Don't Miss!
- Sports
ಭಾರತ vs ನ್ಯೂಜಿಲೆಂಡ್: ನಿರ್ಣಾಯಕ ಪಂದ್ಯಕ್ಕಾಗಿ ಲಕ್ನೋಗೆ ಬಂದಿಳಿದ ಹಾರ್ದಿಕ್ ಪಡೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಮರ್ಶೆ: ಪ್ರೇತಾತ್ಮಗಳ ಜೊತೆ ಸಂಭಾಷಣೆ ಮಾಡಿದ'ರೆ'.....
ಒಂದು ಒಂಟಿ ಮನೆಯಲ್ಲಿ ಹಲವಾರು ಪ್ರೇತಗಳು ಇರುತ್ತವೆ. ಪ್ರೇತಾತ್ಮಗಳು ಕಾಣಿಸುವುದಿಲ್ಲ. ಆದರೆ ಆ ಪ್ರೇತಾತ್ಮಗಳು ಮಾತನಾಡುವುದು ನಿಮ್ಮ ಕಿವಿಗೆ ಸ್ಪಷ್ಟವಾಗಿ ಕೇಳಿಸುತ್ತದೆ.
ಎಲ್ಲಾ ಒಟ್ಟಾಗಿ ಒಂದೊಂದು ಪ್ರೇತಗಳು ಅದರಷ್ಟಕ್ಕೆ ಅದು ಮಾತಾಡಿಕೊಳ್ಳುತ್ತಿದ್ದರೆ, ಹಾಡುತ್ತಿದ್ದರೆ, ನಿಮ್ಮ ಪರಿಸ್ಥಿತಿ ಹೇಗಿರಬಹುದು? ಒಂಥರಾ ಹುಚ್ಚು ಹಿಡಿದ ಅನುಭವ ಆಗಬಹುದಲ್ಲವೇ? ಇದೇ ಪರಿಸ್ಥಿತಿ ನಮ್ಮ 'ರೆ' ಚಿತ್ರದ ನಾಯಕ 'ಪಾಪು' ಅಲಿಯಾಸ್ ರಮೇಶ್ ಅರವಿಂದ್ ಅವರದು.['...ರೆ'ದಲ್ಲಿ ಏನಿದೆಯೋ? ಸುನೀಲ್ ಕುಮಾರ್ ದೇಸಾಯಿ ಸಂದರ್ಶನ]
ಆದರೆ, ಹೋದರೆ, ಬಂದರೆ, ಇಲ್ಲದಿದ್ದರೆ ಅನ್ನೋದು ಒಬ್ಬ ಮನುಷ್ಯನ ಜೀವನದಲ್ಲಿ ಇಲ್ಲದಿದ್ದರೆ, ಆತ ಮುಂದಿನ ಆಗು ಹೋಗುಗಳ ಬಗ್ಗೆ ಮತ್ತು ಉರುಳುತ್ತಿರುವ ಕಾಲದ ಬಗ್ಗೆ ಚಿಂತನೆ ಮಾಡುತ್ತಿರಲಿಲ್ಲ. ಬದ್ಲಾಗಿ ಆತ ಭೂತ ಕಾಲದಲ್ಲೇ ಇರುತ್ತಿದ್ದ.['ಬೆಳದಿಂಗಳ ಬಾಲೆ' ಪ್ರತ್ಯಕ್ಷ; ಮತ್ತೆ ತೆರೆಮೇಲೆ ಸುಮನ್ ನಗರ್ಕರ್]
ಒಟ್ಟಾರೆ ಈ 'ರೆ' ಅನ್ನೋದು ಮನುಷ್ಯನ ಜೀವನದಲ್ಲಿ ಇರಲೇಬೇಕು ಅನ್ನೋದು ತತ್ವ. ಇದನ್ನೇ ದೇಸಾಯಿ ಅವರು ಸಿನಿಮಾ ಮೂಲಕ ಹೊರತಂದಿದ್ದಾರೆ. ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

'ರೆ' ಕಥೆ ಏನಂತೆ?
ಡಬ್ಬಲ್ ಡಿಗ್ರಿ ಮುಗಿಸಿಕೊಂಡು ಕೆಲಸ ಅರಸಿ ಶೃಂಗೇರಿಯಿಂದ ಬೆಂಗಳೂರಿಗೆ ಬರುವ ಕಥಾ ನಾಯಕ ಮಿ.ಪಾಪು (ರಮೇಶ್ ಅರವಿಂದ್) ರೈನ್ ಬೋ ಟಿ.ವಿಯಲ್ಲಿ ಪ್ರೋಗ್ರಾಂ ಪ್ರೊಡ್ಯೂಸರ್ ಆಗುತ್ತಾರೆ. ಅಲ್ಲಿ ಪರಿಚಯವಾಗೋ ಹುಡುಗಿ ಪಾರು. ಸದ್ಯಕ್ಕೆ ಬೀದಿ ಬಸವಣ್ಣ ಆಗಿರುವ ಪಾಪುವನ್ನು, ಪಾರು ತನ್ನ ಮನೆಗೆ ಕರೆದೊಯ್ಯುತ್ತಾಳೆ.[ದೇಸಾಯಿ ಅವರ 'ತಂದಾನ ತಂದನಾನ' ಈಗ 'ಯಕ್ಷಪ್ರಶ್ನೆ'!]

ಪ್ರೀತಿ ನಿಲಯ
'ಪ್ರೀತಿಯಿಂದ ಬರುವವರಿಗೆ ಮಾತ್ರ ಪ್ರೀತಿ ನಿಲಯ' ಎನ್ನುವಂತೆ 1987ರ ದಶಕದ 'ಪ್ರೀತಿ ನಿಲಯ' ಎಂಬ ಐಶಾರಾಮಿ ಮನೆಯಲ್ಲಿ ಪಾಪುಗೆ ಪಾರು ಮನೆಯವರು ವಾಸ್ತವ್ಯ ಹೂಡಲು ವ್ಯವಸ್ಥೆ ಮಾಡುತ್ತಾರೆ. ಅಂದು ರಾತ್ರಿ ಪಾಪುಗೆ ಮನೆಯಲ್ಲಿ ವಿಚಿತ್ರ ಅನುಭವಗಳು ಆಗೋಕೆ ಶುರುವಾಗುತ್ತದೆ.

ಪ್ರೇತಗಳೊಂದಿಗೆ ಪಾಪು
'ಪ್ರೀತಿ ನಿಲಯ' ದಲ್ಲಿ ಪಾಪುಗೆ ಚಿತ್ರ ವಿಚಿತ್ರ ಅನುಭವಗಳಾಗುತ್ತದೆ. ಅವರಿಗೆ ಪ್ರೇತಗಳ ಧ್ವನಿ ಕೇಳಿಸುತ್ತದೆ ಆದರೆ ಅವರು ಕಾಣಿಸುವುದಿಲ್ಲ. ಅಷ್ಟಕ್ಕೂ ಆ ಮನೆಯಲ್ಲಿ ಪ್ರೇತಗಳು ಯಾಕಿವೆ?. ಆ ಮನೆ ಯಾರದ್ದು?, ಪಾಪುಗೂ ಪ್ರೇತಗಳಿಗೂ ಏನು ಸಂಬಂಧ ಅನ್ನೋದು ಚಿತ್ರದ ಕಥೆ. ಅದೇನೆಂಬುದು ನಿಮಗೂ ಗೊತ್ತಾಗಬೇಕೆ? ಹಾಗಿದ್ದರೆ ಸಿನಿಮಾವನ್ನು ಚಿತ್ರಮಂದಿರದಲ್ಲೇ ನೋಡಿ.

ರಮೇಶ್ ಅರವಿಂದ್ ನಟನೆ
ಇಡೀ ಕಥೆಯ ಕೇಂದ್ರ ಬಿಂದು ಪಾಪು ಅಲಿಯಾಸ್ ರಮೇಶ್ ಅರವಿಂದ್. ಪ್ರೇತಗಳೊಂದಿಗೆ ಚಿಂದಿ ಚಿತ್ರಾನ್ನ ಆಗುವ ಪಾಪು ಪಾತ್ರವನ್ನು ರಮೇಶ್ ಅರವಿಂದ್ ಅವರು ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ಪ್ರೇತಗಳೊಂದಿಗೆ ಸಂಭಾಷಣೆ ಮಾಡುವ ರಮೇಶ್ ಅರವಿಂದ್ ನಟನೆ ಪ್ರೇಕ್ಷಕರ ಮುಖದಲ್ಲಿ ಸಣ್ಣ ನಗು ಮೂಡಿಸುತ್ತದೆ.

ಹರ್ಷಿಕಾ ಪೂನಚ್ಚ ನಟನೆ
ಚಿಕ್ಕ ಹುಡುಗಿಯಂತೆ ಬಬ್ಲಿ ಬಬ್ಲಿಯಾಗಿ ಕಾಣಿಸಿಕೊಂಡ ಪಾರು ಅಲಿಯಾಸ್ ಹರ್ಷಿಕಾ ಪೂನಚ್ಚ ತಮ್ಮ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿದ್ದಾರೆ. ರಮೇಶ್ ಅರವಿಂದ್ ಅವರ ಜೊತೇನೇ ಎಂಟ್ರಿ ಪಡೆದುಕೊಳ್ಳುವ ಹರ್ಷಿಕಾ ಅವರು ಚಿತ್ರ ಕೊನೆಯಾಗುವವರೆಗೂ ಇರುತ್ತಾರೆ.

ನಟಿ ಸುಮನ್ ನಟನೆ
ಹೊಸ ನಟಿ ಸುಮನ್ ಅವರು ನಟನೆಯಲ್ಲಿ ಇನ್ನೂ ಪಳಗಬೇಕಿತ್ತು. ಹರ್ಷಿಕಾರಿಗಿಂತಲೂ ಚಿತ್ರದಲ್ಲಿ ಇವರ ಪಾತ್ರ ಅಧಿಕವಾಗಿದ್ದು, ಜೊತೆಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರಿಂದ ಇನ್ನೂ ಚೆನ್ನಾಗಿ ನಟಿಸಬಹುದಿತ್ತೇನೋ ಅಂತ ಪ್ರೇಕ್ಷಕರಿಗೆ ಅನಿಸುತ್ತದೆ.

ಇನ್ನುಳಿದವರು?
ನಟ ಅನಂತ್ ನಾಗ್ ಅವರು ತಮ್ಮ ಆಂಗ್ಲ ಭಾಷೆಯುಳ್ಳ ಸಂಭಾಷಣೆಯಿಂದ ಪ್ರೇಕ್ಷಕರನ್ನು ನಗಿಸುತ್ತಾರೆ. ಇಡೀ ಚಿತ್ರದಲ್ಲಿ ಇವರೇ ಹೈಲೈಟ್. ಪ್ರೇತಾತ್ಮವಾಗಿದ್ದುಕೊಂಡು ರಮೇಶ್ ಅವರ ತಲೆ ತಿನ್ನುವ ಪಾತ್ರದಲ್ಲಿ ಸಖತ್ತಾಗಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಶಿವರಾಮ್, ಶರತ್ ಲೋಹಿತಾಶ್ವ, ಲೋಕನಾಥ್, ರಮೇಶ್ ಭಟ್ ಮುಂತಾದವರು ತುಂಬಾ ಚೆನ್ನಾಗಿ ಪಾತ್ರ ಪೋಷಣೆ ಮಾಡಿದ್ದಾರೆ. ಸುಮನ್ ನಗರ್ಕರ್ ಅವರು ಅನಂತ್ ಅವರ ಜೊತೆ ಒಂದು ಹಾಡಿನಲ್ಲಿ ಹಾಗೇ ಬಂದು ಹೀಗೆ ಹೋಗುತ್ತಾರೆ.

ಸಂಗೀತ
ಸಂಗೀತ ಮಾಂತ್ರಿಕ ಹಂಸಲೇಖ ಅವರ ಸಂಗೀತ ಸಂಯೋಜನೆ ಚಿತ್ರಕ್ಕೆ ಶೋಭೆ ತಂದಂತಿದೆ. 'ಮೆಲ್ಲ ಮೆಲ್ಲನೆ ಬಂದ' ಹಾಡು ಕವಿ ಹೃದಯದವರಿಗೆ ಗುನುಗುವಂತೆ ಮಾಡುತ್ತದೆ.ಸಂದರ್ಭಕ್ಕೆ ತಕ್ಕಂತೆ ಹಿನ್ನಲೆ ಸಂಗೀತಗಳನ್ನು ಹಾಕಿರುವುದು ಇಡೀ ಚಿತ್ರದ ಪ್ಲಸ್ ಪಾಯಿಂಟ್.

ದೇಸಾಯಿ ಅವರ ನಿರೂಪಣೆ
ಕೆಲವೊಂದು ಬಾರಿ ಬಿಡಿಸಲಾರದ ಒಗಟಿನ ಹಾಗೆ ಮನುಷ್ಯನ ಕೆಲವು ಪ್ರಶ್ನೆಗಳಿಗೆ ಉತ್ತರ ದೊರಕದೇ ಅದು 'ಯಕ್ಷಪ್ರಶ್ನೆ'ಯಾಗಿಯೇ ಉಳಿದು ಬಿಡುತ್ತವೆ. ಅದನ್ನೇ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರು ತಮ್ಮ 'ರೆ' ಸಿನಿಮಾದ ಮೂಲಕ ಹೊರತಂದಿದ್ದಾರೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಮನುಷ್ಯ, ಆದರೆ, ಹೋದರೆ, ಬಂದರೆ, ಇದ್ದರೆ ಅಂತ ಬರೀ 'ರೆ'ಗಳಲ್ಲಿಯೇ ಬದುಕುತ್ತಾನೆ ಅನ್ನೋದನ್ನು ಸ್ವಾರಸ್ಯಕರವಾಗಿ ಒಂದಕ್ಕೊಂದು ಸಂಬಂಧ ಬೆಸೆಯುತ್ತ ತೆರೆ ಮೇಲೆ ತಂದಿದ್ದು ಸುನೀಲ್ ಕುಮಾರ್ ದೇಸಾಯಿ ಅವರ ವಿಭಿನ್ನ ಸ್ಟೈಲ್.

ಕ್ಲೈಮ್ಯಾಕ್ಸ್
ಎಲ್ಲಾ ಸಿನಿಮಾಗಳಲ್ಲಿರುವಂತೆ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರು ಕೂಡ ತಮ್ಮ 'ರೆ' ಸಿನಿಮಾದಲ್ಲಿ ಎಲ್ಲವನ್ನೂ ಸುಖಾಂತ್ಯ ಕಾಣುವಂತೆ ಮಾಡಿದ್ದಾರೆ.

'ರೆ' ನೋಡಬಹುದಾ?
ಚಿತ್ರದಲ್ಲಿ ಎಂಟರ್ ಟೇನ್ಮೆಂಟ್ ಖಂಡಿತ ಸಿಗುತ್ತೆ. ಸ್ವಲ್ಪ ಪ್ರೀತಿ, ಜಾಸ್ತಿ ಕಾಮಿಡಿ ಇರುವ 'ರೆ' ಒಂಥರಾ ವಿಭಿನ್ನವಾಗಿದೆ. ಒಮ್ಮೆ ನೋಡಬಹುದು.
ಪ್ರೇತಾತ್ಮಗಳ ಜೊತೆ ಸಂಭಾಷಣೆ
ವಿಮರ್ಶೆ: ಪ್ರೇತಾತ್ಮಗಳ ಜೊತೆ ಸಂಭಾಷಣೆ ಮಾಡಿದ'ರೆ'.....
ಪ್ರೇತಾತ್ಮಗಳ ಜೊತೆ ಸಂಭಾಷಣೆ
ವಿಮರ್ಶೆ: ಪ್ರೇತಾತ್ಮಗಳ ಜೊತೆ ಸಂಭಾಷಣೆ ಮಾಡಿದ'ರೆ'.....