For Quick Alerts
  ALLOW NOTIFICATIONS  
  For Daily Alerts

  Paddehuli Review: ಸೋತು ಗೆದ್ದ ರಾಕ್ ಸ್ಟಾರ್

  |

  ಪ್ರತಿಯೊಬ್ಬರ ಜೀವನದಲ್ಲೂ ಸೋಲು ಮತ್ತು ಗೆಲುವು ಇದ್ದೇ ಇರುತ್ತೆ. ಸೋತು ತಕ್ಷಣ ಅದೇ ಅಂತಿಮವಾಗಲ್ಲ. ಆ ಸೋಲುಗಳನ್ನೇ ಮೆಟ್ಟಿಲು ಮಾಡಿಕೊಂಡು ಗೆಲುವಿನ ಗುರಿ ಮುಟ್ಟಬೇಕು. ಇದೇ ಸೂತ್ರ ಇಟ್ಟಕೊಂಡು ಜೀವನದ ಗುರಿಯನ್ನ ಸಾಧಿಸಲು ಹೊರಟ 'ರಾಕ್ ಸ್ಟಾರ್ ಪಡ್ಡೆಹುಲಿಯ' ಕಥೆ ಇದು. ಕೆ ಮಂಜು ಮಗ ಶ್ರೇಯಸ್ ಅಭಿನಯದ ಮೊದಲ ಸಿನಿಮಾ. ನಿರೀಕ್ಷೆಯ ಮಟ್ಟ ತಲುಪಿಲ್ಲ ಅಂದ್ರೂ ನಿರಾಸೆ ಮಾಡಲ್ಲ. ಪೂರ್ತಿ ವಿಮರ್ಶೆ ಮುಂದೆ ಓದಿ.....

  Rating:
  3.5/5

  ಚಿತ್ರ: ಪಡ್ಡೆಹುಲಿ

  ನಿರ್ದೇಶಕ: ಗುರುದೇಶಪಾಂಡೆ

  ಕಲಾವಿದರು: ಶ್ರೇಯಸ್, ನಿಶ್ವಿಕಾ ನಾಯ್ಡು, ರವಿಚಂದ್ರನ್

  ಬಿಡುಗಡೆ: ಏಪ್ರಿಲ್ 19, 2019

  ರಾಕ್ ಸ್ಟಾರ್ ಹುಡುಗನ ಯಶೋಗಾಥೆ

  ರಾಕ್ ಸ್ಟಾರ್ ಹುಡುಗನ ಯಶೋಗಾಥೆ

  ಚಿತ್ರದುರ್ಗದ ಅಪ್ಪದ ಕನ್ನಡ ಮೇಷ್ಟ್ರ ಕುಟುಂಬದಲ್ಲಿ ಜನಿಸಿದ ಹುಡುಗ. ತಾನು ಅತಿ ದೊಡ್ಡ ಸಂಗೀತಗಾರ ಆಗಬೇಕು ಎಂಬುದೇ ಆತನ ಕನಸು. ಆದ್ರೆ, ತಂದೆ-ತಾಯಿಗೆ ಅವನು ಚೆನ್ನಾಗಿ ಓದಿ, ಒಳ್ಳೆ ಕೆಲಸ ಮಾಡ್ಬೇಕು ಎಂಬ ಬಯಕೆ. ಆದ್ರೂ, ಆಸೆ, ಗುರಿ ಬಿಡದ ದುರ್ಗದ ಪಡ್ಡೆಹುಲಿ, ತನ್ನ ಗುರಿ ಸಾಧನೆಗಾಗಿ ಛಲ ತೊಟ್ಟು ಹೆಜ್ಜೆಯಿಡ್ತಾನೆ. ಈ ಹಾದಿಯನ್ನ ಪಡ್ಡೆಹುಲಿಗೆ ಕೆಲವು ತೊಡಕುಗಳು, ಅವಮಾನಗಳು ಎದುರಾಗುತ್ತೆ. ಇದೆಲ್ಲವನ್ನ ಮೀರಿ ದುರ್ಗದ ಸಂಪತ್ ಕುಮಾರ್ ರಾಕ್ ಸ್ಟಾರ್ ಆಗ್ತಾನಾ ಎಂಬುದು ಕಥೆ.

  ಎರಡು ಸಿನಿಮಾ ನೋಡಿದ ಅನುಭವ

  ಎರಡು ಸಿನಿಮಾ ನೋಡಿದ ಅನುಭವ

  ಪಡ್ಡೆಹುಲಿ ಸಿನಿಮಾದ ಅವಧಿ ಹೆಚ್ಚಿದೆ ಎಂಬ ಅನುಭವ. ಚಿತ್ರದುರ್ಗದಲ್ಲಿ ಆರಂಭವಾಗುವ ಕಥೆ ಸೆಕೆಂಡ್ ಹಾಫ್ ನಲ್ಲಿ ಬೆಂಗಳೂರಿನಲ್ಲಿ ಸಾಗುತ್ತೆ. ಮೊದರ್ಲಾಧ ಪೂರ್ತಿ ಕಾಲೇಜು ಹುಡುಗನ ಜಾಲಿಡೇಸ್, ಲವ್, ಫೈಟ್, ಕಾಮಿಡಿ, ಫ್ಯಾಮಿಲಿ, ಹೀಗೆ ಕಥೆ ಸಾಗುತ್ತೆ. ನಾಯಕಿ ಸಂಗೀತ (ನಿಶ್ವಿಕಾ) ಮತ್ತು ಸಂಪತ್ (ಶ್ರೇಯಸ್) ಕತೆಯೇ ಫಸ್ಟ್ ಹಾಫ್. ಸೆಕೆಂಡ್ ಹಾಫ್ ನಲ್ಲಿ ಈ ಕಥೆಯೇ ನನಪಾಗದಂತೆ ಕಥೆ ಹಿಡಿದಿಡುತ್ತೆ. ರಾಕ್ ಸ್ಟಾರ್ ಹುಡುಗನ ಯಶೋಗಾಥೆಯೇ ಹೈಲೈಟ್ ಆಗುತ್ತೆ. ಸೆಕೆಂಡ್ ಹಾಫ್ ನೋಡುವಾಗ, ಮೊದರ್ಲಾಧ ನೆನಪೇ ಆಗಲ್ಲ.

  ಹುಲಿಯಂತೆ ಘರ್ಜಿಸುವ ಶ್ರೇಯಸ್

  ಹುಲಿಯಂತೆ ಘರ್ಜಿಸುವ ಶ್ರೇಯಸ್

  ಪಡ್ಡೆಹುಲಿ ಟೈಟಲ್ ಗೆ ತಕ್ಕಂತೆ ಕೆ ಮಂಜು ಮಗ ಶ್ರೇಯಸ್ ಚೊಚ್ಚಲ ಚಿತ್ರದಲ್ಲಿ ಘರ್ಜಿಸಿದ್ದಾರೆ. ಮೊದಲ ಸಿನಿಮಾದಲ್ಲೇ ಉತ್ತಮ ಮಾಡಿರುವ ಶ್ರೇಯಸ್, ಒಳ್ಳೆಯ ಡ್ಯಾನ್ಸರ್. ಆಕ್ಷನ್ ದೃಶ್ಯಗಳಲ್ಲೂ ತಮ್ಮ ತಾಕತ್ ತೋರಿಸಿದ್ದಾರೆ. ಅದರಲ್ಲೂ ಕಾಲೇಜ್ ಕ್ಯಾಂಪಸ್ ನಡೆಯುವ ಫೈಟ್ ನಿಜಕ್ಕೂ ಇಷ್ಟ ಆಗುತ್ತೆ. ಮೂರ್ನಾಲ್ಕು ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುವ ನಾಯಕ ಪಾತ್ರಕ್ಕೆ ತಕ್ಕಂತೆ ತಯಾರಿ ಮಾಡಿರುವುದು ಗಮನ ಸೆಳೆಯುತ್ತೆ. ಸನ್ನಿವೇಶಕ್ಕೆ ತಕ್ಕ ಮ್ಯಾನರಿಸಂ ಕಾಣಿಸಲ್ಲ. ಎಲ್ಲಾ ಕಡೆಯೂ ಒಂದೇ ಸ್ಟೈಲ್ ನಲ್ಲಿ ಅಭಿನಯ ಮಾಡಿದ್ದಾರೆ ಅನ್ಸುತ್ತೆ.

  ಹೊಸ ಪಾತ್ರದಲ್ಲಿ ರವಿಚಂದ್ರನ್

  ಹೊಸ ಪಾತ್ರದಲ್ಲಿ ರವಿಚಂದ್ರನ್

  ನಾಯಕಿ ನಿಶ್ವಿಕಾ ಸಾಮಾನ್ಯ ಕಾಲೇಜ್ ಹುಡುಗಿ ಪಾತ್ರ. ತುಂಬಾ ಚೆನ್ನಾಗಿ ಕಾಣಿಸಿಕೊಂಡಿರುವ ನಿಶ್ವಿಕಾ, ಡ್ಯಾನ್ಸ್ ನಲ್ಲೂ ಕಮಾಲ್ ಮಾಡಿದ್ದಾರೆ. ರವಿಚಂದ್ರನ್ ಇಲ್ಲಿ ಅಪ್ಪಟ ಕನ್ನಡ ಮೇಷ್ಟ್ರು ಪಾತ್ರ. ಯಾವುದೇ ಮಾಸ್, ಫೈಟ್, ಡೈಲಾಗ್ ಇಲ್ಲದ ರವಿಮಾಮ, ಒಬ್ಬ ಜವಾಬ್ದಾರಿಯುತ ಅಪ್ಪನಾಗಿ ಅಭಿನಯಿಸಿದ್ದಾರೆ. ಆದ್ರೂ, ನೋಡೋದಕ್ಕೆ ಮಜಾ ಇದೆ. ರವಿಚಂದ್ರನ್ ಪತ್ನಿ ಪಾತ್ರದಲ್ಲಿ ಸುಧಾರಾಣಿ ಉತ್ತಮ ಸಾಥ್ ನೀಡಿದ್ದಾರೆ.

  ಚಿತ್ರದಲ್ಲಿ ಗಮನ ಸೆಳೆಯುವ ಅಂಶಗಳು

  ಚಿತ್ರದಲ್ಲಿ ಗಮನ ಸೆಳೆಯುವ ಅಂಶಗಳು

  ನಾಯಕನ ಆಪ್ತ ಸ್ನೇಹಿತನ ಪಾತ್ರದಲ್ಲಿ ಅಮಿತ್ ಇಷ್ಟವಾಗ್ತಾರೆ. ಚಿಕ್ಕಣ್ಣ, ಧರ್ಮಣ್ಣ ನಗಿಸ್ತಾರೆ. ಅತಿಥಿ ಪಾತ್ರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ಪುನೀತ್ ಎಂಟ್ರಿ ಖುಷಿ ಕೊಡುತ್ತೆ. ಆದ್ರೆ, ಆ ಪಾತ್ರಗಳನ್ನ ಥಿಯೇಟರ್ ನಲ್ಲೇ ನೋಡುವುದು ಉತ್ತಮ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಕತೆಗೆ ಪೂರಕವಾಗಿದೆ. ಹಾಡುಗಳು ನೆನಪಲ್ಲಿ ಉಳಿಯಲ್ಲ. ಆದ್ರೆ, ವಚನ, ಕವಿತೆ, ಅಶ್ವಥ್ ಅವರ ಹಾಡುಗಳನ್ನ ಉತ್ತಮವಾಗಿ ಬಳಸಿಕೊಂಡಿರುವುದು ಇಷ್ಟ ಆಗುತ್ತೆ. ರವಿಚಂದ್ರನ್ ಹಾಗೂ ನಾಯಕ ಶ್ರೇಯಸ್ ಪಾತ್ರಗಳ ಕನ್ನಡಾಭಿಮಾನ ಮತ್ತೊಂದು ಹೈಲೈಟ್.

  ಕೊನೆಯದಾಗಿ ಹೇಳುವುದು ಏನಂದರೇ

  ಕೊನೆಯದಾಗಿ ಹೇಳುವುದು ಏನಂದರೇ

  ರಾಕ್ ಸ್ಟಾರ್ ಹುಡುಗನ ಕಥೆ ಬಗ್ಗೆ ಕನ್ನಡ ಸೇರಿ ಇತರೆ ಭಾಷೆಗಳಲ್ಲು ಸಿನಿಮಾಗಳು ಬಂದಿದೆ. ಇದರಲ್ಲಿ ಹೊಸದು ಅಂತ ಏನೂ ಹೇಳಲು ಸಾಧ್ಯವಿಲ್ಲ. ಆದ್ರೆ, ಹೊಸ ನಾಯಕ ಎಂಟ್ರಿಗೆ ಇದು ಉತ್ತಮ ವೇದಿಕೆಯಾಗಿ ಬಳಸಿಕೊಂಡಿದ್ದಾರೆ. ನಿರ್ದೇಶಕ ಗುರುದೇಶಪಾಂಡೆ ತಮ್ಮ ಎಂದಿನ ಸಿನಿಮಾಗಳಂತೆ ಲವ್, ಆಕ್ಷನ್, ಫ್ಯಾಮಿಲಿ ಇಟ್ಟು ಒಳ್ಳೆಯ ಮನರಂಜನೆ ಕೊಡಲು ಪ್ರಯತ್ನಿಸಿದ್ದಾರೆ. ಅತಿಯಾದ ನಿರೀಕ್ಷೆಯಿಲ್ಲದೇ ಸಿನಿಮಾ ನೋಡಬಹುದು.

  English summary
  Kannada producer k manju' son shreyas debut to kannada industry with padde huli movie. the movie released today (april 19th) and directed by gurudesh pande.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X