twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರ ವಿಮರ್ಶೆ: ಸವಾಲ್ ಪ್ರೇಕ್ಷಕರಿಗೆ ಹೊಸ ಜವಾಬ್

    By ಉದಯರವಿ
    |

    ಈಗ ಎಲ್ಲಾ ಸ್ಟಾರ್ ನಟರು ಖಾಕಿ ಖದರ್ ಹಿಂದೆ ಬಿದ್ದಿರುವುದು ಗೊತ್ತೇ ಇದೆ. ಖಾಕಿ ತೊಟ್ಟು ಪೊಲೀಸ್ ಖದರ್ ತೋರುವುದು ಮಾಮೂಲು. ಆದರೆ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ಲಾಯರ್ ಆಗಿ ಪ್ರೇಕ್ಷಕರ ಮುಂದೆ ಬಂದು ಅವರ ಮನಗೆಲ್ಲುವ ಪ್ರಯತ್ನ ಮಾಡಿದ್ದಾರೆ.

    ಆ ಪ್ರಯತ್ನದಲ್ಲಿ ಅವರು ತಕ್ಕಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ. ಚಿತ್ರದಲ್ಲಿ ಸವಾಲು ಪಾಟಿ ಸವಾಲು ಮಾಸ್ ಪ್ರೇಕ್ಷಕರಿಗೆ ಏನು ಬೇಕೋ ಅದೆಲ್ಲವೂ ಇದೆ. ಹಾಗಂತ ಈ ಚಿತ್ರದನ್ನು ತೀರಾ 'ಲಯನ್ ಜಗಪತಿರಾವ್' ಚಿತ್ರಕ್ಕೆ ಹೋಲಿಸುವಂತಿಲ್ಲ. [ಕನ್ನಡ ಚಿತ್ರವಿಮರ್ಶೆಗಳು]

    ಕಪ್ಪು ಕೋಟ್ ನಲ್ಲಿ ಮಿಂಚುವ ಪ್ರಜ್ವಲ್ ಅವರು ಸವಾಲು ಪಾಟಿ ಸವಾಲು ಜೊತೆಗೆ ಫೈಟಿಂಗ್ ನಲ್ಲಿ ಮಿಂಚಿದ್ದಾರೆ. ಭರ್ಜರಿ ಫೈಟ್ ಗಳು ಪ್ರೇಕ್ಷಕರನ್ನು ರಂಜಿಸುತ್ತವೆ. ಡಿಫರೆಂಟ್ ಡ್ಯಾನಿ ಹಾಗೂ ಶಿವು ಅವರ ಸಾಹಸ ಸನ್ನಿವೇಶಗಳಿಗೆ ತಲೆದೂಗಲೇ ಬೇಕು.

    Rating:
    2.5/5

    ಯುವ ವಕೀಲನಾಗಿ ಪ್ರಜ್ವಲ್ ಅಭಿನಯ

    ಯುವ ವಕೀಲನಾಗಿ ಪ್ರಜ್ವಲ್ ಅಭಿನಯ

    ಚಿತ್ರದ ಕಥೆ ಏನೆಂದರೆ...ಆಗಷ್ಟೇ ಎಲ್‍ಎಲ್ ಬಿ ಮುಗಿಸಿದ ಯುವ ವಕೀಲ (ಪ್ರಜ್ವಲ್ ದೇವರಾಜ್) ತನ್ನ ಇಬ್ಬರು ಗೆಳೆಯರೊಂದಿಗೆ ರಾಜ್ಯದ ಪ್ರಮುಖ ಕ್ರಿಮಿನಲ್ ಲಾಯರ್ ಬಳಿ ಪ್ರಾಕ್ಟೀಸ್ ಮಾಡಲು ಬರುತ್ತಾನೆ. ಹಾಸ್ಯಸ್ಪದವಾಗಿ ಕೇಸ್ ನಡೆಸುವ ಮೆಣಸಿನಕಾಯಿ ಎಂಬ ವಕೀಲರಿಗೆ ಸವಾಲು ಒಡ್ಡಿ ಒಂದು ಕೇಸನ್ನು ತಾನೇ ನಡೆಸುತ್ತಾನೆ.

    ಒಂದಷ್ಟು ಟ್ವಿಸ್ಟ್ಸ್ ಟರ್ನ್ಸ್ ಚಿತ್ರದಲ್ಲಿವೆ

    ಒಂದಷ್ಟು ಟ್ವಿಸ್ಟ್ಸ್ ಟರ್ನ್ಸ್ ಚಿತ್ರದಲ್ಲಿವೆ

    ಇವನ ಕೈಗೆ ಆದಿ ಎಂಬ ರೌಡಿಯ ಕೇಸ್ ಬರುತ್ತದೆ. ಸೂಕ್ತ ಸಾಕ್ಷಿ ಕಲೆ ಹಾಕಿ ಆ ರೌಡಿಯನ್ನು ಜೈಲಿಗಟ್ಟುತ್ತಾನೆ. ಆದಿಯ ಅಣ್ಣ ಧನರಾಜ್ (ಶೋಭರಾಜ್) ಇವನ ವಿರುದ್ಧ ತಿರುಗಿ ಬೀಳುತ್ತಾನೆ. ಇವನನ್ನು ಕೊಲೆ ಮಾಡುವ ಪ್ರಯತ್ನದಲ್ಲಿ ಇವನ ಸ್ನೇಹಿತ ಸಾವನ್ನಪ್ಪುತ್ತಾನೆ.

    ನಾಯಕ ಸವಾಲಾಗಿ ಸ್ವೀಕರಿಸುವ ಕೇಸ್

    ನಾಯಕ ಸವಾಲಾಗಿ ಸ್ವೀಕರಿಸುವ ಕೇಸ್

    ನಾಯಕ ಈ ಕೇಸನ್ನು ಸವಾಲಾಗಿ ಸ್ವೀಕರಿಸುತ್ತಾನೆ. ಕೋರ್ಟ್ ನ ಹೊರಗಡೆ ರೌಡಿಗಳನ್ನು ಮಟ್ಟ ಹಾಕುತ್ತ, ಕೋರ್ಟ್ ಒಳಗಡೆ ಸೂಕ್ತವಾದ ಸಾಕ್ಷಿ ಮೂಲಕ ಕೇಸ್ ಗೆಲ್ಲುತ್ತಾನೋ? ಅವನಿಗೆ ಎದುರಾಗುವ ಸವಾಲುಗಳೇನು? ಎಂಬುದೇ 'ಸವಾಲ್' ಚಿತ್ರದ ಕಥಾಚೌಕಟ್ಟು.

    ಸೋನಾ ಕಚಗುಳಿ ಇಡುವ ಮೈನಾ

    ಸೋನಾ ಕಚಗುಳಿ ಇಡುವ ಮೈನಾ

    ಇನ್ನು ಚಿತ್ರದ ನಾಯಕಿ ಸೋನಾ ಕೂಡ ವಕೀಲೆಯಾಗಿ ಕಾಣಿಸಿಕೊಂಡಿದ್ದಾರೆ. ಅವರು ಪ್ರಜ್ವಲ್ ಅಭಿನಯಕ್ಕೆ ಸವಾಲೊಡ್ಡುವಂತೆ ಅಭಿನಯಿಸಿದ್ದಾರೆ. ಹಾಡುಗಳಲ್ಲಿ, ರೊಮ್ಯಾಂಟಿಕ್ ಸನ್ನಿವೇಶಗಳಲ್ಲಿ ಸೋನಾ ಮೈನಾ ಆಗುತ್ತಾರೆ.

    ತಾಂತ್ರಿಕವಾಗಿ ಚಿತ್ರ ಪರ್ವಾಗಿಲ್ಲ

    ತಾಂತ್ರಿಕವಾಗಿ ಚಿತ್ರ ಪರ್ವಾಗಿಲ್ಲ

    ಇತ್ತೀಚೆಗೆ ತೆರೆಕಂಡ ಪ್ರಜ್ವಲ್ ಅವರ 'ಅಂಗಾರಕ' ಚಿತ್ರಕ್ಕೆ ಹೋಲಿಸಿದರೆ ಪ್ರಜ್ವಲ್ ನಟನೆ ಉತ್ತಮವಾಗಿದೆ. ಫೈಟಿಂಗ್ ಸನ್ನಿವೇಶಗಳಲ್ಲಿ ಇನ್ನಷ್ಟು ಪಳಗಿದ್ದಾರೆ. ಪಿಕೆಎಚ್ ದಾಸ್ ಅವರ ಛಾಯಾಗ್ರಹಣ ಪರ್ವಾಗಿಲ್ಲ. ವಿ.ಮನೋಹರ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು ಎರಡು ಹಾಡುಗಳು ಮತ್ತೆ ಮತ್ತೆ ಗುನುಗುವಂತಿವೆ.

    ಚಿತ್ರದಲ್ಲಿ ಕಾಮಿಡಿ ಉಕ್ಕಿ ಹರಿದಿದೆ

    ಚಿತ್ರದಲ್ಲಿ ಕಾಮಿಡಿ ಉಕ್ಕಿ ಹರಿದಿದೆ

    ಚಿತ್ರದಲ್ಲಿ ರೇಖಾ ದಾಸ್, ಸಾಧು ಕೋಕಿಲ, ಬುಲ್ಲೆಟ್ ಪ್ರಾಕಾಶ್, ರಾಜು ತಾಳಿಕೋಟೆ, ಟೆನ್ನಿಸ್ ಕೃಷ್ಣ, ಉಮೇಶ್ ಹೀಗೆ ಸಾಕಷ್ಟು ಕಾಮಿಡಿ ನಟರಿರುವ ಕಾರಣ ಚಿತ್ರದಲ್ಲಿ ಹಾಸ್ಯಕ್ಕೆ ಬರವಿಲ್ಲ. ಹಾಗಂತ ಭರ್ಜರಿ ಹಾಸ್ಯವನ್ನೂ ನಿರೀಕ್ಷಿಸುವಂತಿಲ್ಲ. ಚಿತ್ರದಲ್ಲಿ ಒಂದು ನಿಯಮಿತ ವೇಗವನ್ನು ಕಾಯ್ದುಕೊಂಡು ಮಾಸ್ ಪ್ರೇಕ್ಷಕರು ಮೆಚ್ಚುವಂತೆ ಧನಂಜಯ ಬಾಲಾಜಿ ನಿರ್ದೇಶನವಿದೆ.

    ಪ್ರಜ್ವಲ್ ಅಭಿಮಾನಿಗಳು ಬಯಸುವ ಚಿತ್ರ

    ಪ್ರಜ್ವಲ್ ಅಭಿಮಾನಿಗಳು ಬಯಸುವ ಚಿತ್ರ

    ಚಿತ್ರದಲ್ಲಿ ವಕೀಲರ ಬಗ್ಗೆ ಒಂದು ಡೈಲಾಗ್ ಬರುತ್ತದೆ ಲಾಯರ್ ಅಂದ್ರೆ ಏನಂದುಕೊಂಡಿದ್ದೀಯಾ? ಅದೇ ಗೊತ್ತು ಬಿಡಿ ಬೆಂಗಳೂರಲ್ಲಿ ಟ್ರಾಫಿಕ್ ಜಾಮ್ ಮಾಡಿದ್ರಲ್ಲಾ ಎಂಬ ಉತ್ತರವೂ ಬರುತ್ತದೆ. ಈ ಡೈಲಾಗ್ ಹಾಸ್ಯದ ದಾಟಿಯಲ್ಲಿ ಬಳಸಿರುವ ಕಾರಣ ಯಾರೂ ಸೀರಿಯಸ್ ಆಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಒಟ್ಟಾರೆಯಾಗಿ ಪ್ರಜ್ವಲ್ ಅಭಿಮಾನಿಗಳು ಏನು ಬಯಸುತ್ತಾರೋ ಅದೆಲ್ಲವೂ ಚಿತ್ರದಲ್ಲಿದೆ.

    English summary
    Kannada movie Savaal review. It's an One time entertainer. Prajwal Devraj plays as young lawyer and convinces with his mass image. While the cinematography work is commendable, music by JB needs improvisation.
    Saturday, March 15, 2014, 10:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X