»   » ಮುದ್ದು ಮನಸ್ಸಿಗೆ ಮನಸೋತರಾ ವಿಮರ್ಶಕರು?

ಮುದ್ದು ಮನಸ್ಸಿಗೆ ಮನಸೋತರಾ ವಿಮರ್ಶಕರು?

By Harshitha
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಹೊಸಬರ ಚಿತ್ರವೇ ಆದರೂ, ಸ್ಯಾಂಡಲ್ ವುಡ್ ನಲ್ಲಿ ಸಖತ್ ಸೌಂಡ್ ಮಾಡಿರುವ ಸಿನಿಮಾ 'ಮುದ್ದು ಮನಸೇ' ಈ ವಾರ ರಾಜ್ಯಾದಂತ್ಯ ತೆರೆಕಂಡಿದೆ.

  ತ್ರಿಕೋನ ಪ್ರೇಮಕಥೆ ಹೊಂದಿರುವ 'ಮುದ್ದು ಮನಸೇ' ಚಿತ್ರದಲ್ಲಿ ಅರುಣ್ ಗೌಡ, ನಿತ್ಯಾ ರಾಮ್, ಐಶ್ವರ್ಯ ನಾಗ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರೋಮ್ಯಾನ್ಸ್ ಜೊತೆ ಆಕ್ಷನ್ ಕೂಡ ಚಿತ್ರದಲ್ಲಿದೆ. [ಚಿತ್ರ ವಿಮರ್ಶೆ: ಮುದ್ದು ಮುದ್ದು ಮನಸುಗಳ 'ಮುದ್ದು ಮನಸೇ']

  ನವಿರಾದ ಪ್ರೇಮಕಥೆ ಹೊಂದಿರುವ 'ಮುದ್ದು ಮನಸೇ' ವಿಮರ್ಶಕರಿಗೆ ಇಷ್ಟವಾಯ್ತಾ? ಹೊಸಬರ ಹೊಸ ಪ್ರಯತ್ನಕ್ಕೆ ವಿಮರ್ಶಕರು ಜೈಕಾರ ಹಾಕಿದ್ರಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಖ್ಯಾತ ದಿನ ಪತ್ರಿಕೆಗಳು ಪ್ರಕಟಿಸಿರುವ 'ಮುದ್ದು ಮನಸೇ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

  ಹೊಸ ಮನಸು, ಹಳೆ ಮುದ್ದಾಟ - ಪ್ರಜಾವಾಣಿ

  ‘ಹಣೆ ಬರಹಕ್ಕೆ ಹೊಣೆ ಯಾರು'- ಶುಭಂ ಸ್ಥಾನದಲ್ಲಿ ಹೀಗೊಂದು ಬರಹ ಕಾಣಿಸಿಕೊಳ್ಳುತ್ತದೆ. ಪ್ರೀತಿಯ ವಿಚಾರವಾಗಿ ಮನುಷ್ಯ ಪ್ರಯತ್ನಕ್ಕಿಂತ ವಿಧಿ ಲಿಖಿತದ್ದೇ ಮೇಲುಗೈ ಎಂದು ಚಿತ್ರವನ್ನು ಪೂರ್ಣಗೊಳಿಸುತ್ತಾರೆ ನಿರ್ದೇಶಕ ಅನಂತ್ ಶೈನ್. ಚಿತ್ರಕಥೆಯಲ್ಲಿ ತ್ರಿಕೋನ ಪ್ರೇಮದ ಒದ್ದಾಟವಿದೆ. ಒಬ್ಬ ಹುಡುಗ-ಇಬ್ಬರು ಹುಡುಗಿಯರ ಪ್ರೇಮದ ತಹತಹಿಕೆ-ಹೋರಾಟವಿದೆ. ಪ್ರೀತಿಯನ್ನು ಉಳಿಸಿಕೊಳ್ಳಲು ನಡೆಸುವ ಪ್ರಯತ್ನವಿದೆ. ಸಿನಿಮಾವನ್ನು ದುರಂತ ಪ್ರೇಮಕಥೆಯಾಗಿಸಿರುವ ಕಾರಣ ‘ಹಣೆಬರಹ'ವೇ ನಿರ್ದೇಶಕರಿಗೆ ಮುಖ್ಯವಾಗಿ ಕಂಡಿರಬೇಕು! ‘ಮುದ್ದು ಮನಸೇ' ಹೆಸರಿನಲ್ಲಿಯೇ ಚೆಂದವಿದೆ. ಇದಕ್ಕೊಪ್ಪುವಂತೆ ಒಂದಿಷ್ಟು ಹೊಸತು ಮತ್ತು ಭಿನ್ನ ಅಂಶಗಳನ್ನು ಪ್ರೇಮಕಥೆಗೆ ಹೆಣೆದಿದ್ದರೆ ಚೆಂದಗಾಣುತ್ತಿತ್ತು. - ಡಿ.ಎಂ.ಕುರ್ಕೆ ಪ್ರಶಾಂತ

  ಮುದುಡಿದ ಮುದ್ದು ಮನಸ್ಸು - ವಿಜಯ ಕರ್ನಾಟಕ

  ಅನಂತ್ ಶೈನ್ ನಿರ್ದೇಶನದ 'ಮುದ್ದುಮನಸೇ' ಚಿತ್ರ ವಿಷಾದವೇ ತುಂಬಿರುವ ಸರಳ ಪ್ರೇಮಕಥೆ ಹೊಂದಿದೆ. ಪ್ರೇಮಕಥೆಗೆ ಅಮ್ಮನ ಸೆಂಟಿಮೆಂಟ್, ಸ್ನೇಹದ ಪೆಪ್ಪರ್‌ಮೆಂಟ್, ಒಂದೆರಡು ಫೈಟ್, ಚಂದದ ಹಾಡುಗಳು ಜೊತೆಯಾಗಿವೆೆ. ಚಿತ್ರದಲ್ಲಿ ಸಂಭ್ರಮ, ಸಡಗರ, ಲವಲವಿಕೆಗಿಂತ ಹೆಚ್ಚು ವಿಷಾದ, ಚಡಪಡಿಕೆ ತುಂಬಿದೆ. ಕೊನೆಗೆ ಎಲ್ಲವೂ ಇದ್ದರೂ ಏನೂ ಇಲ್ಲವೆಂಬ ಭಾವ ಮೂಡುತ್ತದೆ. - ಪ್ರವೀಣ್ ಚಂದ್ರ

  ಮೌನಮಾತುಗಳ ನಿತ್ಯೋತ್ಸವ, ಪೂರ್ವಿಕಲ್ಯಾಣಿಯ ಪ್ರೇಮೋತ್ಸವ - ಉದಯವಾಣಿ

  ಕೆಲ ಚಿತ್ರಗಳಲ್ಲಿರುವಂತೆ ಇಲ್ಲೂ ಇಬ್ಬರು ಹುಡುಗೀರು, ಒಬ್ಬ ಹುಡುಗ, ಅವರ ನಡುವಿನ ಪ್ರೇಮಕಥೆ ಇದೆ. ಆದರೆ, ಆ ಪ್ರೇಮಕಥೆಯನ್ನೇ ಕೊಂಚ ಭಿನ್ನವಾಗಿ ತೋರಿಸಿರುವುದರಿಂದಲೇ ಚಿತ್ರಕ್ಕೆ ಎದುರಾಗಬಹುದಾಗಿದ್ದ ಅಪಾಯವೊಂದು ತಪ್ಪಿ ಹೋಗಿದೆ ಎನ್ನಬಹುದು. ಇದು ಲವ್ವು, ನೋವು, ಸೆಂಟಿಮೆಂಟ್‌, ಹೊಡೆದಾಟ, ಕುಣಿದಾಟ, ಮೋಸದಾಟ ಎಲ್ಲವನ್ನೂ ಒಳಗೊಂಡ ಪ್ಯಾಕೇಜ್‌ ಸಿನಿಮಾ ಎನ್ನಲ್ಲಡ್ಡಿಯಿಲ್ಲ. ಚಿತ್ರದ ಮೊದಲರ್ಧ ನಿಧಾನವೆನಿಸುತ್ತೆ. ಫ್ಲ್ಯಾಶ್‌ಬ್ಯಾಕ್‌ನಲ್ಲಿ ಕಥೆ ಸಾಗುವುದರಿಂದ ಆ ನಿಧಾನಗತಿಯನ್ನ ಮರೆಸುತ್ತೆ. ದ್ವಿತಿಯಾರ್ಧದಲ್ಲಿರುವ ಹಿಡಿತ ಮೊದಲರ್ಧದಲ್ಲೂ ಇದ್ದಿದ್ದರೆ ಚಿತ್ರಕ್ಕೆ ಮತ್ತಷ್ಟು ಮಾರ್ಕ್ಸ್ ಕೊಡಬಹುದಿತ್ತು. - ವಿಜಯ್ ಭರಮಸಾಗರ

  Arun Gowda's debut is far from convincing - DNA

  While this is his debut film in Sandalwood (the Kannada film industry), Arun Gowda has put in a lot of effort to prove his mettle in action scenes. Aishwarya Nag looks good. Nithya Ram has to go a long way to establish herself as an actress in this industry. Some of the dialogues, especially those between the two sisters, are good. Two songs, 'Thinthale thinthale' and 'Neev kelabaradu ', are okay. - Y.Maheshwara Reddy

  English summary
  Arun Gowda, Aishwarya Nag, Nithya Ram starrer 'Muddu Manase' has received mixed response from the critics. Here is the collection of reviews from Karnataka's leading News Papers.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more