»   » ವಿಮರ್ಶೆ: 'ಮಾದ ಮತ್ತು ಮಾನಸಿ'ಯ ದುರಂತ ಪ್ರೇಮ ಕಥೆ

ವಿಮರ್ಶೆ: 'ಮಾದ ಮತ್ತು ಮಾನಸಿ'ಯ ದುರಂತ ಪ್ರೇಮ ಕಥೆ

Posted By:
Subscribe to Filmibeat Kannada

''ಮಾದ ಮತ್ತು ಮಾನಸಿ' ಇವರಿಬ್ಬರು ಪ್ರೇಮಿಗಳಲ್ಲ. ಆದರೂ ಇದೊಂದು ದುರಂತ ಪ್ರೇಮಕತೆ''

ಚಿತ್ರದ ಓಪನಿಂಗ್ ನಲ್ಲೇ ಚಿನಕುರುಳಿ ನಟಿ ಅನುಶ್ರೀ ಎಂಟ್ರಿ. ಸೂಪರ್ ಸಾಂಗ್ ಜೊತೆಗೆ ಮಸ್ತ್ ಸ್ಟೆಪ್ ಹಾಕುವ ಅನುಶ್ರೀ, 'ಮಾದ ಮತ್ತು ಮಾನಸಿ'ಯ ಇಂಟ್ರೊಡಕ್ಷನ್ ಕೊಡ್ತಾರೆ.

ಸಾಂಗ್ ಮುಗಿದ ಮೇಲೆ ಶುರು, 'ಮಾದ ಮತ್ತು ಮಾನಸಿ'ಯ ಅಸಲಿ ಕಹಾನಿ. 

Rating:
3.0/5

ಚಿತ್ರ: ಮಾದ ಮತ್ತು ಮಾನಸಿ
ಕಥೆ, ನಿರ್ದೇಶನ: ಸತೀಶ್ ಪ್ರಧಾನ್
ನಿರ್ಮಾಣ: ಮನೋಮೂರ್ತಿ
ಸಂಗೀತ: ಮನೋಮೂರ್ತಿ
ತಾರಾ ಬಳಗ: ಪ್ರಜ್ವಲ್ ದೇವರಾಜ್, ಶ್ರುತಿ ಹರಿಹರನ್, ರಂಗಾಯಣ ರಘು ಮತ್ತು ಇತರರು
ಬಿಡುಗಡೆ: ನವೆಂಬರ್, 25, 2016

ಕಥಾಹಂದರ

ಮಾದ (ಪ್ರಜ್ವಲ್ ದೇವರಾಜ್) ಮತ್ತು ಮಾನಸಿ (ಶೃತಿ ಹರಿಹರನ್) ಇಬ್ಬರು ಪ್ರೇಮಿಗಳು. ಮನೆಯವರು ಒಪ್ಪದ ಕಾರಣ ಮನೆ ಬಿಟ್ಟು ಓಡಿ ಹೋಗುತ್ತಾರೆ. ರೈಲಿನಲ್ಲಿ ಜರ್ನಿ ಶುರು ಮಾಡುವ 'ಮಾದ ಮತ್ತು ಮಾನಸಿ'ಗೆ ರಂಗಾಯಣ ರಘು ಜೊತೆಯಾಗುತ್ತಾರೆ. ಈ ಜರ್ನಿ ಮಧ್ಯೆ ಮಾನಸಿ ಮೇಲೆ ಅತ್ಯಾಚಾರ ನಡೆಯುತ್ತೆ. ತದ ನಂತರ ಆತ್ಯಾಚಾರಕ್ಕೊಳಗಾದ ಮಾನಸಿ, ಏನಾಗುತ್ತಾಳೆ? 'ಮಾದ ಮತ್ತು ಮಾನಸಿ' ಪ್ರೀತಿ ಉಳಿಯುತ್ತಾ? ಎಂಬುದು ಚಿತ್ರದ ಕಥೆ.

ಮೊದಲಾರ್ಧ ಹೇಗಿದೆ?

'ಮಾದ ಮತ್ತು ಮಾನಸಿ', ಪಕ್ಕಾ ಲವ್ ಸ್ಟೋರಿ. ಇಲ್ಲಿ ಆಕ್ಷನ್, ಮಸಾಲ, ಡೈಲಾಗ್ ಗಳಿಗಿಂತ, ಪ್ರೀತಿ, ಪ್ರೇಮ, ಭಾವನೆಗಳಿಗೆ ಹೆಚ್ಚು ಜಾಗ. ಹಾಗಂತ ಫೈಟ್ಸ್, ಡೈಲಾಗ್ಸ್ ಇಲ್ಲ ಅಂತ ಅಂದುಕೊಳ್ಳಬೇಡಿ. ಫಸ್ಟ್ ಹಾಫ್ ನಲ್ಲಿ ಜಬರ್ ದಸ್ತ್ ಆದ ಮೂರು ಫೈಟ್ ಗಳು ಸಿನಿಮಾಗೆ ಕಿಕ್ ಕೊಡುತ್ತೆ. ಪ್ರಜ್ವಲ್ ದೇವರಾಜ್ ಬಾಯಲ್ಲಿ ಬರುವ ಕೆಲ ಡಬ್ಬಲ್ ಮೀನಿಂಗ್ ಡೈಲಾಗ್ ಗಳು ಜೋಶ್ ಹೆಚ್ಚಿಸುತ್ತೆ. ಆದರೂ, ಅರ್ಥವಾಗದ ಚಿತ್ರಕತೆ ಪ್ರೇಕ್ಷಕರನ್ನ ಮೊದಲಾರ್ಧದಲ್ಲೇ ನಿದ್ದೆಗೆ ಜಾರಿಸುತ್ತದೆ.

ಕಥೆಗೆ ಟ್ವಿಸ್ಟ್ ಕೊಡುವ ಇಂಟರ್ ವಲ್

'ಮಾದ ಮತ್ತು ಮಾನಸಿ'ಯ ಲವ್ ಜರ್ನಿ ಕರೆಕ್ಟ್ ಆಗಿಯೇ ಹೋಗುತ್ತಿರುವ ಸಮಯದಲ್ಲಿ, ಮಾನಸಿ ಮೇಲೆ ಅತ್ಯಾಚಾರವಾಗುತ್ತೆ. ಈ ಘಟನೆ ಆದ ಬಳಿಕ ಮಾದ, ಮಾನಸಿಯ ಲವರ್ ಅಲ್ಲ ಎಂಬ ಟ್ವಿಸ್ಟ್, ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲವನ್ನ ಹೆಚ್ಚಿಸುತ್ತೆ.

ಸೆಕೆಂಡ್ ಹಾಫ್

ಚಿತ್ರದ ದ್ವಿತೀಯಾರ್ಧ ಪೂರ್ತಿ ಭಾವನಾತ್ಮಕವಾಗಿದೆ. ಅತ್ಯಾಚಾರಕ್ಕೊಳಗಾದ ಮಾನಸಿ ಹಾಗೂ ಮಾದನ ಜರ್ನಿ ತುಂಬಾ ಸೆಂಟಿಮೆಂಟ್ ಆಗಿದೆ. ಮನರಂಜನೆಯಾಗಿ ಸಾಗುತ್ತಿದ್ದ ಸಿನಿಮಾ ಸೆಕೆಂಡ್ ಹಾಫ್ ನಲ್ಲಿ ಕಂಪ್ಲೀಟ್ ಬದಲಾಗುತ್ತೆ. ಹಂತ ಹಂತದಲ್ಲೂ ತಿರುವುಗಳನ್ನ ಪಡೆಯುವ ಚಿತ್ರಕತೆಯಲ್ಲಿ, ಊಹಿಸಲಾಗದ ಕ್ಲೈಮ್ಯಾಕ್ಸ್ ಸಿಗುತ್ತೆ. ಹಾಗಾದ್ರೆ, ಮಾದ ಮತ್ತು ಮಾನಸಿ ಒಂದಾಗ್ತಾರ? ಅತ್ಯಾಚಾರಕ್ಕೊಳಗಾದ ಮಾನಸಿಯ ನಿಲುವೇನು? ಕ್ಲೈಮ್ಯಾಕ್ಸ್ ನಲ್ಲಿ ವಿಲನ್ ಯಾರಾಗ್ತಾರೆ ಎಂಬುದನ್ನ ನೀವು ಚಿತ್ರಮಂದಿರದಲ್ಲಿ ನೋಡಿ.

