»   » 'ಕೆಂಗುಲಾಬಿ' 'ಪ್ರಿಯಾಂಕ' ವಿಮರ್ಶಕರಿಗೆ ಇಷ್ಟ ಆದ್ಲಾ?

'ಕೆಂಗುಲಾಬಿ' 'ಪ್ರಿಯಾಂಕ' ವಿಮರ್ಶಕರಿಗೆ ಇಷ್ಟ ಆದ್ಲಾ?

By Suneetha
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  'ಪ್ರೀತಿ' ಎಂದರೆ ಏನು? ಒಂದು ಪವಿತ್ರವಾದ 'ಪ್ರೀತಿ' ಏನೆಲ್ಲಾ ಸಮಸ್ಯೆ ತಂದೊಡ್ದಬಹುದು. 'ಪ್ರೀತಿ' ಎಂಬುದು ಎಷ್ಟು ಅಪಾಯಕಾರಿ ಹೀಗೆ ಅನೇಕ ಪ್ರಶ್ನೆಗಳಿಗೆ ನಿರ್ದೇಶಕ ದಿನೇಶ್ ಬಾಬು ಅವರು 'ಪ್ರಿಯಾಂಕ' ಚಿತ್ರದ ಮೂಲಕ ಉತ್ತರ ಹೇಳುತ್ತಾ ಹೋಗಿದ್ದಾರೆ.

  ಒಂದು ಗಂಡ ಹೆಂಡತಿಯ ಸುಂದರ ಬದುಕಿನಲ್ಲಿ ಒಬ್ಬ ಯುವಕ ಎಂಟ್ರಿ ಪಡೆದುಕೊಂಡರೆ ಹೇಗಿರಬಹುದು? ಅವರ ಸಂಸಾರದ ಗತಿ ಏನು, ಆಮೇಲೆ ಫೇಸ್ ಬುಕ್ ಸಂದೇಶಗಳ ಆಟ, ತಂದಿಡುವ ಸಂಕಟ ಎಂತಹದು ಮುಂತಾದವುಗಳನ್ನು 'ಪ್ರಿಯಾಂಕ' ಚಿತ್ರದ ಮೂಲಕ ಹಾಗೆ ತೋರಿಸಲಾಗಿದೆ.[ಪ್ರಿಯಾಂಕ ವಿಮರ್ಶೆ: ಗಂಡ-ಹೆಂಡತಿ, ಗುಲಾಬಿ ಹುಡುಗ ಮತ್ತು ಕೊಲೆ]

  ನಿರ್ದೇಶಕ ದಿನೇಶ್ ಬಾಬು ಆಕ್ಷನ್-ಕಟ್ ಹೇಳಿರುವ ನಟಿ ಪ್ರಿಯಾಂಕ ಉಪೇಂದ್ರ ಮತ್ತು 'ಒಗ್ಗರಣೆ' ಚಿತ್ರದ ಖ್ಯಾತಿಯ ನಟ ತೇಜಸ್ ಅವರು ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದ 'ಪ್ರಿಯಾಂಕ' ಚಿತ್ರ ಫೆಬ್ರವರಿ 5 ರಂದು ಭರ್ಜರಿಯಾಗಿ ಬಿಡುಗಡೆ ಆಗಿದೆ.[ತಮ್ಮ ಮನದನ್ನೆ 'ಪ್ರಿಯಾಂಕ' ಬಗ್ಗೆ ರಿಯಲ್ ಉಪ್ಪಿ ಏನಂದ್ರು?]

  ಇನ್ನು ಚಿತ್ರದ ಬಗ್ಗೆ ಖ್ಯಾತ ವಿಮರ್ಶಕರು ವಿಭಿನ್ನ ವಿಮರ್ಶೆಗಳನ್ನು ವ್ಯಕ್ತಪಡಿಸಿದ್ದಾರೆ. ಖ್ಯಾತ ವಿಮರ್ಶಕರು ವ್ಯಕ್ತಪಡಿಸಿರುವ ಅಭಿಪ್ರಾಯಗಳ ಕಲೆಕ್ಷನ್ಸ್ ಇಲ್ಲಿದೆ ನೋಡಿ, ಕೆಳಗಿನ ಸ್ಲೈಡ್ಸ್ ಗಳಲ್ಲಿ....

  ಮೋಹಕ ಹೆಣಿಗೆ - ಪ್ರಜಾವಾಣಿ

  ಗುಲಾಬಿ ಎಂದರೆ ಆ ಹುಡುಗನಿಗೆ ಪಂಚಪ್ರಾಣ. ಅದೇ ಪರಿಮಳದ ದ್ರವ್ಯ ಪೂಸಿಕೊಂಡು ವೈಭವೋಪೇತ ಮಳಿಗೆಗೆ ಬರುವ ಬೆಡಗಿಗೆ ಆತ ಮನಸೋಲುತ್ತಾನೆ. ಆಕೆಗೆ ಈಗಾಗಲೇ ಮದುವೆ ಆಗಿದೆ ಎಂದು ಗೊತ್ತಾದಾಗ, ಆಕೆಯ ಪತಿಯನ್ನು ಮುಗಿಸುತ್ತಾನೆ. ಅದು ಗೊತ್ತಾದ ಮೇಲೆ ಆಕೆ ಪ್ರತೀಕಾರ ತೆಗೆದುಕೊಳ್ಳಲು ನಿರ್ಧರಿಸುತ್ತಾಳೆ. ಇಷ್ಟೇ ಇರುವ ‘ಪ್ರಿಯಾಂಕ' ಕಥೆ ಕೇಳುತ್ತಿದ್ದರೆ ‘ಅಮೃತವರ್ಷಿಣಿ' ನೆನಪಾಗಬಹುದು. ಹೌದು, ತಮ್ಮದೇ ನಿರ್ದೇಶನದ ‘ಅಮೃತವರ್ಷಿಣಿ'ಯನ್ನು ನಿರ್ದೇಶಕ ದಿನೇಶ್ ಬಾಬು ರೀಮೇಕ್ ಮಾಡಿದ್ದಾರೆ ಎನ್ನಲು ಅಡ್ಡಿಯಿಲ್ಲ! ಮೂಲ ಕಥಾಹಂದರ ಅದೇ ಬಗೆಯಲ್ಲಿದೆ. ವಿಶೇಷತೆ ಇರುವುದೇನಿದ್ದರೂ, ವಿಭಿನ್ನ ಕ್ಲೈಮ್ಯಾಕ್ಸ್‌ನಲ್ಲಿ.- ಆನಂದತೀರ್ಥ ಪ್ಯಾಟಿ.

  'ಕುಂಡದಲ್ಲಿ ಬೆಳೆದ ಕೆಂಗುಲಾಬಿ' - ವಿಜಯಕರ್ನಾಟಕ

  ಚಿತ್ರ ಕೊಲೆಯಾದ ಟೆಕ್ಕಿಯೊಬ್ಬನ ದೃಶ್ಯದೊಂದಿಗೆ ಪ್ರಾರಂಭವಾಗುತ್ತದೆ. ಮದುವೆಯಾದ ನಂತರ ಪ್ರೀತಿ ಮತ್ತು ಸಂಬಂಧದಲ್ಲಿ ಸ್ವಾರಸ್ಯ ಕಡಿಮೆಯಾಯಿತೆಂದು ಗಂಡ-ಹೆಂಡತಿಗೆ ಅನ್ನಿಸತೊಡಗುತ್ತದೆ. ಆದರೆ, ಒಮ್ಮೆ ನೋಡಿದ ಕ್ಷಣದಿಂದಲೇ ಪ್ರಿಯಾಂಕಳಿಗೆ ಮಾರುಹೋಗುವ ಯುವಕ ಅಶ್ವತ್ಥನಿಗೆ ಅವಳು ಪ್ರೀತಿಯ ಕೆಂಗುಲಾಬಿ. ಇಬ್ಬರ ನಡುವೆ ಫೇಸ್‌ಬುಕ್‌ನಲ್ಲಿ ಚ್ಯಾಟಿಂಗ್ ಶುರು. ಒಂದೆರಡು ಬಾರಿ ಮೆಸೇಜ್ ಕಳಿಸುತ್ತಿದ್ದಂತೆಯೇ ಅಶ್ವತ್ಥ ತನ್ನ ಪ್ರೀತಿಯನ್ನು ತಿಳಿಸಲು ಹಿಂಜರಿಯುವುದಿಲ್ಲ. ಈ ತಪ್ಪನ್ನು ತಿದ್ದಿಕೊಳ್ಳಲು ಗಂಡ ಅಶ್ವತ್ಥ್‌ಗೆ ಹೇಳುತ್ತಾನೆ. ಕೊನೆಗೆ ಸಿದ್ಧಾಂತ್ ಮತ್ತು ಪ್ರಿಯಾಂಕಾ ಅಮೆರಿಕಾದಲ್ಲಿ ನೆಲೆಸಲು ಹೊರಡುತ್ತಾರೆ. ಸಿದ್ಧಾಂತ್ ಕೊಲೆಯಾಗುತ್ತದೆ. ಮುಂದೆ ಏನಾಗುತ್ತದೆ ಅನ್ನೋದನ್ನು ಸಿನಿಮಾದಲ್ಲಿ ನೋಡಿ.- ಪದ್ಮಾ ಶಿವಮೊಗ್ಗ.

  'ಆಮೆಗತಿಯಲ್ಲೂ ಅಚ್ಚರಿಯ ತಿರುವು' - ಕನ್ನಡಪ್ರಭ

  ಜೂನ್ 16, 2014, ಸಾಫ್ಟ್ ವೇರ್ ಎಂಜಿನಿಯರ್ ಸಿದ್ಧಾಂತ್ ಕೊಲೆಯಾದ ದಿನ. ಸಿದ್ಧಾಂತ್ ಪತ್ನಿ ಪ್ರಿಯಾಂಕ ಅಂದು ಮೈಸೂರಿನಲ್ಲಿರುತ್ತಾರೆ. ಮರುದಿನ ಸಿದ್ಧಾಂತ್ ಕೊಲೆಯ ವಿಷಯ ಸುದ್ದಿವಾಹಿನಿಗಳಲ್ಲಿ ಬಿತ್ತರವಾಗುವ ಹೊತ್ತಿಗೆ, ಅಶ್ವಥ್ ತಾನೇ ಕೊಲೆ ಮಾಡಿದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿ ಪೊಲೀಸರ ಮುಂದೆ ಶರಣಾಗುತ್ತಾನೆ. ಆದರೂ, ಆತನೇ ಕೊಲೆ ಮಾಡಿದ್ದಕ್ಕೆ ಸಾಕ್ಷಿ ಸಿಗದು. ಪೊಲೀಸರಿಗೆ ಸಿಕ್ಕ ಫೇಸ್ ಬುಕ್ ಸಂದೇಶಗಳು ಸಂದೇಹ ಹುಟ್ಟಿಸುತ್ತವೆ. ಹೀಗಾಗಿ ಒಂದೆಡೆ ಅಶ್ವಥ್, ಮತ್ತೊಂದೆಡೆ ಪ್ರಿಯಾಂಕ ಪೊಲೀಸ್ ವಿಚಾರಣೆಗೆ ಒಳಪಡುತ್ತಾರೆ. ಆ ಮೂಲಕ ಫ್ಲ್ಯಾಶ್ ಬ್ಯಾಕ್ ನಲ್ಲಿ ನಡೆಯುವ ಚಿತ್ರಕಥೆಯೇ 'ಪ್ರಿಯಾಂಕ'. - ದೇಶಾದ್ರಿ ಹೊಸ್ಮನೆ.

  'Twist and turns make it edgy' - Bangaloremirrir.com

  Though inspired from a real murder in Bengaluru, Priyanka reminds you of one of the director's earlier films, Amruthavarshini, rather than any crime. The crime itself is not the highlight. The director manages to play to his strength, subtly weaving a complex play of emotions. By Shyam Prasad S,

  'ಮಲಯಾಳಿ ಮಾಂತ್ರಿಕ ಮರಳಿ ಮೋಡಿ ಮಾಡಿದ್ದಾರೆ! - ಉದಯವಾಣಿ

  'ಗಂಡ ಹೆಂಡತಿ ಮತ್ತು ಅವನು. ಅದು ಜೂನ್ 15, 2014ರ ರಾತ್ರಿ. ಆ ಮೂವರ ನಡುವೆ ಒಂದು ಕೊಲೆ ನಡೆದು ಹೋಗುತ್ತೆ! ಅದೇ ಚಿತ್ರದ ಕುತೂಹಲ ಮತ್ತು ರೋಚಕ!! ಒಂದು ಕ್ಲಾಸ್ ಸಿನಿಮಾಗೆ ಏನು ಬೇಕೋ, ಈಗಿನ ಹುಡುಗಿಯರು ಎಷ್ಟೆಲ್ಲಾ ಎಚ್ಚರಿಕೆಯಿಂದ ಇರಬೇಕೋ, ಪ್ರೀತಿ ಅನ್ನೋದು ಹೇಗೆಲ್ಲಾ ಆಡಿಸುತ್ತೆ ಎಂಬಂತಹ ಕಥಾವಸ್ತು ಹಿಡಿದು ಅದನ್ನು ಅಷ್ಟೇ ಕುತೂಹಲಭರಿತವಾಗಿ ತೆರೆಯ ಮೇಲೆ ಅಳವಡಿಸಿದ್ದಾರೆ ನಿರ್ದೇಶಕ ದಿನೇಶ್ ಬಾಬು. ಆ ಮೂಲಕ ಮತ್ತೊಂದು 'ಅಮೃತವರ್ಷಿಣಿ' ನೆನಪಿಸುವಂತೆ ಮಾಡಿರುವುದು ಅವರ ನಿರೂಪಣೆಯಲ್ಲಿರುವ ಜಾದು ಎನ್ನಬಹುದೇನೋ. ಆದರೆ, ಇದು 'ಅಮೃತವರ್ಷಿಣಿ' ಅಲ್ಲ. ಅದು 'ಪ್ರಿಯಾಂಕ' ಆಗಲು ಸಾಧ್ಯವೂ ಇಲ್ಲ. ಹಾಗಂತ, ಮುಗ್ದ 'ಪ್ರಿಯಾಂಕ'ಳನ್ನು ಜರಿಯುವ ಮಾತು ಇಲ್ಲ. ಕೊಂಚ ವಿಭಿನ್ನ ಎನಿಸುವಂತಹ ಕಥೆ ಮತ್ತು ಚಿತ್ರಕಥೆಯೇ ಚಿತ್ರಕ್ಕಿರುವ ತಾಕತ್ತು. - ವಿಜಯ್ ಭರಮಸಾಗರ.

  'Movie succeeds duse to strong narration' - The Hindu

  The focus of the film-maker is how social media influences people. In the film, Priyanka falls prey to Tejas through the Facebook chat. There is very little difference between the real crime incidents to reel story, with the film-maker closely following the crime incident. As the case still remained inconclusive, Baboo does not take any stand in the film, but he has a soft corner for Priyanka.

  English summary
  Kannada Movie 'Priyanka' Critics Review. Kannada Actress Priyanka Upendra, Kannada Actor Tejus starrer 'Priyanka' has received mixed response from the critics. here is the collection of reviews by Top News Papers of Karnataka. The movie is directed by Dinesh Baboo.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more