»   » ಟ್ವಿಟ್ಟರ್ ವಿಮರ್ಶೆ: 'ಸಂತು Straight' ಹಿಟ್ ಗೆ ಪ್ರೇಕ್ಷಕರು ಕ್ಲೀನ್ ಬೋಲ್ಡ್ ಆದ್ರಾ?

ಟ್ವಿಟ್ಟರ್ ವಿಮರ್ಶೆ: 'ಸಂತು Straight' ಹಿಟ್ ಗೆ ಪ್ರೇಕ್ಷಕರು ಕ್ಲೀನ್ ಬೋಲ್ಡ್ ಆದ್ರಾ?

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕ ಪಂಡಿತ್ ಅಭಿನಯದ 'ಸಂತು Straight Forward' ಚಿತ್ರ ಇಂದು ರಾಜ್ಯಾದ್ಯಂತ ಗ್ರ್ಯಾಂಡ್ ಆಗಿ ಬಿಡುಗಡೆಯಾಗಿದೆ. ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದ ನಂತರ ಯಶ್ ಹಾಗೂ ರಾಧಿಕ ಒಟ್ಟಿಗೆ ಸಿನಿಮಾ ಮಾಡಿದ್ದು, ಸಹಜವಾಗಿ ಕುತೂಹಲ ಹೆಚ್ಚಾಗಿತ್ತು.

ಈಗಾಗಲೇ ರಾಜ್ಯದ ಚಿತ್ರಮಂದಿರಗಳಲ್ಲಿ 'ಸಂತು' ಹವಾ ಶುರುವಾಗಿದ್ದು, ಬೆಳಿಗ್ಗೆಯಿಂದನೇ ರಾಕಿಂಗ್ ಸ್ಟಾರ್ ಭಕ್ತರು ಥಿಯೇಟರ್ ಕಡೆ ಮುಖ ಮಾಡಿದ್ದಾರೆ. ಸ್ಟೈಲಿಶ್ ಟ್ರೈಲರ್ ಹಾಗೂ ಪಂಚಿಂಗ್ ಡೈಲಾಗ್ ಮೂಲಕ ಹೈ ಎಕ್ಸ್ ಪೆಕ್ಟೇಶನ್ ಹುಟ್ಟುಹಾಕಿದ್ದ 'ಸಂತು', ಚಿತ್ರದ ಕಥೆ ಏನು? ವ್ಯಥೆ ಏನು ಅಂತ ರಿವಿಲ್ ಆಗಿದೆ.['ಸಂತು' ಯಾಕೆ ನೋಡಬೇಕು, ಇಲ್ಲಿದೆ ಕೆಲವು ಕಾರಣಗಳು ]


ಮಹೇಶ್ ರಾವ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಕೆ ಮಂಜು ನಿರ್ಮಾಣ ಮಾಡಿದ್ದಾರೆ. ಹಾಗಾದ್ರೆ, ನಾಲ್ಕೆನೇ ಬಾರಿ ತೆರೆ ಮೇಲೆ ಒಂದಾಗಿರುವ ಯಶ್ ಹಾಗು ರಾಧಿಕ ಜೋಡಿಗೆ ಪ್ರೇಕ್ಷಕ ಮಹಾಪ್ರಭುಗಳು ಏನಾಂತಿದ್ದಾರೆ ಅಂತ ಟ್ವಿಟ್ಟರ್ ರೆಸ್ ಪಾನ್ಸ್ ನೋಡೋಣ ಬನ್ನಿ...


ಭರ್ಜರಿ ಒಪನಿಂಗ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಸಂತು ಸ್ಟ್ರೈಟ್ ಫಾರ್ವರ್ಡ್' ಚಿತ್ರಕ್ಕೆ ಮೊದಲ ದಿನ ನಿರೀಕ್ಷೆಗೂ ಮೀರಿ ಭರ್ಜರಿ ಓಪನಿಂಗ್ ಸಿಕ್ಕಿದೆ.


ಸಂತು ಸಂಭ್ರಮ

‘ಸಂತು ಸ್ಟ್ರೈಟ್ ಫಾರ್ವರ್ಡ್' ಚಿತ್ರ ನೋಡಲು ಬೆಳಿಗ್ಗೆಯಿಂದಲೇ ಚಿತ್ರಮಂದಿರಗಳ ಬಳಿ ಅಭಿಮಾನಿಗಳು ಮುಗಿಬಿದ್ದಿದರು. ತಮ್ಮ ನೆಚ್ಚಿನ ನಟನ ಕಟೌಟ್ ಗಳಿಗೆ ಹಾರ ಹಾಕಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.[ಹೀಗೂ ಉಂಟೆ! ಯಶ್ ಬಾಯಲ್ಲಿ 'ಬ್ಯಾಟು-ಬಾಲ್' ಬಂದಿದ್ದಕ್ಕೆ ಉಪ್ಪಿ-ಸುದೀಪ್ ಚರ್ಚೆ?]


ಯಶ್-ರಾಧಿಕ ಬೆಸ್ಟ್

''ಸಂತು Straight Forward' ಚಿತ್ರದ ಇಂಟರ್ ವಲ್. ನಿಜ ಜೀವನದ ಜೋಡಿಗಳಿಂದ ಅತ್ಯುತ್ತಮ ಮನರಂಜನೆ. ಕಾಮಿಡಿ ವರ್ಕೌಟ್ ಆಗಿದೆ''. ನಮ್ ಟಾಕೀಸ್


ತಮಿಳಿನ 'ವಾಲು' ಕಾಣುತ್ತಿದೆ

''ಮಧ್ಯಂತರ. ಕೊನೆಗೂ ಚಿತ್ರ ಕಥೆ ಬಹಿರಂಗವಾಯಿತು. ಕಥೆಗೆ ಮೂಲ ತಮಿಳಿನ ವಾಲು. ಸಾಕಷ್ಟು ಬದಲಾವಣೆ ಆಗಿದೆ. ಔಟ್ ಅಂಡ್ ಔಟ್ ಮಾಸ್ ಅಂಶಗಳಿವೆ. ಸಾಂಗ್-ಫೈಟ್-ಬಿಲ್ಡಪ್,ಸಾಂಗ್-ಫೈಟ್-ಬಿಲ್ಡಪ್''-ಶ್ಯಾಮ್ ಪ್ರಸಾದ್


ಅಭಿಮಾನಿಗಳಿಗೆ ಮಾತ್ರ

''ಕಥೆ ಸರಳವಾಗಿದ್ದರೂ, ತುಂಬಾ ಎಳೆಯಲಾಗಿದೆ. ಈ ಎಲ್ಲಾ ಅಂಶಗಳನ್ನ ಹೊರತು ಪಡಿಸಿ ಅಭಿಮಾನಿಗಳಿಗೆ ಮಾತ್ರ ಖುಷಿಯಾಗುತ್ತೆ''


English summary
Kannada Actor Yash, Kannada Actress Radhika Pandit starerr Movie 'Santhu Straight Forward' has hit the screens today (October 28th). 'Santhu Straight Forward'' is receiving positive response in twitter. the movie directed by Mahesh Rao and Produced by K Manju.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada