»   » ಟ್ವಿಟ್ಟರ್ ವಿಮರ್ಶೆ: ಭವ್ಯ, ಮೋಹಕ, ಅತ್ಯದ್ಭುತ 'ಗೌತಮಿಪುತ್ರ ಶಾತಕರ್ಣಿ'

ಟ್ವಿಟ್ಟರ್ ವಿಮರ್ಶೆ: ಭವ್ಯ, ಮೋಹಕ, ಅತ್ಯದ್ಭುತ 'ಗೌತಮಿಪುತ್ರ ಶಾತಕರ್ಣಿ'

Posted By:
Subscribe to Filmibeat Kannada

ತೆಲುಗು ನಟ ನಂದಮೂರಿ ಬಾಲಕೃಷ್ಣ ಅಭಿನಯದ ಐತಿಹಾಸಿಕ ಸಿನಿಮಾ 'ಗೌತಮಿಪುತ್ರ ಶಾತಕರ್ಣಿ' ಇಂದು ದೇಶಾದ್ಯಂತ ಬಿಡುಗಡೆಯಾಗಿದ್ದು, ಕರ್ನಾಟಕದಲ್ಲೂ ಅದ್ದೂರಿಯಾಗಿ ತೆರೆಗೆ ಅಪ್ಪಳಿಸಿದೆ

ಬಾಲಕೃಷ್ಣ ಅವರ 100ನೇ ಸಿನಿಮಾ ಇದಾಗಿದ್ದು, ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಚಿತ್ರದಲ್ಲಿ ವಿಶೇಷ ಪಾತ್ರವನ್ನ ನಿರ್ವಹಿಸಿದ್ದಾರೆ. ಕ್ರಿಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಶ್ರೇಯಾ ಶರಣ್, ಹೇಮಾ ಮಾಲಿನಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

2ನೇ ಶತಮಾನದಲ್ಲಿನ ಶಾತವಾಹನರ ರಾಜ 'ಗೌತಮಿಪುತ್ರ ಶಾತಕರ್ಣಿ' ಅವರ ಕಥೆಯನ್ನ ಈ ಚಿತ್ರ ಒಳಗೊಂಡಿದ್ದು, ತೆರೆಮೇಲೆ ಬಾಲಕೃಷ್ಣ ನಿಜವಾದ ಶಾತಕರ್ಣಿಯಂತೆ ಅಬ್ಬರಿಸಿದ್ದಾರಂತೆ. ಬಾಲಯ್ಯನ 100ನೇ ಸಿನಿಮಾ ನೋಡಿದ ವೀಕ್ಷಕರು ಟ್ವಿಟ್ಟರ್ ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ....

ತೆಲುಗು ಇಂಡಸ್ಟ್ರಿ ಕಿಂಗ್!

''ಗೌತಮಿಪುತ್ರ ಶಾತಕರ್ಣಿ' ಚಿತ್ರದಲ್ಲಿ ಬಾಲಕೃಷ್ಣ ಅವರ ಅಭಿನಯ ಹಾಗೂ ಡೈಲಾಗ್ ಡಿಲವರಿ ನೋಡಿದ್ರೆ, ತೆಲುಗು ಇಂಡಸ್ಟ್ರಿಯಲ್ಲಿ ಬೇರೆ ಯಾರು ಮಾಡಲ್ಲ. ಇದು 'ಎನ್.ಬಿ.ಕೆ' ಶೋ''

ಬಾಲಕೃಷ್ಣಗೆ ಬಾಲಕೃಷ್ಣನೇ ಸಾಟಿ!

''ಸಿಕ್ಸ್ ಪ್ಯಾಕ್ ಯಾರು ಬೇಕಾದರೂ ಮಾಡಬಹುದು ಆದ್ರೆ, 'ಗೌತಮಿಪುತ್ರ ಶಾತಕರ್ಣಿ' ಚಿತ್ರದಲ್ಲಿ ಬಾಲಕೃಷ್ಣ ಮಾಡಿರುವಂತಹ ಆಕ್ಟಿಂಗ್ ಗೆ ಅವರೇ ಸಾಟಿ. ಡೈಲಾಗ್ಸ್ ಸೂಪರ್.....''

ಬಾಲಯ್ಯ ಕೆರಿಯರ್ ಬೆಸ್ಟ್!

''ಮೊದಲಾರ್ದ ಅತ್ಯಾದ್ಭುತ....ಇಂಟರ್ ವಲ್ ದೃಶ್ಯ ಬಾಲಯ್ಯನ ಕೆರಿಯರ್ ನಲ್ಲೆ ಬೆಸ್ಟ್''

ಭವ್ಯ, ಮೋಹಕ ಚಿತ್ರ!

''ಈ ಐತಿಹಾಸಿಕ ಚಿತ್ರ ನೋಡಲು ಭವ್ಯ, ಮೋಹಕವಾಗಿದೆ. ಇಂಟರ್ ವಲ್ ಅದ್ಭುತ. ಬಾಲಕೃಷ್ಣ ಅವರ ವೃತ್ತಿ ಜೀವನದಲ್ಲಿ ಅತ್ಯುತ್ತಮ ಚಿತ್ರ''

'ಗೌತಮಿಪುತ್ರ'ನಿಗೆ ಶಬ್ಬಾಶ್!

''ಅತ್ಯಾದ್ಭುತ ಮೊದಲಾರ್ಧ. ಯುದ್ಧ ಸನ್ನಿವೇಶಗಳು ಅದ್ಧೂರಿಯಾಗಿದೆ. ಡೈಲಾಗ್ಸ್, ಹಿನ್ನೆಲೆ ಸಂಗೀತ ಅತ್ಯುತ್ತಮವಾಗಿದೆ''

English summary
Telugu Movie 'Gowthami Putra Satakarni' has hit the screens today (January 12th). 'Gowthami Putra Satakarni' is receiving Good response in Twitter. The Movie Features Balakrishna, Shreya sharan, and others. here is the twitter review of 'Gowthami Putra Satakarni'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada