»   » ಪ್ರೇಕ್ಷಕರ ನಿರೀಕ್ಷೆ ತಲುಪದ 'ಜಿಂದಾ' ಬಗ್ಗೆ ವಿಮರ್ಶಕರ ಅಭಿಪ್ರಾಯವೇನು?

ಪ್ರೇಕ್ಷಕರ ನಿರೀಕ್ಷೆ ತಲುಪದ 'ಜಿಂದಾ' ಬಗ್ಗೆ ವಿಮರ್ಶಕರ ಅಭಿಪ್ರಾಯವೇನು?

Posted By:
Subscribe to Filmibeat Kannada

  ಹಳ್ಳಿ ಹುಡುಗಿ ಪಾತ್ರದಲ್ಲಿ ಮೇಘನಾ ರಾಜ್, ಪೊಲೀಸ್ ಪಾತ್ರದಲ್ಲಿ ದೇವರಾಜ್ ಅಭಿನಯಿಸಿರುವ 'ಜಿಂದಾ' ಚಿತ್ರ ತೆರೆಕಂಡಿದೆ. 1979-80 ರಲ್ಲಿ ನಡೆದ ನೈಜ ಘಟನೆ ಆಧಾರಿತ ಸಿನಿಮಾ 'ಜಿಂದಾ'.

  ವಿಮರ್ಶೆ : ಆರು ಹುಡುಗರ 'ಜಿಂದಾ' ಒಮ್ಮೆ ನೋಡಲು ಅಡ್ಡಿಯಿಲ್ಲ

  ಮುಸ್ಸಂಜೆ ಮಹೇಶ್ ನಿರ್ದೇಶನದ ಚಿತ್ರ ಎಂಬ ಕಾರಣಕ್ಕೆ 'ಜಿಂದಾ' ನೋಡಿದ ಪ್ರೇಕ್ಷಕರು ತಾವು ನಿರೀಕ್ಷಿಸಿದ ಮಟ್ಟದಲ್ಲಿ ಸಿನಿಮಾ ಮೂಡಿಬಂದಿಲ್ಲ ಎಂಬ ಅಭಿಪ್ರಾಯ ನೀಡಿದ್ದಾರೆ. ಅವರು ಮಾತ್ರವಲ್ಲದೇ ವಿಮರ್ಶಕರಿಗೂ ಚಿತ್ರ ಅಷ್ಟೇನು ಇಷ್ಟವಾಗಿಲ್ಲ. ಸಿನಿಮಾ ಬಗ್ಗೆ ವಿಮರ್ಶಕರು ಯಾವ ಅಭಿಪ್ರಾಯ ನೀಡಿದರು ಎಂಬುದಕ್ಕೆ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿದ 'ಜಿಂದಾ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ ಓದಿರಿ..

  ಪ್ರೇಕ್ಷಕರಿಗೆ ಕನ್ವಿನ್ಸ್ ಆಗುವಲ್ಲಿ ಎಡವಿದ 'ಜಿಂದಾ': ವಿಜಯ ಕರ್ನಾಟಕ

  ಚಿತ್ರದ ಟೈಟಲ್‌ಗೆ ದಿ ರಿಯಲ್ ಗ್ಯಾಂಗ್ ಎಂಬ ಟ್ಯಾಗ್ ಲೈನ್ ಕೊಟ್ಟು ಏನನ್ನು ಹೇಳಲು ಹೊರಟಿದ್ದಾರೆ ಎಂಬುದೇ ಪ್ರಶ್ನೆ. ಚಿತ್ರ ನೋಡಿದ ಮೇಲೆ ಯಾರು ಕೆಟ್ಟವರು? ಯಾರು ಒಳ್ಳೆಯವರು? ಎಂಬ ಗೊಂದಲ ಕಾಡುತ್ತದೆ. ಕೆಲ ಕೃತಕ ದೃಶ್ಯಗಳು ಬಿಟ್ಟರೆ ಉಳಿದ ಸನ್ನಿವೇಶಗಳನ್ನು ಸಹಜವಾಗಿ ತೋರಿಸಲಾಗಿದೆ. ಛಾಯಾಗ್ರಹಣ ಪೂರಕವಾಗಿದೆ. ದೇವರಾಜ್, ಗ್ಯಾಂಗ್ ಹುಡುಗರ ಅಭಿನಯ ಚೆನ್ನಾಗಿದೆ. ಸಂಭಾಷಣೆ 'ರಾ' ಆಗಿದೆ. ಕೆಲವೊಂದು ಡೈಲಾಗ್ ಗಳು ಅತಿರೇಕ ಅನಿಸಿದರೂ ಕತೆಗೆ ಹೊಂದುತ್ತವೆ. ಸ್ಕ್ರೀನ್ ಪ್ಲೇ ಬಿಗಿಯಾಗಿದೆ. ಚಿತ್ರ ವೇಗವಾಗಿ ಸಾಗಿದೆ. ಇಷ್ಟೆಲ್ಲಾ ಇದ್ದರೂ ಚಿತ್ರ ಮನಸ್ಸಿಗೆ ಹಿಡಿಸುವುದಿಲ್ಲ. ಚಿತ್ರ ಮುಕ್ಕಾಲು ಭಾಗ ಮುಗಿಯುತ್ತಿದ್ದಂತೆ ಕತೆ ಹಳ್ಳ ಹಿಡಿಯುತ್ತದೆ. ನೈಜ ಘಟನೆ ಆಧಾರಿತ ಚಿತ್ರ ಇದೆಂದು ಹೇಳಿದ್ದರೂ ಪ್ರೇಕ್ಷಕರಿಗೆ ಕನ್ವಿನ್ಸ್ ಆಗುವಂತೆ ನಿರೂಪಿಸಿಲ್ಲ.

  ಪೊರ್ಕಿ-ಪೊಲೀಸರ ಗುದ್ದಾಟ; ಪ್ರೇಕ್ಷಕರ ಕಿವಿ ಮೇಲೆ ಹೂತೋಟ: ಪ್ರಜಾವಾಣಿ

  ಛಾಯಾಗ್ರಾಹಕ ವಿ.ಆಚಾರ್ಯ ಮತ್ತೆ ಮತ್ತೇ ಏರಿಯಲ್ ವ್ಯೂ ಶಾಟ್‌ಗಳನ್ನು ತೆಗೆದಿದ್ದಾರೆ. ಛಾಯಾಗ್ರಹಣದ ಈ ತಂತ್ರ ಒಟ್ಟಾರೆ ಸಿನಿಮಾ ನೀಡುವ ಅನುಭವಕ್ಕೆ ಹೆಚ್ಚಿನದನ್ನು ಸೇರಿಸಲು ವಿಫಲವಾಗಿದೆ. ಆದರೆ ಇದು ಪರೋಕ್ಷವಾಗಿ ನಿರ್ದೇಶಕರ ದೃಷ್ಟಿಕೋನವನ್ನು ಬಿಂಬಿಸುವುದರಲ್ಲಿಯಂತೂ ಯಶಸ್ವಿಯಾಗಿದೆ. ಸಿನಿಮಾದ ಬಗ್ಗೆ ಇರುವ ಜನಪ್ರಿಯ ನಂಬಿಕೆಯ ಸೂತ್ರ ಚಿತ್ರದ ಆರಂಭದಲ್ಲಿಯೇ ಹರಿದುಹೋಗಿ ಕಥೆಯ ಗಾಳಿಪಟ ದಾರುಣವಾಗಿ ಪತನವಾಗಿದೆ. ದುರ್ಬಲ ಚಿತ್ರಕಥೆ, ಪಾತ್ರಪೋಷಣೆಯಲ್ಲಿನ ಪೊಳ್ಳುತನ, ಸಜ್ಜನಿಕೆಯ ಗಡಿ ದಾಟಿ ಕೆಸರೆಬ್ಬಿಸುವ ಸಂಭಾಷಣೆಗಳು, ಸಾತತ್ಯವಿಲ್ಲದ ದೃಶ್ಯಗಳು, ನೀರಸ ನಿರೂಪಣೆ, ಅನುಕೂಲಸಿಂಧು ತಿರುವುಗಳು, ತಾಂತ್ರಿಕ ದೌರ್ಬಲ್ಯಗಳು ಹೀಗೆ ಈ ಚಿತ್ರದಲ್ಲಿನ ಲೋಪಗಳ ಪಟ್ಟಿ ಬೆಳೆಸುತ್ತಲೇ ಹೋಗಬಹುದು - ಪದ್ಮನಾಭ ಭಟ್

