»   » ನನ್ನ ಕಣ್ಣ ಕನ್ನಡಿಯಲ್ಲಿ 'ರನ್ನ' ಚಲನಚಿತ್ರದ ಪ್ರತಿಬಿಂಬ

ನನ್ನ ಕಣ್ಣ ಕನ್ನಡಿಯಲ್ಲಿ 'ರನ್ನ' ಚಲನಚಿತ್ರದ ಪ್ರತಿಬಿಂಬ

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ರನ್ನ ಚಿತ್ರ ಹೇಗಿದೆ ಎನ್ನುವುದಕ್ಕೆ ಗಲ್ಲಾಪೆಟ್ಟಿಗೆಯಲ್ಲಿನ ವರದಿ ಸದ್ಯಕ್ಕೆ ಉತ್ತರ ನೀಡುತ್ತಿದೆ.

ಮಲ್ಟಿಪ್ಲೆಕ್ಸ್ ಸೇರಿದಂತೆ ರಾಜ್ಯಾದ್ಯಂತ ರನ್ನ ಚಿತ್ರವನ್ನು ಚಿತ್ರ ಪ್ರೇಮಿಗಳು ಪ್ರೀತಿಯಿಂದ ಬರ ಮಾಡಿಕೊಂಡಿದ್ದಾರೆ. (ರನ್ನ ಚಿತ್ರವಿಮರ್ಶೆ)

ವಿಮರ್ಶಕರ ಮಿಶ್ರ ಪ್ರತಿಕ್ರಿಯೆ ನಡುವೆಯೂ ರನ್ನ ಚಿತ್ರ ಬಾಕ್ಸಾಫೀಸಿನಲ್ಲಿ ಸದ್ಯ ಧೂಳೆಬ್ಬಿಸುತ್ತಿದೆ. ಚಿತ್ರ ಈಗಾಗಲೇ ಹತ್ತು ಕೋಟಿ ಕ್ಲಬ್ಬನ್ನು ಸೇರಿಕೊಂಡಿದೆ ಎನ್ನುವುದು ಸಿನಿಪಂಡಿತರು ನುಡಿಯುವ ಲೆಕ್ಕಾಚಾರ.

ಇತ್ತೀಚೆಗೆ ಸುದ್ದಿವಾಹಿನಿಯಯೊಂದರ ಸಂದರ್ಶನದಲ್ಲಿ ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಗ್ಗೆ ಗೌರವದ ಮಾತನ್ನಾಡಿದ್ದರು, ಇದಕ್ಕೆ ಶಿವಣ್ಣ ಕೂಡಾ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಇನ್ನು ಕಳೆದ ಗುರುವಾರ ಬಿಡುಗಡೆಯಾದ ರನ್ನ ಚಿತ್ರದಲ್ಲಿ ವರನಟ ಡಾ. ರಾಜಕುಮಾರ್ ಅವರ ಕ್ಲಿಪ್ಪಿಂಗ್ ಇರುವುದು ವಿಶೇಷ.

ರನ್ನ ಚಿತ್ರದ ಪ್ಲಸ್ ಮತ್ತು ಮೈನಸ್ ಪಾಯಿಂಟ್, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಸಂಬಂಧವನ್ನು ಒಂದು ಮಾಡುವ ಪಾತ್ರ

ಚಿತ್ರದಲ್ಲಿ ನಾಯಕ ಭಾರ್ಗವ (ಸುದೀಪ್) ನದ್ದು ತಾತ ಮತ್ತು ಅತ್ತೆಯನ್ನು ಒಂದು ಮಾಡುವ ಪಾತ್ರ. ಅದಕ್ಕಾಗಿ ಸ್ವಿಜರ್ಲ್ಯಾಂಡಿನಿಂದ ಬರುವ ನಾಯಕ ಡ್ರೈವರ್ ಪಾತ್ರದಲ್ಲಿ ತನ್ನ ಅತ್ತೆಯ ಮನೆ ಸೇರುತ್ತಾನೆ.

ಡ್ರೈವರ್ ಪಾತ್ರಕ್ಕೆ ಜೀವ ತುಂಬಲು

ಅತ್ತೆಯ ಮನೆಯಲ್ಲಿ ಡ್ರೈವರಾಗಿ ನಟಿಸುವ ಪಾತ್ರದ ಬಾಡಿ ಲಾಂಗ್ವೇಜಿಗಾಗಿ ನಾಯಕನ ಹಿಂದೆಮುಂದೆ ಇರುವವರು (ತಬ್ಲಾನಾಣಿ, ಮುನಿ) ಕೆಲವೊಂದು ಕನ್ನಡದ ನಟರು ಹಿಂದೆ ಡ್ರೈವರಾಗಿ ನಟಿಸಿದ್ದ ಪಾತ್ರವನ್ನು ತೋರಿಸುತ್ತಾರೆ. ಅದರಲ್ಲಿ ರಾಜ್ ಡ್ರೈವರ್ ಆಗಿ ಅಭಿನಯಸಿದ್ದ ಮೇಯರ್ ಮುತ್ತಣ್ಣ, ವಿಷ್ಣುವರ್ಧನ್ ಅವರ ಸೂರ್ಯವಂಶ, ಶಂಕ್ರಣ್ಣನ ಆಟೋರಾಜ, ಸುದೀಪ್ ಅಭಿನಯದ ರಂಗ ಎಸ್ಎಸ್ಎಲ್ಸಿ ಚಿತ್ರದ ತುಣುಕು ತೋರಿಸಿದ್ದು ವಿಶೇಷ.

ಮೇಕಿಂಗ್ ನಲ್ಲಿ ರನ್ನ ಸಕತ್ ರಿಚ್

ಮೇಕಿಂಗ್ ವಿಚಾರದಲ್ಲಿ ರನ್ನ ಸಕತ್ ರಿಚ್. ಗಗನಚುಂಬಿ ಕಟ್ಟಡದ ಹೆಲಿಪ್ಯಾಡಿನಲ್ಲಿನ ಫೈಟ್, ಉತ್ತರ ಕರ್ನಾಟಕದ ಭಾಗದಲ್ಲಿ ನಡೆಯುವ ಶರತ್ ಲೋಹಿತಾಶ್ವ ಪಡೆಗಳ ಜೊತೆಗಿನ ಹೊಡೆದಾಟ, ಪಬ್ ನಲ್ಲಿ ಇಂದಿನ, ಹಿಂದಿನ ನಾಯಕಿ ನಟಿಯರ ಸಾಂಗ್ ತುಂಬಾ ಶ್ರೀಮಂತವಾಗಿ ಮೂಡಿಬಂದಿದೆ.

ಕೆಲವೊಂದು ಅನಾವಶ್ಯಕ ದೃಶ್ಯಗಳು

ಇಂಟರ್ವಲ್ ನಂತರ ಕನಿಷ್ಟ ಹದಿನೈದು ನಿಮಿಷ ಚಿತ್ರಕ್ಕೆ ಕತ್ತರಿ ಹಾಕಬಹುದಿತ್ತು. ಅದರಲ್ಲೂ ಸಾಧು ಕೋಕಿಲ ರಂಗಪ್ರವೇಶದ ನಂತರದ ಕೆಲವೊಂದು ಸನ್ನಿವೇಶ, ಅನಾವಶ್ಯಕವಾದ ತೂರಿಬರುವ ಹಾಡುಗಳು ಚಿತ್ರ ಸಾಗುವ ಸ್ಪೀಡಿಗೆ ಬ್ರೇಕ್ ಹಾಕುತ್ತೆ.

ಚಿಕ್ಕಣ್ಣ ಪಾತ್ರ

ಕನ್ನಡ ಚಿತ್ರೋದ್ಯಮದಲ್ಲಿ ಪ್ರಸ್ತುತ ಕಾಮಿಡಿ ಸನ್ನಿವೇಶದಲ್ಲಿನ crowd puller ಎಂದರೆ ಅದು ಚಿಕ್ಕಣ್ಣ. ಮಾತೆತ್ತಿದರೆ ಚಿಕ್ಕಣ್ಣ, ಮುನಿ, ನಾಣಿ ಕಪಾಳಕ್ಕೆ ಹೊಡೆಯುವ ನಾಯಕನ ಪಾತ್ರ ಕೆಲವೊಮ್ಮೆ ಅತಿರೇಕ ಅನಿಸದೇ ಇರದು.

ಪ್ರಕಾಶ್ ರೈ, ಮಧು

ಪ್ರಕಾಶ್ ರೈ ಅಂತಹ ಮೆಚ್ಯೂರ್ಡ್ ನಟ ತಾತನ ಪಾತ್ರಕ್ಕೆ ಅಷ್ಟು ಸೂಟ್ ಆಗಿಲ್ಲ, ಅದ್ಯಾಕೋ ಅವರ costume ತಾತನ ಪಾತ್ರಕ್ಕೆ ಒಗ್ಗಿಲ್ಲ. ದೊಡ್ಡಣ್ಣ, ಶ್ರೀನಿವಾಸಮೂರ್ತಿ, ಲೋಕನಾಥ್ ಆ ಪಾತ್ರಕ್ಕೆ ಸೂಟ್ ಆಗುತ್ತಿತ್ತು ಎನ್ನುವುದು ಇಂಟರ್ವಲ್ ನಲ್ಲಿ ಪ್ರೇಕ್ಷಕರು ಹೇಳುತ್ತಿದ್ದ ಮಾತು. ಇನ್ನು ಮಧು ಅತ್ಯುತ್ತಮವಾಗಿ ನಟಿಸಿದ್ದರೂ, ಕೆಲವೊಂದು ದೃಶ್ಯದಲ್ಲಿ ಮೇಕಪ್ ತೀರಾ ಜಾಸ್ತಿ .

ಕ್ಲೈಮ್ಯಾಕ್ಸಿನಲ್ಲಿ ಧೂಳೆಬ್ಬಿಸಿದ ಸುದೀಪ್

ರನ್ನ ಹೀರೋಯಿಸಂ ಸಾರುವ ಚಿತ್ರ. ಚಿತ್ರದುದ್ದಕ್ಕೂ ಸುದೀಪ್ ಅವರದ್ದು ಅಭಿನಯದ ಬಗ್ಗೆ ಕೆಮ್ಮಂಗಿಲ್ಲ. ಅದರಲ್ಲೂ ಕೆಂಗೇರಿ ರೈಲು ನಿಲ್ದಾಣದಲ್ಲಿ ಅತ್ತೆ ಜೊತೆಗಿನ ಕ್ಲೈಮ್ಯಾಕ್ಸ್ ಸನ್ನಿವೇಶದಲ್ಲಿ ಸುದೀಪ್ ನಟನೆ ಸೂಪರ್. ಇಡೀ ಚಿತ್ರ ಇಂದು ಇಷ್ಟರ ಮಟ್ಟಿಗೆ ಜನರನ್ನು ಆಕರ್ಷಿಸುತ್ತಿದೆಯೆಂದರೆ ಅದು ಕ್ಲೈಮ್ಯಾಕ್ಸಿನಲ್ಲಿನ ಸುದೀಪ್ ಮನೋಜ್ಞ ಅಭಿನಯ ಕೂಡಾ ಒಂದು ಕಾರಣ ಎಂದರೆ ತಪ್ಪಾಗಲಾರದು.

English summary
Matinee idol Dr. Rajkumar, Vishnuvardhan, Shankar Nag clipping's in Sudeep's latest movie Ranna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada