»   » ವಿಮರ್ಶೆ: ಗಣೇಶ್ ಒಂಥರಾ ಕಿಕ್ಕು ಪ್ರೇಕ್ಷಕರಿಗೆ ಚಮಕ್ಕು

ವಿಮರ್ಶೆ: ಗಣೇಶ್ ಒಂಥರಾ ಕಿಕ್ಕು ಪ್ರೇಕ್ಷಕರಿಗೆ ಚಮಕ್ಕು

Posted By:
Subscribe to Filmibeat Kannada
Chamak Movie Review | ಚಮಕ್ ಸಿನಿಮಾ ವಿಮರ್ಶೆ | Filmibeat Kannada

ವರ್ಷದ ಕೊನೆಯ ಚಿತ್ರ ಚಮಕ್ ರಾಜ್ಯಾದ್ಯಂತ ರಿಲೀಸ್ ಆಗಿದೆ. ನಿರ್ದೇಶಕ ಸಿಂಪಲ್ ಸುನಿ, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಷ್ಮಿಕಾ ಈ ಮೂವರ ಕಾಂಬಿನೇಶನ್ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರರಾಗಿದ್ದರು. ಟೀಸರ್ ನಲ್ಲೇ ಚಮಕ್ ಕೊಟ್ಟಿದ್ದ ಡೈರೆಕ್ಟರ್ ಸುನಿ ಚಿತ್ರ ಪೂರ್ತಿ ತಮ್ಮ ಸ್ಟೈಲ್ ನಲ್ಲಿ ಚಮಕ್ ನೀಡಿದ್ದಾರೆ. ಸಿನಿಮಾದಲ್ಲಿ ಸ್ಪೆಷಲ್ ಆಗಿರೋ ಟ್ರೀಟ್ಮೆಂಟ್ ಸಿಗುತ್ತೆ ಅಂತ ಥಿಯೇಟರ್ ಒಳ ಹೋದ ಪ್ರೇಕ್ಷಕರು ಚಮಕ್ ತೆಗೆದುಕೊಂಡು ಹೊರ ಬರುತ್ತಿದ್ದಾರೆ.

Rating:
3.5/5

ಚಿತ್ರ : ಚಮಕ್
ನಿರ್ದೇಶನ : ಸುನಿ
ಸಂಗೀತ : ಜೂಡಾ ಸ್ಯಾಂಡಿ
ನಿರ್ಮಾಣ : ಟಿ ಆರ್ ಚಂದ್ರಶೇಖರ್
ಛಾಯಾಗ್ರಹಣ : ಸಂತೋಷ್ ರೈ ಪಾತಾಜೆ
ಕಲಾವಿದರು : ಗಣೇಶ್, ರಶ್ಮಿಕಾ, ಸಾಧುಕೋಕಿಲ, ಗಿರೀಶ್ ಶಿವಣ್ಣ, ಸುಮಿತ್ರ, ರಘುರಾಮ್ ಇನ್ನೂ ಅನೇಕರು

ಚಮಕ್ ನೀಡುವ ಕಥಾಹಂದರ

ಹೆರಿಗೆ ಡಾಕ್ಟರ್ ಆಗಿರುವ ನಾಯಕ ನಟನಿಗೆ ಮದುವೆ ಹೆಣ್ಣು ಹುಡುಕುವ ಕೆಲಸ ನಡೆಯುತ್ತಿರುತ್ತದೆ. ಸಾಲು ಸಾಲು ಹುಡುಗಿಯರನ್ನ ರಿಜೆಕ್ಟ್ ಮಾಡಿದ ನಂತರ ಖುಷ್ ಬಾಳಲ್ಲಿ ನಾಯಕಿ ಖುಷಿ ಎಂಟ್ರಿ. ಗಂಡನಿಗೆ ಗೊತ್ತಾಗದಂತೆ ಹೆಂಡತಿ, ಹೆಂಡತಿಗೆ ಗೊತ್ತಾಗದಂತೆ ಗಂಡ ಚಮಕ್ ನೀಡುತ್ತಾ ಜೀವನ ಸಾಗಿಸುತ್ತಾರೆ. ಇಬ್ಬರ ನಿಜ ರೂಪ ಗೊತ್ತಾಗುವುದಕ್ಕೆ ಹೆಚ್ಚೇನು ಸಮಯ ಬೇಕಾಗೊಲ್ಲ. ಸತ್ಯಾಂಶ ಗೊತ್ತಾದ ನಂತರ ಪರಸ್ಪರ ಒಪ್ಪಿಗೆಯಿಂದ ಡಿವೋರ್ಸ್ ಪಡೆಯಲು ಮುಂದಾಗುತ್ತಾರೆ. ಖುಷ್-ಖುಷಿ ಡಿವೋರ್ಸ್ ಪಡೆಯೋದಕ್ಕೆ ಕಾರಣ ಏನು? ಇಬ್ಬರು ಬೇರೆ ಆದ ನಂತರ ಸಿನಿಮಾದಲ್ಲಿ ಏನು ಚಮಕ್ ಸಿಗುತ್ತೆ? ಮದುವೆ ಮಾಡಿದ ಮನೆಯವರು ಏನು ಮಾಡುತ್ತಾರೆ ? ಹೀಗೆ ಸಾಕಷ್ಟು ಕುತೂಹಲವಿರೋ ಕಥೆಯೇ ಚಮಕ್.