  ಜಿಂದಾ.. ನೋಡಬಹುದಡ..?: ವಿಜಯವಾಣಿ

  ಒಂದೇ ಸಾಲಿನಲ್ಲಿ ಹೇಳುವುದಾದರ, ಈ ಸಿನಿಮಾ 'ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೆಕು' ಎಂಬ ಗಾದೆಮಾತಿನ ದೃಶ್ಯರೂಪ. ಇದು ರೆಟ್ರೊ ಸಿನಿಮಾ. ಹಾಗಾಗಿ ಕಣ್ ಕುಕ್ಕುವ ದೃಶ್ಯಗಳಿಲ್ಲ. ಹಳ್ಳಿಯ ವಾತಾವರಣದಲ್ಲೇ ಚಿತ್ರ ಸಾಗುವುದರಿಂದ ದೃಶ್ಯಗಳಲ್ಲಿ ಅಂಥ ಅದ್ದೂರಿತನವಿಲ್ಲ. ನಿರ್ದೇಶಕ ಮುಸ್ಸಂಜೆ ಮಹೇಶ್ ಸುಂದರವಾಗಿ ಮೂಡಿಸಲು ಪ್ರಯತ್ನಿಸಿದರೂ, ಕಥೆಯ ನಿರೂಪಣೆಯಲ್ಲಿ 'ಮುಸ್ಸಂಜೆ'ಯ ಹಿತವಿಲ್ಲ. ಬದಲಿಗೆ ತಡರಾತ್ರಿಯ ಹಿಂಸೆಯೇ ಹೆಚ್ಚು. ಸಂಗೀತದಲ್ಲಿ ಅಷ್ಟೇನೂ ಸಂಭ್ರಮವಿಲ್ಲ. ಸಾಹಿತ್ಯದಲ್ಲೂ ಅಂಥ ಲಾಲಿತ್ಯವಿಲ್ಲ. ಸಂಭಾಷಣೆಯಲ್ಲೂ ಅಲ್ಲಲ್ಲಿ ಅಸಭ್ಯ ಎನಿಸುತ್ತದೆ. ವಾಕ್ಯದ ಕೊನೆಯಲ್ಲಿ 'ಡ'ಗಳನ್ನು ಸೇರಿಸುವ ಮೂಲಕ ಒಂದು ಪ್ರದೇಶದ ಭಾಷೆ ಬಿಂಬಿಸಲು ಪ್ರಯತ್ನಿಸಿರುವುದು ಎಲ್ಲ ಪ್ರೇಕ್ಷಕರಿಗೂ ಖುಷಿ ಕೊಡುವುದು 'ಕಷ್ಟಡ' - ರವಿಕಾಂತ ಕುಂದಾಪುರ

  Jindaa Movie Review: The Time of India

  The film is definitely not for the faint heated as it has a lot of blood and gore. There are some harsh dialogues too, but they are essential to the script in many ways. The local dialect used in the film also adds to the appeal. Devaraj is in top form. Meghana Raj is commendable in the climax, which shows her hold her fort as a performer. The six gang members do their job. Go for this film if you are up for some gory drama with a rustic touch.

  English summary
  Meghana raj starrer Kannada Movie 'Jindaa' has recieved negative response. Here is action and Romantic Entertainer 'Jindaa' movie Critics Review.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more