For Quick Alerts
  ALLOW NOTIFICATIONS  
  For Daily Alerts

  ಟ್ವಿಟ್ಟರ್ ವಿಮರ್ಶೆ: ರಜನಿ ಓಕೆ ಆದ್ರೆ 'ಕಬಾಲಿ' ಅಷ್ಟಕಷ್ಟೆ.!

  By Harshitha
  |

  ಕಡೆಗೂ ಅಭಿಮಾನಿಗಳ ಕನವರಿಕೆ ಈಡೇರಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ 'ಕಬಾಲಿ' ಚಿತ್ರ ತೆರೆಗೆ ಅಪ್ಪಳಿಸಿದೆ.

  ನಿದ್ದೆ ಮಾಡದೆ ರಾತ್ರೋ ರಾತ್ರಿ ಥಿಯೇಟರ್ ಮುಂದೆ ಜಮಾಯಿಸಿದ್ದ ಲೆಕ್ಕವಿಲ್ಲದಷ್ಟು ಅಭಿಮಾನಿಗಳು 'ಕಬಾಲಿ' ಮೊದಲ ದಿನದ ಮೊದಲ ಶೋ ಕಣ್ತುಂಬಿಕೊಂಡಿದ್ದಾರೆ. [ಬ್ರೇಕಿಂಗ್ ನ್ಯೂಸ್: 'ಕಬಾಲಿ' ಎಂಟ್ರಿ ಸೀನ್ ಆನ್ ಲೈನ್ ನಲ್ಲಿ ಲಭ್ಯ.!]

  ಕೊಟ್ಟ ಕಾಸಿಗೆ 'ಕಬಾಲಿ' ಮನರಂಜನೆ ನೀಡಿದ್ರೆ ಓಕೆ. ಇಲ್ಲ ಅಂದ್ರೆ ಪ್ರೇಕ್ಷಕರು ಸಪ್ಪೆ ಮೋರೆ ಹಾಕಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಈ ಹಿಂದೆ ತೆರೆಗೆ ಬಂದಿದ್ದ 'ಲಿಂಗಾ' ಸಿನಿಮಾ ಕೂಡ ರಜನಿ ಭಕ್ತರ ನಿರೀಕ್ಷೆ ಹುಸಿ ಮಾಡಿತ್ತು. ಈ ಬಾರಿ ಹಾಗೆ ಆಗಲ್ಲ ಎಂಬ ನಂಬಿಕೆ ಸ್ವತಃ ರಜನಿಕಾಂತ್ ಗೂ ಇದೆ. ಹಾಗಾದ್ರೆ, ರಜನಿ ನಂಬಿಕೆ ನಿಜ ಆಗುತ್ತಾ.?

  'ಕಬಾಲಿ' ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರು ಟ್ವಿಟ್ಟರ್ ನಲ್ಲಿ ನೀಡುತ್ತಿರುವ 'ವಿಮರ್ಶೆ'ಗಳ ಕಲೆಕ್ಷನ್ ನಿಮ್ಮ ಮುಂದೆ ಇಡ್ತಿದ್ದೀವಿ. ನೀವು ರಜನಿ ಫ್ಯಾನ್ ಆಗಿದ್ರೆ, ಸ್ವಲ್ಪ ತಾಳ್ಮೆಯಿಂದ, ಗುಂಡಿಗೆಯನ್ನ ಗಟ್ಟಿ ಮಾಡಿಕೊಂಡು ಟ್ವೀಟ್ ಗಳತ್ತ ಕಣ್ಣಾಡಿಸಿ....

  'ಕಬಾಲಿ' ಎಂಟ್ರಿ ಸೀನ್ ಮಸ್ತ್.!

  'ಕಬಾಲಿ' ಎಂಟ್ರಿ ಸೀನ್ ಮಸ್ತ್.!

  ''ಕಬಾಲಿ' ಸಿನಿಮಾ ಹೇಗೆ ಇದ್ರೂ, ರಜನಿಕಾಂತ್ ಎಂಟ್ರಿ ಸೀನ್ ನೋಡ್ತಿದ್ರೆ ಭೂಕಂಪ ಆದ ಹಾಗೆ. ಮೈ ಎಲ್ಲಾ ರೋಮಾಂಚನ ಆಗುತ್ತೆ'' - ಕಿಂಗ್ಸ್ಲಿ ರಾಜ್ ಕುಮಾರ್ ['ಕಬಾಲಿ' ಚಿತ್ರದ ವಿಲನ್ ಕನ್ನಡದ ಕಿಶೋರ್ ಜೊತೆ ಒಂದ್ ಸಂದರ್ಶನ]

  ಇಂಟರ್ ವಲ್ ನಲ್ಲಿ ಸೂಪರ್ ಟ್ವಿಸ್ಟ್.!

  ಇಂಟರ್ ವಲ್ ನಲ್ಲಿ ಸೂಪರ್ ಟ್ವಿಸ್ಟ್.!

  'ಕಬಾಲಿ' ಚಿತ್ರದ ಮಧ್ಯಂತರದಲ್ಲಿ ನೀಡಿರುವ ಟ್ವಿಸ್ಟ್ ಸೂಪರ್ ಆಗಿದೆ ಎಂಬುದು ಕೆಲವರ ಅಭಿಪ್ರಾಯ. ['ಕಬಾಲಿ' ರಜನಿಯ ಹುಚ್ಚು ಅಭಿಮಾನಿಗಳ 10 ಮುಖಗಳು!]

  ಸಿನಿಮಾ ಸುಮಾರು.!

  ಸಿನಿಮಾ ಸುಮಾರು.!

  'ಕಬಾಲಿ' ಸಿನಿಮಾ ಸುಮಾರು ಅಂತ ಹೇಳುವವರೂ ಉಂಟು.

  ಗ್ರೇಟ್ ಸಿನಿಮಾ ಅಲ್ಲ.!

  ಗ್ರೇಟ್ ಸಿನಿಮಾ ಅಲ್ಲ.!

  ''ಕಬಾಲಿ' ಸ್ವಲ್ಪ ಸ್ಲೋ. ಆದರೂ ಡೀಸೆಂಟ್ ಸಿನಿಮಾ. ಹೇಳಿಕೊಳ್ಳುವ ಹಾಗೆ ಗ್ರೇಟ್ ಅಲ್ಲ'' - ರಾಕೇಶ್ ಕುಮಾರ್

  'ಭಾಷಾ', 'ಪಡೆಯಪ್ಪ' ತರಹ ಅಲ್ಲ.!

  'ಭಾಷಾ', 'ಪಡೆಯಪ್ಪ' ತರಹ ಅಲ್ಲ.!

  ''ಕಬಾಲಿ' ಭಾವನೆಗಳು ಬೆರೆತಿರುವ ಕ್ಲಾಸಿಕ್ ಸಿನಿಮಾ. 'ಭಾಷಾ' ಮತ್ತು 'ಪಡೆಯಪ್ಪ' ಚಿತ್ರದಂತೆ ನಿರೀಕ್ಷೆ ಮಾಡಬೇಡಿ.''

  ಹ್ಯಾಟ್ರಿಕ್ ಫ್ಲಾಪ್.!

  ಹ್ಯಾಟ್ರಿಕ್ ಫ್ಲಾಪ್.!

  'ಕಬಾಲಿ' ಚಿತ್ರದ ಮೂಲಕ ರಜನಿಕಾಂತ್ ಹ್ಯಾಟ್ರಿಕ್ ಫ್ಲಾಪ್ ಕಂಪ್ಲೀಟ್ ಮಾಡ್ತಾರಂತೆ.

  ದುಡ್ಡು ವಾಪಸ್ ಬೇಕು.!

  ದುಡ್ಡು ವಾಪಸ್ ಬೇಕು.!

  ''ನಿರಾಶೆ ಆಗಿದೆ. ನನ್ನ ದುಡ್ಡು ನನಗೆ ವಾಪಸ್ ಬೇಕು'' ಅಂತ ಟ್ವೀಟ್ ಮಾಡಿರುವವರೂ ಇದ್ದಾರೆ.

  ಪಾಗಲ್ ರಂಜಿತ್

  ಪಾಗಲ್ ರಂಜಿತ್

  ''ಕಸ (ಕಬಾಲಿ) ಎಸೆದಿರುವ ಪಾಗಲ್ ರಂಜಿತ್ ನಡೆ ಅಕ್ಷಮ್ಯ. 'ಕಬಾಲಿ' 'ಲಿಂಗಾ' ಸಹೋದರ''

  ಅಷ್ಟಕಷ್ಟೆ.!

  ಅಷ್ಟಕಷ್ಟೆ.!

  ''ಎವರೆಸ್ಟ್ ನಂತಹ ನಿರೀಕ್ಷೆ ಮುಟ್ಟಿಲ್ಲ. ಆದರೂ ಸಮಾಧಾನಕರ ಸಿನಿಮಾ''

  ವಿಡಿಯೋ ನೋಡಿ...

  'ಕಬಾಲಿ' ಚಿತ್ರದ ಫಸ್ಟ್ ಡೇ ಫಸ್ಟ್ ಶೋ ನೋಡಿದ ಬೆಂಗಳೂರು ಪ್ರೇಕ್ಷಕರು ನೀಡಿದ ಪ್ರತಿಕ್ರಿಯೆ ಏನು ಅಂತ ತಿಳಿಯಲು ಈ ವಿಡಿಯೋ ನೋಡಿ....

  English summary
  Super Star Rajinikanth starrer Tamil Movie 'Kabali' has hit the screens today (June 22nd). Many of the fans are disappointed over the Film's Pace, as it is very slow. Check out the Twitter Reviews here.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X