ಪ್ರಜ್ವಲ್ ದೇವರಾಜ್ ಅಭಿನಯ

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ತಮ್ಮ ನೈಜ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ. 'ಮಾದ'ನ ಪಾತ್ರಕ್ಕೆ ಜೀವ ತುಂಬಿರುವ ಪ್ರಜ್ವಲ್, ಎಂದಿನಂತೆ ತಮ್ಮ ಡ್ಯಾನ್ಸ್, ಫೈಟ್, ಆಕ್ಟಿಂಗ್ ಖರಾಮತ್ತು ತೋರಿಸಿದ್ದಾರೆ.

ಶೃತಿ ಹರಿಹರನ್ ಅಭಿನಯ ಹೇಗಿದೆ

ಈ ಚಿತ್ರದಲ್ಲಿ ಶೃತಿ ಹರಿಹರನ್ ಫರ್ಫಾಮೆನ್ಸ್ ಗೆ ಹೆಚ್ಚು ಒತ್ತು ನೀಡಲಾಗಿದ್ದು, 'ಮಾನಸಿ' ಪಾತ್ರದಲ್ಲಿ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಫಸ್ಟ್ ಹಾಫ್ ನಲ್ಲಿ ಗ್ಲಾಮರ್ ಬೆಡಗಿಯಾಗಿ ಕಾಣಿಸಿಕೊಂಡಿರುವ ಶೃತಿ, ಸೆಕೆಂಡ್ ಹಾಫ್ ನಲ್ಲಿ ಡಿ-ಗ್ಲಾಮರ್ ಪಾತ್ರದ ಮೂಲಕ ಮೋಡಿ ಮಾಡುತ್ತಾರೆ.

ಉಳಿದವರು ಹೇಗೆ?

'ಮಾದ ಮತ್ತು ಮಾನಸಿ' ಚಿತ್ರದಲ್ಲಿ ರಂಗಾಯಣ ರಘು ಅವರದ್ದು ಇಲ್ಲಿ ಸೀರಿಯಸ್ ಪಾತ್ರ. ಅನುಶ್ರೀ ಚಿತ್ರದ ಹಾಡಿಗೆ ಮಾತ್ರ ಸೀಮಿತ. 'ಮಾನಸಿ' ತಂದೆ ಪಾತ್ರದಲ್ಲಿ ಶೋಭರಾಜ್, ಹಾಗೆ ಬಂದು ಹೀಗೆ ಹೋಗುವ ಬುಲೆಟ್ ಪ್ರಕಾಶ್, ಮಜಾ ಟಾಕೀಸ್ ಪವನ್, ವಾಣಿಶ್ರೀ, ನಿರಂಜನ್ ತಮ್ಮ ಪಾತ್ರಗಳನ್ನ ಉತ್ತಮವಾಗಿ ನಿರ್ವಹಿಸಿದ್ದಾರೆ.

ನಿರ್ದೇಶನ ಹೇಗಿದೆ

ಚಿತ್ರದ ಕಥೆ ಇಷ್ಟವಾದರೂ, ನಿರೂಪಣೆ ಮಾಡುವಲ್ಲಿ ನಿರ್ದೇಶಕ ಸತೀಶ್ ಪ್ರಧಾನ್ ಎಡವಿದ್ದಾರೆ. ನಿಧಾನಗತಿಯ ಚಿತ್ರಕಥೆ ಪ್ರೇಕ್ಷಕರಿಗೆ ಬೋರ್ ಎನಿಸುತ್ತದೆ. ಹಲವು ಕಡೆ ಕಂಟ್ಯೂನಿಟಿಯ ಸಮಸ್ಯೆ ಎದ್ದುಕಾಣುತ್ತೆ. 'ಮಾದ ಮತ್ತು ಮಾನಸಿ'ಯ ನಡುವಿನ ಅತಿಯಾದ ಪ್ರೀತಿ, ಕೆಲವೊಂದು ದೃಶ್ಯಗಳಲ್ಲಿ ರೋಧನೆ ಎನಿಸುತ್ತದೆ. ಈ ಎಲ್ಲದರ ಮಧ್ಯೆ ತಾಳ್ಮೆ ಕಾಯ್ದುಕೊಂಡ ಪ್ರೇಕ್ಷಕ ಮಾತ್ರ 'ಮಾದ ಮತ್ತು ಮಾನಸಿ'ಯ ಪ್ರೀತಿಯನ್ನ ಒಪ್ಪಿಕೊಳ್ಳಬಹುದು.

ಹಾಡುಗಳು ಹೇಗಿದೆ

ಸಂಗೀತ ನಿರ್ದೇಶಕ ಮನೋಮೂರ್ತಿ, ಚಿತ್ರಕ್ಕೆ ಬಂಡವಾಳ ಹಾಕಿ ಸಿನಿಮಾವನ್ನ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಆದರೇ, ಸಂಗೀತದಲ್ಲಿ ಅಷ್ಟಾಗಿ ಪರಿಣಾಮಕಾರಿಯಾಗಿಲ್ಲ. 'ಮಾದ ಮತ್ತು ಮಾನಸಿ' ಎಂಬ ಸಾಲುಗಳು ಬಿಟ್ರೆ, ಬೇರೆ ಯಾವ ಹಾಡು ಜೋಶ್ ಕೊಡಲ್ಲ. ಚಿತ್ರದ ಮಧ್ಯೆ ಯಾಕಪ್ಪ ಹಾಡು ಬಂತು ಎನ್ನುವ ಭಾವನೆ ನೋಡುಗರಿಗೆ ಬರುತ್ತೆ.

ಫೈನಲ್ ಸ್ಟೇಟ್ ಮೆಂಟ್

'ಮಾದ ಮತ್ತು ಮಾನಸಿ' ಚಿತ್ರದ ಕಾನ್ಸೆಪ್ಟ್ ಚೆನ್ನಾಗಿದೆ. ಪ್ರಜ್ವಲ್ ದೇವರಾಜ್, ಶೃತಿ ಹರಿಹರನ್ ಅಭಿನಯ ಚಿತ್ರದ ಪ್ಲಸ್ ಪಾಯಿಂಟ್. ಯಾವಾಗಲೂ ಲವ್, ಪ್ರೊಪೋಸ್, ಬ್ರೇಕ್ ಅಪ್ ಹ್ಯಾಪಿ ಎಂಡಿಂಗ್ ಅಂತಾ ನೋಡಿ ನೋಡಿ ಬೋರ್ ಆಗಿದ್ರೆ, ಖಂಡಿತಾ 'ಮಾದ ಮತ್ತು ಮಾನಸಿ' ಚಿತ್ರವನ್ನ ನೋಡಿ, ಪ್ರೀತಿಯಲ್ಲಿ ಒಂದು ಚೇಂಜ್ ಎನ್ನಿಸುತ್ತೆ. ಆದ್ರೆ, 'ಮಾದ ಮತ್ತು ಮಾನಸಿ' ಪ್ರೀತಿಯನ್ನ ಚಿತ್ರಮಂದಿರದಲ್ಲಿ ಕೂತು ನೋಡುವ ತಾಳ್ಮೆ ಪ್ರೇಕ್ಷಕರಿಗೆ ಇರಬೇಕು.

English summary
Kannada actor Prajwal Devaraj, Kannada Actress Sruthi Hariharan starrer 'Maada mattu Manasi' has hit the screens today (November 25th). The movie is directed by Satish Pradhan. Here is the complete review of 'Maada mattu Manasi'
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada