For Quick Alerts
  ALLOW NOTIFICATIONS  
  For Daily Alerts

  'ತಲೆ ಬಾಚ್ಕೊಳ್ಳಿ...' ಚಿತ್ರ ನೋಡಿ 'ತಲೆ ಚಚ್ಕೊಂಡ' ವಿಮರ್ಶಕರು.!

  By Harshitha
  |

  ಆತ್ಮಹತ್ಯೆ ಮಾಡಿಕೊಳ್ಳಲು ಹೊರಡುವ ಇಬ್ಬರು ಯುವಕರ ಜೀವನದಲ್ಲಿ ನಡೆಯುವ ಹಾಸ್ಯ ಸನ್ನಿವೇಶಗಳನ್ನೇ ಇಟ್ಕೊಂಡು ತಯಾರು ಮಾಡಿರುವ 'ತಲೆ ಬಾಚ್ಕೊಳ್ಳಿ ಪೌಡರ್ ಹಾಕ್ಕೊಳ್ಳಿ' ಸಿನಿಮಾ ತೆರೆಗೆ ಅಪ್ಪಳಿಸಿದ್ದಾಗಿದೆ.

  'ತಲೆ ಬಾಚ್ಕೊಳ್ಳಿ ಪೌಡರ್ ಹಾಕ್ಕೊಳ್ಳಿ' ಅಪ್ಪಟ್ಟ ಕಾಮಿಡಿ ಸಿನಿಮಾ ಎಂಬ ನಿರೀಕ್ಷೆ ಮೇರೆಗೆ ಚಿತ್ರಕ್ಕೆ ಭರ್ಜರಿ ಪ್ರಚಾರ ಸಿಕ್ಕಿತ್ತು. ಇದೇ ನಿರೀಕ್ಷೆಯನ್ನು ತಲೆಯಲ್ಲಿ ಇಟ್ಕೊಂಡು, ತಲೆ ಬಾಚ್ಕೊಂಡು, ಪೌಡರ್ ಹಾಕ್ಕೊಂಡು ಚಿತ್ರಮಂದಿರಕ್ಕೆ ಹೋದ ಪ್ರೇಕ್ಷಕರ ಗತಿ ಏನಾಯ್ತೋ ಗೊತ್ತಿಲ್ಲ. ಆದ್ರೆ, ವಿಮರ್ಶಕರು ಮಾತ್ರ ಸಿನಿಮಾ ನೋಡಿ ತಲೆ ಚಚ್ಕೊಂಡಿದ್ದಾರೆ.

  'ತಲೆ ಬಾಚ್ಕೊಳ್ಳಿ ಪೌಡರ್ ಹಾಕ್ಕೊಳ್ಳಿ' ಚಿತ್ರವನ್ನ ನೋಡಿದ ಸಿನಿ ವಿಮರ್ಶಕರು, ನೀಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

  ನೋಡಿದೋರು ತಲೆ ಚಚ್ಕೋಬೇಕು - ವಿಜಯ ಕರ್ನಾಟಕ

  ನೋಡಿದೋರು ತಲೆ ಚಚ್ಕೋಬೇಕು - ವಿಜಯ ಕರ್ನಾಟಕ

  ಒಂದು ಟಿಕೆಟ್ ಗೆ ಎರಡು ಚಿತ್ರ ನೋಡಿ ಎಂದು ಚಿತ್ರಕ್ಕೆ ಪ್ರಚಾರ ಕೊಟ್ಟಿತ್ತು 'ತಲೆ ಬಾಚ್ಕೊಳ್ಳಿ, ಪೌಡರ್ ಹಾಕ್ಕೊಳ್ಳಿ' ಸಿನಿಮಾ ತಂಡ. ಹೇಳಿದ ಮಾತನ್ನು ಚಾಚೂ ತಪ್ಪದೆ ಪಾಲಿಸಿರುವುದು ಚಿತ್ರ ನೋಡುವಾಗ ಗೊತ್ತಾಗುತ್ತೆ. ಎರಡಲ್ಲ ಐದಾರು ಚಿತ್ರಗಳನ್ನು ರುಬ್ಬಿ ಒಂದು ಚಿತ್ರವನ್ನಾಗಿಸಿದ ಕೀರ್ತಿ ನಿರ್ದೇಶಕರಿಗೆ ಸಲ್ಲುತ್ತದೆ. ಬೇರೆ ಬೇರೆ ಚಿತ್ರಗಳನ್ನು ಒಂದೇ ಸಲ ನೋಡಿದ ಅನುಭವ ಪ್ರೇಕ್ಷಕರಿಗೆ ಸಿಗುತ್ತದೆ. ಸಿನಿಮಾ ನಾಯಕನಾಗಬೇಕು, ಹೆಸರು ಗಳಿಸಬೇಕು ಎಂದು ಗಾಂಧಿನಗರಕ್ಕೆ ಬರುವ ಹುಡುಗರ ಕತೆಯನ್ನೇ ಸಿನಿಮಾ ಮಾಡಿದ ಅನೇಕ ಉದಾಹರಣೆಗಳಿವೆ. ಅದಕ್ಕೆ ಹೊಸ ಸೇರ್ಪಡೆ 'ತಲೆ ಬಾಚ್ಕೊಳ್ಳಿ, ಪೌಡರ್ ಹಾಕ್ಕೊಳ್ಳಿ'! - ಪಿ.ಎಸ್.ಜೈನ್

  ಬಹುಮುಖಿ ಕರೆ, ನಗುಮುಖದ ನಿರೂಪಣೆ - ಉದಯವಾಣಿ

  ಬಹುಮುಖಿ ಕರೆ, ನಗುಮುಖದ ನಿರೂಪಣೆ - ಉದಯವಾಣಿ

  ಇದು ಯಾವ ಜಾತಿಗೆ ಸೇರಿದ ಸಿನಿಮಾ ಅಂತ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಯಾಕೆಂದರೆ, ನಿರ್ದೇಶಕರು ಎಲ್ಲವನ್ನೂ ಒಟ್ಟಿಗೆ ರುಬ್ಬಿ ಮಸಾಲೆ ಹಾಕಿದ್ದಾರೆ! ಕಥೆಯ ಸಾರಾಂಶ ಚೆನ್ನಾಗಿದೆ. ಪಾತ್ರಗಳನ್ನು ಹೆಣೆದಿರುವ ರೀತಿ ಬಗ್ಗೆ ಮಾತಾಡುವಂತಿಲ್ಲ. ನಿರ್ದೇಶಕರು ಇಲ್ಲಿ ಒಟ್ಟೊಟ್ಟಿಗೆ ಎರಡು ಸಿನಿಮಾ ತೋರಿಸಿದ್ದಾರೆ. ಇದು ಸಿನಿಮಾದೊಳಗಿನ ಸಿನಿಮಾ ಕಥೆ - ವಿಭ

  ತಲೆ ಬಾಚ್ಕೊಂಡ್ ಪೌಡರ್ ಹಾಕ್ಕೊಂಡೇ ಹೋದ್ರೂ ನಗು ಮಾಯ - ವಿಜಯವಾಣಿ

  ತಲೆ ಬಾಚ್ಕೊಂಡ್ ಪೌಡರ್ ಹಾಕ್ಕೊಂಡೇ ಹೋದ್ರೂ ನಗು ಮಾಯ - ವಿಜಯವಾಣಿ

  ಕಾಮಿಡಿ ಕಿಕ್ ನೊಂದಿಗೆ ಪ್ರಾರಂಭವಾಗುವ ಸಿನಿಮಾ, ಹೋಗುಹೋಗುತ್ತಾ 'ಕಳೆದು' ಹೋಗುತ್ತದೆ. ಮೊದಲರ್ಧ ಹುಬ್ಬೇರಿಸುವಂತೆ ಮಾಡಿದರೂ, ದ್ವಿತೀಯಾರ್ಧಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ಮಾತ್ರ ನಗಿಸಿ ಮೇಲೇಳಿಸುತ್ತದೆ! ವಿಕ್ರಮ್ ಆರ್ಯ ಪಾತ್ರಕ್ಕೆ ಜೀವ ತುಂಬಲು ಪ್ರಯತ್ನಿಸಿದ್ದಾರೆ. ಚಿಕ್ಕಣ್ಣ ಚಿತ್ರದ ಕೇಂದ್ರ ಬಿಂದು. ಇಬ್ಬರು ನಾಯಕಿಯರು ಆಟಕ್ಕುಂಟು ಲೆಕ್ಕಕ್ಕಿಲ್ಲ.

  Tale Bachkoli Powder Hakoli Movie Review - Times of India

  Tale Bachkoli Powder Hakoli Movie Review - Times of India

  With Chikkanna as one of the leads, one expected a laugh riot, but this film that was supposed to be a spoof on various things ends up being rather dull and drab from the beginning. Director Venugopal's script doesn't have that zing and his style of filmmaking is rather old school and unappealing. It takes a special kind of patience for one to sit through this film, which could have easily been way better. - Sunayana Suresh

  English summary
  Kannada Movie 'Thale Bachakoli Powder Hakoli' has received mixed response from the critics. Here is the collection of reviews by Top News Papers of Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X