»   » 'ಲಿಂಗಾ' ವಿಮರ್ಶೆ: ತೆರೆಯ ಮೇಲೆ ರಜನಿ ರಿಂಗರಿಂಗಾ

'ಲಿಂಗಾ' ವಿಮರ್ಶೆ: ತೆರೆಯ ಮೇಲೆ ರಜನಿ ರಿಂಗರಿಂಗಾ

Posted By:
Subscribe to Filmibeat Kannada

ಕಡೆಗೂ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಕನವರಿಕೆ ಈಡೇರಿದೆ. ವಿಶ್ವದಾದ್ಯಂತ ಬರೋಬ್ಬರಿ 5000 ಸ್ಕ್ರೀನ್ ಗಳಲ್ಲಿ ಸಿನಿಪ್ರಿಯರಿಗೆ 'ಲಿಂಗಾ' ದರ್ಶನವಾಗಿದೆ. ಸ್ಟೈಲ್ ಕಿಂಗ್ ಹುಟ್ಟುಹಬ್ಬದಂದೇ 'ತಲೈವಾ' ರಜನಿಯ ಸ್ಟೈಲಿಶ್ ರೂಪವನ್ನು ಕಣ್ತುಂಬಿಕೊಳ್ಳುವ ಭಾಗ್ಯ ಪ್ರೇಕ್ಷಕರಿಗೆ ಸಿಕ್ಕಿದೆ.

ಬಹುನಿರೀಕ್ಷೆಯೊಂದಿಗೆ, 'ಪಡೆಯಪ್ಪ'ನ ಹುಟ್ಟುಹಬ್ಬದಂದೇ ತೆರೆಗೆ ಬಂದಿರುವ 'ಲಿಂಗಾ' ಚಿತ್ರ ರಜನಿಕಾಂತ್ ಅಭಿಮಾನಿಗಳಿಗೆ ನಿಜಕ್ಕೂ ದೊಡ್ಡ ಉಡುಗೊರೆ. ರಜನಿ ಭಕ್ತರಿಗೆ ಹೇಳಿಮಾಡಿಸಿದಂತಿರುವ 'ಲಿಂಗಾ' ಚಿತ್ರ ಕೊಟ್ಟ ಕಾಸಿಗೆ ಕಂಪ್ಲೀಟ್ ಮನರಂಜನೆ ನೀಡುವುದು ಗ್ಯಾರಂಟಿ. [ಸೂಪರ್ ಸ್ಟಾರ್ ರಜನಿ ಹುಟ್ಟುಹಬ್ಬಕ್ಕೆ 'ಅಚ್ಚರಿ' ಗಿಫ್ಟ್!]

Rating:
3.0/5

ಚಿತ್ರ: ಲಿಂಗಾ
ನಿರ್ಮಾಣ: ರಾಕ್ ಲೈನ್ ವೆಂಕಟೇಶ್
ಕಥೆ, ಚಿತ್ರಕಥೆ
: ಕೆ.ಎಸ್.ರವಿಕುಮಾರ್, ಪಿ.ಕುಮಾರ್.
ಸಂಗೀತ: ಎ.ಆರ್.ರಹಮಾನ್
ಛಾಯಾಗ್ರಹಣ: ಆರ್.ರತ್ನವೇಲು
ಸಂಕಲನ: ಸಂಜಿತ್
ತಾರಾಗಣ: ರಜನಿಕಾಂತ್, ಅನುಷ್ಕಾ ಶೆಟ್ಟಿ, ಸೋನಾಕ್ಷಿ ಸಿನ್ಹಾ, ಜಗಪತಿ ಬಾಬು, ಕೆ.ವಿಶ್ವನಾಥ್, ಸಂತಾನಂ ಮತ್ತು ಇತರರು.

ಕಥಾಹಂದರ

ಕಥಾನಾಯಕ 'ರಾಜಾ ಲಿಂಗೇಶ್ವರನ್' ಇಡೀ ದಕ್ಷಿಣ ಭಾರತವನ್ನು ಆಳಿದ ಪ್ರತಿಷ್ಠಿತ ರಾಜವಂಶದ ಕುಡಿ. ರಾಜಮನೆತನಕ್ಕೆ ಸೇರಿದ್ದರೂ ರಾಜಾ ಲಿಂಗೇಶ್ವರನ್, ಅಪ್ಪನ ಇಚ್ಛೆಯಂತೆ ಸಿವಿಲ್ ಇಂಜಿನಿಯರ್ ಪದವಿ ಪಡೆದು ಮಧುರೈ ನಗರಕ್ಕೆ ಕಲೆಕ್ಟರ್ ಆಗಿ ಎಂಟ್ರಿಕೊಡುತ್ತಾರೆ. ಅಷ್ಟರಲ್ಲೇ ಬ್ರಿಟೀಷರು ಇಡೀ ರಾಜ್ಯವನ್ನು ತಮ್ಮ ಅಸ್ತಿತ್ವಕ್ಕೆ ಪಡೆದುಕೊಳ್ಳುತ್ತಾರೆ.

ಅಪಾಯದಲ್ಲಿ ಸಿಲುಕುವ ರಾಜಾ

ಒಂದ್ಕಡೆ ಬ್ರಿಟೀಷರ ಅಟ್ಟಹಾಸ, ಇನ್ನೊಂದ್ಕಡೆ ಬರಗಾಲ, ತಿನ್ನುವುದಕ್ಕೆ ಅನ್ನವಿಲ್ಲದೆ, ಕುಡಿಯುವುದಕ್ಕೆ ನೀರಿಲ್ಲದೆ ಮಧುರೈ ಮಹಾನಗರಿಯ ಜನ ನಲುಗಿ ಹೋಗುವ ಪರಿಸ್ಥಿತಿಯಲ್ಲಿ ಅಣೆಕಟ್ಟೆಯನ್ನ ಕಟ್ಟುವುದಕ್ಕೆ ಲಿಂಗೇಶ್ವರನ್ ಮುಂದಾಗುತ್ತಾರೆ. ಅದಕ್ಕೆ ತಾವೇ ಬಂಡವಾಳವನ್ನೂ ಹೂಡುವ ರಾಜ, ಅಪಾಯದ ಸುಳಿಯಲ್ಲಿ ಸಿಕ್ಕಿಬೀಳುವುದು ಅಲ್ಲಿಂದಲೇ.

ರಾಜಕಾರಣಿಗಳ ಕುತಂತ್ರ

ಕಿತ್ತು ತಿನ್ನುವ ಬರಗಾಲ, ಸಹಸ್ರಾರು ಜನರ ಪರಿಶ್ರಮದಿಂದ ನಿರ್ಮಾಣವಾಗುವ ಅಣೆಕಟ್ಟು, ಅದನ್ನ ತಪ್ಪಿಸುವುದಕ್ಕೆ ರಾಜಕಾರಣಿಗಳ ಕುತಂತ್ರ, ಎಪ್ಪತ್ತೈದು ವರ್ಷಗಳಿಂದ ಮುಚ್ಚಲ್ಪಟ್ಟಿರುವ ಪುರಾತನ ಶಿವನ ದೇವಸ್ಥಾನ, ಈ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸುವುದಕ್ಕೆ ಪ್ರತ್ಯಕ್ಷವಾಗುತ್ತಾನೆ ಲಿಂಗಾ.

ಯಾರೀ ಲಿಂಗಾ?

ಅಣೆಕಟ್ಟಿಗೂ, ಶಿವನ ದೇವಸ್ಥಾನಕ್ಕೂ ಏನ್ ಸಂಬಂಧ? ಜನರ ಮುಖದಲ್ಲಿ ಮಂದಹಾಸ ಮೂಡಿಸುವ ಲಿಂಗಾ ಯಾರು? ರಾಜಾ ಲಿಂಗೇಶ್ವರನ್ ಎಲ್ಲಿ ಮರೆಯಾಗುತ್ತಾರೆ? ಲಿಂಗೇಶ್ವರನ್ ಗೂ ಲಿಂಗಾಗೂ ಏನ್ ಲಿಂಕು? ಇದಕ್ಕೆಲ್ಲಾ ಉತ್ತರ ತಿಳಿದುಕೊಳ್ಳಬೇಕೆಂದರೆ ನೀವು 'ಲಿಂಗಾ' ಚಿತ್ರವನ್ನ ಥಿಯೇಟರ್ ನಲ್ಲೇ ನೋಡಬೇಕು. ['ಲಿಂಗಾ' ಚಿತ್ರದ ಕೆಲ ಕಣ್ಣರಳಿಸುವ ಸಂಗತಿಗಳು]

ಸೂಪರ್ ರಜನಿ!