ಮನಮುಟ್ಟುವ ಅಭಿನಯ

ನಾಯಕನಾಗಿ ಅಭಿನಯಿಸಿರೋ ಗಣೇಶ್ ತೆರೆ ಮೇಲೆ ಅದ್ಬುತವಾಗಿ ಕಾಣಿಸುತ್ತಾರೆ. ದಿನೇ ದಿನೇ ಗೋಲ್ಡನ್ ಸ್ಟಾರ್ ಸ್ಕ್ರೀನ್ ಮೇಲೆ ಸಖತ್ ಯಂಗ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಗಣೇಶ್ ಅಭಿನಯದ ಬಗ್ಗೆ ಎರಡು ಮಾತಿಲ್ಲ. ಖುಷಿ ಖುಷಿಯಾಗಿ ತೆರೆ ಮೇಲೆ ಅಭಿನಯಿಸಿರೋ ರಷ್ಮಿಕಾ ಮೇಲೆ ಅಭಿಮಾನಿಗಳಿಗೆ ಮತ್ತೆ ಲವ್ ಆಗೋದು ಗ್ಯಾರೆಂಟಿ. ಹಿಂದೆ ಅಭಿನಯಿಸಿದ ಎರಡು ಸಿನಿಮಾಗಳಿಗಿಂತಲೂ ಈ ಚಿತ್ರದಲ್ಲಿ ರಶ್ಮಿಕಾ ಅಭಿನಯಕ್ಕೆ ಜಾಗ ಸಿಕ್ಕಿದೆ. ಸಿಕ್ಕಿರೋ ಅವಕಾಶವನ್ನ ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ ಕಿರಿಕ್ ಬೆಡಗಿ .ಉಳಿದಂತೆ ಸಾಧುಕೋಕಿಲ, ರಘುರಾಮ್, ಸುಮಿತ್ರ ಅಭಿನಯದ ಮೂಲಕ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ನಿರ್ದೇಶನ ಹೇಗಿದೆ?

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದ ಮೂಲಕ ಟ್ರೆಂಡ್
ಸೆಟ್ ಮಾಡಿದ್ದ ನಿರ್ದೇಶಕ ಸುನಿ ಮತ್ತೆ ತಮ್ಮದೇ ಸ್ಟೈಲ್ ನಲ್ಲಿ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಒಂದು ವರ್ಷದಲ್ಲಿ ನಡೆಯೋ ಮದುವೆ ನಂತರದ ಸ್ಟೋರಿಯನ್ನ ಚಮಕ್ ನೀಡುತ್ತಾ ಪ್ರಸೆಂಟ್ ಮಾಡಿದ್ದಾರೆ.

ಮೋಡಿ ಮಾಡುವ ಜೋಡಿ

ತೆರೆ ಮೇಲೆ ರಶ್ಮಿಕಾ ಹಾಗೂ ಗಣೇಶ್ ಜೋಡಿ ತುಂಬಾ ಚೆನ್ನಾಗಿ ಕಾಣುತ್ತೆ. ಇಬ್ಬರ ಅದ್ಬುತವಾದ ಅಭಿನಯದ ಪ್ರೇಕ್ಷಕರನ್ನ ಮೋಡಿ ಮಾಡುತ್ತೆ. ಹೊಸ ಮ್ಯಾನರಿಸಂ ನಲ್ಲಿ ಆನ್ ಸ್ಕ್ರೀನ್ ನಲ್ಲಿ ಮಿಂಚಿದ್ದಾರೆ.

