»   » ಪುನೀತ್ 'ಮೈತ್ರಿ' ಚಿತ್ರಕ್ಕೆ ವಿಮರ್ಶೆಗಳ ಮುಕ್ತ ಪ್ರಶಂಸೆ

ಪುನೀತ್ 'ಮೈತ್ರಿ' ಚಿತ್ರಕ್ಕೆ ವಿಮರ್ಶೆಗಳ ಮುಕ್ತ ಪ್ರಶಂಸೆ

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಮಲೆಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟಿಸಿರುವ 'ಮೈತ್ರಿ' ಸಿನಿಮಾ ತೆರೆಗೆ ಬಂದಿದೆ. 'ಮೈತ್ರಿ' ಚಿತ್ರದ ಫಸ್ಟ್ ಡೇ, ಫಸ್ಟ್ ಶೋ ನೋಡಿದ ಪ್ರೇಕ್ಷಕರು ಕ್ಲೀನ್ ಬೌಲ್ಡ್ ಆಗಿದ್ದಾರೆ.

  ಪಕ್ಕಾ ಕಮರ್ಶಿಯಲ್ ಸಿನಿಮಾ ಆಗಿದ್ದರೂ, 'ಮೈತ್ರಿ' ಚಿತ್ರದಲ್ಲಿ ಐಟಂ ಸಾಂಗ್ ಆಗಲಿ, ಸ್ಟಾರ್ ಗಳಿದ್ದರೂ ಸ್ಟಾರ್ ಗಿರಿಯಾಗಲಿ, ಅಬ್ಬರದ ಡೈಲಾಗ್ ಗಳಾಗಲಿ ಯಾವುದೂ ಇಲ್ಲ. ಗಿಮಿಕ್ ಗಳ ನಡುವೆ ಅಪರೂಪಕ್ಕೆ 'ಮೈತ್ರಿ'ಯಂತಹ ಸದಭಿರುಚಿಯ ಚಿತ್ರ ತೆರೆಗೆ ಬಂದಿದೆ. [ಚಿತ್ರ ವಿಮರ್ಶೆ: ಬಿಂದಾಸ್ ಐತ್ರಿ ಪುನೀತ್ 'ಮೈತ್ರಿ']


  ಬಾಲಾಪರಾಧ, ಮಕ್ಕಳ ಹಕ್ಕುಗಳ ಬಗ್ಗೆ ಸಂದೇಶ ಸಾರುವ 'ಮೈತ್ರಿ' ಚಿತ್ರ ವಿಮರ್ಶಕರಿಗೆ ತೃಪ್ತಿ ನೀಡಿದ್ಯಾ..? ಈ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳಬೇಕೆಂದ್ರೆ, 'ಮೈತ್ರಿ' ಚಿತ್ರದ ಬಗ್ಗೆ ಕರ್ನಾಟಕ ಜನಪ್ರಿಯ ಪತ್ರಿಕೆಗಳು ನೀಡಿರುವ ವಿಮರ್ಶೆಗಳ ಸಂಗ್ರಹ ಇಲ್ಲಿದೆ. ಮುಂದೆ ಓದಿ....


  ಸರಳ ಸುಂದರ ಮೈತ್ರಿ - ಪ್ರಜಾವಾಣಿ

  'ಮೈತ್ರಿ' ಚಿತ್ರ ಎರಡು ಕಾರಣಗಳಿಗಾಗಿ ಗಮನಸೆಳೆಯುತ್ತದೆ. ಮೊದಲನೆಯ ಕಾರಣ, ಅದು ನಿರ್ದೇಶಕರ ಸಿನಿಮಾ ಎನ್ನುವುದು. ಏನನ್ನು ಹೇಳಬೇಕು, ಹೇಗೆ ಹೇಳಬೇಕು ಎನ್ನುವುದರ ಬಗ್ಗೆ ಗಿರಿರಾಜ್ ಅವರಿಗೆ ಸ್ಪಷ್ಟತೆಯಿದೆ. ತಾರಾ ವರ್ಚಸ್ಸಿನ ಇಬ್ಬರು ನಾಯಕರಿದ್ದರೂ, ಅವರ ಇಮೇಜ್‌ ಮರೆತು ಕಥೆ ಹೇಳುವುದು ಅವರಿಗೆ ಸಾಧ್ಯವಾಗಿದೆ. ಹಾಗೆಂದು ಕಮರ್ಷಿಯಲ್ ಸಾಧ್ಯತೆಗಳನ್ನು ಗಿರಿರಾಜ್ ಬಿಟ್ಟುಕೊಟ್ಟಿಲ್ಲ. ಯಾವುದನ್ನೂ ಅತಿರೇಕಕ್ಕೆ ಒಯ್ಯದಿರುವುದು ಅವರ ವಿಶೇಷ. ಸಿನಿಮಾದ ಮತ್ತೊಂದು ಕುತೂಹಲಕರ ಅಂಶ ನಾಯಕನಟ ಪುನೀತ್ ರಾಜಕುಮಾರ್‌. (ಇನ್ನಷ್ಟು ಇಲ್ಲಿ ಓದಿ)
  - ರಘುನಾಥ.ಚ.ಹ


  'ಮೈತ್ರಿ' ಮನರಂಜನೆ ಐತ್ರೀ! - ಕನ್ನಡಪ್ರಭ

  ನಟ ಪುನೀತ್ ರಾಜ್ ಕುಮಾರ್ ತಾವು ತಾವಾಗಿಯೇ ಕಾಣಿಸಿಕೊಂಡಿದ್ದಾರೆ, ಅಂದರೆ ಸಿನೆಮಾ ನಟರಾಗಿಯೇ ಕಾಣಿಸಿಕೊಂಡಿದ್ದಾರೆ. ಅವರ ಇತರ ಚಿತ್ರಗಳಲ್ಲಿರುವಂತೆ ಕಿವಿಗಡಚಿಕ್ಕುವ ಸಂಗೀತದ ಹಿನ್ನೆಲೆಯಲ್ಲಿ ಬರುವ ಡ್ಯಾಶಿಂಗ್, ಮಾಸ್ ಡೈಲಾಗುಗಳು ಇಲ್ಲಿಲ್ಲವಾದರೂ ಮೆತ್ತಗೆ ಅವರಾಡುವ ನುಡಿಮುತ್ತುಗಳು ಅವುಗಳಿಗಿಂತೇನೂ ಕಮ್ಮಿ ತೋರುವುದಿಲ್ಲ, ಹಾಗಾಗಿ ಇಲ್ಲಿಯೂ ಶಿಳ್ಳೆ ಬೀಳುವುದಂತೂ ಗ್ಯಾರೆಂಟಿ. ಯಾವುದೇ ಚಿತ್ರವಾಗಲಿ, ಸ್ಪೂರ್ತಿಯನ್ನು ಎಲ್ಲೆಲ್ಲಿಂದಲೋ ಪಡೆದರೂ ಅದನ್ನು ಸಮರ್ಥವಾಗಿ ಬಳಸಿಕೊಳ್ಳದಿದ್ದರೆ ಅದು ವ್ಯರ್ಥ. ಈ ನಿಟ್ಟಿನಲ್ಲಿ ನಿರ್ದೇಶಕ ಗಿರಿರಾಜ್ ಒಂದುತ್ತಮ ಚಿತ್ರವನ್ನು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. (ಇನ್ನಷ್ಟು ಇಲ್ಲಿ ಓದಿ)
  - ಹರ್ಷವರ್ಧನ್


  ಮನಮೋಹಕ 'ಅಪ್ಪು'ಗೆ - ವಿಜಯವಾಣಿ

  ಪುನೀತ್: ನಿಮ್ಮ ಮಗ ಬದುಕಿದ್ದರೆ, ನೀವು ಮಾಡಿದ ಈ ಕೆಲಸಕ್ಕೆ ತುಂಬ ಖುಷಿ ಪಡುತ್ತಿದ್ದ...
  ಮೋಹನ್ ಲಾಲ್: ನಿಮ್ಮ ತಂದೆ ಇದ್ದಿದ್ದರೆ, ಈಗ ನಿಮ್ಮನ್ನ ನೋಡಿ ಬಹಳ ಹೆಮ್ಮೆ ಪಡೋರು...
  - ಇದೊಂದು ದೃಶ್ಯ ಸಾಕು, ಇದು ಮಗ ಮತ್ತು ಅಪ್ಪನೊಬ್ಬನ ಕಥೆ ಅಂತ ತಿಳಿಸೋಕೆ. ಆದರಿದು ಅಪ್ಪನ ಕಥೆಯಲ್ಲ, ಮಗನ ವ್ಯಥೆ. ಮಜಾ ಅಂದರೆ, ಕಾಲ್ಪನಿಕ ಕಥಾಸಂಬಂಧಿತ ಪುನೀತ್ ಡೈಲಾಗ್ ಗೂ; ವಾಸ್ತವದ ನೆಲೆಗಟ್ಟಿನಲ್ಲಿರುವ ಲಾಲ್ ಹೇಳಿಕೆಗೂ ಏನೇನೂ ಸಂಬಂಧನಿಲ್ಲ. ಆದರೆ, ಆ ಸನ್ನಿವೇಶಕ್ಕೆ ಅದು ಸಖತ್ ಪಂಚಿಂಗ್. ರೀಲ್ ಮತ್ತು ರಿಯಲ್ ಗಳ ಈ 'ಮೈತ್ರಿ' ಸಾಧ್ಯವಾಗಿಸಲಿಕ್ಕೆ ಮತ್ತೊಂದು ವಿಭಿನ್ನ ಹಾದಿಯಲ್ಲೇ ಕ್ರಮಿಸಿದ್ದಾರೆ ನಿರ್ದೇಶಕ ಗಿರಿರಾಜ್. ಈ ಹಾದಿಯಲ್ಲಿ ಅವರದ್ದು 'ದಿಟ್ಟ' ಸಾರ್ಥಕ ಪ್ರಯತ್ನ.
  - ರಾಜಶೇಖರಮೂರ್ತಿ


  ರಿಮ್ಯಾಂಡ್ ಹೋಮ್ ಮಿಲಿಯನೇರ್ - ವಿಜಯ ಕರ್ನಾಟಕ

  ಗಿರಿರಾಜ್ ನಿರ್ದೇಶನದ 'ಮೈತ್ರಿ' ಒಂದು ಸೊಗಸಾದ ಪ್ರಯೋಗಾತ್ಮಕ ಚಿತ್ರ. ಗಂಟೆಗೆ ನಾಲ್ಕು ಫೈಟಿಲ್ಲ. ಐಟಂ ಸಾಂಗಿಲ್ಲ. ಪ್ರೀತಿ ಪ್ರೇಮ ಪ್ರಣಯದ ಪ್ರಲಾಪವಿಲ್ಲ. ಡೈಲಾಗ್ ಸುರಿಮಳೆ ಇಲ್ಲ. ಸ್ಟಾರ್ ಗಿರಿಯ ವಿಜೃಂಭಣೆ ಇಲ್ಲ. ಇತ್ತೀಚಿನ ಹೆಚ್ಚಿನ ಸಿನಿಮಾಗಳಲ್ಲಿ ಢಾಳಾಗಿ ಹಾಳಾಗಿರುವುದನ್ನೆಲ್ಲ ಬದಿಗಿಟ್ಟು, ಅಪರೂಪಕ್ಕೆ ಚೆಂದದ ಚಿತ್ರ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಮೇಲಿನ ಅಂಶಗಳು ಇಲ್ಲವಾದರೂ, ಭರಪೂರ ಮನರಂಜನೆಗೆ ಕೊರತೆಯಿಲ್ಲ. ಇಬ್ಬರು ಬಿಗ್ ಸ್ಟಾರ್ ಮಾತ್ರವಲ್ಲದೆ, ಎಲ್ಲಾ ಕಲಾವಿದರೂ 'ಸ್ಟಾರ್'ಗಳಂತೆ ನಟಿಸಿದ್ದಾರೆ.
  - ಪ್ರವೀಣ್ ಚಂದ್ರ


  ಬೇರೆ ಥರದ, ಬೇರೆ ಸ್ತರದ ನೋಡಲೇಬೇಕಾದ 'ಮೈತ್ರಿ' - ಉದಯವಾಣಿ

  ಇಬ್ಬರು ಬಿಗ್ ಸ್ಟಾರ್ಸ್. ಸಹಜವಾಗಿ ನಿರೀಕ್ಷೆ ಜಾಸ್ತೀನೇ ಇರುತ್ತೆ. ಹಾಗಂತ ಆ ನಿರೀಕ್ಷೆ ಸುಳ್ಳಾಗಲು 'ಮೈತ್ರಿ' ಬಿಟ್ಟಿಲ್ಲ. ಆ ಬಿಗ್ ಸ್ಟಾರ್ಸ್ ಇಬ್ಬರಿಗೂ ಇಲ್ಲಿ ತೂಕದ ಪಾತ್ರಗಳಿವೆ. ಹಾಗಂತ, ಭರ್ಜರಿ ಫೈಟ್ಸ್ ಗಳಾಗಲಿ, ಅವರು ಕುಣಿದಾಡುವ ಹಾಡಾಗಲಿ, ಅದ್ಭುತ ತಾಣಗಳಾಗಲಿ ಇಲ್ಲಿಲ್ಲ. ಚಿತ್ರದಲ್ಲಿ ಸ್ಟಾರ್ಸ್ ಇದ್ದ ಮಾತ್ರಕ್ಕೆ ಅವೆಲ್ಲವೂ ಇರಬೇಕೆಂದೇನೂ ಇಲ್ಲ. ಸ್ಟಾರ್ಸ್ ಇಟ್ಟುಕೊಂಡೂ, ಆಡಂಬರವಿಲ್ಲದೆ ಸ್ವಚ್ಛ ಸಂದೇಶವುಳ್ಳ ಮನಸ್ಸಿಗೆ ನಾಟುವ ಈ ರೀತಿಯ ಸಿನಿಮಾವನ್ನೂ ಮಾಡಬಹುದು ಎಂಬುದಕ್ಕೆ 'ಮೈತ್ರಿ' ಸಾಕ್ಷಿ.
  - ವಿಜಯ್ ಭರಮಸಾಗರ


  'ಮೈತ್ರಿ' ವಿಮರ್ಶೆ - ಬೆಂಗಳೂರು ಮಿರರ್

  What a bounce back by director Giriraj! After the engrossing Jatta, he made the forgettable Advaitha. But, Mythri is, without doubt, one of the most sensible films Sandalwood has churned out in recent years. All along during the making of the film, the only talking point was whether Puneeth has enough screen space to please his fans.Malayalam superstar Mohanlal was projected as the protagonist. But in reality, Puneeth is on screen throughout the movie while Mohanlal is in an extended guest role. But the real hero of the film is the young Aditya. Along with another youngster Jagadish, he steals the show and once the film builds itself up, you are not wondering whether it is Puneeth or Mohanlal on the screen. That's what enchanting scripts can do. (ಇನ್ನಷ್ಟು ಇಲ್ಲಿ ಓದಿ)
  - ಶ್ಯಾಮ್ ಪ್ರಸಾದ್


  'ಮೈತ್ರಿ' ವಿಮರ್ಶೆ : ಪವರ್-ಲಾಲ್ ಪರ್ಫಾಮೆನ್ಸ್ - ಡೆಕನ್ ಕ್ರಾನಿಕಲ್

  Despite shades of the Academy award-winning Slum Dog Millionaire, and the plot revolving around an underprivileged boy residing in a slum, Mythri stands altogether on a different footage. Giriraj has penned the script with utmost care while balancing the real image of power star and the storyline while depicting it through sheer artistic excellence. (ಇನ್ನಷ್ಟು ಇಲ್ಲಿ ಓದಿ)
  - ಶಶಿ ಪ್ರಸಾದ್.ಎಸ್.ಎಂ


  English summary
  Power Star Puneeth Rajkumar and Mohan Lal starrer Kannada movie 'Mythri' has has received good response from the critics. Here is the collection of reviews by Top News Papers of Karnataka.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more