For Quick Alerts
  ALLOW NOTIFICATIONS  
  For Daily Alerts

  'ಜಗ್ಗು'ವಿನ 'ದಾದಾ'ಗಿರಿಗೆ ವಿಮರ್ಶಕರು ಮನಸೋತ್ರಾ?

  By Suneetha
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಜಗ್ಗುದಾದಾ' ನಿನ್ನೆ (ಜೂನೆ 10) ಇಡೀ ಕರ್ನಾಟಕದಾದ್ಯಂತ ಅದ್ದೂರಿಯಾಗಿ ತೆರೆ ಕಂಡಿದೆ. ಚಿತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ದೀಕ್ಷಾ ಸೇಠ್ ಅವರು ಇದೇ ಮೊದಲ ಬಾರಿಗೆ ದರ್ಶನ್ ಅವರ ಜೊತೆ ಡ್ಯುಯೆಟ್ ಹಾಡಿದ್ದರು.

  ಪಕ್ಕಾ ಕಾಮಿಡಿ-ರೋಮ್ಯಾಂಟಿಕ್ ಕಥೆಯುಳ್ಳ 'ಜಗ್ಗುದಾದಾ' ಚಿತ್ರದಲ್ಲಿ ಡಾನ್ ಒಬ್ಬನ ಮೊಮ್ಮಗ ಸಂಪ್ರದಾಯಸ್ಥ ಹುಡುಗಿಯನ್ನು ಯಾವ ರೀತಿ ಮದುವೆ ಮಾಡಿಕೊಳ್ಳುತ್ತಾನೆ. ಹಾಗೂ ಮದುವೆಯಾಗಲು ಆತ ಕಷ್ಟಪಡುವ ರೀತಿಯನ್ನು ಬಹಳ ಕಾಮಿಡಿಯಾಗಿ ತೋರಿಸಲಾಗಿದೆ.[ವಿಮರ್ಶೆ: 'ಜಗ್ಗುದಾದಾ' ಮದುವೆ ಊಟದ ರುಚಿ ಸ್ವಲ್ಪ ಸಿಹಿ, ಸ್ವಲ್ಪ ಸಪ್ಪೆ ]

  ನಿರ್ದೇಶಕ ರಾಘವೇಂದ್ರ ಹೆಗಡೆ ಬಂಡವಾಳ ಹೂಡುವ ಜೊತೆಗೆ ನಿರ್ದೇಶನ ಮಾಡಿರುವ 'ಜಗ್ಗುದಾದಾ' ಚಿತ್ರಕ್ಕೆ ಖ್ಯಾತ ವಿಮರ್ಶಕರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.['ಜಗ್ಗುದಾದಾ' ಸಡಗರ: ರೊಚ್ಚಿಗೆದ್ದ ದರ್ಶನ್ ಅಭಿಮಾನಿಗಳು]

  ದರ್ಶನ್, ದೀಕ್ಷಾ ಸೇಠ್, ಸೃಜನ್ ಲೋಕೇಶ್, ರವಿಶಂಕರ್, ಶರತ್ ಲೋಹಿತಾಶ್ವ, ಅನಂತ್ ನಾಗ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದ 'ಜಗ್ಗುದಾದಾ' ಚಿತ್ರಕ್ಕೆ ವಿಮರ್ಶಕರು ವ್ಯಕ್ತಪಡಿಸಿರುವ ವಿಮರ್ಶೆಗಳ ಕಲೆಕ್ಷನ್ಸ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

  'ಬಾಲಿಶ ಕತೆಯಲ್ಲೂ ಭರ್ಜರಿ ಆಕ್ಷನ್' - ವಿಜಯ ಕರ್ನಾಟಕ

  'ಬಾಲಿಶ ಕತೆಯಲ್ಲೂ ಭರ್ಜರಿ ಆಕ್ಷನ್' - ವಿಜಯ ಕರ್ನಾಟಕ

  'ಜಗ್ಗುದಾದಾ' ಸ್ಟೋರಿಯನ್ನು ಹೇಳುವಲ್ಲಿ ನಿರ್ದೇಶಕ ರಾಘವೇಂದ್ರ ಹೆಗಡೆ ಹರಸಾಹಸ ಪಟ್ಟಿದ್ದಾರೆ. ಅದರಲ್ಲೂ ಪ್ರೇತಾತ್ಮದ ಕ್ಯಾರೆಕ್ಟರ್ ಸೃಷ್ಟಿ ಮಾಡಿ, ಚಂದಮಾಮನ ಕತೆ ನೆನಪಿಸುತ್ತಾರೆ. ಇನ್ನೂ ಅಚ್ಚರಿಯ ಸಂಗತಿ ಅಂದರೆ, ಒಂದು ರಾಜ್ಯಕ್ಕೆ ಡಾನ್ ಆಗಿದ್ದ ಕುಟುಂಬದ ಹುಡುಗಿಯನ್ನು ಬಾರ್ ಡಾನ್ಸರ್ ಎಂದು ತೋರಿಸುವ ಸಾಹಸ ಮಾಡಿದ್ದು. ಸಿನಿಮಾದ ಮೊದಲರ್ಧ ಬರೀ ಬಿಲ್ಡಪ್. ಅಸಲಿ ಆಟ ಶುರುವಾಗುವುದೇ ಮಧ್ಯಂತರದ ನಂತರ. ಆದರೂ, ಚಿತ್ರಕಥೆಯಲ್ಲಿ ಲಾಜಿಕ್ ಇಲ್ಲದ ಕಾರಣ, ಮ್ಯಾಜಿಕ್ ಕೂಡ ವರ್ಕ್ ಆಗಿಲ್ಲ. - ಶರಣು ಹುಲ್ಲೂರು.[ಸಂತೋಷ್ ಚಿತ್ರಮಂದಿರದಲ್ಲಿ ದರ್ಶನ್ ಅಭಿಮಾನಿಗಳ ಗದ್ದಲ-ಗಲಾಟೆ.!]

  'ದಾದಾಗಿರಿಯ ಕಾಮಿಡಿ ದರ್ಶನ' - ವಿಜಯವಾಣಿ

  'ದಾದಾಗಿರಿಯ ಕಾಮಿಡಿ ದರ್ಶನ' - ವಿಜಯವಾಣಿ

  ಶೀರ್ಷಿಕೆ ನೋಡಿದರೆ ಇದು ಭೂಗತ ಲೋಕದ ಕಥೆ ಎಂಬ ಅನುಮಾನ ಕಾಡಬಹುದು. ಸಿನಿಮಾ ಶುರುವಾಗಿ ಹದಿನೈದು ನಿಮಿಷ ಕಳೆಯುವುದರೊಳಗೆ ಇದೊಂದು ಪಕ್ಕಾ ಕಾಮಿಡಿ ಚಿತ್ರ ಎನಿಸಬಹುದು. ಇನ್ನೂ ಒಂದಷ್ಟು ಹೊತ್ತು ಕಾದರೆ ಪ್ರೇಮಕಥೆಯ ಸುಳಿವೂ ಸಿಗಬಹುದು. ಆದರೆ ಎಲ್ಲ ಮುಗಿದು ‘ಶುಭಂ' ಬರುವಾಗ ಇದುವರೆಗೂ ನಾವು ನೋಡಿದ್ದು ಯಾವ ಪ್ರಕಾರದ ಚಿತ್ರ ಎಂಬ ಗೊಂದಲ ಪ್ರೇಕ್ಷಕನದ್ದು! ಎಲ್ಲ ಬಗೆಯ ಮನರಂಜನೆಯನ್ನೂ ಒಟ್ಟಾಗಿ ನೀಡಲು ಪ್ರಯತ್ನಿಸಿದ್ದು ‘ಜಗ್ಗುದಾದಾ'ನ ಪ್ಲಸ್ ಮತ್ತು ಮೈನಸ್ ಎರಡೂ ಹೌದು.

  'ಕಾಮಿಡಿ ರೌಡಿ ಹೊಸ ದರ್ಶನ' - ಕನ್ನಡಪ್ರಭ

  'ಕಾಮಿಡಿ ರೌಡಿ ಹೊಸ ದರ್ಶನ' - ಕನ್ನಡಪ್ರಭ

  ನಟ ದರ್ಶನ್ ಕೂಡ ಕಾಮಿಡಿ ಹೀರೋನಾ? 'ಜಗ್ಗುದಾದಾ'ನ ದರ್ಶನ ಪಡೆದು ಹೊರಬಂದ ಪ್ರೇಕ್ಷಕನಿಗೆ ಕಾಡುವ ಪ್ರಶ್ನೆ ಇದು. ಯಾಕೆಂದರೆ ದರ್ಶನ್ ಅಂದ್ರೆ ಮಾಸ್ ಹೀರೋ, ಆಕ್ಷನ್-ಕಿಂಗ್. ಆದರೆ ಆ ಇಮೇಜ್ ಅನ್ನು ದಾಟಿ ಕಾಮಿಡಿ ರೌಡಿಯಾಗಿಯೂ ಅಭಿಮಾನಿಗಳನ್ನು ರಂಜಿಸಬಲ್ಲರು ಎನ್ನುವುದಕ್ಕೆ ಸಾಕ್ಷಿ 'ಜಗ್ಗುದಾದಾ'. ಚಿತ್ರತಂಡ ಮೊದಲೇ ಹೇಳಿದಂತೆ ಇದೊಂದು ಪಕ್ಕಾ ಕೌಟುಂಬಿಕ ಮನೋರಂಜನಾತ್ಮಕ ಚಿತ್ರ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಇಡೀ ಚಿತ್ರ ಶೀರ್ಷಿಕೆಯ ಜಪ್ತಿಗೂ ಸಿಗದೆ ಕಾಮಿಡಿಯನ್ನೇ ಹೆಚ್ಚು ಆವರಿಸಿಕೊಂಡಿದೆ. ಆದರೂ ದರ್ಶನ್ ಅಭಿಮಾನಿಗಳಿಗಾಗಿಯೇ 'ಜಗ್ಗುದಾದಾ' ಹೆಸರಿನಲ್ಲಿ ಮಾಡಿರುವ ರುಚಿಕಟ್ಟಾದ ಮಿಕ್ಸ್ ಮಸಾಲ ಚಿತ್ರ ಎನ್ನುವುದು ವಿಶೇಷ. - ದೇಶಾದ್ರಿ ಹೊಸ್ಮನೆ.

  'ಕ್ವಾಲಿಟಿ ಇಲ್ಲ, ಬರೀ ಬಿಸ್ಕತ್' -ವಿಶ್ವವಾಣಿ

  'ಕ್ವಾಲಿಟಿ ಇಲ್ಲ, ಬರೀ ಬಿಸ್ಕತ್' -ವಿಶ್ವವಾಣಿ

  'ಮಾಸ್ಟರ್ ಪೀಸ್ ಯಶ್ ಅವರ 'ರಾಮಾಚಾರಿ' ಶೈಲಿಯ ಹವಾಗೆ ಇಲ್ಲಿ ದರ್ಶನ್ ಕೌಂಟರ್ ಕೊಟ್ಟಿದ್ದಾರೆ. ಆದರೆ ಇಡೀ ಚಿತ್ರದಲ್ಲಿ ಒಂದೂ ಮೆಚ್ಚಿಕೊಳ್ಳುವಂತಹ ಸಂಭಾಷಣೆ ಇಲ್ಲ. ಸಂಭಾಷಣೆ ಬರೆದ ಮಹಾನುಭಾವ ಚಿತ್ರದಲ್ಲಿ ಆಗಾಗ, ಅದೇನೋ ಹೇಳ್ತಾರಲ್ಲ, ಅದ್ಯಾರೋ ನಟಿ ಹೇಳಿದ್ದಾರಲ್ಲ, ಎನ್ನುತ್ತ ಹಳಸಿ ಸವೆದುಹೋದ ಸಂಭಾಷಣೆಗಳನ್ನು ಬರೆದಿದ್ದಾರೆ. ಚಿತ್ರದ ಅತೀ ದೊಡ್ಡ ಟಾರ್ಚರ್ ಎಂದರೆ 'ಸಂಪ್ರದಾಯಸ್ಥ ಹುಡುಗಿ' ಸಂಪ್ರದಾಯಸ್ಥ ಹುಡುಗಿಯನ್ನು ಮದುವೆ ಆಗು ಎನ್ನುವ ತಾತನ ಮಾತನ್ನು ಜಗ್ಗುದಾದಾ ಚಿತ್ರದ ಎಲ್ಲ ಪಾತ್ರಗಳು ಕ್ಷಣಕ್ಕೊಮ್ಮೆ ಹಿಡಿದು ಜಗ್ಗಾಡುತ್ತದೆ. -ಹರಿ.

  'As predictable as you can get'- Bangalore Mirror

  'As predictable as you can get'- Bangalore Mirror

  The story had all the potential to become a fun riot. There were situations aplenty for it. But the film is unnecessarily long with additions and plot twists that seem like an afterthought. Whatever entertaining elements present are diluted in the long-drawn outing. Shyam Prasad S.

  English summary
  Kannada Movie 'Jaggu Dada' Critics review. Kannada Actor Darshan, Actress Deeksha Seth starrer 'Jaggu Dada' has received mixed response from the critics. Here is the collection of reviews by Top News Papers of Karnataka. The movie is directed by Raghavendra Hegde.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X