For Quick Alerts
  ALLOW NOTIFICATIONS  
  For Daily Alerts

  ಚಿತ್ರ ವಿಮರ್ಶೆ: ಮುದ್ದು ಮುದ್ದು ಮನಸುಗಳ 'ಮುದ್ದು ಮನಸೇ'

  By ಸುನಿ ಗೌಡ
  |

  ವರಮಹಾಲಕ್ಷ್ಮಿ ಹಬ್ಬದ ಉಡುಗೊರೆಯಾಗಿ ಇಂದು(ಆಗಸ್ಟ್ 28) ನಿರ್ದೇಶಕ ಅನಂತ್ ಶೈನ್ ಅವರ ಮುದ್ದಾದ ಮನಸುಗಳ 'ಮುದ್ದು ಮನಸೇ' ಭರ್ಜರಿಯಾಗಿ ತೆರೆಗೆ ಅಪ್ಪಳಿಸಿದೆ. ನಾಯಕ ಅರುಣ್ ಗೌಡ ನಾಯಕಿ ಐಶ್ವರ್ಯ ನಾಗ್ ಹಾಗೂ ನಿತ್ಯಾ ರಾಮ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

  ಚಿತ್ರದ ಸಂಪೂರ್ಣ ವಿಮರ್ಶೆ ಇಲ್ಲಿದೆ ನೋಡಿ..

  'ಮುದ್ದು ಮನಸೇ' ಕಥೆ:

  ಸುಂದರವಾಗಿರುವ ಒಂದು ರೋಮ್ಯಾಂಟಿಕ್ ಕಥೆ ಮೂರು ಹೃದಯಗಳಾದ ಅರುಣ್ ಗೌಡ(ಸುರೇಶ), ನಿತ್ಯಾ ರಾಮ್( ಪೂರ್ವಿ) ಹಾಗೂ ಐಶ್ವರ್ಯ ನಾಗ್(ಮೌನ) ನಡುವೆ ನಡೆಯುವ ಮುದ್ದಾದ ಜರ್ನಿಯೇ 'ಮುದ್ದು ಮನಸೇ'.['ಮುದ್ದು ಮನಸೇ' ನಿರ್ದೇಶಕ ಅನಂತ್ ಶೈನ್ ಜೊತೆ ಫಿಲ್ಮಿಬೀಟ್]

  ಆಕ್ಷನ್ ಸೀನ್ ಮೂಲಕ ಚಿತ್ರದ ನಾಯಕ ಅರುಣ್ ಗೌಡ ಗ್ರ್ಯಾಂಡ್ ಎಂಟ್ರಿ. ತದನಂತರ ಪಾತ್ರವರ್ಗದ ಧೀರ್ಘ ಪರಿಚಯದ ನಂತರ ಚಿತ್ರ ಪ್ರೇಕ್ಷಕರನ್ನು ಫ್ಲ್ಯಾಶ್‌ಬ್ಯಾಕ್ ಗೆ ಕರೆದುಕೊಂಡು ಹೋಗುತ್ತದೆ.

  aishwarya nag

  ನಾಯಕ ಸುರೇಶ್ ಹಳ್ಳಿಯಲ್ಲಿ ತನ್ನ ತಾಯಿಯೊಂದಿಗೆ ತರಕಾರಿ ಮಾರಿಕೊಂಡು ಜೀವನ ಸಾಗಿಸುವ ಒಬ್ಬ ಮುಗ್ಧ ಹುಡುಗ. ಸುರೇಶನ ಮುಗ್ಧತೆ ನಾಯಕಿ ಪೂರ್ವಿ ಯನ್ನು ಸುರೇಶನ ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತದೆ. ಆದರೆ ನಾಯಕಿ ಪೂರ್ವಿ ತಂದೆ ಇದನ್ನು ವಿರೋಧಿಸುತ್ತಾರೆ.

  ಈ ಸಂದರ್ಭದಲ್ಲಿ ಸುರೇಶನ ತಾಯಿ ಮರಣ ಹೊಂದುತ್ತಾರೆ ಇಲ್ಲಿ ಕಥೆಗೆ ಟ್ವಿಸ್ಟ್ ಸಿಗುತ್ತದೆ. ಒಟ್ನಲ್ಲಿ ತನ್ನ ತಾಯಿ ಜೊತೆಗೆ ಪ್ರೀತಿಯನ್ನು ಕಳೆದುಕೊಳ್ಳುವ ನಾಯಕ ತನ್ನ ಸಂಬಂಧಿಕರೊಂದಿಗೆ ತನ್ನ ಮುಂದಿನ ಜೀವನ ನಿರ್ವಹಿಸಲು ಪಟ್ಟಣಕ್ಕೆ ಹೋಗುತ್ತಾನೆ.

  ಇದೇ ಸುರೇಶ್ ಪಟ್ಟಣಕ್ಕೆ ಬಂದ ಮೇಲೆ ಸೂರಿಯಾಗುತ್ತಾನೆ. ಇದೇ ಸಂದರ್ಭದಲ್ಲಿ ಮೌನ(ಐಶ್ವರ್ಯ ನಾಗ್) ಸೂರಿಯ ಸ್ಟೈಲ್ ಹಾಗು ಗುಣ-ನಡತೆಗೆ ಮನಸೊತು ಪ್ರೀತಿಸಲು ಆರಂಭಿಸುತ್ತಾಳೆ. ಅಲ್ಲಿಗೆ ನಾಯಕ ಸುರೇಶ ಪೂರ್ವಿಯ ಪ್ರೀತಿ ಮರೆತು ಮೌನಳ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾನ ಅನ್ನೋದನ್ನ ನೋಡಲು ನೀವೊಮ್ಮೆ ಚಿತ್ರಮಂದಿರಕ್ಕೆ ಭೇಟಿ ನೀಡಿ.

  ನಟನೆ:

  ಚಿತ್ರದ ನಾಯಕ ಅರುಣ್ ಗೌಡ ಮುಗ್ದ ಹಳ್ಳಿ ಹುಡುಗ ಹಾಗು ರಫ್ ಆಂಡ್ ಟಫ್ ಮಾಡರ್ನ್ ಹುಡುಗನ ಪಾತ್ರಗಳಲ್ಲೂ ಸಖತ್ ಆಗಿ ಅಭಿನಯಿಸಿದ್ದಾರೆ. ಇನ್ನೂ ಚಿತ್ರದ ನಾಯಕಿಯರಾದ ಐಶ್ವರ್ಯ ನಾಗ್ ಹಾಗೂ ನಿತ್ಯಾ ರಾಮ್ ಇಬ್ಬರದೂ ಚಿತ್ರದಲ್ಲಿ ಲೀಡ್ ರೋಲ್ ಇದ್ದು, ಐಶ್ವರ್ಯ ನಾಗ್ ಸ್ವಲ್ಪ ಜಾಸ್ತಿನೇ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ.['ಮುದ್ದು ಮನಸೇ' ಅರು ಗೌಡ ಮನದಾಳದ ಮಾತು]

  ಇನ್ನುಳಿದಂತೆ ತಾಯಿ ಮಗನ ಪಾತ್ರದಲ್ಲಿ ಪದ್ಮಿನಿ ಪ್ರಕಾಶ್ ಹಾಗೂ ಅರುಣ್ ಗೌಡ ನಟನೆ ಅದ್ಭುತವಾಗಿ ಮೂಡಿಬಂದಿದೆ. ಜೊತೆಗೆ ಸಪೋರ್ಟಿಂಗ್ ಪಾತ್ರಗಳಲ್ಲಿ ಅಭಿನಯಿಸಿದ ಅಚ್ಯುತ್ ಕುಮಾರ್, ಪದ್ಮಜಾ ರಾವ್ ಸೇರಿದಂತೆ ಉಳಿದ ಹೊಸಬರ ನಟನೆ ಮೆಚ್ಚುವಂತಿದೆ.

  ತಾಂತ್ರಿಕತೆ:

  ಚಿತ್ರದ ಮೊದಲರ್ಧ ಭಾಗ ಪ್ರೇಕ್ಷಕರನ್ನು ಫುಲ್ ಎಂಗೇಜ್ ಮಾಡಿದರೆ ಸೆಕೆಂಡ್ ಹಾಫ್ ಕೊಂಚ ನಿಧಾನಕ್ಕೆ ಸಾಗುತ್ತದೆ. ಒಟ್ನಲ್ಲಿ ಒಂಥರಾ ರೋಮ್ಯಾಂಟಿಕ್ ಎಂರ್ಟಟೈನರ್. ನಿರ್ದೇಶಕ ಅನಂತ್ ಶೈನ್ ಅವರು ಚಿತ್ರದಲ್ಲಿ ಕಾಮಿಡಿ ಸೀನ್ ಗಳನ್ನು ತರಲು ಮರೆತಂತಿದೆ. ಹೊಸಬ ಮಾಧವ ಸಲುನ್ಕೆ ಅವರ ಸಿನಿಮಾಟೋಗ್ರಾಫಿ ಸಖತ್ ಆಗಿ ಮೂಡಿಬಂದಿದೆ.

  aishwarya nag

  ಸಂಗೀತ:

  ಒಟ್ಟಾರೆ ಹೇಳಬೇಕೆಂದರೆ ಅನಂತ್ ಶೈನ್ ಅವರ 'ಮುದ್ದು ಮನಸೇ' ಪಕ್ಕಾ ಮ್ಯೂಸಿಕಲ್ ಹಿಟ್ ಚಿತ್ರ. ಜೊತೆಗೆ ಈ ಚಿತ್ರ ಬಿಡುಗಡೆಗೆ ಮುಂಚೆ ಹಾಡುಗಳ ಮೂಲಕ ಹಿಟ್ ಕಂಡಿದೆ. ಸಂಗೀತ ನಿರ್ದೇಶಕ ವಿನೀತ್ ರಾಜ್ ತಮ್ಮ ಕೆಲಸಕ್ಕೆ ಯಾವುದೇ ರೀತಿಯ ಮೋಸ ಮಾಡಿಲ್ಲ. ಸ್ಯಾಂಡಲ್ ವುಡ್ ನ 6 ಜನ ಖ್ಯಾತ ಸಾಹಿತಿಗಳು ಬರೆದಿರುವ ಹಾಡುಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.[ಸಂದರ್ಶನ: ಮುದ್ದು ಮನಸೇ ಸ್ವರ ಸಂಯೋಜಕ ವಿನೀತ್]

  ಒಟ್ಟಾರೆ 'ಮುದ್ದು ಮನಸೇ'

  ಒಟ್ಟಾರೆ 'ಮುದ್ದು ಮನಸೇ' ಡೀಸೆಂಟ್ ಚಿತ್ರ ನಿರ್ದೇಶಕ ಅನಂತ್ ಶೈನ್ ಚೊಚ್ಚಲ ನಿರ್ದೇಶನದಲ್ಲಿ ಹಾಗೂ ನಟ ಅರುಣ್ ಗೌಡ, ನಿತ್ಯಾ ರಾಮ್, ಐಶ್ವರ್ಯಾ ನಾಗ್ ನಟನೆಯಲ್ಲಿ ಮೂಡಿ ಬಂದಿದೆ. ನೋಡಬಹುದು 'ಮುದ್ದು ಮನಸೇ' ನೋಡಿ ಮುದ್ದು ಮುದ್ದು ಮನಸುಗಳಿಗೆ ಹಾರೈಸಿ.

  Rating:
  3.0/5

  ನಿರ್ದೇಶಕ: ಅನಂತ್ ಶೈನ್

  ನಿರ್ಮಾಪಕರು: ಜೀವನ್ ಶೆಟ್ಟಿ, ರಮೇಶ್ ಮತ್ತು ಸುರೇಶ್ ಗೌಡ

  ಸಂಗೀತ: ವಿನೀತ್ ರಾಜ್

  ಪಾತ್ರವರ್ಗ: ಅರುಣ್ ಗೌಡ, ನಿತ್ಯಾ ರಾಮ್, ಐಶ್ವರ್ಯ ನಾಗ್, ಅಚ್ಯುತ್ ಕುಮಾರ್, ಪದ್ಮಜಾ ರಾವ್, ಪದ್ಮಿನಿ ಪ್ರಕಾಶ್ ಮುಂತಾದವರು

  English summary
  Movie Review: 'Muddu Manase' has hit the theatres today, August 28th as a gift for Varamahalakshmi festival. Directed by debut director Ananth Shine, the movie stars actress Aishwarya Nag and debutants Nithya Ram and Arun Gowda as lead roles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X