For Quick Alerts
ALLOW NOTIFICATIONS  
For Daily Alerts

'ರಣವಿಕ್ರಮ' ನೋಡಿ ವಿಮರ್ಶಕರು ಏನೆಂದರು?

By Rajendra
|

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಣವಿಕ್ರಮ' ಚಿತ್ರಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆಯ ಮಹಾಪೂರ ವ್ಯಕ್ತವಾಗಿದೆ. ವಿಮರ್ಶಕರು ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಪವನ್ ಒಡೆಯರ್ ಗೆ ಹ್ಯಾಟ್ರಿಕ್ ಗೆಲುವು ನಿಶ್ಚಿತ ಎಂದು ಬಣ್ಣನೆ ವಿಮರ್ಶಕರಿಂದ ವ್ಯಕ್ತವಾಗಿದೆ.

ಪುನೀತ್ ಅಭಿಮಾನಿಗಳಿಗೆ ಇದಕ್ಕಿಂತ ಸಂತಸದ ಸಂಗತಿ ಇನ್ನೇನು ಬೇಕು. ಖಾಕಿ ಗೆಟಪ್ ನಲ್ಲಿ ಪುನೀತ್ ಮಿಂಚಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಪ್ರಸ್ತಾಪ ಚಿತ್ರದಲ್ಲಿದ್ದರೂ ಅದನ್ನು ಯಾವುದೇ ವಿವಾದಕ್ಕೆ ಒಳಗಾಗದಂತೆ ತೆರೆಗೆ ತಂದಿದ್ದಾರೆ ಪವನ್ ಒಡೆಯರ್. [ರಣವಿಕ್ರಮ ಚಿತ್ರ ವಿಮರ್ಶೆ]

ನಾಡಿನ ಪತ್ರಿಕೆಗಳಲ್ಲಿ ರಣವಿಕ್ರಮ ಚಿತ್ರದ ಕುರಿತ ವಿಮರ್ಶೆಗಳ ಮೇಲೊಮ್ಮೆ ಕಣ್ಣಾಡಿಸೋಣ ಬನ್ನಿ. ಅತ್ಯುತ್ತಮ ನೃತ್ಯಪಟುವಿನಿಂದ ಒಂದೇ ಒಂದು ಡಾನ್ಸ್ ಮಾಡಿಸಿಲ್ಲವಲ್ಲ ಎಂಬ ಕೊರಗು ‘ಅಪ್ಪು' ಅಭಿಮಾನಿಗಳಿಗಿದ್ದರೆ, ಅದಕ್ಕೆ ಪುನೀತ್ ಕಾರಣರಲ್ಲ ಎಂಬ ಮಾತುಗಳು ವಿಮರ್ಶಕರಿಂದ ವ್ಯಕ್ತವಾಗಿವೆ. ಮುಂದೆ ಓದಿ.

ಪವನ್ ಗೂಗ್ಲಿಗೆ ಪುನೀತ್ 'ಬೌಂಡರಿ' - ವಿಜಯವಾಣಿ

ಪವನ್ ಗೂಗ್ಲಿಗೆ ಪುನೀತ್ 'ಬೌಂಡರಿ' - ವಿಜಯವಾಣಿ

‘ರಣವಿಕ್ರಮ' ಚಿತ್ರ ಮೂರು ಕಾರಣಗಳಿಗೆ ಕುತೂಹಲ ಕೆರಳಿಸಿತ್ತು. ಪುನೀತ್ ಅವರಿಗೆ ಬೇಕಿದ್ದ ‘ಬಿಗ್ ಬ್ರೇಕ್'; ನಿರ್ದೇಶಕ ಪವನ್ ಒಡೆಯರ್ ಹ್ಯಾಟ್ರಿಕ್; ನಿರ್ಮಾಪಕ ಜಯಣ್ಣ-ಭೋಗೇಂದ್ರ ಗೆಲುವಿನ ನಾಗಾಲೋಟದ ಝುಲಕ್... ಈ ಮೂರಕ್ಕೂ ಉತ್ತರ- ಸಿಗುವ ಸಾಧ್ಯತೆಗಳಿವೆ, ಸಿಗದೇ ಇರಲಿಕ್ಕಿಲ್ಲ! ‘ಪವರ್' ಮೀರಿ ಎಫರ್ಟ್ ಹಾಕಿ ಅಭಿನಯಿಸುವ ಮೂಲಕ ನಾಯಕ ಅಭಿಮಾನಿಗಳ ‘ಅಪ್ಪು'ಗೆ ಗಿಟ್ಟಿಸಿದ್ದರೆ, ಕಥೆ ಕೇಳಿದ್ದನ್ನೆಲ್ಲ ಕೊಟ್ಟು ನಿರ್ವಪಕರು ಅದ್ದೂರಿತನ ಮೆರೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸ್ವತಃ ಒಬ್ಬ ಅಭಿಮಾನಿಯಾಗಿ ನೆಚ್ಚಿನ ಹೀರೋ ಚಿತ್ರ ಹೇಗಿರಬೇಕು ಅಂತ ಅಂದುಕೊಂಡಿದ್ದರೋ, ಹಾಗೆಯೇ ಸಿನಿಮಾ ಮಾಡಿದ್ದಾರೆ ನಿರ್ದೇಶಕರು. ಆದರೆ, ಅದೇ ಅಭಿಮಾನಿದೇವರುಗಳಿಗೆ ಅಲ್ಪ ಅಪಥ್ಯ...

ರಣವಿಕ್ರಮ: ಆಕ್ಷನ್, ಫಿಕ್ಷನ್ ವಿಕ್ರಮ: ವಿಜಯಕರ್ನಾಟಕ

ರಣವಿಕ್ರಮ: ಆಕ್ಷನ್, ಫಿಕ್ಷನ್ ವಿಕ್ರಮ: ವಿಜಯಕರ್ನಾಟಕ

ಹಲವು ವಿಲನ್‌ಗಳನ್ನು ಕ್ಷಣಾರ್ಧದಲ್ಲಿ ಹೊಡೆದುರುಳಿಸುವ ನಾಯಕ, ಎತ್ತರದಿಂದ ಜಿಗಿಯುವ ಬಸ್, ಹಾರುವ ಕಾರು, ನೆಗೆಯುವ ಜೀಪು... ಇಂತಹ ವಾಸ್ತವಕ್ಕೆ ದೂರವೆನಿಸುವ ದೃಶ್ಯಗಳು ಚಿತ್ರದಲ್ಲಿ ಹೇರಳವಾಗಿವೆ. ಸಾಹಸ ಮತ್ತು ಮನರಂಜನೆ ಮಾತ್ರ ಅಸ್ವಾದನೆ ಮಾಡುವವರು ಥಿಯೆಟರ್ ಕಡೆ ಹೋಗಬಹುದು. 'ರಣವಿಕ್ರಮ' ನೋಡಿ ಪವರ್‌ಸ್ಟಾರ್ ಅಭಿಮಾನಿಗಳು 'ಅಪ್ಪು ಈಸ್ ಬ್ಯಾಕ್' ಎನ್ನಬಹುದು.

ರಣವಿಕ್ರಮ ನೋಡಿ ಪುನೀತರಾಗಿ - ಉದಯವಾಣಿ

ರಣವಿಕ್ರಮ ನೋಡಿ ಪುನೀತರಾಗಿ - ಉದಯವಾಣಿ

ಚಿತ್ರದಲ್ಲಿ ಏನಿದೆ ಎಂದರೆ ಒಂದು ಸಾಮಾನ್ಯ ಕಥೆ, ಟೈಟ್‌ ಆದಂತಹ ಚಿತ್ರಕಥೆ, ಅದ್ಧೂರಿ ಮೇಕಿಂಗ್‌, ಮೈನವಿರೇಳಿಸುವ ಆಕ್ಷನ್‌ ಇದೆ. ಅದಕ್ಕಿಂತ ಹೆಚ್ಚಾಗಿ ಇಡೀ ಸಿನಿಮಾವನ್ನು ಹೊತ್ತು ಸಾಗಿರುವ ಪುನೀತ್‌ ರಾಜ್‌ಕುಮಾರ್‌ ಅವರ ಬೊಂಬಾಟ್‌ ನಟನೆಯಿದೆ. ಇವೆಲ್ಲವೂ "ರಣವಿಕ್ರಮ'ನ ಪ್ರಮುಖ ಹೈಲೈಟ್ಸ್‌. ನಿರ್ದೇಶಕ ಪವನ್‌ ಒಡೆಯರ್‌ ಈ ಹಿಂದೆ, "ಒಬ್ಬ ಅಭಿಮಾನಿಯಾಗಿ ಈ ಸಿನಿಮಾ ಮಾಡಿದ್ದೇನೆ. ಇದು ಅಭಿಮಾನದ ಸಿನಿಮಾ' ಎಂದು ಹೇಳಿದ್ದರು. ಅದು ಸತ್ಯ ಕೂಡಾ. ಪುನೀತ್‌ರಾಜ್‌ಕುಮಾರ್‌ ಅವರನ್ನು ತುಂಬಾ ಭಿನ್ನವಾಗಿ ಮತ್ತು ಜಬರ್‌ದಸ್ತ್ ಆಗಿ ತೋರಿಸಿದ್ದಾರೆ. ಅದಕ್ಕಾಗಿ ಅವರು ಮಾಡಿಕೊಂಡ ಕಥೆ ಕೂಡಾ ಅಷ್ಟೇ ಗಟ್ಟಿಯಾಗಿದೆ.

ರವಿವರ್ಮನ ಕಲೆ ಭಲೆ -  ಪ್ರಜಾವಾಣಿ

ರವಿವರ್ಮನ ಕಲೆ ಭಲೆ - ಪ್ರಜಾವಾಣಿ

ಕಥೆಯಿಂದ, ಸಿನಿಮಾ ವ್ಯಾಕರಣದ ವಿಷಯಕ್ಕೆ ಬಂದರೆ ಛಾಯಾಗ್ರಾಹಕ ಎಸ್‌. ವೈದಿ ಹಾಗೂ ಸಾಹಸ ನಿರ್ದೇಶಕ ರವಿವರ್ಮ ಅವರ ಜುಗಲಬಂದಿ ಸಿನಿಮಾದ ಹೈಲೈಟ್‌. ಕುರುಡುಗತ್ತಲೆಯಲ್ಲಿ ನಡೆಯುವ ಹೊಡೆದಾಟದ ದೃಶ್ಯವನ್ನಂತೂ ಇಬ್ಬರೂ ಜಿದ್ದಿಗೆ ಬಿದ್ದವರಂತೆ ಚಿತ್ರೀಕರಿಸಿದ್ದಾರೆ. ಮೂರನೆಯವರಾಗಿ ಗಮನಸೆಳೆಯುವ ಹರಿಕೃಷ್ಣರ ಸಂಗೀತ ಕೂಡ ಆರಕ್ಕೇರುವಂತಿಲ್ಲ. ನಟನೆಯ ಮಟ್ಟಿಗೆ ಪುನೀತ್‌ ತೆರೆಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದಾರೆ. ಹಾಡು-ಹೊಡೆದಾಟಗಳಲ್ಲಿ, ಭಾವತೀವ್ರತೆಯ ಸನ್ನಿವೇಶಗಳಲ್ಲಿ ಅವರ ಉತ್ಸಾಹ ಚೆಲ್ಲವರಿದಿದೆ. ಖಳನಾಯಕನಾಗಿ ವಿಕ್ರಂಸಿಂಗ್‌, ಸಜ್ಜನ ನಾಯಕನಾಗಿ ಗಿರೀಶ ಕಾರ್ನಾಡರ ಅಭಿನಯ ಗಮನಸೆಳೆಯುವಂತಿದೆ.

ವೀಕ್ಷಕರ ಎದೆಯಲ್ಲಿ ರಣವಿಕ್ರಮ ನಗಾರಿ - ಹೊಸದಿಗಂತ

ವೀಕ್ಷಕರ ಎದೆಯಲ್ಲಿ ರಣವಿಕ್ರಮ ನಗಾರಿ - ಹೊಸದಿಗಂತ

ಚಲನಚಿತ್ರಕ್ಕೆ ಜನರಲ್ಲಿ ವಿಚಾರವಂತಿಕೆ ತುಂಬುವ ಚಲನಶಕ್ತಿ ಇದೆ. ಅದು ವಿವೇಕವಂತರ ಕೈಗೆ ಸಿಕ್ಕರೆ ಜನರಿಗೆ ಮನರಂಜನೆಯಷ್ಟೇ ಅಲ್ಲಾ, ಮನ ಪರಿವರ್ತನೆಯಲ್ಲೂ ಪ್ರಮುಖ ಪಾತ್ರವಹಿಸುತ್ತದೆ. ಚಲನಚಿತ್ರ ಮಾಧ್ಯಮಕ್ಕೊಂದು ಇಂಥ ಗೌರವ ತಂದುಕೊಟ್ಟ ಈ ಕ್ಷೇತ್ರದ ಹಿರಿಯರನ್ನು ಇಂದಿನ ಕಿರಿಯರು ಅನುಕರಿಸಿ, ಅವರ ವಿಚಾರವಂತಿಕೆಯನ್ನು ಅರ್ಧದಷ್ಟು ಬಳಸಿಕೊಂಡರೂ ಯಶಸ್ವಿಯಾಗಿ ಬೆಳೆಯಬಲ್ಲರು. ಈ ನಿಟ್ಟಿನಲ್ಲಿ ಕನ್ನಡದ ಕಿರಿಯ ನಿರ್ದೇಶಕರುಗಳಾದ ಪವನ್ ಒಡೆಯರ್ ರಂಥವರು ಯೋಚಿಸುವುದು ಒಳ್ಳೆಯದು. ಹಾಗಲ್ಲದಿದ್ದರೆ, ಸ್ಯಾಂಡಲ್ ವುಡ್ ನ್ನು ಜನ ಲಾಲಿವುಡ್ ಎಂದು ಭಾವಿಸಿಕೊಳ್ಳುವಂತಾಗುತ್ತದೆ.

ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಮಜವಿಲ್ಲ - ಕನ್ನಡಪ್ರಭ

ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಮಜವಿಲ್ಲ - ಕನ್ನಡಪ್ರಭ

ವಿಕ್ರಮತೀರ್ಥ ಎಂಬ ಕನ್ನಡ ಸ್ಥಳವನ್ನು ಮರಾಠಿ ಭಾಷಿಕನೊಬ್ಬ ಆಳುತಿದ್ದಾನೆ ಎಂಬ ಕಥೆ ಕಟ್ಟುವುದೋ, ಪೋಲಿಸ್ ಅಧಿಕಾರಿಯಾಗಿ ಅಪರಾಧಿಯನ್ನು ಹಿಡಿಯುವುದರ ಬದಲು ಕೊಂದು ಹಾಕುತ್ತೀನಿ ಎಂದು ಹೇಳುವ ನಾಯಕ ನಟನ ಮಾತೋ, ಮೊದಲಾರ್ಧಲ್ಲಿ ಕಾಲಿಗೆ ಚೈನುಗಳಿಂದ ಬಂಧಿತರಾಗಿರುವವರನ್ನು ರಕ್ಷಿಸುವ ನಾಯಕ ನಟ, ದ್ವಿತೀಯಾರ್ಧದಲ್ಲಿ ಕಾಡು ಜನರು ಎಂದು ಹೇಳಿ ಅವರನ್ನು ಎತ್ತಿನ ಗಾಡಿ ಎಳೆಯುವಂತೆ ಮಾಡುವುದೋ ಕೆಟ್ಟ-ದುರುದ್ದೇಶದ ಸಂದೇಶಗಳನ್ನು ನೀಡುತ್ತದೆ. ಅತಿ ದೊಡ್ಡ ಜನಪ್ರಿಯ ಮಾಧ್ಯಮವಾದ ಸಿನೆಮಾ ಯಾವುದೇ ಕಥೆ ಹೇಳಲಿ, ಅನ್ಯ ಭಾಷಿಕರ ನಡುವಿನ ಪ್ರೀತಿ, ಮಾನವೀಯತೆ, ಪೊಲೀಸರ ಚೌಕಟ್ಟಿನ ಸೀಮಿತ ಶಕ್ತಿಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ತೋರಿಸುವುದು ಆರೋಗ್ಯಕರ ಸಮಾಜದ ಅಗತ್ಯತೆ!

English summary
Kannada movie 'Rana Vikrama' critics review. The film opened to mostly positive reviews. The action potboiler written and directed by Pawan Wadeyar. The film featuring Power star Puneeth Rajkumar, Anjali and Adah Sharma in the lead roles.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more