ಜೂಡಾ ಮ್ಯಾಸಿಕ್ ಮ್ಯಾಜಿಕ್

ಸಿಂಪಲ್ ಸುನಿ ಚಿತ್ರಗಳಲ್ಲಿ ಸಂಗೀತ ಮತ್ತು ಹಾಡುಗಳಲ್ಲಿ ವಿಭಿನ್ನತೆ ಇರುತ್ತೆ, ಅದೇ ರೀತಿಯಲ್ಲಿ ಚಮಕ್ ಚಿತ್ರದಲ್ಲಿ ಹಿನ್ನಲೆ ಸಂಗೀತಕ್ಕೆ ಪ್ರಶಂಸೆಗಳು ಕೇಳಿ ಬರುತ್ತೆ. ಸಾಮಾನ್ಯ ಚಿತ್ರಗಳಿಗಿಂತಲೂ ಡಿಫ್ರೆಂಟ್ ಅನ್ನೋ ಫೀಲ್ ಕೊಡುತ್ತೆ.

ಪ್ಲಸ್ ಮತ್ತು ಮೈನೆಸ್

ಚಿತ್ರದ ಪೂರ್ತಿ ಪ್ರೇಕ್ಷಕರಿಗೆ ಮಜಾ ನೀಡೋದು ಸುನಿ ಡೈಲಾಗ್ಸ್ ಮತ್ತು ಗಣೇಶ್ ಅಭಿನಯ. ಮೊದಲ ಬಾರಿಗೆ ಸುನಿ-ಗಣಿ ಜೋಡಿ ಸಖತ್ತಾಗಿಯೇ ವರ್ಕ್ ಆಗಿದೆ. ಯೋಗರಾಜ್ ಭಟ್ಟ-ಗಣೇಶ್ ನಂತರ ಮತ್ತೊಂದು ಒಳ್ಳೆ ಕಾಂಬಿನೇಶನ್ ಸುನಿ ಮತ್ತು ಗಣೇಶ್ ಆಗಬಹುದು. ಮೈನೆಸ್ ವಿಚಾರದಲ್ಲಿ ಸೆಕೆಂಡ್ ಆಫ್ ಸ್ವಲ್ಪ ಲ್ಯಾಗ್ ಅನ್ನಿಸುತ್ತೆ.

ಅಪ್ಪ ಮಗಳ ಕಾಂಬಿನೇಶನ್

ಚಮಕ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುನ ಗಣೇಶ್ ಪುತ್ರಿ ಚಾರಿತ್ರ್ಯ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಬಂದು ಚಮಕ್ ನೀಡುತ್ತಾರೆ. ಸಣ್ಣದೊಂದು ಪಾತ್ರದಲ್ಲಿ ಅಭಿನಯಿಸಿದ್ದು ಅಪ್ಪ-ಮಗಳ ಕಾಂಬಿನೇಶನ್ ಖುಷಿ ನೀಡುತ್ತೆ.

ಪ್ಯಾಮಿಲಿ ಜೊತೆ ಎಂಜಾಯ್ ಮಾಡೋ ಚಿತ್ರ

ವರ್ಷದ ಕೊನೆಗೆ ಬಂದಿರುವ ಚಮಕ್ ಸಿನಿಮಾ ಕುಟುಂಬ ಸಮೇತರಾಗಿ ನೋಡಿ ಎಂಜಾಯ್ ಮಾಡುವ ಸಿನಿಮಾ. ಕ್ಲಾಸ್ , ಮಾಸ್ ಮತ್ತು ಫ್ಯಾಮಿಲಿ ಆಡಿಯನ್ಸ್ ಎಲ್ಲರಿಗೂ ಖಂಡಿತವಾಗಿ ಇಷ್ಟವಾಗುತ್ತೆ ಚಮಕ್.

English summary
Kannada actor golden star Ganesh and Rashmika Mandanna starrer Chamak movie released .the movie gets positive response from audience Simple Suni directed the movie.Chamak Family Entertainment story based movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X