»   » ನಟಿ ಶ್ರದ್ಧಾ ಶ್ರೀನಾಥ್ ಬರೆದ 'ಒಂದು ಮೊಟ್ಟೆಯ ಕಥೆ' ವಿಮರ್ಶೆ

ನಟಿ ಶ್ರದ್ಧಾ ಶ್ರೀನಾಥ್ ಬರೆದ 'ಒಂದು ಮೊಟ್ಟೆಯ ಕಥೆ' ವಿಮರ್ಶೆ

Posted By:
Subscribe to Filmibeat Kannada

ರಾಜ್ ಬಿ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ 'ಒಂದು ಮೊಟ್ಟೆಯ ಕಥೆ' ಚಿತ್ರ ನಿನ್ನೆ (ಜುಲೈ 7) ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಬೋಳು ತಲೆಗಳ ನೋವಿನ ಕಥೆಯನ್ನ ತೆರೆಮೇಲೆ ತಂದಿರುವ ಈ ಚಿತ್ರಕ್ಕೆ ಪ್ರೇಕ್ಷಕರು ಜೈಕಾರ ಹಾಕಿದ್ದಾರೆ.

ರಾಜ್ ಬಿ ಶೆಟ್ಟಿ ಅವರ ನಟನೆ ಮತ್ತು ಚಿತ್ರತಂಡದ ಪ್ರಮಾಣಿಕ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಹೀಗೆ, ಕಾಮಿಡಿ ಮೂಲಕ ಗಂಭೀರವಾದ ಕಥೆಯನ್ನ ಹೇಳಿರುವ 'ಒಂದು ಮೊಟ್ಟೆಯ ಕಥೆ' ನೋಡಿ ನಟಿ ಶ್ರದ್ಧಾ ಶ್ರೀನಾಥ್ ಆಗಿದ್ದು, ಚಿತ್ರದ ಬಗ್ಗೆ ತಾವೇ ವಿಮರ್ಶೆ ಬರೆದಿದ್ದಾರೆ.

ಶ್ರದ್ಧಾ ಶ್ರೀನಾಥ್ ಬರೆದಿರುವ 'ಒಂದು ಮೊಟ್ಟೆಯ ಕಥೆ' ಚಿತ್ರದ ವಿಮರ್ಶೆ ನೋಡಲು ಮುಂದೆ ಓದಿ.....

ಶ್ರದ್ಧಾ ಶ್ರೀನಾಥ್ ಕಂಡಂತೆ ಸಿನಿಮಾ

''ರಾಜ್ ಬಿ ಶೆಟ್ಟಿ ಉತ್ತಮ ನಟನಾ ಅಥವಾ ಉತ್ತಮ ನಿರ್ದೇಶಕನಾ ಎಂಬ ಗೊಂದಲ ಕಾಡುತ್ತಿದೆ. ಆದ್ರೆ, ಎರಡಕ್ಕು ಅವರು ಸಮನಾಗಿ ನ್ಯಾಯ ಒದಗಿಸಿದ್ದಾರೆ. ರಾಜ್ ನಿಮ್ಮೆ ಬಗ್ಗೆ ಹೆಮ್ಮೆ ಎನಿಸುತ್ತಿದೆ. ಒಂದೊಳ್ಳೆ ತಂಡದ ಜೊತೆ ಒಂದೊಳ್ಳೆ ಸಿನಿಮಾ ಕೊಟ್ಟಿದ್ದೀರಾ ಎಂದು ಖುಷಿ ಆಗ್ತಿದೆ. 'ಒಂದು ಮೊಟ್ಟೆಯ ಕಥೆ' ಒಂದು ಪ್ರಮಾಣಿಕ ಮತ್ತು ಮುಗ್ದ ಕಥೆ'' - ಶ್ರದ್ಧಾ ಶ್ರೀನಾಥ್, ನಟಿ

ಸುಖ-ದುಃಖಗಳಲ್ಲು ನಗಿಸುವ ಸಿನಿಮಾ

''ನಾನು ಸಿನಿಮಾ ನೋಡುವಾಗ ಸಂತೋಷದಿಂದ ನಗುತ್ತಿದೆ, ದುಃಖದಿಂದಲೂ ನಗುತ್ತಿದೆ, ಮಂಗಳೂರು ಭಾಷೆಯ ಜೊತೆ ನನಗೆ ಲವ್ ಆಗೋಯ್ತು. ಸಂಗೀತ ಮತ್ತಷ್ಟು ಎತ್ತರಕ್ಕೆ ಕರೆದುಕೊಂಡು ಹೋಗುತ್ತೆ. ಕನ್ನಡ ಅಭಿಮಾನಿಗಳು ಮತ್ತು ಅಣ್ಣಾವ್ರ ಅಭಿಮಾನಿಗಳೇ ಇದು ನಿಮಗಾಗಿ ಮಾಡಿರುವ ಚಿತ್ರ'' - ಶ್ರದ್ಧಾ ಶ್ರೀನಾಥ್, ನಟಿ

ಅಪಹಾಸ್ಯ ಮಾಡುವವರು ಕನ್ನಡಿ?

''ಯಾರನ್ನು ಉದ್ದೇಶವಾಗಿರಿಸದೇ, ಪ್ರತಿಯೊಬ್ಬರ ಆತ್ಮವಿಶ್ವಾಸವನ್ನು ಆಳವಾಗಿ ಕೆದಕುತ್ತದೆ. ಪ್ರಸ್ತುತ ದಿನದಲ್ಲಿ ಇತರರ ಅಂಗವೈಫಲ್ಯವನ್ನು ಅಪಹಾಸ್ಯ ಮಾಡುವವರಿಗೆ, ಮೊದಲು ನಿಮ್ಮ ದೌರ್ಬಲ್ಯದ ಬಗ್ಗೆ ನೀವು ಮೊದಲು ನೋಡಿಕೊಳ್ಳಿ ಎಂಬುದನ್ನು ಕನ್ನಡಿಯಂತೆ ತೋರಿಸುತ್ತದೆ'' - ಶ್ರದ್ಧಾ ಶ್ರೀನಾಥ್, ನಟಿ

ಚಿತ್ರತಂಡಕ್ಕೆ ಕೃತಜ್ಞತೆ

''ಪರಿಪೂರ್ಣತೆ ಎಂಬುದನ್ನು ಹೇಗೆ ಬೆನ್ನಟ್ಟುತ್ತೇವೆ? ನಮ್ಮ ಸೌಂದರ್ಯ ಚೆನ್ನಾಗಿದೆಯೇ ಎನ್ನುವುದನ್ನ ಹೇಗೆ ಪರೀಕ್ಷೆ ಮಾಡಿಕೊಳ್ಳುತ್ತೇವೆ ಎಂಬುದನ್ನು ಪ್ರಾಯಶಃ ನಾನು ಕಲಿತೆ. ಈ ಚಿತ್ರವನ್ನು ಪ್ರೇಕ್ಷಕರಿಗೆ ನೀಡಿದ ಪವನ್ ಕುಮಾರ್ ಮತ್ತು ಅವರ ಚಿತ್ರತಂಡಕ್ಕೆ ಕೃತಜ್ಞತೆ ತಿಳಿಸುತ್ತೇನೆ'' - ಶ್ರದ್ಧಾ ಶ್ರೀನಾಥ್, ನಟಿ

ಫಿಲ್ಮಿಬೀಟ್ ಪ್ರಕಟಿಸಿರುವ 'ಒಂದು ಮೊಟ್ಟೆಯ ಕಥೆ' ವಿಮರ್ಶೆ ಓದಲು ಮುಂದೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ. ಒಂದು ಮೊಟ್ಟೆಯ ಕಥೆ : ಡಬ್ಬಲ್ ಮೀನಿಂಗ್ ಇಲ್ಲದ ಕಾಶೀನಾಥ್ ಚಿತ್ರ

English summary
Kannada Actress shraddha srinath Write's Review About Kannada Movie 'Ondu Mottetya Kathe'. The Movie Directed By Raj B Shetty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada