For Quick Alerts
  ALLOW NOTIFICATIONS  
  For Daily Alerts

  'ಕುಮಾರಿ 21F' ಸಿನಿಮಾ ನೋಡಿ ವಿಮರ್ಶಕರು ಮಾಡಿದ ಕಾಮೆಂಟ್ಸ್ ಏನು.?

  By Harshitha
  |

  ಡೈನಾಮಿಕ್ ಸ್ಟಾರ್ ದೇವರಾಜ್ ಪುತ್ರ ಪ್ರಣಮ್ ದೇವರಾಜ್ ಅಭಿನಯದ ಮೊಟ್ಟ ಮೊದಲ ಸಿನಿಮಾ 'ಕುಮಾರಿ 21F' ಬಿಡುಗಡೆ ಆಗಿದೆ. ತೆಲುಗಿನ ರೀಮೇಕ್ ಆಗಿರುವ ಈ ಚಿತ್ರವನ್ನ ಕನ್ನಡಕ್ಕೆ ತಂದಿರುವವರು ನಿರ್ದೇಶಕ ಶ್ರೀಮನ್ ವೇಮುಲಾ.

  ಪ್ರಮುಖ ಪಾತ್ರದಲ್ಲಿ ನಿಧಿ ಕುಶಾಲಪ್ಪ ಅಭಿನಯಿಸಿರುವ 'ಕುಮಾರಿ 21F' ಚಿತ್ರ ಪಡ್ಡೆ ಹುಡುಗರಿಗೆ ಹೇಳಿ ಮಾಡಿಸಿದ ಹಾಗಿದೆ. 'ಕುಮಾರಿ 21F' ಸಿನಿಮಾ ನೋಡಿ ಯುವಕರ ಎದೆ ಬಡಿತ ಹೆಜ್ಜಾಗಿದೆ. ಹದಿಹರೆಯದಲ್ಲಿ ಹೆಣ್ಣಿನ ಮನಃಸ್ಥಿತಿ ಹೇಗಿರಬಹುದು ಎಂಬುದೇ ಚಿತ್ರದ ಕಥಾಹಂದರ.

  ಯುವಕರು ಮೆಚ್ಚಿರುವ 'ಕುಮಾರಿ 21F' ಚಿತ್ರ ವಿಮರ್ಶಕರಿಗೆ ಇಷ್ಟ ಆಯ್ತಾ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ 'ಕುಮಾರಿ 21F' ಸಿನಿಮಾ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ, ಓದಿರಿ...

  ಯುವಕರ ನಿದ್ದೆಗೆಡಿಸುವ ಸಿನಿಮಾ: ವಿಜಯ ಕರ್ನಾಟಕ

  ಯುವಕರ ನಿದ್ದೆಗೆಡಿಸುವ ಸಿನಿಮಾ: ವಿಜಯ ಕರ್ನಾಟಕ

  ಹಿರಿಯ ನಟ ದೇವರಾಜ್‌ ದ್ವಿತೀಯ ಪುತ್ರ ಪ್ರಣಮ್ ದೇವರಾಜ್‌ ಅಭಿನಯದ ಮೊದಲ ಚಿತ್ರ ಕುಮಾರಿ 21ಎಫ್. ತೆಲುಗಿನಲ್ಲಿ ಇದೇ ಹೆಸರಿನಲ್ಲಿ ತೆರೆಕಂಡ ಚಿತ್ರದ ಕನ್ನಡ ರಿಮೇಕ್ ಇದು. ನಿಧಿ ಕುಶಾಲಪ್ಪ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಮದುವೆಯಾಗುವ ಹೆಣ್ಣು ಶೀಲವಂತಳಾಗಿರಬೇಕು, ಪರಿಶುದ್ಧಳಾಗಿರಬೇಕು ಎಂಬ ಸಿದ್ಧಾಂತಕ್ಕೆ ಕಟ್ಟುಬಿದ್ದವರಿಗೆ ಪ್ರೀತಿ ಎಂದರೆ ಏನು ಎನ್ನುವುದನ್ನು ಹೇಳುವ ಪ್ರಯತ್ನ ಈ ಚಿತ್ರದಲ್ಲಿದೆ. ಮೊದಲ ಚಿತ್ರದಲ್ಲಿ ಪ್ರಣಮ್ ನಟನೆ ಮತ್ತು ಡ್ಯಾನ್ಸ್ ನಿಂದ ಭರವಸೆ ಮೂಡಿಸಿದ್ದಾರೆ. ನಿಧಿ ಕುಶಾಲಪ್ಪ ಪಾತ್ರದ ತೂಕಕ್ಕೆ ತಕ್ಕಂತೆ ನಟಿಸಲು ಇನ್ನಷ್ಟು ಪಳಗಬೇಕಿತ್ತು. ಇಷ್ಟಾಗಿ ಮಾಮೂಲಿ ಮಸಾಲಾ ಚಿತ್ರ ನೋಡಿ ಬೇಸತ್ತವರು, ಹೊಸ ಕಾನ್ಸೆಪ್ಟ್‌ನ ಸಿನಿಮಾ ನೋಡಬಯಸುವವರು ಸಿನಿಮಾ ನೋಡಬಹುದು - ಪದ್ಮಾ ಶಿವಮೊಗ್ಗ

  ವಿಮರ್ಶೆ : ಕೋಮಲ ಕುಮಾರಿ ಜೊತೆ ಸರಳ ಸಿದ್ದುವಿನ ಪ್ರಣಯ ಪ್ರಸಂಗ

  ಕುಮಾರಿಯ ಮಸಾಲ ಚುರುಮುರಿ - ಉದಯವಾಣಿ

  ಕುಮಾರಿಯ ಮಸಾಲ ಚುರುಮುರಿ - ಉದಯವಾಣಿ

  "ನಂಬಿಕೆ ಮತ್ತು ದ್ರೋಹ' ಈ ಎರಡರ ನಡುವಿನ ಕಪಟವನ್ನು ಬಿಡಿಸಿಡುವ ಮೂಲಕ ಸಣ್ಣದ್ದೊಂದು ಸಂದೇಶ ಸಾರಿರುವ ನಿರ್ದೇಶಕರ ಪ್ರಯತ್ನ ಸಾರ್ಥಕ. ಕಮರ್ಷಿಯಲ್ ಅಂದಮೇಲೆ ರಂಗು ರಂಗಿನ ಹಾಡುಗಳಿರಬೇಕು, ಮಜವೆನಿಸುವ ದೃಶ್ಯಗಳಿರಬೇಕು, ಡೈಲಾಗ್‌ಗಳಿಗೆ ಶಿಳ್ಳೆ ಬೀಳುವಂತಿರಬೇಕು. ಅದಕ್ಕಿಲ್ಲಿ ಕೊರತೆ ಇಲ್ಲ. ಮೊದಲರ್ಧ ಹಾಡು, ಕುಣಿತ ಮತ್ತು ಕುಡಿತ ಇದರ ಜೊತೆಗೆ ಕಣ್ತುಂಬೋ ಗ್ಲಾಮರ್ರು ನೋಡುಗರನ್ನು ಅತ್ತಿತ್ತ ಅಲ್ಲಾಡಿಸೋದಿಲ್ಲ - ವಿಜಯ್ ಭರಮಸಾಗರ

   ಮೆಚ್ಯೂರಿಟಿ ಇಲ್ಲದ ಪ್ರಣಯ ಪ್ರಹಸನ: ಪ್ರಜಾವಾಣಿ

  ಮೆಚ್ಯೂರಿಟಿ ಇಲ್ಲದ ಪ್ರಣಯ ಪ್ರಹಸನ: ಪ್ರಜಾವಾಣಿ

  ''ನಾಯಕಿ ಪ್ರಧಾನ ಚಿತ್ರ ಎಂದು ಹೇಳಿಕೊಂಡಿದ್ದರೂ ಇಡೀ ಚಿತ್ರದಲ್ಲಿ (ಕೆಲವು ದೃಶ್ಯಗಳನ್ನು ಹೊರತು ಪಡಿಸಿ) ನಾಯಕಿಯ ಪಾತ್ರ 'ಗ್ಲಾಮರ್ ಮಟೀರಿಯಲ್' ಆಗಿಯಷ್ಟೇ ಬಳಕೆಯಾಗಿದೆ. ಪಾರ್ಟಿಯಲ್ಲಿ, ಮನೆಯಲ್ಲಿ, ಬಟ್ಟೆ ಒಣಗಿಸುವಾಗ, ದುಃಖಿಸುವಾಗ, ಮೂವರು ವಿಕೃತರಿಂದ ಅತ್ಯಾಚಾರಕ್ಕೊಳಗಾಗಿ ಬಿದ್ದಿರುವಾಗಲೂ ನಾಯಕಿಯನ್ನು ಮಾದಕವಾಗಿಯೇ ತೋರಿಸಿರುವುದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕೋ ತಿಳಿಯದು'' - ಪದ್ಮನಾಭ ಭಟ್

  Kumari 21F Review: Times of India

  Kumari 21F Review: Times of India

  Kumari 21F has a relevant message about stereotyping, and the idea behind the attempt is commendable. The film could have been made a little sharper. Though, it does make a decent one-time watch if you like films that are different from the run-of-the-mill masala entertainers - Sunayana Suresh

  English summary
  Kannada Movie Kumari 21F has received mixed response from the critics. Here is the collection of Kumari 21F reviews from Top news papers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X