»   » 'ಇಷ್ಟ-ಕಷ್ಟ'ಗಳ 'ಇಷ್ಟಕಾಮ್ಯ'ಕ್ಕೆ ವಿಮರ್ಶಕರು ಸೋತು ಹೋದ್ರಾ?

'ಇಷ್ಟ-ಕಷ್ಟ'ಗಳ 'ಇಷ್ಟಕಾಮ್ಯ'ಕ್ಕೆ ವಿಮರ್ಶಕರು ಸೋತು ಹೋದ್ರಾ?

By Suneetha
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಗಂಡ-ಹೆಂಡತಿ, ಪ್ರೇಯಸಿ ಅಂತ ತ್ರಿಕೋನ ಪ್ರೇಮಕಥೆಯ ಜೊತೆಗೆ ದೃಶ್ಯಕಾವ್ಯ ಇರುವ 'ಇಷ್ಟಕಾಮ್ಯ' ಎಂಬ ವಿಭಿನ್ನ ಸಿನಿಮಾ ನಿನ್ನೆ(ಮೇ 13) ಇಡೀ ಕರ್ನಾಟಕದಾದ್ಯಂತ ಗ್ರ್ಯಾಂಡ್ ಆಗಿ ತೆರೆಕಂಡಿದೆ.

  'ದಾಂಪತ್ಯ-ಪ್ರೀತಿ-ವಿರಸ' ಎಂಬ ವಿಚಾರಗಳನ್ನು 'ಇಷ್ಟಕಾಮ್ಯ' ಚಿತ್ರದಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಬಹಳ ಚೆಂದವಾಗಿ ಕಟ್ಟಿಕೊಟ್ಟು ಮಧ್ಯಮ ವರ್ಗದ ಪ್ರೇಕ್ಷಕರನ್ನು ಸೇರಿದಂತೆ ಯುವಜನತೆಯನ್ನು ಆಕರ್ಷಿಸುವತ್ತ ಯಶಸ್ವಿಯಾಗಿದ್ದಾರೆ.[ವಿಮರ್ಶೆ: 'ಇಷ್ಟಕಾಮ್ಯ', ಕನ್ನಡ ಮಣ್ಣಿನ ರಮ್ಯ ಪ್ರೇಮಕಾವ್ಯ]

  ಸುಮಾರು ಎರಡು ವರ್ಷಗಳ ಬಳಿಕ ಮತ್ತೆ ಅಖಾಡಕ್ಕೆ ಇಳಿದಿದ್ದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಕಾದಂಬರಿ ಆಧಾರಿತ 'ಇಷ್ಟಕಾಮ್ಯ' ಎಂಬ ಸಿನಿಮಾವನ್ನು ನೀಡಿದ್ದಾರೆ.[ಕಬ್ಬನ್ ಪಾರ್ಕ್ ನಲ್ಲಿ ದಿಢೀರ್ ಪ್ರತ್ಯಕ್ಷ ಆದ ನಾಗತಿಹಳ್ಳಿ]

  'ಅಗ್ನಿಸಾಕ್ಷಿ' ಖ್ಯಾತಿಯ ನಟ ವಿಜಯ್ ಸೂರ್ಯ, ನಟಿ ಮಯೂರಿ ಮತ್ತು ನಟಿ ಕಾವ್ಯ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದ 'ಇಷ್ಟಕಾಮ್ಯ' ಎಂಬ ಸುಂದರ ಪ್ರೇಮಕಾವ್ಯಕ್ಕೆ ನಮ್ಮ ಖ್ಯಾತ ವಿಮರ್ಶಕರು ವಿಭಿನ್ನ ರೆಸ್ಪಾನ್ಸ್ ನೀಡಿದ್ದಾರೆ. ವಿಮರ್ಶಕರ ವಿಮರ್ಶೆಯ ಕಲೆಕ್ಷನ್ಸ್ ನೋಡಿ ಕೆಳಗಿನ ಸ್ಲೈಡುಗಳಲ್ಲಿ....

  'ಹಿತವಾದ ಇಷ್ಟಕಾಮ್ಯ'- ವಿಜಯ ಕರ್ನಾಟಕ

  'ಗಂಡ-ಹೆಂಡತಿ'ಯ ಜಗಳ ಉಂಡು ಮಲಗೋವರೆಗೆ ಎಂಬುದನ್ನು ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಹೊಸ ಚಿತ್ರದಲ್ಲಿ ಮತ್ತೆ ತೋರಿಸಿದ್ದಾರೆ. ಹಿತವಾದ ಕಥೆ, ನವಿರಾದ ನಿರೂಪಣೆಯಲ್ಲಿ ಸಿದ್ಧಹಸ್ತರಾದ ಅವರು ಮತ್ತೊಮ್ಮೆ ತುಂಬು ಕುಟುಂಬಕ್ಕೆ ಇಷ್ಟವಾಗುವ ಚಿತ್ರವೊಂದನ್ನು ಕೊಟ್ಟಿದ್ದಾರೆನ್ನಬಹುದು. ಪತಿಯಿಂದ ದೂರವಾಗುವ ಮುಂಗೋಪಿ ಪತ್ನಿ, ಹಾಗೆಯೇ ಪತ್ನಿ ತನ್ನಿಂದ ಶಾಶ್ವತವಾಗಿ ದೂರವಾಗುವಳು ಎಂಬ ತಪ್ಪು ಕಲ್ಪನೆಯ ಗಂಡ, ಈ ನಡುವೆ ತುಂಟ ಪತಿಯ ಮನಸ್ಸು ಗೆಲ್ಲುವ ಇನ್ನೊಬ್ಬ ಮುದ್ದು ಪೋರಿ, ಚಿತ್ರದ ಮೂರು ಮುಖ್ಯ ಪಾತ್ರಗಳು.- ಪದ್ಮಿನಿ ಜೈನ್ ಎಸ್.

  'ಇಷ್ಟ-ಕಷ್ಟಗಳ ರಮ್ಯಕಾವ್ಯ - ಪ್ರಜಾವಾಣಿ

  ಪ್ರೀತಿ, ಪ್ರೇಮಕ್ಕೂ ‘ಇಷ್ಟಕಾಮ್ಯ'ದಲ್ಲಿ ಜಾಗವುಂಟು. ಆದರೆ ಅದು ನವಿರು ಭಾವನೆ ಮೂಡಿಸುವುದರ ಜತೆಗೆ ಒಂದೆರಡು ಸಲ ಆಘಾತವನ್ನು ಉಂಟು ಮಾಡಿಬಿಡುತ್ತದೆ! ಕನಸುಕಂಗಳ ಅಚ್ಚರಿ (ಮಯೂರಿ) ಅಪಘಾತಕ್ಕೀಡಾಗಿ ಡಾ. ಆಕರ್ಷ್ ನ(ವಿಜಯ್ ಸೂರ್ಯ) ‘ಬೆಳ್ಳಕ್ಕಿ ನರ್ಸಿಂಗ್ ಹೋಂ'ಗೆ ದಾಖಲಾಗುತ್ತಾಳೆ. ನಿರೀಕ್ಷೆಯಂತೆ, ಆಕರ್ಷ್ ನತ್ತ ಪ್ರೀತಿಯೂ ಪಲ್ಲವಿಸುತ್ತದೆ. ಆದರೆ ಆತನಿಗೆ ಈಗಾಗಲೇ ಅದಿತಿ (ಕಾವ್ಯ ಶೆಟ್ಟಿ) ಎಂಬಾಕೆಯ ಜತೆ ಮದುವೆಯಾಗಿದೆ ಎಂಬ ಗುಟ್ಟು ರಟ್ಟಾದಾಗ, ಹೇಗಾದರೂ ಮಾಡಿ ಆತನನ್ನು ತನ್ನವನನ್ನಾಗಿ ಮಾಡಿಕೊಳ್ಳಲು ಛಲ ತೊಡುತ್ತಾಳೆ. ಅತ್ತ ಪತ್ನಿಯನ್ನು ತೊರೆಯದೇ, ಇತ್ತ ಅಚ್ಚರಿಯನ್ನೂ ಬಿಡದೇ ಸಂಕಟಕ್ಕೆ ಸಿಲುಕುತ್ತಾನೆ ಆಕರ್ಷ್. ಕೊನೆಗೆ ಆತ ಒಲಿಯುವುದು ಯಾರಿಗೆ? ಪ್ರೇಕ್ಷಕನ ಕಲ್ಪನೆಯನ್ನೆಲ್ಲ ಉಲ್ಟಾ ಮಾಡಿ, ಕಥೆಗೆ ಅಂತ್ಯ ಹಾಡುತ್ತಾರೆ ನಿರ್ದೇಶಕ ನಾಗತಿಹಳ್ಳಿ. -ಆನಂದತೀರ್ಥ ಪ್ಯಾಟಿ.

  'ತಾಳ್ಮೆ ಇದ್ದವರಿಗೆ ಮಾತ್ರ ತಾಜಾತನ' -ಕನ್ನಡಪ್ರಭ

  'ಇಷ್ಟಕಾಮ್ಯ' ಕಾದಂಬರಿ ಓದಿದವರಿಗೆ ಅದರ ಗಟ್ಟಿತನದ ಕುರಿತು ಹೇಳಬೇಕಿಲ್ಲ. ಅದೇ ಪುಟಗಳು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಚಿತ್ರವಾಗಿದ್ದು ಗಟ್ಟಿ ಕತೆ, ಜೀವಂತಿಕೆ ಇರುವ ಪರಿಸರದಲ್ಲಿ ಮೂಡುವ ಈ ಸಿನಿಮಾ, ತೆರೆ ಮೇಲೂ ಪುಸ್ತಕವಾಗಿಯೇ ಕಾಣುತ್ತದೆ. ಪಾತ್ರಗಳು ಕೂಡ ನಿರ್ದೇಶಕರ ನೇರಕ್ಕೆ ಕುಣಿಯುವುದರಿಂದ ಅವು ಕೂಡ ಪುಸ್ತಕದ ಸಾಲುಗಳಂತೆ. ಜೊತೆಗೆ ನಿಧಾನವೇ ಪ್ರಧಾನ ಎನ್ನುವ ಈ ಚಿತ್ರವನ್ನು ನೋಡುವಾಗ ಪ್ರೇಕ್ಷಕನಿಗೆ ತಾಳ್ಮೆ ಎನ್ನುವುದು ಇದ್ದರೆ ಮಾತ್ರ ತಾಜಾತನ ಎನಿಸುವುದಕ್ಕೆ ಸಾಧ್ಯ. ಕಾದಂಬರಿಗಳು ದೃಶ್ಯ ರೂಪ ಪಡೆದುಕೊಳ್ಳುವಾಗ ಹೀಗೆ ಪಠ್ಯಗಳಂತೆಯೇ ತೆರೆ ಮೇಲೆ ಭಾಸವಾಗುತ್ತದೆ. - ಆರ್ ಕೇಶವಮೂರ್ತಿ.

  'ಬಾಹಿರ ಪ್ರೇಮದ ಭಾವಸಂಚಾರಿ'-ಉದಯವಾಣಿ

  'ದಾಂಪತ್ಯ ಒಂದು ಇನ್ ಸ್ಟಿಟ್ಯೂಶನ್. ಆದರೆ ಅದರಲ್ಲೇ ಇರೋಕ್ಕೆ ಯಾರು ಇಷ್ಟಪಡುತ್ತಾರೆ' ಅನ್ನೋ ಫಿಲಾಸಫಿಯನ್ನು ಹೇಳಲು ಪ್ರಯತ್ನಪಡುವ ಮೇಷ್ಟ್ರು, ಅದಕ್ಕೋಸ್ಕರ ಲಿವ್-ಇನ್ ಒಡನಾಟದಲ್ಲಿರೋ ಬೆಳವಾಡಿ-ನಗರ್ ಕರ್ ದಂಪತಿಗಳನ್ನು ತರುತ್ತಾರೆ, ಅತಿಯಾದ ಸ್ವಚ್ಛತೆಯ ಗೀಳು (ಒಸಿಡಿ) ಇರೋ ಹೆಂಡತಿಯ ಪಾತ್ರ ಸೃಷ್ಟಿಸಿ, ಹೆರಿಗೆ ಫೋಬಿಯಾ ಇದೆ ಅಂತ ಬಿಂಬಿಸಿ ಕತೆಗೊಂದು ರೋಚಕತೆಯನ್ನು ತರುತ್ತಾರೆ. ರಾಷ್ಟ್ರಪ್ರಶಸ್ತಿ ವಿಜೇತ ಆರ್ಟ್ ಸಿನಿಮಾ ನಟನೊಬ್ಬನನ್ನು ಸೃಷ್ಟಿಸಿ, ಎಲ್ಲರೂ ಬೆರಗಾಗುವಂತೆ ತಮ್ಮ ಹಾಸ್ಯಪ್ರಜ್ಞೆಯನ್ನು ಮೆರೆಯುತ್ತಾರೆ. ಬಿ ಜಯಶ್ರೀ ಅವರ ಪಾತ್ರ ತಂದು, ಜೀವನದ ಆಕಸ್ಮಿಕವನ್ನು ಹೇಳಿ ಹೃದಯ ಆರ್ದ್ರವಾಗುವಂತೆ ಮಾಡುತ್ತಾರೆ. ಅಲ್ಲಲ್ಲಿ ಬರುವ ಪುಟ್ಟಪುಟ್ಟ ಪಾತ್ರಗಳು ನಿಮ್ಮನ್ನು ಕೈ ಹಿಡಿದು, ದುರ್ಗಮ ದಾರಿಯನ್ನು ದಾಟಿಸಿ ಕೊನೆ ತಲುಪಿಸುತ್ತದೆ.-ವಿಕಾಸ್ ನೇಗಿಲೋಣಿ.

  'The Oldest Trope in the Book' - The Hindu

  Characters in Chandrashekhar's film fall in and out of love rather easily and far too quickly. It becomes clear that in the filmmaker's eyes this is how modern-day relationships are. But instead of making generalisations about an entire generation, Ishtakamya would have worked better if it stuck to telling a story about particular characters. In any case, does the story make for an interesting watch, at least?.- Archana Nathan.

  'ಆಕರ್ಷಕ ಭಾವಕ್ಕೆ ಅಚ್ಚರಿಯ ಬಂಧ'-ವಿಜಯವಾಣಿ

  ಬಯಸಿ ಬಂದ ಪ್ರೀತಿಯನ್ನು ನಾವು ಗೌರವಿಸುವುದಿಲ್ಲ, ನಾವು ಬಯಸುವ ಪ್ರೀತಿ ದಕ್ಕುವುದಿಲ್ಲ. ಈ ವೈರುಧ್ಯಗಳ ಅನುಭವದಲ್ಲಿ ಮಿಂದೆದ್ದವರ ಕಥೆಯೇ ‘ಇಷ್ಟಕಾಮ್ಯ'. ನಾಯಕ ಆಕರ್ಷ್ (ವಿಜಯ್ ಸೂರ್ಯ) ವೈದ್ಯನಾಗಿದ್ದರೂ ಆತನ ಒಂಟಿತನಕ್ಕೆ ಒಲವಿನ ಚಿಕಿತ್ಸೆ ಕೊಡುವವಳು ನಾಯಕಿ ಅಚ್ಚರಿ (ಮಯೂರಿ). ಇಬ್ಬರೂ ಒಂದಾದರು ಎಂಬಷ್ಟರಲ್ಲೇ ಮತ್ತೊಬ್ಬಳು ನಾಯಕಿ ಆದಿತಿ (ಕಾವ್ಯಾ ಶೆಟ್ಟಿ) ಎಂಟ್ರಿ. ಇದು ಸರ್ವೆ ಸಾಧಾರಣ ವಿಷಯ ಎನಿಸಿದರೂ ಅಲ್ಲೊಂದು ಟ್ವಿಸ್ಟ್ ಇದೆ. ಏನದು? ಚಿತ್ರಮಂದಿರದಲ್ಲಿ ನೋಡಿ ತಿಳಿದುಕೊಳ್ಳಿ.

  English summary
  Kannada Movie 'Ishtakamya' Critics Review. Kannada Actor Vijay Surya, Actress Mayuri, Actress Kavya Shetty starrer 'Ishtakamya' has received mixed response from the critics. Here is the collection of reviews by Top News Papers of Karnataka. The movie is directed by Nagathihalli Chandrashekar.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more