For Quick Alerts
  ALLOW NOTIFICATIONS  
  For Daily Alerts

  'ಕಾಂತಾರ 2' ನೋಡಿದ ಹಾಗಾಯ್ತು; 'ವೇದ' ಚಿತ್ರಕ್ಕೆ ತಮಿಳು ಪ್ರೇಕ್ಷಕರ ಜೈಕಾರ!

  |

  ಕೆಜಿಎಫ್ ಚಾಪ್ಟರ್ 2 ಹಾಗೂ ಕಾಂತಾರ ಮೂಲಕ ಈ ವರ್ಷ ಭಾರತ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದ್ದ ಕನ್ನಡ ಚಲನಚಿತ್ರರಂಗ ಚಾರ್ಲಿ 777, ವಿಕ್ರಾಂತ್ ರೋಣ ರೀತಿಯ ಚಿತ್ರಗಳ ಮೂಲಕವೂ ಸಹ ಪರಭಾಷಾ ಸಿನಿ ಪ್ರೇಕ್ಷಕರ ಮನಗೆದ್ದಿತ್ತು. ಹೀಗೆ ರಾಜ್ಯಾದಾಚೆಗೂ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಬರುತ್ತಿರುವ ಕನ್ನಡ ಚಿತ್ರರಂಗದಿಂದ ಬೇರೆ ರಾಜ್ಯಗಳಲ್ಲಿ ಸದ್ದು ಮಾಡಬಲ್ಲ ಸಾಮರ್ಥ್ಯವಿರುವ ಮತ್ತೊಂದು ಚಿತ್ರ ಬಿಡುಗಡೆಗೊಂಡಿದೆ.

  ಹೌದು, ಶಿವ ರಾಜ್‌ಕುಮಾರ್ ಹಾಗೂ ಎ ಹರ್ಷ ಕಾಂಬಿನೇಶನ್‌ನ ವೇದ ಚಿತ್ರ ಸದ್ಯ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ತಿದೆ. ನಿನ್ನೆ ( ಡಿಸೆಂಬರ್ 23 ) ಬಿಡುಗಡೆಗೊಂಡ ಈ ಚಿತ್ರಕ್ಕೆ ಕನ್ನಡ ಸಿನಿ ರಸಿಕರು ಅದ್ಭುತ, ಸೂಪರ್ ಎಂಬ ಪ್ರತಿಕ್ರಿಯೆ ನೀಡಿದ್ದಾರೆ. ಶಿವ ರಾಜ್‌ಕುಮಾರ್ ಹಾಗೂ ಅದಿತಿ ಸಾಗರ್ ಅಪ್ಪ - ಮಗಳ ಪಾತ್ರಗಳ ಅಬ್ಬರಕ್ಕೆ ಚಿತ್ರ ರಸಿಕರು ಮಾರು ಹೋಗಿದ್ದಾರೆ.

  ಹೀಗೆ ಬಿಡುಗಡೆಯಾದ ಮೊದಲ ದಿನವೇ ಕರ್ನಾಟಕದಲ್ಲಿ ಕ್ಲೀನ್ ಹಿಟ್ ಆಗಿರುವ ವೇದ ತಮಿಳುನಾಡಿನಲ್ಲಿಯೂ ಸಹ ಭರ್ಜರಿ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಹೌದು, ವೇದ ಚಿತ್ರವನ್ನು ತಮಿಳಿಗೂ ಡಬ್ ಮಾಡಿ ಬಿಡುಗಡೆ ಮಾಡಲಾಗಿತ್ತು. ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಹತ್ತಕ್ಕೂ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡಿದ್ದ ವೇದ ರಾಜ್ಯದ ಇತರೆ ನಗರಗಳಲ್ಲಿಯೂ ಪ್ರದರ್ಶನ ಕಂಡಿದೆ. ಇನ್ನು ವೇದ ತಮಿಳು ಅವತರಣಿಕೆ ವೀಕ್ಷಿಸಲು ನಿರೀಕ್ಷೆಗೂ ಮೀರಿದ ಜನರು ಬಂದಿದ್ದು, ಚಿತ್ರ ಮುಗಿದ ಬಳಿಕ ಫ್ರೀಜ್ ಸ್ಟೋನ್ ಸ್ಟುಡಿಯೋಸ್ ಎಂಬ ಯುಟ್ಯೂಬ್ ಚಾನೆಲ್‌ಗೆ ಚಿತ್ರ ಹೇಗಿದೆ ಎಂಬ ಪ್ರತಿಕ್ರಿಯೆ ನೀಡಿದ್ದಾರೆ ಹಾಗೂ ಈ ವಿಡಿಯೊ ವೈರಲ್ ಆಗಿದ್ದು, ತಮಿಳು ಪ್ರೇಕ್ಷಕರಿಗೆ ವೇದ ಈ ಮಟ್ಟಕ್ಕೆ ಇಷ್ಟವಾಗಿದೆ ಎಂದು ಶಿವಣ್ಣ ಫ್ಯಾನ್ಸ್ ಖುಷಿ ವ್ಯಕ್ತಪಡಿಸಿದ್ದಾರೆ.

  ಕನ್ನಡದಿಂದ ಒಳ್ಳೊಳ್ಳೆ ಚಿತ್ರ ಬರುತ್ತಿವೆ

  ಕನ್ನಡದಿಂದ ಒಳ್ಳೊಳ್ಳೆ ಚಿತ್ರ ಬರುತ್ತಿವೆ

  ಚಿತ್ರವನ್ನು ವೀಕ್ಷಿಸಿದ ನಂತರ ಕ್ಯಾಮೆರಾ ಮುಂದೆ ಬಂದು ಮಾತನಾಡಿದ ಪ್ರತಿಯೊಬ್ಬರೂ ಸಹ ಕನ್ನಡ ಚಿತ್ರರಂಗದಿಂದ ಇತ್ತೀಚೆಗೆ ಬರುತ್ತಿರುವ ಚಿತ್ರಗಳು ನಿಜಕ್ಕೂ ಅದ್ಭುತ ಎಂಬ ಅಭಿಪ್ರಾಯವನ್ನೇ ವ್ಯಕ್ತಪಡಿಸಿದರು. ಅದರಲ್ಲಿಯೂ ಈ ವರ್ಷ ಕೆಜಿಎಫ್ ಚಾಪ್ಟರ್ 2 ಹಾಗೂ ಕಾಂತಾರ ನೀಡಿದ್ದ ಕನ್ನಡ ಚಿತ್ರರಂಗ ಇದೀಗ ವೇದ ಎಂಬ ಅದ್ಭುತ ಚಿತ್ರವನ್ನು ನೀಡಿ ಮತ್ತೆ ಗೆದ್ದಿದೆ ಎಂದು ಹೊಗಳಿದರು.

  ಕಾಂತಾರ ರೀತಿಯೇ ಇಷ್ಟವಾಯಿತು, ಇದು ಕಾಂತಾರ 2!

  ಕಾಂತಾರ ರೀತಿಯೇ ಇಷ್ಟವಾಯಿತು, ಇದು ಕಾಂತಾರ 2!

  ಇದೇ ಆಡಿಯನ್ಸ್ ರೆಸ್ಪಾನ್ಸ್ ವಿಡಿಯೊದಲ್ಲಿ ಪ್ರೇಕ್ಷಕನೋರ್ವ ವೇದ ಚಿತ್ರವನ್ನು ಕಾಂತಾರ ಚಿತ್ರಕ್ಕೆ ಹೋಲಿಕೆ ಮಾಡಿದ್ದಾರೆ. ವೇದ ಚಿತ್ರವನ್ನು ನೋಡುತ್ತಿರಬೇಕಾದರೆ ನನಗೆ ಕಾಂತಾರ ಚಿತ್ರವನ್ನು ನೋಡಿದ ಅನುಭವವಾಯಿತು, ಇದನ್ನು ಕಾಂತಾರ ಎರಡನೇ ಭಾಗ ಎಂದುಕೊಂಡೇ ನೋಡಿದೆ, ಅಷ್ಟು ಅಚ್ಚುಕಟ್ಟಾಗಿ, ಮಾಸ್ ಆಗಿ ನಿರ್ಮಿಸಿದ್ದಾರೆ ಎಂದು ಹೇಳಿದರು.

  ಈಗ ಕನ್ನಡ ಚಿತ್ರಗಳು ತಮಿಳು ಸಮಕ್ಕೆ ಬಂದಿವೆ

  ಈಗ ಕನ್ನಡ ಚಿತ್ರಗಳು ತಮಿಳು ಸಮಕ್ಕೆ ಬಂದಿವೆ

  ಈಗ ಬಿಡಿ ಕನ್ನಡ ಚಿತ್ರಗಳು ನಮ್ಮ ತಮಿಳು ಸಮಕ್ಕೆ ಬಂದು ನಿಂತಿವೆ ಎಂದು ತಮಿಳಿನ ಸಿನಿ ಪ್ರೇಕ್ಷಕ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಹಾಗೂ ಇಂತಹ ಉತ್ತಮ ಚಿತ್ರಗಳನ್ನು ಡಬ್ ಮಾಡಿ ಬಿಡುಗಡೆ ಮಾಡಿದರೆ ನೋಡುತ್ತೇವೆ, ಇಲ್ಲಿಯವರೆಗೆ ಹೇಗೆ ಪ್ರೋತ್ಸಹಿಸಿದೆವೋ ಅದಕ್ಕಿಂತ ಹೆಚ್ಚಿನ ಪ್ರೋತ್ಸಾಹ ನೀಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

  ಕಾಂತಾರ ರೀತಿಯೇ ನಿಧಾನಕ್ಕೆ ಅಬ್ಬರಿಸಲಿದೆ ವೇದ

  ಕಾಂತಾರ ರೀತಿಯೇ ನಿಧಾನಕ್ಕೆ ಅಬ್ಬರಿಸಲಿದೆ ವೇದ

  ಇನ್ನು ಕಾಂತಾರ ಚಿತ್ರ ಹೇಗೆ ಆರಂಭದಲ್ಲಿ ಸಣ್ಣದಾಗಿ ಬಿಡುಗಡೆಗೊಂಡು ನಂತರದ ದಿನಗಳಲ್ಲಿ ಬೆಂಕಿಯಂತೆ ಪಸರಿಸಿ ಅಬ್ಬರಿಸಿತೋ ಅದೇ ರೀತಿ ವೇದ ಕೂಡ ನಿಧಾನವಾಗಿ ಅಬ್ಬರಿಸುವುದು ಖಚಿತ ಎಂದು ಮತ್ತೋರ್ವ ತಮಿಳು ಪ್ರೇಕ್ಷಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಚಿತ್ರದ ಮೇಕಿಂಗ್, ನಟ ನಟಿಯರ ನಟನೆ ಹಾಗೂ ಚಿತ್ರದ ಸಂದೇಶದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  English summary
  Tamil audience comparing Vedha film with Kantara and KGF after watching it. Read on
  Saturday, December 24, 2022, 13:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X