twitter
    For Quick Alerts
    ALLOW NOTIFICATIONS  
    For Daily Alerts

    'ನಡುವೆ ಅಂತರವಿರಲಿ' ಚಿತ್ರಕ್ಕೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು.?

    |

    ಕೊಂಚ ಗ್ಯಾಪ್ ತೆಗೆದುಕೊಂಡು ನಟಿ ಐಶಾನಿ ಶೆಟ್ಟಿ ಅಭಿನಯಿಸಿರುವ ಸಿನಿಮಾ 'ನಡುವೆ ಅಂತರವಿರಲಿ'. ರವೀನ್ ಕುಮಾರ್ ನಿರ್ದೇಶನ ಮಾಡಿರುವ 'ನಡುವೆ ಅಂತರವಿರಲಿ' ಅಪ್ಪಟ ರೋಮ್ಯಾಂಟಿಕ್ ಸಿನಿಮಾ. ಹದಿಹರೆಯದ ಮನಸ್ಸುಗಳ ತಲ್ಲಣವೇ ಈ ಚಿತ್ರದ ಕಥಾಹಂದರ.

    ಕಾಲೇಜು ಯುವಕ-ಯುವತಿಯರು ನೋಡಲೇಬೇಕಾದ ಸಿನಿಮಾ 'ನಡುವೆ ಅಂತರವಿರಲಿ'. ಪ್ರಖ್ಯಾತ್ ಪರಮೇಶ್ ಮುಖ್ಯಭೂಮಿಕೆಯಲ್ಲಿ ಇರುವ 'ನಡುವೆ ಅಂತರವಿರಲಿ' ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹಾಗೇ, ವಿಮರ್ಶಕರಿಗೂ ಈ ಚಿತ್ರ ಇಷ್ಟವಾಯಿತೇ.?

    ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ 'ನಡುವೆ ಅಂತರವಿರಲಿ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ, ಓದಿರಿ...

    'ನಡುವೆ ಅಂತರವಿರಲಿ' ವಿಮರ್ಶೆ: ವಿಜಯ ಕರ್ನಾಟಕ

    'ನಡುವೆ ಅಂತರವಿರಲಿ' ವಿಮರ್ಶೆ: ವಿಜಯ ಕರ್ನಾಟಕ

    ಸಿನಿಮಾ ಇಷ್ಟವಾಗಲು ಹಲವು ಕಾರಣಗಳಿವೆ. ಕಥಾ ನಾಯಕ (ಪ್ರಖ್ಯಾತ), ನಾಯಕಿ (ಐಶಾನಿ ಶೆಟ್ಟಿ)ಯ ನಟನಾ ಮುಗ್ಧತೆ. ವೈಭವೀಕರಣವಿಲ್ಲದ ಪಾತ್ರಗಳು. ಪಾತ್ರವೇ ತಾವಾಗಿರುವ ಕಲಾವಿದರು. ಹದವಾದ ಕಥಾ ನಿರೂಪಣೆ. ಆಯಾ ವಯಸ್ಸಿಗೆ ತಕ್ಕಂತ ಸಂಭಾಷಣೆ, ಕಥೆಯಲ್ಲೇ ಒಂದಾಗಿರುವ ಮ್ಯೂಸಿಕ್‌. ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ಆಗ ತಾನೆ ಕಾಲೇಜು ಮೆಟ್ಟಿಲು ಏರಿದ ಯುವ ಜೋಡಿಯೊಂದು ಆಕರ್ಷಿತರಾಗುತ್ತಾರೆ. ಅದನ್ನೇ ಪ್ರೀತಿ ಅಂದುಕೊಳ್ಳುತ್ತಾರೆ. ಆಕರ್ಷಣೆಯೇ ಅವರ ಬದುಕಿಗೆ ಗಂಡಾಂತರ ತಂದಿಡುತ್ತದೆ. ಆಯಾ ಕುಟುಂಬಗಳ ತೊಳಲಾಟ ಮತ್ತು ಪರಿಣಾಮವೇ ಸಿನಿಮಾದ ಸ್ಟೋರಿ. ಪರಿಸ್ಥಿತಿಗಳನ್ನೇ ವಿಲನ್ ಮಾಡಿಕೊಂಡು ಚಿತ್ರ ನಿರೂಪಿಸಿದ್ದಾರೆ. ಇದೇ ಸಿನಿಮಾದ ಪ್ಲಸ್‌ ಪಾಯಿಂಟ್‌ ಕೂಡ - ಶರಣು ಹುಲ್ಲೂರು

    'ನಡುವೆ ಅಂತರವಿರಲಿ' ವಿಮರ್ಶೆ: ವಿಶ್ವವಾಣಿ

    'ನಡುವೆ ಅಂತರವಿರಲಿ' ವಿಮರ್ಶೆ: ವಿಶ್ವವಾಣಿ

    ಸಿನಿಮಾದ ಕತೆ, ಚಿತ್ರಕತೆ ಅಥವಾ ನಿರೂಪಣೆಯಲ್ಲಿ ತೀರಾ ಹೊಸದೇನನ್ನೂ ನಿರೀಕ್ಷಿಸುವಂತಿಲ್ಲ. ಚಿತ್ರದ ಕತೆ, ಕೆಲವು ದೃಶ್ಯಗಳಲ್ಲಿ 2001ರಲ್ಲಿ ತೆರೆಗೆ ಬಂದ ಚಿತ್ರ, ಮತ್ತೊಂದಷ್ಟು ಚಿತ್ರಗಳ ಛಾಯೆಯನ್ನು ಕಾಣಬಹುದು. ಚಿತ್ರದ ಮೊದಲಾರ್ಧ ವೇಗವಾಗಿ ಸಾಗಿದರೆ, ಮಧ್ಯಂತರ ನಂತರ ಚಿತ್ರದ ಅಂತರ ನೋಡುಗರಿಗೆ ಕೊಂಚ ಹೆಚ್ಚಾಯಿತೇನೋ ಎನಿಸುತ್ತದೆ. ಚಿತ್ರದ ಕತೆ, ಚಿತ್ರಕತೆ, ನಿರೂಪಣೆ ಯಾವುದರಲ್ಲೂ ಹೊಸ ಪ್ರಯೋಗವನ್ನು ನಿರೀಕ್ಷಿಸುವಂತಿಲ್ಲ - ಜಿ.ಎಸ್.ಕಾರ್ತಿಕ ಸುಧನ್

    ಅಂತರದ ನಡುವೆ ನಿರಂತರ ಪ್ರೇಮ: ಕನ್ನಡ ಪ್ರಭ

    ಅಂತರದ ನಡುವೆ ನಿರಂತರ ಪ್ರೇಮ: ಕನ್ನಡ ಪ್ರಭ

    ಈ ಚಿತ್ರ ಕ್ಲೈಮ್ಯಾಕ್ಸ್ ಹಂತಕ್ಕೆ ಬರುವ ಹೊತ್ತಿಗೆ ಚಿತ್ರದ ಮುಂದೆ ಕೂತವನ ಕಣ್ಣು ತೇವಗೊಳ್ಳುತ್ತದೆ. ನಡುವೆ ಅಂತರವಿರಲಿ ಚಿತ್ರದ ಕುರಿತು ಹೀಗೊಂದು ಸಾಲು ಬರೆದರೆ ತೀರಾ ಕಡಿಮೆ. ಅದು ವಯಸ್ಸಲ್ಲದ ವಯಸ್ಸಿನಲ್ಲಿ ಹುಟ್ಟಿಕೊಳ್ಳುವ ಪ್ರೇಮ. ಆದರೂ ಇಂಥ ಪ್ರೇಮದ ಹಿಂದೆ ಎರಡು ಮನಸ್ಸುಗಳಿವೆ, ಕನಸುಗಳಿವೆ, ಭವಿಷ್ಯವಿದೆ, ಎರಡು ಕುಟುಂಬಗಳ ಜಗಳ-ಮನಸ್ತಾಪ, ನಡುವೆ ಒಬ್ಬ ವಿಲನ್ ಇದ್ದಾನೆ, ಸಾಲದಕ್ಕೆ ಜಾತಿ, ಅಂತಸ್ತು ಎನ್ನುವ ಗೋಡೆಗಳಿವೆ - ಆರ್ ಕೇಶವಮೂರ್ತಿ

    Naduve Antaravirali Review - Times of India

    Naduve Antaravirali Review - Times of India

    The music of the film is one of its biggest plus points. Aishani Shetty impresses as the pregnant teenager, with her multitude of emotions. Prakhyath Paramesh is also aptly cast for his role. The ensemble cast lift the film with their performances. The two who steal the show among the cast are Achyuth Kumar and Tulasi Shivamani, especially in the second half - Sunayana Suresh

    Simple can be engrossing - Bangalore Mirror

    Simple can be engrossing - Bangalore Mirror

    It is a common enough boy-meets-girl story. In the hands of director Raveen Kumaara it transforms into an engrossing tale. He shows that without resorting to over-dramatisation and commercial buffoonery, simple stories can be entertaining. It is easy to imagine a run-of-the-mill climax for such a story. But Naduve Antaravirali stands apart for exactly the reason that it is not one of them - Shyam Prasad S

    English summary
    Kannada Movie Naduve Antaravirali has received mixed response from the critics. Here is the collection of Naduve Antaravirali reviews from Top news papers.
    Saturday, October 6, 2018, 12:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X