For Quick Alerts
  ALLOW NOTIFICATIONS  
  For Daily Alerts

  ಆಧುನಿಕ 'ಬಕಾಸುರ'ನ ನೋಡಿದ ವಿಮರ್ಶಕರು ಏನಂದ್ರು.?

  By Bharath Kumar
  |

  ರಾಕ್ ಸ್ಟಾರ್ ರೋಹಿತ್ ಸಿನಿಮಾ, ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸಿರುವ ಸಿನಿಮಾ, ಕಿರುತೆರೆ ನಟಿ ಕಾವ್ಯಗೌಡ ಬಿಗ್ ಸ್ಕ್ರೀನ್ ಮಿಂಚಿರುವ ಸಿನಿಮಾ, ಇದೆಲ್ಲದರ ಜೊತೆ 'ಕರ್ವ' ಚಿತ್ರತಂಡದಿಂದ ತಯಾರಾಗಿರುವ ಸಿನಿಮಾ....ಇಷ್ಟೆಲ್ಲ ವಿಶೇಷತೆಗಳೊಂದಿಗೆ ತೆರೆಕಂಡಿರುವ 'ಬಕಾಸುರ' ತಕ್ಕ ಮಟ್ಟಿಗೆ ಸದ್ದು ಮಾಡುತ್ತಿದೆ.

  ಟೈಟಲ್, ಟ್ರೈಲರ್, ಪಾತ್ರಗಳ ಮೂಲಕ ಗಮನ ಸೆಳೆದಿದ್ದ 'ಬಕಾಸುರ' ಚಿತ್ರವನ್ನ ಜನರು ನೋಡಿದ್ದಾರೆ. ಕೆಲವೊಂದನ್ನ ಇಷ್ಟ ಪಟ್ಟರೇ, ಮತ್ತೆ ಕೆಲವನ್ನ ಕಷ್ಟಪಟ್ಟು ನೋಡಿದ್ದಾರೆ.

  ಹಾಗಿದ್ರೆ, 'ಬಕಾಸುರ' ಚಿತ್ರವನ್ನ ನೋಡಿದ ವಿಮರ್ಶಕರು ಏನಂದ್ರು. ಅವರಿಗೆ ಸಿನಿಮಾದಲ್ಲಿ ಏನೆಲ್ಲಾ ಇಷ್ಟವಾಯ್ತು.? ಕರ್ನಾಟಕ ಜನಪ್ರಿಯ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿರುವ 'ಬಕಾಸುರ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಮುಂದೆ ಓದಿ....

  ದುಡ್ಡೇ ದೊಡ್ಡಪ್ಪ ಅಲ್ಲ ಎನ್ನುವ ಸಿನಿಮಾ

  ದುಡ್ಡೇ ದೊಡ್ಡಪ್ಪ ಅಲ್ಲ ಎನ್ನುವ ಸಿನಿಮಾ

  ''ಈ ಜಗತ್ತಿನಲ್ಲಿ ಮನುಷ್ಯ ಎರಡು ಸಂಗತಿಗಳ ನಡುವೆ ಬದುಕ್ತಾ ಇದ್ದಾನೆ. ಒಂದು ಜೀವನದಲ್ಲಿ ದುಡ್ಡಿಲ್ಲ ಅಂದ್ರೆ ಬದುಕಲು ಆಗೋದಿಲ್ಲ. ಇನ್ನೊಂದು ದುಡ್ಡೇ ಜೀವನ ಅಲ್ಲ. ಬಕಾಸುರ ಸಿನಿಮಾದ ಕಥೆ ಈ ಎರಡೂ ಸಾಲುಗಳನ್ನು ಆಧರಿಸಿದೆ. ಸಾಮಾನ್ಯ ಕಥೆಗೆ, ಒಳ್ಳೆ ಚಿತ್ರಕಥೆ ಮಾಡಿ ನಿರ್ದೇಶಕರು ತಮ್ಮ ಸಿನಿಮಾಗಳನ್ನು ಗೆಲ್ಲಿಸುತ್ತಿದ್ದಾರೆ. ಆ ಸಾಲಿಗೆ ಬಕಾಸುರ ಸೇರುತ್ತದೆ. ದುಡ್ಡೆ ಎಲ್ಲ, ದುಡ್ಡಿಲ್ದೇ ಏನು ಇಲ್ಲ ಎನ್ನುವ ಯುವ ವಕೀಲನ ಪಾತ್ರದಲ್ಲಿ ರೋಹಿತ್ ಚೆನ್ನಾಗಿ ನಟಿಸಿದ್ದಾರೆ. ನಾಯಕಿ ಕಾವ್ಯಾ ಗೌಡ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಬ್ಯಾಗ್ರೌಂಡ್ ಸ್ಕೋರ್ ಇನ್ನು ಚೆನ್ನಾಗಿ ಮಾಡಬಹುದಿತ್ತು. ಒಟ್ಟಾರೆ, ದುಡ್ಡೇ ದೊಡ್ಡಪ್ಪ ಅಲ್ಲ, ಸಂಬಂಧ ಎಂಬುದು ಅದಕ್ಕಿಂತ ಒಂದು ಕೈ ಜಾಸ್ತಿ ಎಂಬುದನ್ನು ರೋಹಿತ್ ಮತ್ತು ತಂಡ ತೆರೆ ಮೇಲೆ ಚೆನ್ನಾಗಿ ತಂದಿದೆ'' - ವಿಜಯ ಕರ್ನಾಟಕ

  ಕ್ರಿಮಿನಲ್‌ ಚಾಣಾಕ್ಷನ ಮೌಲ್ಯ ಮಾಪನ

  ಕ್ರಿಮಿನಲ್‌ ಚಾಣಾಕ್ಷನ ಮೌಲ್ಯ ಮಾಪನ

  ''ಬಕಾಸುರ' ಒಂದೇ ನೋಟಕ್ಕೆ ಅರ್ಥವಾಗುವಂಥದ್ದಲ್ಲ. ಹಾಗಂತ, ಸಿಕ್ಕಾಪಟ್ಟೆ ಗೊಂದಲಗಳೂ ಇಲ್ಲ. ಹಣದ ವ್ಯಾಮೋಹ, ಪ್ರೀತಿ, ವಾತ್ಸಲ್ಯಗಳ ನಡುವಿನ ಚಿತ್ರಣವಿದೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ಲೈಫಲ್ಲಿ ಹಣ ಎಷ್ಟು ಮುಖ್ಯ, ಅದರಿಂದ ಏನೆಲ್ಲಾ ಅನಾಹುತಗಳಾಗುತ್ತವೆ ಅನ್ನುವುದನ್ನು ಎಳೆ ಎಳೆಯಾಗಿ ತೋರಿಸುವ ಮೂಲಕ "ಬಕಾಸುರ'ನ ಆಟಾಟೋಪಗಳನ್ನು ಬಿಡಿಸಿಡುವಲ್ಲಿ ನಿರ್ದೇಶಕರ ಹರಸಾಹಸ ಎದ್ದು ಕಾಣುತ್ತೆ. ರೋಹಿತ್ ಅವರ ಧ್ವನಿ ಬಿಟ್ಟರೆ, ಇಲ್ಲಿ ಬೇರೇನೂ ವಕೌಟ್ ಆಗಿಲ್ಲ. ನಟನೆ, ಫೈಟ್ ನಲ್ಲಿನ್ನೂ ದೂರ ಸಾಗಬೇಕಿದೆ. ಕಾವ್ಯಾ ಗೌಡ ಸಿಕ್ಕ ಪಾತ್ರವನ್ನು ಸಲೀಸಾಗಿ ನಿರ್ವಹಿಸಿದ್ದಾರೆ.'' - ಉದಯವಾಣಿ

  ದುಡ್ಡೇ ದೊಡ್ಡಪ್ಪ, 'ಬಕಾಸುರ' ಅದರ ಅಪ್ಪ.!

  ದುಡ್ಡೇ ದೊಡ್ಡಪ್ಪ, 'ಬಕಾಸುರ' ಅದರ ಅಪ್ಪ.!

  ''ಹಿಂದು ಪುರಾಣದ ಪ್ರಕಾರ, 'ಬಕಾಸುರ' ಒಬ್ಬ ರಾಕ್ಷಸ. ಒಂದು ಬಂಡಿ ಆಹಾರ ಸೇವಿಸುವ ಅಸುರ. ಆದ್ರೆ, ಸಿನಿಮಾದಲ್ಲಿನ 'ಬಕಾಸುರ' ಹಾಗಲ್ಲ. ದುಡ್ಡಿಗಾಗಿ ಬಾಯಿ ಬಿಡುವ ವಕೀಲ. ಲಕ್ಷ ಲಕ್ಷ ಹಣ ಕೊಟ್ಟರೆ 'ರಾಕ್ಷಸ'ರನ್ನೇ ಶಿಕ್ಷೆಯಿಂದ ಪಾರು ಮಾಡುವಷ್ಟು ಚಾಣಾಕ್ಷ. 'ದುಡ್ಡೇ ದೊಡ್ಡಪ್ಪ' ಎನ್ನುವ ಈಗಿನ ಕಾಲದಲ್ಲಿ ಸಂಬಂಧಗಳ ಮಹತ್ವ ಸಾರುವ ಚಿತ್ರ 'ಬಕಾಸುರ'. - ಫಿಲ್ಮಿಬೀಟ್ ಕನ್ನಡ

  ಪೂರ್ತಿ ವಿಮರ್ಶೆ ಓದಿರಿ....ಪೂರ್ತಿ ವಿಮರ್ಶೆ ಓದಿರಿ....

  Waiting for a good time

  Waiting for a good time

  ''The story must sound very interesting. It must have when the story was written. But what it has turned out on screen is quite different. The director seems to be confused about what kind of a film to make. What could have been an edge-of-the-seat thriller is tamed down into a part uneventful suspense, a bit horror slice and a lot of ill-informed court-room drama. In the end, the film is a tepid experience which does not provide the bang for your buck. You will end up feeling a few 'Fs' after watching the film; flunked, frustrated and frittered.'' - Bangalore mirror

  English summary
  Kannada actor, rockstar Rohit and Ravichandran starrer Kannada Movie 'Bakasura' critics review. the movie directed by navneeth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X