»   » ಓ ದೇವ'ರೆ', '..ರೆ' ಬಗ್ಗೆ ವಿಮರ್ಶಕರು ಹೀಗಂತಾ'ರೆ'....

ಓ ದೇವ'ರೆ', '..ರೆ' ಬಗ್ಗೆ ವಿಮರ್ಶಕರು ಹೀಗಂತಾ'ರೆ'....

Posted By:
Subscribe to Filmibeat Kannada

ಬರೋಬ್ಬರಿ ಎರಡು ದಶಕಗಳ ನಂತರ ನಟ ರಮೇಶ್ ಅರವಿಂದ್ ಮತ್ತು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರು 'ರೆ', 'ಯಕ್ಷಪ್ರಶ್ನೆ' ಎಂಬ ಅಡಿಬರಹ ಇರುವ ಸಿನಿಮಾದಲ್ಲಿ ಮತ್ತೆ ಒಂದಾಗಿದ್ದಾರೆ.

ನಿತ್ಯ ಜೀವನದಲ್ಲಿ ಬಂದರೆ, ಹೋದರೆ, ಆದರೆ, ಅಂತ ಸದಾ ಪ್ರಶ್ನೆಗಳ ಜಂಜಾಟದಲ್ಲಿ ಬದುಕುವ ಮನುಷ್ಯನ ಬಗ್ಗೆ ಹಾಗೂ ಅನಿಶ್ಚಿತತೆಯಲ್ಲಿ ಬದುಕುವ ಮನುಷ್ಯರ ಬಗ್ಗೆ ಮಾಡಿರುವ 'ರೆ' ಸಿನಿಮಾ ನಿನ್ನೆ (ಮಾರ್ಚ್ 4) ಇಡೀ ಕರ್ನಾಟಕದಾದ್ಯಂತ ತೆರೆ ಕಂಡಿದೆ.[ವಿಮರ್ಶೆ: ಪ್ರೇತಾತ್ಮಗಳ ಜೊತೆ ಸಂಭಾಷಣೆ ಮಾಡಿದ'ರೆ'.....]


ದೇಸಾಯಿ ಅವರ 'ರೆ' ಎಂಬ ವಿಭಿನ್ನ ಚಿತ್ರಕ್ಕೆ ಕರ್ನಾಟಕದ ಖ್ಯಾತ ಕನ್ನಡ ದಿನಪತ್ರಿಕೆಯ ವಿಮರ್ಶಕರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.['...ರೆ'ದಲ್ಲಿ ಏನಿದೆಯೋ? ಸುನೀಲ್ ಕುಮಾರ್ ದೇಸಾಯಿ ಸಂದರ್ಶನ]


ನಟ ಅನಂತ್ ನಾಗ್, ರಮೇಶ್ ಅರವಿಂದ್, ಹರ್ಷಿಕಾ ಪೂನಚ್ಚ, ನಟಿ ಸುಮನ್, ಲೋಕನಾಥ್ ಮುಂತಾದವರು ಕಾಣಿಸಿಕೊಂಡಿದ್ದ 'ರೆ' ಚಿತ್ರಕ್ಕೆ ವಿಮರ್ಶಕರು ನೀಡಿದ ವಿಮರ್ಶೆಯ ಕಲೆಕ್ಷನ್ಸ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...


'ಅನಂತ ಮಾಯಾಲೋಕ' - ವಿಜಯ ಕರ್ನಾಟಕ

ದಿವಾನ್ ಭೀಮರಾವ್ ಚಿಕ್ಕ ತಪ್ಪಿನಿಂದಾಗಿ ಅವರ ಐದು ತಲೆಮಾರಿನ ಹಿರಿಯರು ಮುಕ್ತಿ ಸಿಗದೆ, ಪುನರ್ಜನ್ಮವೂ ಇಲ್ಲದ ಪ್ರೇತಾತ್ಮಗಳಾಗಿ 'ಪ್ರೀತಿ ನಿಲಯ'ದಲ್ಲಿ ನೆಲೆಸಿರುತ್ತಾರೆ. ಇದೇ ತಲೆಮಾರಿನ ಯುವಕ 'ಪಾಪು' ಈ ಮನೆಗೆ ಎಂಟ್ರಿಯಾಗುತ್ತಿದ್ದಂತೆ 'ಮುಕ್ತಿ'ಗೆ ವೇದಿಕೆ ಸಿದ್ಧವಾಗುತ್ತದೆ. ಈ ಹಂತದಲ್ಲಿ ನಡೆಯುವ ಉಪಾಯ, ಅಪಾಯ, ಪ್ರೀತಿಗೀತಿ ಇತ್ಯಾದಿಗಳೇ ಚಿತ್ರದ ವಸ್ತು. ಕನ್ನಡ ಸಿನಿಮಾಗೆ ಹೊಸತೇ ಆದ ಮಾದರಿ. ಆತ್ಮ, ಪರಮಾತ್ಮ, ಪ್ರೇತಾತ್ಮ, ಪರಕಾಯ ಪ್ರವೇಶ, ಲೌಕಿಕ ಜಗತ್ತಿನ ಜಿಜ್ಞಾಸೆಗಳೂ ಇಲ್ಲಿ ಚರ್ಚೆಯಾಗುತ್ತವೆ. ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅನುಭವಿ ಕಲಾವಿದರೊಂದಿಗೆ ಕಥೆಗೊಂದು ತಾರ್ಕಿಕ ಅಂತ್ಯ ಕೊಡುವಲ್ಲಿ ಯಶಸ್ವಿಯಾಗುತ್ತಾರೆ.- ಶಶಿಧರ ಚಿತ್ರದುರ್ಗ.


'ಮದುವೆಯ ಸಂಭ್ರಮ' - ಪ್ರಜಾವಾಣಿ

ಶಾಪ ವಿಮೋಚನೆಗೆಂದು ಹರಕೆ ಹೊತ್ತುಕೊಳ್ಳುವುದು, ಪ್ರಾಯಶ್ಚಿತ್ತ ಮಾಡಿಕೊಳ್ಳುವುದು ಸಾಮಾನ್ಯ. ಆದರೆ ಕುಟುಂಬವೊಂದರ ಹಿರಿಯನಿಗೆ ಅಂಟಿದ ಶಾಪ ವಿಮೋಚನೆಗೆ ಆತನ ಮೊಮ್ಮಗನ ಮೊಮ್ಮಗ ಮದುವೆಯಾಗಬೇಕು. ಆತನೋ ಮದುವೆಗೆ ಒಲ್ಲೆ ಎನ್ನುತ್ತಾನೆ. ಕೊನೆಗೂ ಆತನನ್ನು ಮದುವೆಗೆ ಒಪ್ಪಿಸಿ, ಪ್ರೇತಗಳು ಮುಕ್ತಿ ಹೊಂದುವುದು ‘...ರೆ' ಚಿತ್ರದ ಕಥೆ.


'ಸಂದೇಶ ಅತಿಯಾದ'ರೆ', ಮನರಂಜನೆಗೆ ತೊಂದ'ರೆ' - ವಿಜಯವಾಣಿ

ಉಳಿದುಕೊಳ್ಳಲು ಸಣ್ಣ ರೂಮ್ ಸಿಕ್ಕರೆ ಸಾಕು ಎಂದು ಬೆಂಗಳೂರಿಗೆ ಬಂದವನಿಗೆ ದೊಡ್ಡದೊಂದು ಬಂಗಲೆ ಸಿಕ್ಕಿಬಿಟ್ಟರೆ? ಅದೂ ಉಚಿತವಾಗಿ! ಸ್ವರ್ಗಕ್ಕೆ ಮೂರೇ ಗೇಣು. ಆ ಅದೃಷ್ಟವಂತನೇ ಕಥಾನಾಯಕ ಪಾಪು (ರಮೇಶ್). ಆದರೆ ಆತನ ಖುಷಿ ಹೆಚ್ಚು ಹೊತ್ತು ಉಳಿಯುವುದಿಲ್ಲ. ಕಾರಣ, ಆತನ 5 ಮಂದಿ ತಾತಂದಿರ ಪ್ರೇತಗಳು. ಹಾಗಂತ '...ರೆ' ಹಾರರ್ ಚಿತ್ರವಲ್ಲ. ಅವರೆಲ್ಲರ ಆತ್ಮಗಳಿಗೆ ತ್ರಿಶಂಕು ಸ್ಥಿತಿಯಿಂದ ಮುಕ್ತಿ ಸಿಗಬೇಕಾದರೆ ಪಾಪು ಮದುವೆ ಆಗಬೇಕಷ್ಟೇ. ಈ ನಡುವೆ ಪಾಪು ಹಿಂದೆ ಬೀಳುವ ಇಬ್ಬರು ಚೆಲುವೆಯರು. ಮುಂದೆನಾಗುತ್ತಾದೆ ಮದುವೆ ಆಗುತ್ತಾ? ಮುಕ್ತಿ ಸಿಗುತ್ತಾ? ಅನ್ನೋದು ಕಥೆ.


'ಮನುಷ್ಯರೆ, ಪೂರ್ವಜರೆ, ದೇಸಾಯರೆ, ಪ್ರೇಕ್ಷಕರೆ ಹಾಗೂ ಓ ದೇವ.ರೆ- ಉದಯವಾಣಿ

'ರೆ' ಒಂದು ವಿಭಿನ್ನ ತರಹದ ಸಿನಿಮಾ. ಕನ್ನಡದ ಮಟ್ಟಿಗೆ ಹೊಸ ತರಹದ ಪ್ರಯೋಗ ಎಂದರೆ ತಪ್ಪಿಲ್ಲ. ಇಲ್ಲಿ ನಿರ್ದೇಶಕ ದೇಸಾಯಿ ಪ್ರೀತಿ, ಮದುವೆ ಮತ್ತು ಫಿಲಾಸಫಿಯನ್ನು ಮಿಕ್ಸಿಗೆ ರುಬ್ಬಿ ಹಾಕಿ ಕಥೆ ಮಾಡಿದ್ದಾರೆ. ಉತ್ತರವೇ ಇಲ್ಲದ ಜೀವನದ ಅನೇಕ ಯಕ್ಷಪ್ರಶ್ನೆಗಳನ್ನು ಅವರು ಹಾಸ್ಯಮಯವಾಗಿಯೇ ಕೇಳುವ ಪ್ರಯತ್ನ ಮಾಡಿದ್ದಾರೆ. ಇಂತಹ ಪ್ರಶ್ನೆಗಳಿಗೆ ಉತ್ತರವಿಲ್ಲ ಮತ್ತು ಜಿಜ್ಞಾಸೆಗಳಲ್ಲಿಯೇ ಬದುಕು ಕಳೆದು ಹೋಗುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. - ಚೇತನ್ ನಾಡಿಗೇರ್.


'ನೀವೀ ಚಿತ್ರ ನೋಡಿದರೆ, ನೋಡದಿದ್ದರೆ..- ಕನ್ನಡಪ್ರಭ

ಸಿನಿಮಾ ಹೇಗಿತ್ತು? ಒಮ್ಮೆ ನೋಡಬಹುದಾ? ಕಥೆ ಏನು? ಯಾವ ರೀತಿಯ ಚಿತ್ರ? ಸಾಮಾನ್ಯವಾಗಿ ಸಿನಿಮಾ ನೋಡಿಕೊಂಡು ಬಂದವರಿಗೆ ಕೇಳುವ ಪ್ರಶ್ನೆಗಳಿವು. ಈ ಎಲ್ಲ ಪ್ರಶ್ನೆಗಳೂ ಉತ್ತರ ಕೊಡಬಹುದು. ಆದರೆ ಸುನೀಲ್ ಕುಮಾರ್ ದೇಸಾಯಿ ಅವರ ಚಿತ್ರ ನೋಡಿಕೊಂಡು ಬಂದವರಿಗೆ ಇಂಥ ಪ್ರಶ್ನೆಗಳನ್ನು ಕೇಳಿದರೆ ಉತ್ತರಿಸುವುದು ತುಂಬಾ ಕಷ್ಟ. ಅದು ಬಾಹುಬಲಿಯನ್ನು ಕಟ್ಟಪ್ಪ ಯಾಕೆ ಕೊಂದ ಎನ್ನುವ ಚರ್ಚೆಯಷ್ಟೇ ಕಗ್ಗಂಟು. ಅಲ್ಲದೆ 'ಯಕ್ಷಪ್ರಶ್ನೆ' ಎಂಬ ಚಿತ್ರದ ಟ್ಯಾಗ್ ಲೈನ್ ಹೊಂದಿರುವ 'ರೆ' ಸಿನಿಮಾ ಚಿತ್ರಮಂದಿರದಲ್ಲಿ ಕೂತ ಪ್ರೇಕ್ಷಕನಿಗೆ ಯಾವ ತೊಂದರೆಯನ್ನು ಕೊಡುವುದಿಲ್ಲ.- ಆರ್.ಕೇಶವಮೂರ್ತಿ.


ವಿಮರ್ಶಕರು ಹೀಗಂತಾ'ರೆ'....

'...ರೆ' ಮೊದಲ ದಿನದ ಮೊದಲ ಶೋ ಬಗ್ಗೆ ಪ್ರೇಕ್ಷಕರು ಏನಂತಾ.ರೆ'..? ನೋಡಲು ಈ ವಿಡಿಯೋ ನೋಡಿ...


ವಿಮರ್ಶಕರು ಹೀಗಂತಾ'ರೆ'....

'...ರೆ' ಬಗ್ಗೆ ಹರ್ಷಿಕಾ ಪೂನಚ್ಚ ಏನಂತಾ'ರೆ'...


ವಿಮರ್ಶಕರು ಹೀಗಂತಾ'ರೆ'....

ರಮೇಶ್ ಅರವಿಂದ್ ಅವರು '...ರೆ' ಚಿತ್ರದ ಬಗ್ಗೆ ಏನಂತ ಕಮೆಂಟ್ ಮಾಡಿದ್ದಾ'ರೆ'....


English summary
Kannada Movie 'Re' Critics Review. Kannada Actor Ramesh Aravind, Kannada Actress Harshika Poonacha, Actress Suman starrer 'Re' has received mixed response from the critics. Here is the collection of reviews by Top News Papers of Karnataka. The movie is directed by Sunil Kumar Desai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada