Don't Miss!
- News
ಬಿಬಿಎಂಪಿ ವಾರ್ಡ್ ಮರುವಿಂಗಡಣೆ; ವೆಬ್ಸೈಟ್ನಲ್ಲಿ ಸಿಗಲಿದೆ ಪೂರ್ಣ ಮಾಹಿತಿ
- Lifestyle
Today RashiBhavishya: ಶನಿವಾರದ ದಿನ ಭವಿಷ್ಯ: ವೃಷಭ, ಕುಂಭ, ಮೀನ ರಾಶಿಯ ಉದ್ಯೋಗಿಗಳು ಕಚೇರಿ ಕೆಲಸದ ಮೇಲೆ ಗಮನಹರಿಸಿ
- Sports
ENG vs NZ: ನ್ಯೂಜಿಲೆಂಡ್ ವಿರುದ್ಧ ಸತತ 2ನೇ ಶತಕ ದಾಖಲಿಸಿದ ಜಾನಿ ಬೈಸ್ಟ್ರೋವ್
- Finance
ಈ 220 ಉದ್ಯೋಗಿಗಳಿಗೆ ವಾರ್ಷಿಕ 1 ಕೋಟಿ ರು ಸಂಬಳ, ಯಾವ್ದು ಕಂಪನಿ?
- Automobiles
ಮಂಗಳೂರಿನಲ್ಲಿರುವ ಒಕಿನಾವ ಇವಿ ಸ್ಕೂಟರ್ ಮಾರಾಟ ಮಳಿಗೆಯಲ್ಲಿ ಅಗ್ನಿ ಅವಘಡ
- Education
CLAT 2022 Result : ಕ್ಲಾಟ್ ಪರೀಕ್ಷೆಯ ಫಲಿತಾಂಶ ಶೀಘ್ರದಲ್ಲಿ ಪ್ರಕಟ
- Technology
60,000ರೂ.ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಲ್ಯಾಪ್ಟಾಪ್ಗಳು!
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
777 Charlie 1st Half Review: ನಾಯಿಯ ತುಂಟಾಟ-ರಕ್ಷಿತ್ ಶೆಟ್ಟಿ ಪರದಾಟ!
ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ '777 ಚಾರ್ಲಿ' ಬಿಡುಗಡೆ ಇನ್ನೇ ಕೆಲವು ಗಂಟೆಗಳು ಬಾಕಿ ಉಳಿದಿವೆಯಷ್ಟೆ. ಈ ಮಧ್ಯೆ ದಿನದಿಂದ ದಿನಕ್ಕೆ ಸಿನಿಮಾ ಕ್ರೇಜ್ ಹೆಚ್ಚಾಗುತ್ತಲೇ ಇದೆ. ರಕ್ಷಿತ್ ಶೆಟ್ಟಿ ಹಾಗೂ ಚಾರ್ಲಿ ( ನಾಯಿ)ಯ ಭಾವನಾತ್ಮಕ ಪಯಣವನ್ನು ಈ ಸಿನಿಮಾ ತೆರೆದಿಡಲಿದೆ. ಕಿರಣ್ ರಾಜ್ ನಿರ್ದೇಶಿಸಿರುವ '777 ಚಾರ್ಲಿ' ನೋಡುವುದಕ್ಕೆ ಇಡೀ ದೇಶವೇ ಕಾದು ಕೂತಿದೆ.
ಇನ್ನೇನು ಬಿಡುಗಡೆಗೆ ಕೆಲವೇ ದಿನಗಳಿ ಬಾಕಿ ಉಳಿದಿರುವಂತೆಯೇ ರಕ್ಷಿತ್ ಶೆಟ್ಟಿ ಮತ್ತು ತಂಡ ಪ್ರೀಮಿಯರ್ ಶೋಗಳನ್ನು ಹೆಚ್ಚು ಮಾಡುತ್ತಿದೆ. ಸೆಲೆಬ್ರೆಟಿಗಳಿಗೆ, ಪತ್ರಕರ್ತರಿಗೆ ಈ ಸಿನಿಮಾ ತೋರಿಸಲಾಗುತ್ತಿದೆ. ಇತ್ತೀಚೆಗೆ ಶ್ವಾನದ ಹಿನ್ನೆಲೆಯುಳ್ಳ ಸಿನಿಮಾ 'ನಾನು ಮತ್ತು ಗುಂಡ' ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿತ್ತು. ಈಗ ಕನ್ನಡ ಚಿತ್ರರಂಗದಲ್ಲಿ '777 ಚಾರ್ಲಿ' ಮೂಲಕ ಮತ್ತೆ ಶ್ವಾನ ಪ್ರಿಯರಿಗೆ ಮನರಂಜನೆ ನೀಡಲು ಚಿತ್ರತಂಡ ಮುಂದಾಗಿದೆ. ಹಾಗಿದ್ದರೆ, ರಕ್ಷಿತ್ ಶೆಟ್ಟಿಯ '777 ಚಾರ್ಲಿ' ಹೇಗಿದೆ ? ತಿಳಿಯಲು ಮುಂದೆ ಓದಿ.
