸ್ಥೆಯಲ್ಲಾಗ್ತಿರೋ 'ವ್ಯಾಪರ'ದ ವಿರುದ್ಧ ದನಿಯೆತ್ತಿರುವವರು ಬಹಳ ಕಡಿಮೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಅಂತ ಸಾಲದ ಶೂಲದಲ್ಲಿ ಸಿಲುಕಿ ನಲುಗುವ ಮಾಧ್ಯಮ ಹಾಗೂ ಕೆಳವರ್ಗದ ಕುಟುಂಬಗಳ ಪ್ರತಿನಿಧಿಯಾಗಿ ಅಭಿಮನ್ಯು ಹೋರಾಟ ವಾಸ್ತವಕ್ಕೂ ಅವಶ್ಯಕ ಅಂತ ಭಾಸವಾಗುತ್ತೆ.

    ವಾಸ್ತವಕ್ಕೆ ತೀರಾ ಹತ್ತಿರ..!

    ವಾಸ್ತವಕ್ಕೆ ತೀರಾ ಹತ್ತಿರ..!

    ಅಭಿಮನ್ಯು ಚಿತ್ರದ ಕಥಾವಸ್ತು ವಾಸ್ತವಕ್ಕೆ ತೀರಾ ಹತ್ತಿರವಾಗಿದೆ. ಚಿತ್ರ ನೋಡುತ್ತಿರುವ ಅದೆಷ್ಟೋ ಕುಟುಂಬಗಳು, 'ಇದು ನಮ್ಮ ಜೀವನದಲ್ಲೂ ನಡೆದಿರೋ ಘಟನೆ' ಅನ್ನುತ್ತಲೇ ಕಣ್ಣಾಲಿಗಳನ್ನ ಒದ್ದೆ ಮಾಡಿಕೊಳ್ಳುತ್ತಾರೆ.

    ಅರ್ಜುನ್ ಸರ್ಜಾ ಆಕ್ಟಿಂಗ್ ಗೆ ಅಭಿಮಾನಿಗಳು ಫಿದಾ

    ಅರ್ಜುನ್ ಸರ್ಜಾ ಆಕ್ಟಿಂಗ್ ಗೆ ಅಭಿಮಾನಿಗಳು ಫಿದಾ

    ಅಭಿಮನ್ಯು ಸಿನಿಮಾ ಮೂಲಕ ಅರ್ಜುನ್ ಸರ್ಜಾ ಈಸ್ ಬ್ಯಾಕ್ ಇನ್ ಆಕ್ಷನ್. ಕಟ್ಟುಮಸ್ತಾದ ಸಿಕ್ಸ್ ಪ್ಯಾಕ್ ಬಾಡಿಯಿಂದ್ಲೇ ಎಂಟ್ರಿಕೊಡೋ ಅರ್ಜುನ್ ಸರ್ಜಾ ಆಕ್ಟಿಂಗ್ ಮತ್ತು ಭರ್ಜರಿ ಆಕ್ಷನ್ ಗೆ ಅಭಿಮಾನಿಗಳು ಶಿಳ್ಳೆ ಹಾಕದೆ ಚಪ್ಪಾಳೆ ತಟ್ಟದೆ ಸುಮ್ಮನೆ ಕೂರೋಲ್ಲ.

    ನಾಟಕೀಯ ಅನಿಸದ ಫೈಟುಗಳು

    ನಾಟಕೀಯ ಅನಿಸದ ಫೈಟುಗಳು

    ಹೇಳಿಕೇಳಿ ಅರ್ಜುನ್ ಸರ್ಜಾ ಆಕ್ಷನ್ ಕಿಂಗ್ ಅಂತ್ಲೇ ಜನಪ್ರಿಯ. ಹೀಗಾಗಿ ಭರ್ಜರಿ ಆಕ್ಷನ್ ಚಿತ್ರದಲ್ಲಿದೆ. ಆದ್ರೆ ಯಾವ ಫೈಟೂ ತೀರಾ ನಾಟಕೀಯ, ಅವಾಸ್ತವಿಕ ಅಂತ ಅನಿಸೋಲ್ಲ. ಎಂದಿನ ಅರ್ಜುನ್ ಸ್ಟೈಲ್ ನಲ್ಲೇ ಕರಾಟೆ ಕಿಕ್ ಜೋರಾಗಿದೆ.

    ಜಹಾಂಗೀರ್ ಕಾಮಿಡಿ ಕಿಕ್

    ಜಹಾಂಗೀರ್ ಕಾಮಿಡಿ ಕಿಕ್

    ಸೆಂಟಿಮೆಂಟ್ ಮತ್ತು ಆಕ್ಷನ್ ಮಧ್ಯೆ ಪ್ರೇಕ್ಷಕರಿಗೆ ಜಹಾಂಗೀರ್ ಕಾಮಿಡಿ ಕೊಂಚ ರಿಲೀಫ್ ಕೊಡುತ್ತೆ. ನಾಯಕಿ ಸುರ್ವೀನ್ ಚಾವ್ಲಾ ಮತ್ತು ಶಾರ್ಲೆಟ್ ಕ್ಲೇರ್ ತೆರೆ ಮೇಲೆ ದಂತದ ಗೊಂಬೆಗಳಷ್ಟೇ ಹೊರತು ನಟನೆಗೆ ಅಷ್ಟು ಅವಕಾಶ ಸಿಕ್ಕಿಲ್ಲ.

    ಕಮಾಲ್ ಮಾಡದ ಅರ್ಜುನ್ ಜನ್ಯ ಮ್ಯೂಸಿಕ್

    ಕಮಾಲ್ ಮಾಡದ ಅರ್ಜುನ್ ಜನ್ಯ ಮ್ಯೂಸಿಕ್

    ಮಸ್ತ್ ಮಸ್ತ್ ಹಾಡುಗಳಿಂದ ಇಲ್ಲಿವರೆಗೂ ಸದ್ದು ಮಾಡಿದ್ದ ಅರ್ಜುನ್ ಜನ್ಯ, ಅಭಿಮನ್ಯು ಚಿತ್ರದಲ್ಲಿ ಕೊಂಚ ಮಂಕಾಗಿದ್ದಾರೆ. ಇದಕ್ಕೆ ಅಭಿಮನ್ಯು ಚಿತ್ರ ಮ್ಯೂಸಿಕಲ್ ಸಿನಿಮಾ ಅಲ್ಲದೇ ಇರೋದು ಕಾರಣವಾಗಿರಬಹುದು. ಆದ್ರೆ, ಅಮರ್ ಮೋಹಿಲೆ ಹಿನ್ನಲೆ ಸಂಗೀತ ಮನಮುಟ್ಟುವಂತಿದೆ.

    ವೇಣು ಕ್ಯಾಮರಾ ಕೈಚಳಕ

    ವೇಣು ಕ್ಯಾಮರಾ ಕೈಚಳಕ

    ಎಚ್.ಸಿ.ವೇಣುಗೋಪಾಲ್ ಕ್ಯಾಮರಾ ವರ್ಕ್ ಪ್ರೇಕ್ಷಕರ ಕಣ್ಣಿಗೆ ಹಬ್ಬ. ಇನ್ನೂ ಕೆ.ಕೆ ಸಂಕಲನ ಚುರುಕಾಗಿದೆ.

    ಉತ್ತಮ ಸಂದೇಶ

    ಉತ್ತಮ ಸಂದೇಶ

    ಫ್ಲ್ಯಾಶ್ ಬ್ಯಾಕ್ ನರೇಷನ್ ಇರೋ ಅಭಿಮನ್ಯು ಚಿತ್ರ ಕಡೆವರೆಗೂ ಪ್ರೇಕ್ಷಕರನ್ನ ಹಿಡಿದಿಡುವಲ್ಲಿ ಯಶಸ್ವಿಯಾಗುತ್ತೆ. ಹಳೇ ಲವ್ ಸ್ಟೋರಿ ಮತ್ತು ಲಾಂಗು ಮಚ್ಚುಗಳ ಅಬ್ಬರದ ನಡುವೆ ಮಕ್ಕಳ ಶಿಕ್ಷಣ ಹಕ್ಕುಗಳ ಬಗ್ಗೆ ಸಂದೇಶ ಸಾರುವ 'ಅಭಿಮನ್ಯು' ಇಡೀ ಫ್ಯಾಮಿಲಿ ಕೂತು ನೋಡಲೇಬೇಕಾದ ಸಿನಿಮಾ.

    English summary
    Kannada movie Abhimanyu review. Action king Arjun Sarja directorial venture Abhimanyu is all about Indian Educational system. Most of the middle class familes in India are struggling to give good education to their children due to heavy donation practise in private schools. Hero Abhimanyu comes up with the idea of nationalising the private schools and there by every child gets better education. The movie stresses on Right to Education and worth watching.
    Friday, November 7, 2014, 18:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X