»   » 'ಕೃಷ್ಣಲೀಲಾ' ವಿಮರ್ಶೆ: ಗಿಮಿಕ್ ಇಲ್ಲ...ಎಲ್ಲೂ ಕೆಮ್ಮಂಗಿಲ್ಲ!

'ಕೃಷ್ಣಲೀಲಾ' ವಿಮರ್ಶೆ: ಗಿಮಿಕ್ ಇಲ್ಲ...ಎಲ್ಲೂ ಕೆಮ್ಮಂಗಿಲ್ಲ!

Posted By:
Subscribe to Filmibeat Kannada

'ಎಕ್ಸ್ ಕ್ಯೂಸ್ ಮೀ', 'ಕೃಷ್ಣನ್ ಲವ್ ಸ್ಟೋರಿ', 'ತಾಜ್ ಮಹಲ್' ಅಂತಹ ಸೂಪರ್ ಡ್ಯೂಪರ್ ಹಿಟ್ಸ್ ಕೊಟ್ಟಿದ್ದ ಅಜೇಯ್ ರಾವ್ ಇದೀಗ ಅಂತದ್ದೇ ಮತ್ತೊಂದು ಲವ್ ಸ್ಟೋರಿ ಹೊತ್ತಿರುವ 'ಕೃಷ್ಣಲೀಲಾ' ಸಿನಿಮಾ ಮೂಲಕ ಬೆಳ್ಳಿತೆರೆ ಮೇಲೆ ಹಾಜರಾಗಿದ್ದಾರೆ.


ಕಳೆದ ಎರಡು ವರ್ಷಗಳಿಂದ ಸೋಲಿನ ಸುಳಿಯಲ್ಲೇ ಸಿಲುಕಿರುವ ಅಜೇಯ್ ರಾವ್, ನಿರ್ದೇಶಕ ಶಶಾಂಕ್ ಮೇಲೆ ಭರವಸೆ ಇಟ್ಟು ಮೊದಲ ಬಾರಿ ನಿರ್ಮಾಣಕ್ಕೆ ಕೈಹಾಕಿರುವ ಚಿತ್ರ ಈ 'ಕೃಷ್ಣಲೀಲಾ'. ಈ ಬಾರಿಯೂ 'ಕೃಷ್ಣ' ಕೈಹಿಡಿದರೆ ಅಜೇಯ್ ರಾವ್ ಬಚಾವ್.

2010 ರಲ್ಲಿ ಎಲ್ಲಾ ನ್ಯೂಸ್ ಚಾನೆಲ್ ಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿದ್ದ ನೈಜ ಘಟನಾಧಾರಿತ ಚಿತ್ರ 'ಕೃಷ್ಣಲೀಲಾ' ಅನ್ನುವ ಕಾರಣಕ್ಕೆ ಸಿನಿಮಾ ಬಹಳ ಸೌಂಡ್ ಮಾಡಿತ್ತು. ಹಾಗಾದ್ರೆ, 'ಕೃಷ್ಣಲೀಲಾ' ಸಿನಿಮಾದ ಕಥೆ ಏನು? 'ಕೃಷ್ಣಲೀಲಾ' ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....


Rating:
4.0/5


ಚಿತ್ರ : ಕೃಷ್ಣಲೀಲಾ
ನಿರ್ದೇಶನ : ಶಶಾಂಕ್
ನಿರ್ಮಾಣ : 'ಕೃಷ್ಣ' ಅಜೇಯ್ ರಾವ್
ಸಂಗೀತ ನಿರ್ದೇಶನ : ಶ್ರೀಧರ್.ವಿ.ಸಂಭ್ರಮ್
ಛಾಯಾಗ್ರಹಣ : ಶೇಖರ್ ಚಂದ್ರ
ಸಂಕಲನ : ನವೀನ್ ರಾಜ್
ಬಿಡುಗಡೆ : ಮಾರ್ಚ್ 20, 2015


ತಾರಾಗಣ : ಅಜೇಯ್ ರಾವ್, ಮಯೂರಿ, ರಂಗಾಯಣ ರಘು, ಅಚ್ಯುತ್ ಕುಮಾರ್, ಬುಲ್ಲೆಟ್ ಪ್ರಕಾಶ್, ಸಾಧು ಕೋಕಿಲ, ಶೋಭರಾಜ್, ತಬಲಾ ನಾಣಿ ಮತ್ತು ಇತರರು.


ಕಥಾಹಂದರ

ಕಥಾನಾಯಕ ಸ್ಮೈಲಿಂಗ್ ಕೃಷ್ಣ (ಅಜೇಯ್ ರಾವ್). ಇಡೀ ಕುಟುಂಬದ ಜವಾಬ್ದಾರಿಯನ್ನ ತನ್ನ ಹೆಗಲ ಮೇಲೆ ಹೊತ್ತುಕೊಂಡು, ಅಕ್ಕನ ಮದುವೆ ಮಾಡಿ, ಊರು ತುಂಬಾ ಸಾಲ ಮಾಡಿಕೊಂಡು, ಅದನ್ನ ತೀರಿಸುವುದಕ್ಕೆ ಒದ್ದಾಡೋ ಸ್ಕೂಲ್ ಕ್ಯಾಬ್ ಡ್ರೈವರ್ ಅಜೇಯ್ ರಾವ್.


ಕೃಷ್ಣನ ಕಿವಿಗೆ 'ಫ್ಲವರ್' ಇಡುವ ಲೀಲಾ

ರಂಗೋಲಿ ಸ್ಪರ್ಧೆಯಲ್ಲಿ ಗೆದ್ದು ಮೊಬೈಲ್ ಫೋನ್ ನ ಪ್ರೈಜ್ ಆಗಿ ಪಡೆಯುವ ಲೀಲಾ, ಅದಕ್ಕೆ ಆಗಾಗ ಕರೆನ್ಸಿ ಹಾಕಿಸುವುದಕ್ಕೆ ಗೆಳತಿಯ ಸಲಹೆಯ ಮೇರೆಗೆ ಹಿಡಿಯುವ 'ಬಕ್ರಾ' ಕೃಷ್ಣ. ಮಿಸ್ಡ್ ಕಾಲ್ ನಿಂದ ಶುರುವಾಗುವ ಇಬ್ಬರ ಫೋನ್ ಮಾತು, ಜೀವನಕ್ಕೆ ತೂತು ಬೀಳುವ ಮಟ್ಟಕ್ಕೆ ಬಂದು ತಲುಪುವ ಹೊತ್ತಿಗೆ ಪ್ರೇಕ್ಷಕರಿಗೆ ಇಂಟ್ರವಲ್. [ನಟ ಅಜೇಯ್ ರಾವ್ ಬೆಳ್ಳಿತೆರೆಯ ಬಂಗಾರದ ಕಥೆ]


ನಿಜಘಟನೆ ಆಧಾರಿತ ಚಿತ್ರ

ಗುರುತು ಪರಿಚಯವಿಲ್ಲದೆ, ಫೋನ್ ನಲ್ಲಿ ಕೃಷ್ಣನಿಗೆ ಖಾಸಾ ದೋಸ್ತ್ ಆಗುವ ಲೀಲಾ ಏಕಾಏಕಿ ಕಣ್ಮರೆಯಾಗುತ್ತಾಳೆ. ಅದರ ಹೊಣೆ ಕೃಷ್ಣನ ಮೇಲೆ ಬರುತ್ತದೆ. ಪರಿಣಾಮ ಪೊಲೀಸರು ಇಬ್ಬರಿಗೂ ಮದುವೆ ಮಾಡಿಸುತ್ತಾರೆ. ಅದು ಅದಾಗಲೇ ಮದುವೆ ನಿಶ್ಚಯವಾಗಿರುವ ಕೃಷ್ಣನ ಇಚ್ಛೆಗೆ ವಿರುದ್ಧವಾಗಿ. ಮುಂದೆ ನಡೆಯುವ ನಾ ಕೊಡೆ, ನೀ ಬಿಡೆ ಕಥೆಯನ್ನ ನೀವು ಥಿಯೇಟರ್ ನಲ್ಲಿ ನೋಡಿದರೆ ಚಂದ. [ಅಜೇಯ್ ರಾವ್ ಜೀವನದಲ್ಲಿ ಮರೆಯಲಾಗದ ದಿನ]


'ಸ್ಮೈಲಿಂಗ್' ಕೃಷ್ಣ ಸೂಪರ್

ಸ್ಕೂಲ್ ಕ್ಯಾಬ್ ಡ್ರೈವರ್ ಆಗಿ, ಜವಾಬ್ದಾರಿಯುತ ಮಗನಾಗಿ, ಕಷ್ಟಪಡುವ ಪ್ರಾಮಾಣಿಕ ಯುವಕನಾಗಿ 'ಕೃಷ್ಣ' ಅಜೇಯ್ ನಟನೆ ನೈಜವಾಗಿದೆ. ಮೇಕಪ್ ಇಲ್ಲದೇ ಸಾಮಾನ್ಯ ಹುಡುಗನಂತೆ ಕಾಣುವ ಅಜೇಯ್, ಫೈಟು ಮತ್ತು ಡ್ಯಾನ್ಸ್ ನಲ್ಲಿ ಸೂಪರ್. ಇನ್ನೂ ಮಯೂರಿ ನಗು ಇಷ್ಟ. ಆಕ್ಟಿಂಗ್ ಸ್ವಲ್ಪ ಕಷ್ಟ. ['ಕೃಷ್ಣಲೀಲಾ' ಚಿತ್ರಕ್ಕೆ ಸ್ಪೂರ್ತಿ ನೀಡಿರುವ ನೈಜ ಕಥೆ ಯಾವುದು?]


ಉಳಿದ ತಾರಾಬಳಗ

ಕುಡುಕ ಬೇಜವಾಬ್ದಾರಿ ತಂದೆ ಪಾತ್ರದಲ್ಲಿ ಅಚ್ಯುತ್ ಕುಮಾರ್ ನಟನೆ ಚೆನ್ನಾಗಿದೆ. ಹೀಗೆ ಬಂದು ಹಾಗೇ ಹೋಗುವ ಬುಲ್ಲೆಟ್ ಪ್ರಕಾಶ್, ಸಾಧು ಕೋಕಿಲ, ರಂಗಾಯಣ ರಘು ಕೊಟ್ಟ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.


ಫುಲ್ 'ಕಿಕ್' ಕೊಡುವ ಸಂಗೀತ

'ಕೃಷ್ಣಲೀಲಾ' ಚಿತ್ರದ ಪ್ಲಸ್ ಪಾಯಿಂಟ್ ಶ್ರೀಧರ್.ವಿ.ಸಂಭ್ರಮ್ ರವರ ಸಂಗೀತ. ಒಂದಕ್ಕಿಂತ ಒಂದು ವಿಭಿನ್ನವಾಗಿರುವ ಹಾಡುಗಳು ಪ್ರೇಕ್ಷಕರಿಗೆ ಕಿಕ್ ನೀಡುತ್ತದೆ. ಚಿತ್ರಮಂದಿರದಿಂದ ಹೊರಗೆ ಬಂದ ಮೇಲೂ ಕೆಲವರು ''ಕೃಷ್ಣ ಕಾಲಿಂಗ್...'' ಹಾಡನ್ನ ಗುನುಗುತ್ತಾರೆ ಅಂದ್ರೆ, ಹಾಡುಗಳು ಕ್ಲಿಕ್ ಆಗಿವೆ ಅಂತರ್ಥ. ಇನ್ನೂ ಶೇಖರ್ ಚಂದ್ರ ಕ್ಯಾಮರಾ ಕೈಚಳಕದ ಬಗ್ಗೆ ಮಾತನಾಡುವ ಹಾಗಿಲ್ಲ. ಕತ್ರಿ ಕೆಲಸ ಕೊಂಚ ಚುರುಕಾಗಿರಬೇಕಿತ್ತು. [''ಕೃಷ್ಣ ಕಾಲಿಂಗ್...ಲೀಲಾ ಡಾರ್ಲಿಂಗ್...'' ಮಸ್ತ್ ಹಾಡು ಕೇಳಿ..]


ಗಿಮಿಕ್ ಇಲ್ಲ...ಎಲ್ಲೂ ಕೆಮ್ಮಂಗಿಲ್ಲ...!

ಎರಡುವರೆ ಗಂಟೆಯ ಅವಧಿಯಲ್ಲಿ ಎಲ್ಲೂ ಪ್ರೇಕ್ಷಕರಿಗೆ ಬೋರ್ ಹೊಡೆಸದೆ, ಅಚ್ಚುಕಟ್ಟಾಗಿ ಚಿತ್ರಕಥೆಯನ್ನ ನಿರೂಪಿಸುವಲ್ಲಿ ಶಶಾಂಕ್ ಯಶಸ್ವಿಯಾಗಿದ್ದಾರೆ. ಬೇಕೇ ಬೇಕು ಅಂತ ಹಾಸ್ಯಸನ್ನಿವೇಶಗಳನ್ನ ತುರುಕದೆ, ಅನಾವಶ್ಯಕ ಹೊಡೆದಾಟದ ದೃಶ್ಯಗಳನ್ನ ಸೇರಿಸದೆ ಒಂದೊಳ್ಳೆ ಕೌಟುಂಬಿಕ ಚಿತ್ರವನ್ನ ಶಶಾಂಕ್ ನೀಡಿದ್ದಾರೆ. [ಪುನೀತ್ ಕಾರಲ್ಲಿ ಸದಾ ಪ್ಲೇ ಆಗುವ ಹಾಡು ಇದೇ..!]


ಹೋಗ್ರಪ್ಪೋ....ಹೋಗ್ ನೋಡ್ರಿ....

ಡಬಲ್ ಮೀನಿಂಗ್ ಡೈಲಾಗ್ಸ್ ಇಲ್ಲದೇ, ಐಟಂ ಸಾಂಗ್ ಇಲ್ಲದೇ, ಮುಜುಗರ ಪಡುವ ದೃಶ್ಯಗಳಿಲ್ಲದೆ ಇರುವ ಅಪ್ಪಟ ಸದಭಿರುಚಿಯ ಕೌಟುಂಬಿಕ ಚಿತ್ರ 'ಕೃಷ್ಣಲೀಲಾ'. ಹೀಗಾಗಿ ಇಡೀ ಕುಟುಂಬ ಕೂತು 'ಸ್ಮೈಲಿಂಗ್' ಕೃಷ್ಣನ ಕಷ್ಟದ ಕಹಾನಿಯನ್ನ ಆರಾಮಾಗಿ ನೋಡಬಹುದು.


English summary
Ajay Rao starrer Krishna Leela is released all over Karnataka today (March 20th). Krisha Leela is a wholesome entertainer and definately a worth watch. Here is a complete review of the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada