»   » ಚಿತ್ರವಿಮರ್ಶೆ ; ಶಿವ ಭಕ್ತರಿಗೆ 'ವಜ್ರಕಾಯ' ನೋ ಪ್ರಾಬ್ಲಂ.!

ಚಿತ್ರವಿಮರ್ಶೆ ; ಶಿವ ಭಕ್ತರಿಗೆ 'ವಜ್ರಕಾಯ' ನೋ ಪ್ರಾಬ್ಲಂ.!

Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ವಜ್ರಕಾಯ' ಇಂದು ರಾಜ್ಯದಾದ್ಯಂತ ರಿಲೀಸ್ ಆಗಿದೆ. ಸ್ಟೈಲಿಶ್ ಕೊರಿಯೋಗ್ರಾಫರ್ ಹರ್ಷ ನಿರ್ದೇಶಿಸಿರುವ ಚಿತ್ರ 'ವಜ್ರಕಾಯ'.

  'ಭಜರಂಗಿ' ಚಿತ್ರದ ನಂತರ ವೀರಾಂಜಿನೇಯನ ಕೃಪೆಯಿಂದ ಹರ್ಷ ಮತ್ತು ಶಿವಣ್ಣ ಒಂದಾಗಿರುವುದು ಈ ಚಿತ್ರದಲ್ಲೇ. ಹೀಗಾಗಿ 'ವಜ್ರಕಾಯ' ಚಿತ್ರದ ಬಗ್ಗೆ ಎಕ್ಸ್ ಪೆಕ್ಟೇಷನ್ಸ್ ಜಾಸ್ತಿ. ಆ ಎಲ್ಲಾ ನಿರೀಕ್ಷೆಗಳನ್ನ ಮುಟ್ಟುವಲ್ಲಿ 'ವಜ್ರಕಾಯ' ಚಿತ್ರ ಯಶಸ್ವಿಯಾಗಿದೆ ಅಂದ್ರೆ ಖಂಡಿತ ಅತಿಶಯೋಕ್ತಿ ಅಲ್ಲ.!

  ಶಿವರಾಜ್ ಕುಮಾರ್ ಇಮೇಜ್ ಗೆ ತಕ್ಕಂತೆ, ಅವರ ಅಭಿಮಾನಿಗಳು ಬಯಸುವ ರಸದೌತಣ 'ವಜ್ರಕಾಯ' ಚಿತ್ರದಲ್ಲಿದೆ. 'ವಜ್ರಕಾಯ' ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

  Rating:
  3.5/5
  Star Cast: ಶಿವರಾಜ್ ಕುಮಾರ್, ನಭಾ ನಟೇಶ್, ಕಾರುಣ್ಯ ರಾಮ್, ಮಧು ಗುರುಸ್ವಾಮಿ, ಜಯಸುಧಾ
  Director: ಹರ್ಷ ಎ

  ಕಥಾಹಂದರ

  ತನ್ನದು ಬಂಗಾರದ ವಂಶ, ತನ್ನ ತಂದೆ (ಸುಮನ್) ಊರೂರಿಗೆ ಒಳಿತು ಮಾಡಿದ ದೇವತಾ ಮನುಷ್ಯ ಅನ್ನುವ ಸತ್ಯ ಸಂಗತಿಯನ್ನ ಸಾಕು ತಂದೆ (ಅವಿನಾಶ್) ರಿಂದ ತಿಳಿದು ಅನಾಥ ಹುಡುಗ ವಿರಾಜ್ (ಶಿವರಾಜ್ ಕುಮಾರ್) ತನ್ನ ತಾಯಿ ಲಕ್ಷ್ಮಿ (ಜಯಸುಧಾ) ನೋಡೋಕೆ ಹೊರಡುವ ಅಪ್ಪಟ ತಾಯಿ-ಮಗನ ಸೆಂಟಿಮೆಂಟ್ ಸಿನಿಮಾ 'ವಜ್ರಕಾಯ'.

  'ಅಮ್ಮ'ನ ಮನೆಯಲ್ಲೇ ವಿಲನ್.!

  ಅಮ್ಮನನ್ನ ನೋಡೋಕೆ ಹೊರಡುವ ವಿರಾಜ್ ಗಿರುವ ದೊಡ್ಡ ಚಾಲೆಂಜ್ ಅಂದ್ರೆ ಆತನ ತಾತ ಹುಝೂರ್. ಅಸಲಿಗೆ ಖುದ್ದು ತಾತ ಹುಝೂರ್ ನಿಂದಲೇ ವಿರಾಜ್ ತಂದೆ (ಸುಮನ್) ಹತ್ಯೆಯಾಗಿರುತ್ತೆ. ಅದಕ್ಕೆ ಕಾರಣ ಏನು? ಗಂಡ-ಮಗನನ್ನ ಕಳೆದುಕೊಂಡು ತಾಯಿ ಲಕ್ಷ್ಮಿ ಅನುಭವಿಸುತ್ತಿರುವ ಯಾತನೆ ಎಂಥದ್ದು. ತಾತನ ಮನವೊಲಿಸಲು ವಿರಾಜ್ ಪಡುವ ಪಾಡು ಬಾಕಿ ಕಥೆ. ಅದನ್ನ ನೀವು ಚಿತ್ರಮಂದಿರದಲ್ಲೇ ನೋಡಿ...

  ಶಿವರಾಜ್ ಕುಮಾರ್ ಎನರ್ಜಿ ಸೂಪರ್

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವಯಸ್ಸು 52. ಆದ್ರೆ, ಬೆಳ್ಳಿತೆರೆ ಮೇಲೆ ಶಿವಣ್ಣ ಇನ್ನೂ ಹದಿಹರೆಯದ ಯುವಕನಂತೆ ಕಾಣ್ತಾರೆ. ಅವರ ಎನರ್ಜಿ ಯಾವ ಹೊಸ ನಾಯಕನಿಗೂ ಕಮ್ಮಿ ಇಲ್ಲ. ಗದೆ ಹಿಡಿದು ಶಿವಣ್ಣ ಸ್ಟೆಪ್ ಹಾಕ್ತಿದ್ರೆ, ಅವರ ಅಭಿಮಾನಿಗಳು ಸೀಟ್ ಮೇಲೆ ಕೂರೋದೇ ಇಲ್ಲ. ಇನ್ನೂ ಖೇಡಿಗಳ ರುಂಡ ಚೆಂಡಾಡುತ್ತಿದ್ದರೆ, ಪರದೆ ಮೇಲೆ ಕಾಸಿನ ಸುರಿಮಳೆ ಮಾಡ್ತಾರೆ ಅಭಿಮಾನಿಗಳು. ಅಷ್ಟರಮಟ್ಟಿಗೆ, ಅವರ ಭಕ್ತರಿಗೆ 'ವಜ್ರಕಾಯ' ಸಿನಿಮಾ ಮೂಲಕ ಮನರಂಜನಾ ರಸದೌತಣ ನೀಡಿದ್ದಾರೆ ಶಿವಣ್ಣ. ಇನ್ನೂ ಸೆಂಟಿಮೆಂಟ್ ದೃಶ್ಯಗಳಲ್ಲಿ ಶಿವಣ್ಣನ ಬಗ್ಗೆ ತುಟಿ ಎರಡು ಮಾಡುವ ಹಾಗಿಲ್ಲ. [ಕರ್ನಾಟಕದೆಲ್ಲೆಡೆ 'ವಜ್ರಕಾಯ' ಶಿವಣ್ಣನ ಗುಣಗಾನ]

  ನಾಯಕಿಯರು ಒಬ್ಬರಿಗಿಂತ ಒಬ್ಬರು..!

  ದಂತದ ಗೊಂಬೆಯಾಗಿ ಶುಭ್ರ ಅಯ್ಯಪ್ಪ, ಹೆಸರಿಗೆ ತಕ್ಕ ಹಾಗೆ ಮೃದು ಸ್ವಭಾವದ ಬೆಡಗಿಯಾಗಿ ಕಾರುಣ್ಯ ರಾಮ್ ನಟನೆ ಚೆನ್ನಾಗಿದೆ. ಇನ್ನೂ 'ಪಟಾಕಾ ಪಾರ್ವತಿ'ಯಾಗಿ ನಭಾ ನಟೇಶ್ ಆಕ್ಟಿಂಗ್ ಮತ್ತು ಡ್ಯಾನ್ಸ್ ಬೊಂಬಾಟ್. [ಶಿವರಾಜ್ ಕುಮಾರು ಮಿಸ್ಸಿಗೆ ಢಮಾರು...ಕೇಳಣ್ಣೋ...]

  ಕಣ್ಣಲ್ಲೇ ಮಾತಾಡುವ ಜಯಸುಧಾ

  ಬಹಳ ವರ್ಷಗಳ ನಂತ್ರ ಬಹುಭಾಷಾ ನಟಿ ಜಯಸುಧಾ ಕನ್ನಡಕ್ಕೆ ಮರಳಿದ್ದಾರೆ. ಹೆಚ್ಚು ಡೈಲಾಗ್ಸ್ ಇಲ್ಲದೇ, ಮೌನವಾಗಿ ಕಣ್ಣಲ್ಲೇ ಎಲ್ಲಾ ಭಾವನೆಗಳನ್ನ ಹೊರಹಾಕುವ ಜಯಸುಧಾ ಹೆಂಗಳೆಯರ ಕಣ್ಣಾಲಿಗಳನ್ನ ತೇವಗೊಳಿಸುತ್ತಾರೆ. ಇನ್ನೂ ನಟ ಸುಮನ್ ಗೆ ನಟನೆಯಲ್ಲಿ ಹೆಚ್ಚು ಅವಕಾಶ ಸಿಕ್ಕಿಲ್ಲ. ['ವಜ್ರಕಾಯ' ಚಿತ್ರದಲ್ಲಿ ಶಿವಣ್ಣನ ಕಮಾಲ್ ನೋಡಿದ್ದೀರಾ..]

  ಯುವ ಪ್ರತಿಭೆಯ ಆರ್ಭಟ

  ವಿರಾಜ್ ತಾತ ಹುಝೂರ್ ಪಾತ್ರಧಾರಿ ಮಧು ಗುರುಸ್ವಾಮಿ ನಟನೆ ಖಡಕ್ಕಾಗಿದೆ. ವಯಸ್ಸು ಚಿಕ್ಕದಾದರೂ, ಅವರದ್ದು ಮಾಗಿದ ಅಭಿನಯ.

  ಕಾಮಿಡಿ ಖಿಲಾಡಿಗಳ ಕಲರವ

  'ವಜ್ರಕಾಯ' ಚಿತ್ರದ ಬಹುದೊಡ್ಡ ಪ್ಲಸ್ ಪಾಯಿಂಟ್ ಅಂದ್ರೆ ಅದು ಕಾಮಿಡಿ. ಕುರಿ ಪ್ರತಾಪ್, ಚಿಕ್ಕಣ್ಣ, ಸಾಧು ಕೋಕಿಲ, ಜಹಾಂಗೀರ್ ರಂತಹ ಕಾಮಿಡಿ ಖಿಲಾಡಿಗಳು ಚಿತ್ರದಲ್ಲಿ ಹಾಸ್ಯದ ಹೊನಲನ್ನೇ ಹರಿಸಿದ್ದಾರೆ. [ಕನ್ನಡದಲ್ಲಿ ಕೊಲವೆರಿಡಿ ಹಾಡು ಬಂದಿದೆ, ಹೆಡ್ ಸೆಟ್ ಹಾಕ್ಕೊಳ್ಳಿ]

  ಸ್ಟಾರ್ ನಟರ ದಂಡೇ ಚಿತ್ರದಲ್ಲಿದೆ

  'ವಜ್ರಕಾಯ' ಚಿತ್ರದ ಹಾಡೊಂದರಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್, ರವಿತೇಜಾ, ಶಿವಕಾರ್ತಿಕೇಯನ್, ದಿಲೀಪ್ ರಂತಹ ಬಹುಭಾಷಾ ಸ್ಟಾರ್ ಗಳು ಹೆಜ್ಜೆ ಹಾಕಿರುವುದು ಚಿತ್ರದ ಸ್ಪೆಷಲಾಟಿ. ['ವಜ್ರಕಾಯ' ಶಿವಣ್ಣ ಜೊತೆ ರವಿತೇಜಾ ಆಟ ನೋಡಿ...]

  ಗಿಮಿಕ್ಕಿಲ್ಲ...ಎಲ್ಲೂ ಬೋರಾಗಲ್ಲ...

  ನಿಜ ಹೇಳುವುದಾದರೆ, 'ವಜ್ರಕಾಯ' ಚಿತ್ರದಲ್ಲಿ ಅಂಥ ಹೇಳಿಕೊಳ್ಳುವ ಕಥೆ ಇಲ್ಲ. ಚಿತ್ರಕಥೆಯಲ್ಲಿ ದೊಡ್ಡ ತಿರುವು ಕೂಡ ಇಲ್ಲ. ಹೀಗಿದ್ದರೂ, ಚಿತ್ರದ ಓಟ ಚೆನ್ನಾಗಿದೆ. ಗಿಮ್ಮಿಕ್ ಗಾಗಿ ಎಲ್ಲೂ ಕಾಮಿಡಿ ಮತ್ತು ಫೈಟ್ಸ್ ತುರುಕಿಲ್ಲ. ಸರಾಗವಾಗಿ ಸಾಗುವ 'ವಜ್ರಕಾಯ' ಚಿತ್ರದಲ್ಲಿ ಕಡೆಯವರೆಗೂ ಎಲ್ಲೂ ಬೋರಾಗದಂತೆ ಪ್ರೇಕ್ಷಕರನ್ನ ಹಿಡಿದು ಕೂರಿಸುವಲ್ಲಿ ನಿರ್ದೇಶಕ ಹರ್ಷ ಯಶಸ್ವಿಯಾಗಿದ್ದಾರೆ.

  ಅರ್ಜುನ್ ಜನ್ಯ ಮ್ಯೂಸಿಕ್ ಕಮಾಲ್

  ಅರ್ಜುನ್ ಜನ್ಯ ಮ್ಯೂಸಿಕ್ ನೀಡಿರುವ 50ನೇ ಚಿತ್ರ 'ವಜ್ರಕಾಯ'. ಇದೇ ಜೋಷ್ ನಲ್ಲಿ ಅರ್ಜುನ್ ಮಸ್ತ್ ಮ್ಯೂಸಿಕ್ ಕೊಟ್ಟಿದ್ದಾರೆ. 'ನೋ ಪ್ರಾಬ್ಲಂ' ಮತ್ತು 'ವಜ್ರಕಾಯ' ಟೈಟಲ್ ಸಾಂಗ್ ಭಾರಿ ಯಶಸ್ಸುಗಳಿಸಿರುವುದರ ಹಿಂದೆ ಅರ್ಜುನ್ ಜನ್ಯ ಶ್ರಮ ಎದ್ದು ಕಾಣುತ್ತೆ. ದೀಪು.ಎಸ್.ಕುಮಾರ್ ಸಂಕಲನ ತುಂಬಾ ಶಾರ್ಪ್ ಆಯ್ತು. ಇನ್ನೂ ಸ್ವಾಮಿ.ಜೆ ಕ್ಯಾಮರಾ ಕಂಗಳಲ್ಲಿ ವಿದೇಶಿ ಸ್ಥಳಗಳು ಬಲು ಸುಂದರ. [ಶಿವಣ್ಣ ಅಭಿನಯದ ವಜ್ರಕಾಯ ಧ್ವನಿಸುರುಳಿ ವಿಮರ್ಶೆ]

  ಫೈನಲ್ ಸ್ಟೇಟ್ ಮೆಂಟ್

  ಶಿವರಾಜ್ ಕುಮಾರ್ ಅಭಿಮಾನಿಗಳಿಗೆ 'ವಜ್ರಕಾಯ' ಹೇಳಿ ಮಾಡಿಸಿದ ಸಿನಿಮಾ. ಮನರಂಜನೆಗೆ ಬೇಕಾಗಿರುವ ಎಲ್ಲಾ ಸರಕು 'ವಜ್ರಕಾಯ'ದಲ್ಲಿದೆ. ಕಂಪ್ಲೀಟ್ ಕಮರ್ಶಿಯಲ್ ಚಿತ್ರವಾದರೂ, ಇಡೀ ಕುಟುಂಬ ಸಮೇತ ಕೂತು ನೋಡುವಂತಹ ಚಿತ್ರ. ನೀವು ಶಿವರಾಜ್ ಕುಮಾರ್ ಅಭಿಮಾನಿಯಾಗಿದ್ದರೆ, 'ವಜ್ರಕಾಯ' ಚಿತ್ರವನ್ನ ಮಿಸ್ ಮಾಡ್ಬೇಡಿ.

  English summary
  Century Star Shivarajkumar starrer 'Vajrakaya' has released all over Karnataka today (June 12th). 'Vajrakaya' is definitely a treat for Shivarajkumar fans. Here is the complete review of the movie

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more