ರಕ್ಷಿತ್ ಶೆಟ್ಟಿಯ '777 ಚಾರ್ಲಿ' ನೋಡಿ ಶ್ವಾನ ಪ್ರಿಯೆ ರಮ್ಯಾ ಭಾವನಾತ್ಮಕವಾಗಿ ಹೇಳಿದ್ದೇನು?

'777 ಚಾರ್ಲಿ' ಫಸ್ಟ್ ಹಾಫ್ ಕಾಮಿಡಿ
'777 ಚಾರ್ಲಿ' ಟ್ರೈಲರ್ ನೋಡಿದವರಿಗೆ ಸಿನಿಮಾದಲ್ಲಿ ಎರಡು ಅಂಶಗಳಂತೂ ಇರಲೇಬೇಕು ಅಂತ ಅರ್ಥ ಆಗಿ ಹೋಗಿತ್ತು. ಈ ಸಿನಿಮಾದಲ್ಲಿ ಕಾಮಿಡಿ ಹಾಗೂ ಎಮೋಷನ್ ಎರಡೂ ಇದ್ದೇ ಇರುತ್ತೆ ಎಂದು ಗೆಸ್ ಮಾಡಿದ್ದರು. ಅದರಂತೆ ಮೊದಲಾರ್ಧ ಸಿಕ್ಕಾಪಟ್ಟೆ ಹಾಸ್ಯದಿಂದ ಕೂಡಿದೆ. ಬ್ಯಾಚುಲರ್ ರಕ್ಷಿತ್ ಶೆಟ್ಟಿ ಹಾಗೂ ಚಾರ್ಲಿ ನಡುವಿನ ಸಂಬಂಧವನ್ನು ಮೊದಲಾರ್ಧದಲ್ಲಿ ಕಥೆ ಕಟ್ಟಿಕೊಟ್ಟಿದೆ. ಚಾರ್ಲಿ (ನಾಯಿ) ತುಂಟಾಟ ಒಂದ್ಕಡೆ. ಇನ್ನೊಂದ್ಕಡೆ ರಕ್ಷಿತ್ ಶೆಟ್ಟಿಯ ಪರದಾಟ. ಇದು ಮೊದಲಾರ್ಧದ ತುಣುಕುಗಳು. ಹೀಗಾಗಿ ಫಸ್ಟ್ ಹಾಫ್‌ನಲ್ಲಿ ಹಾಸ್ಯದ್ದೇ ಮೇಲುಗೈ. ಜೊತೆಗೆ ಕೆಲವು ಪಂಚಿಂಗ್ ಡೈಲಾಗ್ ಆಗಾಗ ಬಂದು ಹೋಗುತ್ತವೆ.
100ಕ್ಕೂ ಹೆಚ್ಚು ಪ್ರೀಮಿಯರ್ ಶೋ, 1800 ಥಿಯೇಟರ್‌ಗಳಲ್ಲಿ '777 ಚಾರ್ಲಿ' ರಿಲೀಸ್

ರಕ್ಷಿತ್ ಶೆಟ್ಟಿ ಆಕ್ಟಿಂಗ್ ಸೂಪರ್
ಮೊದಲಾರ್ಧ ರಕ್ಷಿತ್ ಶೆಟ್ಟಿ ತಮ್ಮ ಸಹಜ ಅಭಿನಯದಿಂದ ಗಮನ ಸೆಳೆಯುತ್ತಾರೆ. ಚಾರ್ಲಿ ತುಂಟಾಟದಿಂದ ಪರದಾಡುವ ಸನ್ನಿವೇಶಗಳಲ್ಲಿ ರಕ್ಷಿತ್ ಶೆಟ್ಟಿ ಪ್ರೇಕ್ಷಕರಿಗೆ ಇಷ್ಟ ಆಗುತ್ತಾರೆ. ಹಾಸ್ಯ ಸನ್ನಿವೇಶಗಳಲ್ಲಿ ಅದ್ಭುತ ಅಂತ ಅನಿಸುತ್ತಾರೆ. ಇದೇ ವೇಳೆ ನಾಯಿಯ ಪೋಷಣೆ ಹೇಗೆ ಮಾಡಬೇಕು? ಅವುಗಳನ್ನು ಹೇಗೆ ಸಾಕಬೇಕು ಅನ್ನುವುದನ್ನು ತೋರಿಸಲಾಗಿದೆ. ಇಂತಹ ಸಂದರ್ಭಗಳಲ್ಲಿ ಸಿಂಪಲ್ ಸ್ಟಾರ್ ಸೂಪರ್ ಅಂತ ಅನಿಸುತ್ತಾರೆ.

ಇಂಟರ್‌ವೆಲ್‌ನಲ್ಲಿ ಟ್ವಿಸ್ಟ್
ಇಂಟರ್‌ವೆಲ್‌ನಲ್ಲಿ ಭಾವುಕ ತಿರುವುಗಳು ಸಿಗುತ್ತವೆ. ಇಂಟರ್‌ವಲ್ ಹೊತ್ತಿಗಾಗಲೇ ರಕ್ಷಿತ್ ಶೆಟ್ಟಿಯ ಭಾವುಕ ಪಯಣ ಆರಂಭ ಆಗಲಿದೆ. ಮೊದಲಾರ್ಧದಲ್ಲಿ ಇದ್ದ ಹಾಸ್ಯದ ಸನ್ನಿವೇಶಗಳನ್ನು ನಿಧಾನವಾಗಿ ಮರೆಯಾಗುತ್ತಾ? ಭಾವನಾತ್ಮಕ ಸನ್ನಿವೇಶಗಳ ಕಡೆ ಕಥೆ ಸಾಗುತ್ತಿದೆ. ಇದು ಸಿನಿಮಾದ ಪ್ಲಸ್ ಪಾಯಿಂಟ್. ಸಿನಿಮಾ ಫಸ್ಟ್ ಹಾಫ್‌ನಲ್ಲಂತೂ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ. ಹಾಗೇ ಸೆಕೆಂಡ್ ಹಾಫ್‌ನಲ್ಲೂ ಸಿನಿಮಾ ಇಷ್ಟ ಆದರೆ, '777 ಚಾರ್ಲಿ' ಗೆದ್ದಂತೆ.
'777 ಚಾರ್ಲಿ' ಸಿನಿಮಾ ನೋಡಿ ಕಿಚ್ಚ ಸುದೀಪ್ ಹೇಳಿದ್ದೇನು?

ದಾನಿಶ್, ಬಾಬಿ ಎಲ್ಲಿ?
'777 ಚಾರ್ಲಿಯ ಪ್ರಮುಖ ಆಕರ್ಷಣೆ ಎಂದರೆ, ಅದು ಸ್ಟಾರ್ ಕಾಸ್ಟ್. ಈ ಸಿನಿಮಾದಲ್ಲಿ ತಮಿಳಿನ ಸ್ಟಾರ್ ಬಾಬಿ ಸಿಂಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೇ ಹಂಬಲ್ ಪೊಲಿಟಿಷಿಯನ್ ನೋಗರಾಜ್ ಖ್ಯಾತಿಯ ದಾನಿಶ್ ಸೇಠ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಮೊದಲಾರ್ಧದಲ್ಲಿ ಇವರ ಸುಳಿವು ಇಲ್ಲ. ದ್ವಿತೀಯಾರ್ಧದಲ್ಲಿ ಇವರಿಬ್ಬರು ಯಾವ್ಯಾವ ಸಮಯದಲ್ಲಿ ಎಂಟ್ರಿ ಕೊಡುತ್ತಾರೆ ಅನ್ನೋ ಕುತೂಹಲ ವಿರಾಮದ ವೇಳೆಗೆ ಪ್ರೇಕ್ಷಕರನ್ನು ಕಾಡದೆ ಉಳಿಯುವುದಿಲ್ಲ.