For Quick Alerts
  ALLOW NOTIFICATIONS  
  For Daily Alerts

  'ರಾಕ್ಷಸಿ' ನೋಡಿದ ವಿಮರ್ಶಕರು ಭಯಗೊಂಡ್ರಾ ಇಲ್ಲ ಭೇಷ್ ಅಂದ್ರಾ?

  By Harshitha
  |

  ಕಾಲಿವುಡ್ ನಲ್ಲಿ ಮಿಸ್ಕಿನ್ ನಿರ್ದೇಶನದ 'ಪಿಸಾಸು' ಸಿನಿಮಾದ ರೀಮೇಕ್ 'ರಾಕ್ಷಸಿ'. ಸ್ಯಾಂಡಲ್ ವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ 'ರಾಕ್ಷಸಿ' ಚಿತ್ರ ಈ ವಾರ ರಿಲೀಸ್ ಆಗಿದೆ.

  ಸಿಂಧು ಲೋಕನಾಥ್ ಮತ್ತು ನವರಸನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ರಾಕ್ಷಸಿ' ಸಿನಿಮಾಗೆ ಉತ್ತಮ ಓಪನಿಂಗ್ ಸಿಕ್ಕಿದೆ. ಅಂದವಾದ 'ರಾಕ್ಷಸಿ' ಕಂಡು ಪ್ರೇಕ್ಷಕರು ಭಯ ಪಡದೆ ಇಂಪ್ರೆಸ್ ಆಗಿದ್ದಾರೆ.

  ಹಾಗೆ, ಈ 'ರಾಕ್ಷಸಿ' ಮೇಲೆ ವಿಮರ್ಶಕರಿಗೂ ಲವ್ ಆಗೋಯ್ತಾ? 'ರಾಕ್ಷಸಿ' ಚಿತ್ರವನ್ನ ನೋಡಿದ ವಿಮರ್ಶಕರು ಏನಂದ್ರು ಅಂತ ನಾವ್ ಹೇಳ್ತೀವಿ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

  ಒಳ್ಳೆಯ ದೆವ್ವ! - ಪ್ರಜಾವಾಣಿ

  ಒಳ್ಳೆಯ ದೆವ್ವ! - ಪ್ರಜಾವಾಣಿ

  ತಮಿಳಿನಲ್ಲಿ ಮಿಸ್ಕಿನ್ ನಿರ್ದೇಶಿಸಿದ ‘ಪಿಸಾಸು' ಚಿತ್ರದ ಕನ್ನಡ ಅವತರಣಿಕೆ ‘ರಾಕ್ಷಸಿ'. ನೆರೆಯ ಭಾಷೆಯಿಂದ ಕನ್ನಡದ ಗಡಿದಾಟಿ ಬಂದ ಈ ದೆವ್ವದ ವರ್ತನೆಯಲ್ಲಿ ಅದೇ ಅನುಕರಣೆಯಿದೆ. ಆದರೆ ದೆವ್ವದ ಹಿನ್ನೆಲೆ ಮತ್ತು ಮುನ್ನೆಲೆಯಲ್ಲಿ ಹಲವು ಬದಲಾವಣೆಗಳನ್ನು ಕಾಣಬಹುದು. ಈ ಪರಿವರ್ತನೆಯಲ್ಲಿ ಮಣ್ಣಿನ ಗುಣದ ಪ್ರಭಾವಳಿ ಇಲ್ಲದಿದ್ದರೂ, ಸೂಕ್ಷ್ಮತೆಯ ಕೊರತೆಯುಳ್ಳ ನಿರ್ದೇಶಕರಿಂದ ಉಂಟಾದ ಲೋಪವೆಂದು ಗುರ್ತಿಸಬಹುದು. - ಅಮಿತ್.ಎಂ.ಎಸ್

  ಈ ರಾಕ್ಷಸಿ ಮೇಲೆ ಲವ್ ಆಗ್ಬೋದು ಹುಷಾರ್...! - ಉದಯವಾಣಿ

  ಈ ರಾಕ್ಷಸಿ ಮೇಲೆ ಲವ್ ಆಗ್ಬೋದು ಹುಷಾರ್...! - ಉದಯವಾಣಿ

  ಸತ್ತ ಮೇಲೆ ಮನುಷ್ಯ ಭೂತವಾಗಿ ಅಂಡಲೆಯುತ್ತಾನೆ, ತನ್ನ ಆತ್ಮಕ್ಕೆ ಸದ್ಗತಿ ಸಿಗಲಿ ಅಂತ ಕಾಯುತ್ತಾನೆ; ಆದರೆ ತನ್ನ ಪ್ರೀತಿಯನ್ನು ಪಡೆಯದೇ ಸತ್ತ ಹುಡುಗಿ, ಆತ್ಮಕ್ಕೆ ಸದ್ಗತಿ ಸಿಗದಿರಲಿ ಅಂತ ಪ್ರೇತಾತ್ಮವಾಗಿಯೇ ಅಲೆಯಲು ಬಯಸಬಹುದಾ? -ಇಂಥ ವಿಚಿತ್ರ ಪ್ರಶ್ನೆ ಎತ್ತುವ ಸಿನಿಮಾ "ರಾಕ್ಷಸಿ'. ತಮಿಳಿನಲ್ಲಿ ವಿಶಿಷ್ಟ ಕತೆಗಳನ್ನು ತೆರೆ ಮೇಲೆ ಸಿನಿಮಾ ಆಗಿಸುವ ನಿರ್ದೇಶಕ ಮಿಸ್ಕಿನ್. ಮಿಸ್ಕಿನ್ ಅವರದೇ ನಿರ್ದೇನದ "ಪಿಸಾಸು' ಕನ್ನಡಕ್ಕೆ "ರಾಕ್ಷಸಿ' ಆಗಿದೆ. ಹೆದರಿಸುತ್ತಾ, ಬೆದರಿಸುತ್ತಾ ಶುರುವಾಗುವ ಕತೆ, ಕ್ರಮೇಣ ಕುತೂಹಲವಾಗುತ್ತದೆ, ಹೋಗುತ್ತಾ ಹೋಗುತ್ತಾ ಒಂದು ತೀವ್ರ ಪ್ರೇಮಕತೆಯಾಗುತ್ತದೆ, ಕರುಣಾಜನಕ ಕತೆಯಾಗುತ್ತದೆ. ಸಿನಿಮಾ ಮುಗಿಯುವ ಹೊತ್ತಿಗೆ ಸಸ್ಪೆನ್ಸ್, ಥ್ರಿಲ್ಲರ್‌, ರೊಮ್ಯಾನ್ಸ್ ಗಳ ಪ್ಯಾಕೇಜ್‌ ಆಗಿಬಿಡುತ್ತದೆ. - ವಿಕಾಸ್ ನೇಗಿಲೋಣಿ

  ಭಯಕ್ಕಿಂತಲೂ ಪ್ರೀತಿ, ಅನುಭೂತಿ ಮೂಡಿಸುವ ವಿಚಾರಪ್ರಿಯ ದೆವ್ವ - ಕನ್ನಡಪ್ರಭ

  ಭಯಕ್ಕಿಂತಲೂ ಪ್ರೀತಿ, ಅನುಭೂತಿ ಮೂಡಿಸುವ ವಿಚಾರಪ್ರಿಯ ದೆವ್ವ - ಕನ್ನಡಪ್ರಭ

  ಸಾಮಾನ್ಯವಾಗಿ ದೆವ್ವ-ಭೂತದ ಸಿನೆಮಾಗಳಲ್ಲಿ ದೆವ್ವವು ಒಂದು ಪಾತ್ರವಾಗಿ ಮೂಡುವುದು ವಿರಳ. ಪ್ರೇಕ್ಷಕನಿಗೆ 'ಭಯ' ಮೂಡಿಸುವುದನ್ನೇ ಪ್ರಧಾನವಾಗಿಟ್ಟುಕೊಂಡು ಜೋರಾದ ಶಬ್ದ, ಕಪ್ಪು ಕೋಣೆ ಇಂತಹ ದೃಶ್ಯಗಳ ನಡುವೆಯೇ ಗಿರಕಿ ಹೊಡೆದು, ಕೊನೆಗೆ ಅದು ಭೂತದ ಚೇಷ್ಟೆಯೋ ಅಥವಾ ಮತ್ತಿನ್ನೇನೋ ಎಂಬುದರ ಪತ್ತೆದಾರಿಯಾಗಷ್ಟೇ ಹಾರರ್ ಸಿನೆಮಾಗಳು ಉಳಿದುಬಿಡುತ್ತದೆ. ಆದರೆ ಈ ಸಿನೆಮಾದಲ್ಲಿ ನಮಗೆ ಭೂತ ಇದೆ ಎಂದು ಮೊದಲೇ ಎಶ್ಟಾಬ್ಲಿಶ್ ಆಗಿ, ಭೂತವೇ ಪ್ರಧಾನ ಪಾತ್ರವಾಗಿಬಿಡುತ್ತದೆ. ಪ್ರೇಕ್ಷಕ ನಟರೊಂದಿಗೆ ತೋರಬಹುದಾದ ಅನುಭೂತಿಯನ್ನು ಪ್ರೇತದೊಂದಿಗೂ ತೋರುತ್ತಾನೆ. ಮನುಷ್ಯ ಮನುಷ್ಯರ ನಡುವೆ ಪ್ರೀತಿ ವಿರಳವಾಗುತ್ತಾ ಬಂದಿರುವ ಕಾಲದಲ್ಲಿ ದೆವ್ವ ಪ್ರೀತಿ ಪಾಠವನ್ನು ಹೇಳುವುದು ಮಾರ್ಮಿಕವಾಗಿದೆ. - GN

  ರಾಕ್ಷಸಿ: ರಾಕ್ಷಸಿಯ ಪ್ರೇಮ್ ಕಹಾನಿ - ವಿಜಯ ಕರ್ನಾಟಕ

  ರಾಕ್ಷಸಿ: ರಾಕ್ಷಸಿಯ ಪ್ರೇಮ್ ಕಹಾನಿ - ವಿಜಯ ಕರ್ನಾಟಕ

  ಇದುವರೆಗೂ ಪ್ರೇಕ್ಷಕ ದೆವ್ವಗಳು ಎಂದರೆ ಮಾನವರಿಗೆ ಕೆಟ್ಟದು ಮಾಡುತ್ತವೆ, ಅವುಗಳಿಂದ ರಕ್ಷಿಸಿಕೊಳ್ಳಲು ಮಂತ್ರವಾದಿಗಳ ಮೊರೆ ಹೋಗುವುದು , ದೇವರ ಮೊರೆ ಹೋಗುವ ಚಿತ್ರಗಳನ್ನು ನೋಡಿದ್ದಾನೆ. ಆದರೆ ಫಾರ್ ಎ ಚೇಂಜ್ ಈ ಚಿತ್ರದಲ್ಲಿ ದೆವ್ವವೊಂದು (ಸಿಂಧು ಲೋಕನಾಥ್ ) ತನ್ನ ಸಾವಿಗೆ ಕಾರಣನಾದವನ (ನವರಸನ್) ಮೇಲೆ ಸೇಡು ತೀರಿಸಿಕೊಳ್ಳದೇ ಪ್ರೀತಿ ಮಾಡಲು ಶುರು ಮಾಡಿಕೊಳ್ಳುತ್ತದೆ. ಚಿತ್ರದ ನಾಯಕ ನವರಸನ್ ಮನೆಯಲ್ಲಿ ದೆವ್ವ ಸೇರಿಕೊಂಡು ನಾಯಕನಿಗೆ ಯಾರು ಯಾರು ಕಷ್ಟ ಕೊಡುತ್ತಾರೋ ಅವರನ್ನು ಬಲಿ ಪಡೆಯುತ್ತದೆ. ಹಾಗಾಗಿ ದೆವ್ವ ಹಾಗೂ ಹುಡುಗನೊಬ್ಬನ ನಡುವೆ ನಡೆಯುವ ಲವ್ ಸ್ಟೋರಿಯನ್ನು ದೃಶ್ಯ ರೂಪದಲ್ಲಿ ತೋರಿಸಿರುವ ರೀತಿ ವಿಭಿನ್ನವಾಗಿದೆ. ಚಿತ್ರದ ಕತೆ ಡಿಫರೆಂಟ್. ಚಿತ್ರಕತೆ ಕೂಡ ಅಷ್ಟೇ ಡಿಫರೆಂಟ್. ಆದರೆ ಪಾತ್ರಧಾರಿಗಳ ಆಯ್ಕೆಯಲ್ಲಿ ಎಡವಟ್ಟಾಗಿದೆ ಅನಿಸುತ್ತದೆ. - ಎಚ್.ಮಹೇಶ್

  Rakshasi is a Failed Debut - The New Indian Express

  Rakshasi is a Failed Debut - The New Indian Express

  How do you spoil a classic when remaking it in another language? The remake of Tamil film by Pisaasu, directed by Mysskin, is an example.

  Some movies are not fit to be remade, and Pisaasu falls under that category. Moreover, remakes too require thought and effort, a process that shows little with Rakshasi.

  Though the plot is a fear capsule, its making can rule in the kingdom of ‘Failed Remakes'. The makers have blindly followed the story of the original, even retaining same character names. - A Sharadhaa

  English summary
  Kannada Actress Sindhu Lokanath and Navarasan starrer Kannada Movie 'Rakshasi' has received mixed response from the critics. Here is the collection of reviews by Top News Papers of Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X