'ಲಿಂಗಾ' ಚಿತ್ರದ ಬಹುದೊಡ್ಡ ಪ್ಲಸ್ ಪಾಯಿಂಟ್ ಅಂದ್ರೆ ಅದು ಸೂಪರ್ ಸ್ಟಾರ್ ರಜನಿಕಾಂತ್. ಚಿತ್ರ ಶುರುವಾದಾಗಿನಿಂದ ಹಿಡಿದು ಶುಭಂ ಆಗುವವರೆಗೂ ಪ್ರತಿ ಫ್ರೇಮ್ ನಲ್ಲೂ ರಜನಿ ಮಿಂಚುತ್ತಾರೆ. 64ನೇ ವಯಸ್ಸಲ್ಲೂ 24ರಂತೆ ಕಾಣಿಸುವ ರಜನಿ ತೆರೆಮೇಲೆ ಮ್ಯಾಜಿಕ್ ಮಾಡಿದ್ದಾರೆ. ಮಸ್ತ್ ಸ್ಟೆಪ್ಸ್ ಮತ್ತು ಸೂಪರ್ ಸ್ಟಂಟ್ಸ್ ಗಳನ್ನ ರಜನಿ ಮಾಡ್ತಿದ್ರೆ, ಪ್ರೇಕ್ಷಕರು ಸೀಟ್ ಮೇಲೆ ಕುರೋದೇ ಇಲ್ಲ.

ರಜನಿ ಡಬಲ್ ಧಮಾಕಾ

ಬಹುವರ್ಷಗಳ ನಂತ್ರ ಡಬಲ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ರಜನಿ ನಿಜಕ್ಕೂ ಕಮಾಲ್ ಮಾಡಿದ್ದಾರೆ. 'ರಾಜಾ ಲಿಂಗೇಶ್ವರನ್' ಆಗಿ ರಾಜಗಾಂಭೀರ್ಯ ಮೆರೆಯುವ ರಜನಿ, 'ಲಿಂಗಾ' ಆಗಿ ಅಷ್ಟೇ ಸ್ಟೈಲಿಶ್ ಆಗಿ ಗಮನಸೆಳೆಯುತ್ತಾರೆ. ಹೀಗಾಗಿ ಒಂದೇ ಸಿನಿಮಾದಲ್ಲಿ ಇಬ್ಬರು ವಿಭಿನ್ನ ರಜನಿಯನ್ನ ಪ್ರೇಕ್ಷಕರು ನೋಡಬಹುದು.

ಅನುಷ್ಕಾ-ಸೋನಾಕ್ಷಿ ಮಿಂಚಿಂಗ್

ರಿಪೋರ್ಟರ್ ಆಗಿ ಅನುಷ್ಕಾ ನಟನೆ ಚೆನ್ನಾಗಿದೆ. ಭಿನ್ನ-ವಿಭಿನ್ನ ಲುಕ್ ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಅನುಶ್ಕಾ ಪಡ್ಡೆಗಳ ಕಣ್ಣಿಗೆ ಹಬ್ಬ. ಇನ್ನೂ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸೋನಾಕ್ಷಿ ತಮ್ಮ ಎಂದಿನ ಅಚ್ಚುಕಟ್ಟು ಅಭಿನಯ ನೀಡಿದ್ದಾರೆ. [ಸೂಪರ್ ಸ್ಟಾರ್ ರಜನಿಗೆ ದೇವರು ಕೊಟ್ಟ ದೊಡ್ಡ ಶಾಪ!]

ಇತರರು

ಸಂತಾನಂ ಕಾಮಿಡಿ ಕಿಕ್ ಎಲ್ಲರನ್ನ ನಗೆಗಡಲಲ್ಲಿ ತೇಲಾಡಿಸುತ್ತೆ. ಕುತಂತ್ರಿ ರಾಜಕಾರಣಿಯಾಗಿ ಮಿಂಚಿರುವ ಜಗಪತಿ ಬಾಬು, ಪ್ರೇಕ್ಷಕರಿಂದ ಶಾಪ ಹಾಕಿಸಿಕೊಳ್ಳುವ ಮಟ್ಟಕ್ಕೆ ಅಭಿನಯ ನೀಡಿದ್ದಾರೆ.

ಪ್ರೇಕ್ಷಕರ ಕಣ್ಣಿಗೆ ಹಬ್ಬ

ರತ್ನವೇಲು ಕ್ಯಾಮರಾ ಕೈಚಳಕ ಪ್ರೇಕ್ಷಕರ ಕಣ್ಣಿಗೆ ಮುದ ನೀಡುತ್ತೆ. ಕರ್ನಾಟಕದ ರಮಣೀಯ ತಾಣಗಳನ್ನ ಅಷ್ಟೇ ಸುಂದರವಾಗಿ ಸೆರೆಹಿಡಿಯುವಲ್ಲಿ ರತ್ನವೇಲು ಯಶಸ್ವಿಯಾಗಿದ್ದಾರೆ. ಇನ್ನೂ ಚಿತ್ರದಲ್ಲಿ ಬಳಸಿರುವ ಅದ್ಧೂರಿ ಸೆಟ್ ಗಳು ಪ್ರೇಕ್ಷಕರ ಕಣ್ಣರಳಿಸುತ್ತವೆ. ಎ.ಆರ್.ರಹಮಾನ್ ಸಂಗೀತ ಕಿವಿಗೆ ಹಬ್ಬವಾದ್ರೆ, ಸಂಜಿತ್ ಕತ್ರಿ ಕೆಲಸ ನಾಜೂಕಾಗಿದೆ.

ಲಾಜಿಕ್ ಇಲ್ಲ ಓನ್ಲಿ ಮ್ಯಾಜಿಕ್

ಔಟ್ ಅಂಡ್ ಔಟ್ ರಜನಿಕಾಂತ್ ಸಿನಿಮಾ ಮಾಡಿರುವ ಕೆ.ಎಸ್.ರವಿಕುಮಾರ್ ಕೆಲ ಕಡೆ ವಾಸ್ತವನ್ನೇ ಮರೆತುಬಿಟ್ಟಿದ್ದಾರೆ. ಚಿತ್ರಕಥೆಯಲ್ಲಿ ಜಾಗರೂಕತೆ ವಹಿಸಿದ್ದರೆ 'ಲಿಂಗಾ' ಜನಸಾಮಾನ್ಯರ ಅಚ್ಚುಮೆಚ್ಚಿನ ಚಿತ್ರವಾಗುತ್ತಿತ್ತೇನೋ. ಆದ್ರೆ ಮುಂದೇನಾಗುತ್ತೆ ಅಂತ ಮೊದಲೆ ಊಹಿಸಬಹುದಾದ ಜಾಳು ಜಾಳು ಚಿತ್ರಕಥೆ ಪ್ರೇಕ್ಷಕರಿಗೆ ಅಲ್ಲಲ್ಲಿ ಆಕಳಿಕೆಯನ್ನು ತರಿಸುತ್ತೆ.

ಕೊಟ್ಟ ಕಾಸಿಗೆ ಮೋಸ ಇಲ್ಲ

ಚಿತ್ರದಲ್ಲಿನ ಗ್ರಾಫಿಕ್ಸ್ ಅಷ್ಟು ಮಜಾ ಕೊಡುವುದಿಲ್ಲ. ಎಂದಿನ ರಜನಿ ಸ್ಟೈಲ್ ಡೈಲಾಗ್ಸ್ ಇದೆ. ಯಾವುದೇ ನಿರೀಕ್ಷೆಯಿಲ್ಲದೆ 'ಲಿಂಗಾ' ಚಿತ್ರ ಒಮ್ಮೆ ಆರಾಮಾಗಿ ನೋಡುವುದಕ್ಕಂತೂ ಅಡ್ಡಿಯಿಲ್ಲ.

English summary
Super Star Rajinikanth starrer Lingaa movie has released worldwide today (Dcember 12th). Lingaa is out and out Commercial Entertainer and a must watch for Rajinkanth fans.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada